ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Tuesday, July 1, 2025

ನಾಮಸ್ಮರಣೆಯಿಂದಲೇ ಪರಮಾತ್ಮನ ದರ್ಶನ

🚩🔯🌸🌄⚛🌅🌸🔯

*ಧ್ಯಾಯನ್ ಕೃತೇ ಯಜನ್ ಯಜ್ಞೈಃ ಸ
*ತ್ರೇತಾಯಾಂ ದ್ವಾಪರೇಽರ್ಚಯನ್ |*
*ಯದಾಪ್ನೋತಿ ತದಾಪ್ನೋತಿ*
*ಕಲೌ ಕೇಶವಕೀರ್ತನಾತ್ ||*
(ವಿಷ್ಣುಪುರಾಣ)

ಕೃತಯುಗದಲ್ಲಿ ಧ್ಯಾನಾದಿಗಳ ಮೂಲಕ, ತ್ರೇತಾಯುಗದಲ್ಲಿ ಯಜ್ಞಯಾಗಾದಿಗಳ ಮೂಲಕ, ದ್ವಾಪರಯುಗದಲ್ಲಿ ಅರ್ಚನಾದಿಗಳ ಮೂಲಕ ಯಾವ ಪರಮಪದವನ್ನು ಪಡೆಯಲಾಗುತ್ತಿತ್ತೋ, ಅದೇ ಪರಮಪದವು ಕಲಿಯುಗದಲ್ಲಿ ಕೇಶವನನ್ನು (ಪರಮಾತ್ಮನನ್ನು) ಕೀರ್ತಿಸುವುದರ ಮೂಲಕವೇ ದೊರೆಯುತ್ತದೆ.

 ಕೃತಯುಗದ ಸತ್ಯದ ಧ್ಯಾನವೇ ದೈವತ್ವ ತ್ರೇತಾದ ಯಜ್ಞ ಯಾಗವೇ ಪ್ರಧಾನ ಪರಮಾತ್ಮನ ಸೇವೆ, ದ್ವಾಪರದಲ್ಲಿ ದೇವತಾರ್ಚನೆಗಳಿಂದ‌ ಪರಮಾತ್ಮನ  ಸೇವೆ ಆಗಿತ್ತು ಕಲಿಯುಗದಲ್ಲಿ  ದೇವರ ನಾಮ ಸಂಕೀರ್ತನೆಯಿಂದಲೇ  ತಮ್ಮ ಕಾಯಕವನ್ನು ಸತ್ಯ ಧರ್ಮ ದಿಂದ ‌ನಡೆಸಿದವರಿಗೆ ಪರಮಾತ್ಮನ ದರ್ಶನ ವಾಗಿದೆ ಎಂದಾಗ  ಇಂದು‌ ನಾಮಜಪದಿಂದಲೇ  ಪರಮಾತ್ಮನ ಕಡೆಗೆ ನಡೆಯುವ  ಅವಕಾಶವಿದೆ. ಆದರೆ‌, ಕಲಿಕೆಯೇ  ಹೊರಮುಖವಾದಾಗ ಇದು ಕಷ್ಟವಾಗುತ್ತದೆ. ಮನಸ್ಸು  ಅಂತರಾತ್ಮನ ಕಡೆಗೆ ನಡೆಸೋದೇ ಅಧ್ಯಾತ್ಮ ಸಾಧನೆ.  ಹೊರಗಿನ ದೇವರನ್ನು  ಬೇಡುತ್ತಾ ಹೋದಷ್ಟೂ ಒಳಗಿನ ದೇವರ ಸಾಲ ಬೆಳೆಯುತ್ತದೆ. ಆತ್ಮಕ್ಕೆ ತೃಪ್ತಿ ಸಿಗಬೇಕಾದರೆ  ಬೇಡೋದರ ಬದಲು ನೀಡೋದರತ್ತ ನಡೆಯಬೇಕು. ಬೇಡೋನು ದೀನ ಸ್ಮರಿಸೋನೆ ಜಾಣ. ನಾಮಸ್ಮರಣೆಯಿಂದ  ನೀಡೋ ಶಕ್ತಿ ಹೆಚ್ಚಾದಾಗ  ಹಾಸಿಗೆ ಇದ್ದಷ್ಟು ಕಾಲುಚಾಚುವ ಬುದ್ದಿಯೂ ಬೆಳೆಯುತ್ತದೆ. ಯಾವುದೂ ಅತಿಯಾಗಬಾರದು.
ಅತಿಯಾದದ್ದನ್ನು  ದಾನ ಮಾಡಬೇಕು.ದಾನ ಸತ್ಪಾತ್ರರಿಗೆ ಆಗಬೇಕು, ನಮ್ಮದಲ್ಲದ ಅನಾವಶ್ಯಕವಾದದ್ದು ಕೊಟ್ಟರೆ ದಾನವಾಗದು. ದಾನ ದಾನವರಿಗೆ ಮಾಡಬಾರದು. ಹೀಗೇ ಕೆಲವು ನಿಶಿದ್ದವಾದದ್ದನ್ನು  ಅರಿತು  ಅದನ್ನು ಬಿಟ್ಟು ಮಾನವ ನಡೆದರೆ, ಯಾರ ನಾಮ ಸ್ಮರಣೆ ಮಾಡಿದರೆ ಉತ್ತಮ ಅಧಮ ಎನ್ನುವ ಸತ್ಯ ಅರ್ಥ ವಾಗುತ್ತದೆ.
ಯಾವಾಗಲೂ ರಾಜಕೀಯ ಆಟ,ಊಟ,ಓಟ ಮಾರಾಟದಲ್ಲಿರುವ ಮನಸ್ಸಿಗೆ  ಅದರದ್ದೇ ಧ್ಯಾನವಾದಾಗ ಅದೇ ಕಾಣೋದು. ಇದರಿಂದಾಗಿ ಕಷ್ಟ ನಷ್ಟ  ಒಂದರ ಹಿಂದೆ ಒಂದು ಬರುತ್ತದೆ. ಹಾಗಂತ ಅದಿಲ್ಲದೆ ಜೀವನವಿಲ್ಲ,ಅದರ ಜೊತೆಗೆ ಪರಮಾತ್ಮನ ಧ್ಯಾನ ಬೆರೆತು ಇತಿಮಿತಿಗಳನ್ನು ಕಾದುಕೊಂಡರೆ ಸದ್ಗತಿ. 
ದೇವಸ್ಥಾನದಲ್ಲಿ  ದೇವರ ಸ್ಮರಣೆ ಮಾಡೋದು ಸರಿ.ಅದರಲ್ಲಿ ರಾಜಕೀಯ ತಂತ್ರ ನಡೆಸೋದು ಸರಿಯಲ್ಲ. ಕಾರಣ ಭಕ್ತರೆ  ದೇವರಿಗೆ ಪ್ರಿಯ.ಅವರನ್ನು  ಆಳೋದರಲ್ಲಿ  ಧರ್ಮ ವಿರದು. ಒಟ್ಟಿನಲ್ಲಿ ಕಲಿಯುಗದಲ್ಲಿ  ತಲೆಗೆ ತುಂಬಿದ ವಿಚಾರವೇ ಮೈಯೆಲ್ಲಾ ಹರಡಿಕೊಂಡು ನಡೆಸುವುದರಿಂದ, ತಲೆಯಲ್ಲಿ  ದೇವರಿಗೆ ಸ್ಥಾನ ಇದ್ದರೆ ದೇಹವೇ ದೇಗುಲ.
ಇದನ್ನು  ದಾಸ ಶರಣರು ತಿಳಿಸುತ್ತಾ ನಡೆದು‌ ಪರಮಾತ್ಮನ ಸೇರಿದ್ದಾರೆಂದರೆ  ಕಲಿಯುಗದ ಕಲಿಕೆಯಲ್ಲಿ ಬದಲಾವಣೆ ಅಗತ್ಯವಿದೆ. 

ತಾಯಿಯೇ ಮೊದಲ ಗುರು,ತಂದೆ ಎರಡನೇ ಗುರು ನಂತರ ಹೊರಗಿನ ಗುರುವರ್ಯರ ಉಪದೇಶ ಆದೇಶ ಸಂದೇಶಗಳನ್ನು  ಅನುಸರಿಸುತ್ತಾ ಮಕ್ಕಳು ಜೀವನದ ಸತ್ಯಾಸತ್ಯತೆಯನರಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗುವರು. ಆದರೆ ಇದರಲ್ಲಿ ಧರ್ಮ ಮತ್ತು ಸತ್ಯ ಇಲ್ಲದೆ ಹೋದಾಗ  ದಾರಿತಪ್ಪಿ ನಡೆಯೋದು ಸಹಜ. ಎಲ್ಲರಿಗಿಂತ ಮೊದಲೇ ಒಳಗೆ ಸೇರಿರುವ ಆತ್ಮನ ಬಗ್ಗೆ ತಿಳಿಸೋರೆ ನಿಜವಾದ ಗುರುವಾಗುವರೆನ್ನುವುದು ಅಧ್ಯಾತ್ಮ .
ಕಾಣದ ದೇವರನ್ನು ಕಾಣುವ ಗುರು ತೋರಿಸಬೇಕಾದರೆ  ಕಷ್ಟಪಟ್ಟು ಕಾಣದ  ಲೋಕದೆಡೆಗೆ  ನಡೆದವರು  ಗುರುವಾದರು. ಭೂಮಿಯ ಮೇಲಿರುವಾಗ ಎಲ್ಲಾ ಮಾನವರೆ ಹೋದ ಮೇಲೆ ಅವರು ಏನು ಬಿಟ್ಟು ಕೊಟ್ಟು ಕಲಿಸಿ ತಿಳಿಸಿದ್ದರೂ ಅದರ ಮೇಲೇ  ಜೀವದ ಪಯಣ.
ಪ್ರತಿಯೊಬ್ಬರೂ ವಿಶೇಷ ಶಕ್ತಿಯಿರುವ ವಿಜ್ಞಾನಿಗಳಾಗಬಹುದು. ಆದರೆ ಎಲ್ಲರಿಗೂ ವಿಶೇಷಜ್ಞಾನದ ಗುರು ಸಿಗದ ಕಾರಣ ಗುರುತಿಸಲಾಗದೆ ಜೀವಾತ್ಮ ಹಿಂದುಳಿಯುವುದಷ್ಟೆ. ಎಲ್ಲಾ ನಮ್ಮ ಕೈಯಲ್ಲಿಲ್ಲವಾದರೂ ನಾವೇ ಕೈ ಜೋಡಿಸಿ ಬೆಳೆಸಿರುವಾಗ ಕೈ  ಸರಿಯಿಲ್ಲ ಎಂದರೆ ನಮ್ಮದೇ ತಪ್ಪಾಗುತ್ತದೆ. ಕೈ ಕೈ ಸೇರಿಯೇ ಚಪ್ಪಾಳೆ. ಚಪ್ಪಾಳೆ ಸದ್ದು‌ ಹೆಚ್ಚಾದಾಗ  ನಮ್ಮ  ಮನಸ್ಸು ಪರಮಾತ್ಮನ ಸ್ಮರಣೆ ಮಾಡುವುದೆ? ಇಲ್ಲವೆಂದರೆ  ಚಪ್ಪಾಳೆಯ ಹಿಂದೆ ಪರಮಾತ್ಮ  ಇರುವನೆ? ಇದ್ದರೆ  ಕಾಣುವುದಿಲ್ಲ ಜೊತೆಗೆ ಆ ಕ್ಷಣ‌ನೆನಪಿಗೂ ಬರೋದಿಲ್ಲವೆಂದರೆ‌ನಷ್ಟ ಯಾರಿಗೆ? ಎಲ್ಲಾ ಕೆಲಸವೂ ಅವನ ಪ್ರೇರಣೆಯಿಂದ ನಡೆಯುವಾಗ  ಎಲ್ಲವೂ ಅವನ ವಶವೇ. ಹೀಗಾಗಿ  ಅವನು ಬೇರೆಯಾಗಿಲ್ಲ.ಪ್ರತಿಯೊಂದು ಉಸಿರಿನಲ್ಲೂ ಹೆಸರಿನಲ್ಲೂ‌  ಇದ್ದು  ನಡೆಸುವಾಗ ಅವನ ಸ್ಮರಣೆಯಲ್ಲಿಯೇ ಇದ್ದು  ಕಾಯಕವೇ ಕೈಲಾಸವೆಂದು ನಡೆದವರು  ಪರಮಾತ್ಮನಿಗೆ ಶರಣಾಗಿದ್ದರು. ಈಗಿದು ಹೊರಜಗತ್ತಿನಲ್ಲಿ   ಹೊರಗಿನ ವ್ಯವಹಾರದಲ್ಲಿ  ಮನಸ್ಸು  ಓಡುತ್ತಾ ಒಳಗಿದ್ದ  ನಮ್ಮವರ ಹೆಸರೇ ನಮಗೆ ತಿಳಿಯದು.ಇನ್ನು ಒಳಗೇ ಕುಳಿತು ನಡೆಸಿರುವ ಆ‌ಶಕ್ತಿಯ ಹೆಸರು ನೆನಪಾಗುವುದೆ? ಆದರೆ ಮಾತ್ರ  ಸೇವೆಯಾಗುತ್ತದೆ.

No comments:

Post a Comment