ನಗೆಯು ಬರುತಿದೆ ನಮಗೆ ನಗೆಯು ಬರುತಿದೆ ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು ನಗೆಯು ಬರುತಿದೆ ನಮಗೆ ನಗೆಯುಬರುತಿದೆ.. ದಾಸರ ಅಂದಿನ ವಚನ ಇಂದಿಗೂ ವಾಚನ ಮಾಡಬಹುದು.
ಕಾರಣವಿಷ್ಟೆ ಜಗತ್ತು ಇರೋದೇ ಹೀಗೆ ಬದಲಾವಣೆ ಒಳಗೆ ಮಾಡಿಕೊಳ್ಳದೆ ಹೊರಗೆ ಬದಲಾವಣೆ ಮಾಡಲು ಹೊರಟಾಗ
ಜಗತ್ತಿಗೇನೂ ಸಮಸ್ಯೆಯಿರದು. ಮನುಕುಲಕ್ಕೆ ಸಮಸ್ಯೆ.
ಇಲ್ಲಿ ರಾಜಪ್ರಭುತ್ವದ ಹಿಂದಿನ ವಿಜ್ಞಾನಕ್ಕೂ ಪ್ರಜಾಪ್ರಭುತ್ವದ ವಿಜ್ಞಾನಕ್ಕೂ ಅಂತರ ಬೆಳೆಸಿರೋದೆ ಜ್ಞಾನವಿಜ್ಞಾನವಾಗಿದೆ. ಈ ಅಂತರದಲ್ಲಿ ಆಳುವವರು ಅರಸರು ಎಂದರೆ ತಪ್ಪು . ಇದನ್ನು ದಾಸರು ತಮ್ಮ ಜ್ಞಾನದ ದೃಷ್ಟಿಯಿಂದ ನೋಡಿ ಹಗರಣಗಳಿಂದ ನಗು ಬರುತ್ತಿದೆ ಎಂದಿದ್ದಾರೆಂದರೆ ಇಂದಿನ ಹಗರಣಗಳನ್ನು ನೋಡಿದರೆ ನಗು ಬರುವುದೆ ಅಳು ಬರುವುದೆ?
ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು?
ಇಂದಿನ ಪರಿಸ್ಥಿತಿ ಹದಗೆಡಲು ಕಾರಣವೇ ಅಸತ್ಯ ಅನ್ಯಾಯ ಅಧರ್ಮ ವೆಂದು ತಿಳಿದವರೂ ಸರ್ಕಾರದ ಹಿಂದೆ ನಡೆದು ನಮ್ಮದೇನೂ ತಪ್ಪಿಲ್ಲ ಎಲ್ಲಾ ಸರ್ಕಾರವೇ ಕಾರಣ ಎಂದು ಹೊರಗೆ ಹೋರಾಟ ನಡೆಸಿ ಒಳಗೆಬದಲಾಗದೆ ಇರೋದು.
ಇದನ್ನು ಜನಸಾಮಾನ್ಯರು ಸರಿ ಎಂದು ತಿಳಿದುಮನೆಯೊಳಗೆ ಇದ್ದ ದೇವರನ್ನು ಮರೆತು ಹೊರಗೆ ಬಂದಿರೋದು ದುರಂತ.
ಹೊರಗೆ ಬಂದಮೇಲೆ ಒಳಗೆ ಸೇರುಸುವುದು ಬಹಳಕಷ್ಟದ ಕೆಲಸ. ಕಷ್ಟಪಡದೆ ಉಚಿತವಾಗಿ ಎಲ್ಲಾ ಸಿಗುವಂತಿದ್ದರೆ ಮನುಷ್ಯ ಸೋಮಾರಿಯಾಗೋದು ಖಚಿತ. ಸೋಮಾರಿಯ ಜೊತೆಗೆ ಮಾರಿಯೂ ಇರೋದು ಸತ್ಯ. ರೋಗ ಬಂದಾಗ ಯಾರೂ ಅದನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ.ಅದನ್ನು ಜೀವವೇ ಅನುಭವಿಸೋದು ಸಾಮಾನ್ಯಜ್ಞಾನ.
ಭಾರತದಂತಹಪವಿತ್ರ ದೇಶ ಇಂದು ಭೋಗಕ್ಕೆ ಬಲಿಯಾಗಿ ರೋಗದೆಡೆಗೆ ನಡೆದು ಹಿಂದಿರುಗಿ ಬರಲು ಯೋಗ ಮಾಡುತ್ತಿದೆ. ಯೋಗ ಅಷ್ಟು ಸುಲಭವಾಗಿ ಸಿಗೋದಿಲ್ಲ ಎನ್ನುವುದು ಸತ್ಯ.ಯೋಗದಲ್ಲಿ ಪರಮಾತ್ಮ ಜೀವಾತ್ಮ ಸೇರೋದಕ್ಕೆ ಅಧ್ಯಾತ್ಮ ಅಗತ್ಯವಿದೆ. ಅಧ್ಯಾತ್ಮ ದಲ್ಲಿ ಆತ್ಮಸಂಶೋಧನೆಯಾಗುತ್ತಾ ಸಂಸ್ಕಾರದ ಶಿಕ್ಷಣ ಕೊಡುತ್ತಾ ಆತ್ಮಾವಲೋಕನದಿಂದ ಒಳಗಿನ ಶುದ್ದಿಯಾಗಬೇಕು.
ಇದಕ್ಕೆ ರಾಜಕೀಯದ ಅಗತ್ಯವಿಲ್ಲ ರಾಜಯೋಗದ ಅಗತ್ಯವಿದೆ. ಸ್ವಾಮಿ ವಿವೇಕಾನಂದರು ಅಂದೇ ತಿಳಿಸಿದಂತೆ ನಮ್ಮ ಭಾರತೀಯ ಶಿಕ್ಷಣದಿಂದಷ್ಟೆ ಯೋಗ್ಯ ಪ್ರಜಾಪ್ರಭುತ್ವ ಸಾಧ್ಯವಿತ್ತು.ಶಿಕ್ಷಣ ಅನ್ಯರದ್ದು ಅನ್ಯರ ಧರ್ಮ, ಅನ್ಯರ ವ್ಯವಹಾರ,ತಂತ್ರ ಯಂತ್ರ ಬೇಕು ಎಂದವರು ದೂರದ ಆಲೋಚನೆ ಮಾಡುತ್ತಾ ದೂರವಾದರು. ಹತ್ತಿರವಿದ್ದ ನಮ್ಮವರನ್ನೇ ದೂರವಾದರೆ ಒಳಗಿದ್ದ ಜ್ಞಾನದ ಅರಿವಾಗದೆ ನಮ್ಮವರನ್ನೇ ಆಳುವ ರಾಜಕೀಯ ಬೆಳೆಯಿತು.ಕಲಿಕೆಯ ಪ್ರಭಾವದಿಂದಾಗಿ ಯುಗ ಬದಲಾದರೂ ಆತ್ಮ ಒಂದೇ.
ಹಿಂದೆ ಇಂದು ಮುಂದೆ ಇರುವ ಒಂದೇ ಆತ್ಮಕ್ಕೆ ಸತ್ಯ ಒಂದೇ.
ಆ ಒಂದೇ ಸತ್ಯವೇ ಆತ್ಮಸಾಕ್ಷಿಯಾಗಿದೆ. ಇಂದು ಆತ್ಮಸಾಕ್ಷಿಗೆ ತಕ್ಕಂತೆ ನಡೆಯಲಾಗದೆ ಪರಕೀಯರಿಗೆ ಮಣೆ ಹಾಕುವ ಮಟ್ಟಿಗೆ ವ್ಯವಹಾರ ನಡೆದಿದೆ.ವ್ಯವಹಾರದಲ್ಲಿ ಲಾಭ ನಷ್ಟ ಸಹಜ. ಒಬ್ಬರಿಗೆ ಮೋಸ ಮಾಡಿ ಲಾಭಗಳಿಸಿದರೂ ಮತ್ತೊಬ್ಬರು ತಮಗೇ ಮೋಸ ಮಾಡುವರೆನ್ನುವ ಕರ್ಮ ಸಿದ್ದಾಂತದ ಅರಿವಿದ್ದರೆ ತಾವೂ ಬದುಕಿ ಇತರರನ್ನು ಬದುಕಲು ಬಿಡಬಹುದು. ಒಟ್ಟಿನಲ್ಲಿ ಎಲ್ಲಾ ಮಾನವರೆ ಎಲ್ಲರಿಗೂ ಅವರದೇ ಆದ ಸ್ವತಂತ್ರ ಜ್ಞಾನವೂ ಇದೆ. ಆದರೆ ಬುದ್ದಿವಂತಿಕೆ ಬೇರೆ ಬೇರೆಯಾಗುತ್ತಾ ವಿದ್ಯೆಯ ದುರ್ಭಳಕೆ ಆದಾಗ ಅಜ್ಞಾನ ಆವರಿಸಿ ಅಹಂಕಾರ ಸ್ವಾರ್ಥಕ್ಕೆ ತಾನೇ ಬಲಿಯಾದರೂ ಅರಿವಿರದು.
ಏನೇ ಮಾಡಿದರೂ ಅದರ ಫಲ ಹಿಂದಿರುಗಿ ಬರುತ್ತದೆ ಎನ್ನುವ ಸತ್ಯವನ್ನು ಯಾರೂ ಬದಲಾಯಿಸಲಾಗದು.
ಇದಕ್ಕೆ ದಾಸರು ನಗೆಯು ಬರುತಿದೆ ನನಗೆ ನಗೆಯು ಬರುತಿದೆ....ಎಂದರು.ಇಂದಿಗೂ ನಾವು ನಮಗೆ ಮೋಸ ಮಾಡುವ ಸರ್ಕಾರದ ಹಿಂದೆ ನಗುತ್ತಾ ಹೋಗುತ್ತಿರೋದು ನೋಡಿದರೆ ಆಳು ಯಾರು ಅರಸರು ಯಾರು ಎನ್ನುವ ಪ್ರಶ್ನೆ ಏಳುತ್ತದೆ.
ಸರ್ಕಾರ ಎಂದರೆ ಸಹಕಾರ. ನಾವು ಯಾರಿಗೆ ಸಹಕಾರ ಕೊಡುವೆವೋ ಅವರು ಬೆಳೆಯುವರಷ್ಟೆ ಜೀವನ.
ಮನೆಯೊಳಗೆ ಹೊರಗೆ ಆವರಿಸಿರುವ ಆ ಪರಮಾತ್ಮನ ಶಕ್ತಿ ನಮ್ಮೊಳಗೇ ಅಡಗಿದೆ ಆದರೆ ಅದನ್ನು ಅರಿಯದೆ ಹೊರಗೆ ಹೋದಷ್ಟೂ ಅಹಂಕಾರ ಸ್ವಾರ್ಥ ಹೆಚ್ಚುವುದು. ಇದನ್ನು ಅಧ್ಯಾತ್ಮ ಎನ್ನಬಹುದೆ? ಸತ್ಯ ಒಳಗಿದೆ ಅಸತ್ಯಕ್ಕೆ ಸಹಕಾರವಿದೆ ಎಂದರೆ ದೇವರಿರೋದೆಲ್ಲಿ?
ಮೂರ್ಖರಿಗೆ ಸಹಕರಿಸುವವ ನಾವೂ ಮೂರ್ಖರೆ .
ಭ್ರಷ್ಟಾಚಾರ ಕ್ಕೆ ಸಹಕರಿಸುವ ನಾವೂ ಭ್ರಷ್ಟರೆ
ಅಸತ್ಯ ಅನ್ಯಾಯ ಅನ್ಯಾಯವನ್ನು ಹಣದಿಂದ ಅಳೆಯುವ ನಾವು ಅಜ್ಞಾನಿಗಳೇ ಆದಾಗ ಯೋಗವಾಗದು. ಪರಮಾತ್ಮನ ಸೇರುವ ಯೋಗದಲ್ಲಿ ಜ್ಞಾನಯೋಗ,ರಾಜಯೋಗ ಭಕ್ತಿಯೋಗ, ಕರ್ಮ ಯೋಗವಿದೆ. ನಮ್ಮ ಜ್ಞಾನ,ರಾಜಕೀಯ, ಭಕ್ತಿ,ಕರ್ಮ ಎಲ್ಲವೂ ಹೊರಗಿನ ತೋರುಗಾಣಿಕೆಯ ಆಡಂಬರಕ್ಕೆ ಇಳಿದರೆ ಏನರ್ಥ?
ಜನಸಾಮಾನ್ಯರು ಅಂತರಂಗಶುದ್ದಿಯೆಡೆಗೆ ನಡೆಯಲು ಕಲಿಸದ ಶಿಕ್ಷಣ ಶಿಕ್ಷಣವೇ ಆಗಿರದು..ಇದರ ಬಗ್ಗೆ ಪೋಷಕರು ಎಚ್ಚರವಾಗದೆ ಏನೂ ಬದಲಾಗದು. ದೇಶದ ತುಂಬಾ ದೇವಸ್ಥಾನ. ಆದರೆ ದೇಶವಾಸಿಗಳಲ್ಲಿ ದೈವತ್ವದ ಕೊರತೆಯ ಶಿಕ್ಷಣವೂ ತುಂಬಿರುವಾಗ ಇದರ ಮೂಲ ಯಾವುದು?
ಶಿಕ್ಷಣ ತಜ್ಞ ರು ಶಾಲಾ ಕಾಲೇಜ್ ಗಳಲ್ಲಿ ಅತಿಥಿಗಳು. ಪಾಠ ಮಾಡುವ ಶಿಕ್ಷಕರಿಗೆ ಮಕ್ಕಳ ಆಸಕ್ತಿ ಜ್ಞಾನ ಗುರುತಿಸುವ ಜ್ಞಾನದ ಕೊರತೆ.ಪಠ್ಯ ಪುಸ್ತಕದ ವಿಚಾರದಲ್ಲಿ ರಾಜಕೀಯತೆ ಬೆಳೆದಿದೆ.ಇನ್ನು ಪೋಷಕರ ಪರಿಸ್ಥಿತಿ ಮನಸ್ಥಿತಿ ಮನೆಯ ಸ್ಥಿತಿ ಯಾರೂ ಹೇಳುವ ಹಾಗಿಲ್ಲ. ಇವೆಲ್ಲರಮಧ್ಯೆ ಸಿಲುಕಿರುವ ಮಕ್ಕಳನ್ನು ಹೊರಗೆ ಕಳಿಸುವ ವ್ಯವಸ್ಥೆ ಜೋರಾಗಿದೆ.ಮಕ್ಕಳು ಮುಗ್ದರೆ ಪ್ರಭುದ್ದರೆ? ಪ್ರಭುದ್ದರಿಗೆ ಹೊರಗಿನ ವಿಚಾರ ಅರ್ಥ ವಾಗುತ್ತದೆ. ಒಳಗೇ ಇರುವ ಸದ್ವಿಚಾರ ಅರ್ಥ ವಾದರೆ ಮಾತ್ರ ಬದಲಾವಣೆ ಸಾಧ್ಯ.
ಸಹಕಾರ = ಸರ್ಕಾರ .ಪ್ರಜಾಸಹಕಾರವೇ ಎಲ್ಲಾ ಸಮಸ್ಯೆಯ ಮೂಲ. ಅಜ್ಞಾನವೇ ಮೂಲ. ಸತ್ಯದ ತಿಳುವಳಿಕೆಯಿಲ್ಲದ ವ್ಯವಹಾರವೇ ಮೂಲ. ಅಕರ್ಮವೇ ಅಧರ್ಮಕ್ಕೆ ಕಾರಣ.
ಕಷ್ಟಪಟ್ಟು ದುಡಿದ ಹಣವನ್ನು ಸರಿಯಾಗಿ ಬಳಸಲು ಸುಜ್ಞಾನ ಅಗತ್ಯವಿದೆ. ಯಾರೋ ಹೇಳಿದ್ದನ್ನು ಸತ್ಯವೆಂದು ತಿಳಿಯುವ ನಮಗೆ ನಮ್ಮವರ ಸತ್ಯ ಅರ್ಥ ಮಾಡಿಕೊಂಡು ನಡೆಯೋ ಜ್ಞಾನವಿಲ್ಲ.ಹಿಂದಿನ ಶಿಕ್ಷಣದಲ್ಲಿ ಸತ್ಯವಿತ್ತು.ಈಗ ಮರೆಯಾಗಿದೆ. ಸರಿಪಡಿಸೋದು ಯಾರು? ಹೇಗೆ?
ಜ್ಞಾನ ವಿಜ್ಞಾನ ಮಧ್ಯೆ ಸಾಮಾನ್ಯ ಜ್ಞಾನವಿದೆ. ಮಾನವ ಅದನ್ನರಿತು ಪಾಲಿಗೆ ಬಂದದ್ದು ಪಂಚಾಮೃತ ಎಂದರಿತು ನಡೆದರೆ ಸ ಹಾಸಿಗೆ ಇದ್ದಷ್ಟು ಕಾಲು ಚಾಚಬಹುದು.ಇಲ್ಲ ಎಂದರೆ ಸಾಲಕ್ಕೆಬಡ್ಡಿ ಚಕ್ರಬಡ್ಡಿ ಬೆಳೆಯುತ್ತಲೇ ಇರುತ್ತದೆ.
ಪುನರಪಿ ಜನನಂ ಪುನರಪಿ ಮರಣಂ...
ಜನನ ಮರಣದ ನಡುವಿರುವ ಋಣದ ಲೆಕ್ಕಾಚಾರಕ್ಕೆ ಅಂತ್ಯ ಹಾಡಲು ಸತ್ಯಜ್ಞಾನ ಅಗತ್ಯವಿದೆ ಎಂದರು ಮಹಾತ್ಮರುಗಳು.
ಸಂಬಂಧಗಳು ಸಹಜ ಸಾವು ಹೊಂದುವುದಿಲ್ಲ.
ಅವುಗಳು ಯಾವಾಗಲೂ
ಅಹಂಕಾರ, ವರ್ತನೆ , ಮತ್ತು ಅಜ್ಞಾನ ದಿಂದಾಗಿ
ಕೊಲೆಯಾಗುತ್ತವೆ .
.
ಹೊರಗಿನ ಸಂಬಂಧದಿಂದ ಒಳಗಿನ ಸಂಬಂಧ ಗಟ್ಟಿಯಾದರೆ ಯೋಗ. ಇಲ್ಲವೆಂದರೆ ರೋಗ.
No comments:
Post a Comment