ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Tuesday, July 1, 2025

ನಾನಿಲ್ಲದೆ ನೀನು ಕಾಣದು ನೀನಿಲ್ಲದೆ ನಾನಿರದು

ನಾನಿಲ್ಲದೆ ನೀನಿಲ್ಲ ಎನ್ನುವ  ಅರ್ಥದಲ್ಲಿ  ಜೀವಾತ್ಮನಿಲ್ಲದೆ ಪರಮಾತ್ಮನ  ಅರಿಯಲಾಗದು. ಹಾಗೆ ಜೀವನ‌ ನಡೆಸಲು  ಹಣ ಬೇಕು. ಹಣವನ್ನು  ಉತ್ತಮ ಮಾರ್ಗದಲ್ಲಿ ಸಂಪಾದನೆ ಮಾಡಬೇಕು. ಅದಕ್ಕಾಗಿ  ನಮ್ಮ ಜ್ಞಾನ ಸದ್ಬಳಕೆ ಆಗಬೇಕು. ಆಗ ಹಣವೂ  ಇರುತ್ತದೆ ಜ್ಞಾನವೂ ಬೆಳೆಯುತ್ತದೆ.
ಆದರೆ  ನಾನೇ ಎಲ್ಲಾ ನನ್ನಿಂದಲೇ ಎಲ್ಲಾ ಎನ್ನುವ ಅಹಂಕಾರ  ಹಣದಿಂದ ಬೆಳೆದರೆ  ಅಜ್ಞಾನವೂ ಹಿಂದಿನಿಂದ ಆವರಿಸಿ ಜೀವನ ಕತ್ತಲಾಗುತ್ತದೆ. ಕತ್ತಲೆಂದರೆ ಸತ್ಯದ ಅರಿವಿರದ ಜೀವನ ಎಂದರ್ಥ. ಹಾಗಾಗಿ ಹಣವಿದ್ದರೂ ಸಾಲದ ಹೊರೆ ಹೊತ್ತು ಹೋಗುತ್ತದೆ ಜೀವಾತ್ಮ.

ಈಗ ಹಣಮಾಡಲು ಸಾಕಷ್ಟು ತಂತ್ರಜ್ಞಾನದ ‌ಬಳಕೆಯಿದೆ.ಆದರೆ ಇದು ತತ್ವಕ್ಕೆ ವಿರುದ್ದ ಧರ್ಮಕ್ಕೆ ವಿರುದ್ದ ಇದ್ದರೆ  ಅಧರ್ಮ ಕ್ಕೆ ತಕ್ಕ ಪ್ರತಿಫಲ ನೀಡುತ್ತದೆ. ನಿಧಾನವಾದರೂ ಸರಿ  ತತ್ವ ಬಿಡದೆ ನಡೆದವರಿಗೆ  ಪರಮಾತ್ಮನ ದರ್ಶನ ವಾಗಿದೆ.  ಪುಣ್ಯಫಲವು ನಿಧಾನವಾಗಿರುವುದರಿಂದ ಪಾಪದ ಕೆಲಸಕ್ಕೆ ಕೈ ಹಾಕಿ ಹಣಗಳಿಸುವುದರಿಂದ  ಸಮಾಜದ ಜೊತೆಗೆ ಸಂಸಾರವೂ ದಾರಿತಪ್ಪುವುದೆನ್ನುವುದು ಸತ್ಯ. 
ತಾಳಿದವನು ಬಾಳಿಯಾನು. ನಿಧಾನವೇ‌ಪ್ರಧಾನ ಇವೆಲ್ಲವೂ ಅನುಭವದ ನುಡಿಮುತ್ತುಗಳಾಗಿವೆ.
ದಾನಧರ್ಮಕ್ಕೆ ಹಣ ಬಳಸಬಹುದು. ಆದರೆ ಇದು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ  ಬಳಸಲು ಸುಜ್ಞಾನ ಅಗತ್ಯವಿದೆ. ಯಾರಲ್ಲಿ  ಸ್ವಾರ್ಥ ಅಹಂಕಾರ ಫಲಾಪೇಕ್ಷೆ  ಹೆಚ್ಚಾಗುವುದೋ  ಅದೇ ಮುಂದೆ ರಾಜಕೀಯವಾಗುತ್ತಾ ಜನರನ್ನು ದಾರಿತಪ್ಪಿಸಿ ಆಳುತ್ತದೆ.

ರಾಜಕಾರಣಿಗಳು ಹಣ  ಆಸ್ತಿ ಮಾಡುವರೆಂದರೆ  ಇದಕ್ಕೆ ಕಾರಣ ಅವರ ಅಧಿಕಾರದ ದಾಹ. ಇದನ್ನು ಬೆಳೆಸಿದವರು  ಜನರು. ಯಾವಾಗ ಹಣಪಡೆದು ಮತದಾನ ಮಾಡುವರೋ  ಆಗ  ದಾನ ವ್ಯರ್ಥ ವಾಗುತ್ತದೆ.ಜೊತೆಗೆ ಧರ್ಮ ವೂ ಕುಸಿಯುತ್ತದೆ.  ಸಾಲವೂ  ಬೆಳೆಯುತ್ತದೆ.ಕೈ ಕೈ ಸೇರಿದರಷ್ಟೆ ಚಪ್ಪಾಳೆ ಎಂದಾಗ  ಯಾರ ಕೈ ಯಾರ ಕೈ ಸೇರುವುದೋ ತಿಳಿಯದು.
ನಮ್ಮ ಎರಡೂ ಕೈ ಸ್ವಚ್ಚವಾಗಿದ್ದರೆ  ಚಪ್ಪಾಳೆ ಉತ್ತಮವಾಗಿರುತ್ತದೆ. ಯಾರ ಕೈ ಕೆಲಸದ ಫಲ ಇನ್ನೊಬ್ಬರ ಕೈಗೆ ಕೆಲಸವಿಲ್ಲದಂತೆ ಮಾಡಿದರೆ ಹಣವಿದ್ದರೂ ಅಧರ್ಮ ವೆ.

No comments:

Post a Comment