ಸ್ವಾತಂತ್ರ್ಯ ಸಿಗೋದು ಅಂತರದಿಂದಲೋ ಸಮಾನತೆಯಿಂದಲೋ? ಇಲ್ಲಿ ಸಮಾನತೆಯವಿಚಾರ ಬಂದರೆ ಪರಮಾತ್ಮಜೀವಾತ್ಮರ ವಾದ ವಿವಾದದ ಮತಗಳಲ್ಲಿ ಅಂತರ ಬರುತ್ತದೆ. ಇವುಗಳನಂತರದಲ್ಲಿ ಸಂಸಾರ ಮತ್ತು ಸನ್ಯಾಸಿಗಳನಡುವೆ ಅಂತರ ಬೆಳೆಯುತ್ತದೆ. ಹೀಗೇ ಮುಂದೆ ಹೋದಂತೆಲ್ಲ ಮೂಲ ಮರೆತು ಅಂತರವೇ ಹೆಚ್ಚಾಗುತ್ತಾ ಮಧ್ಯದಲ್ಲಿ ನಿಂತುನಡೆಸೋ ರಾಜಕೀಯ ಶಕ್ತಿಗಳು ಬೆಳೆದು ಈ ಕಡೆ ಸಮಾನತೆಯ ಮಂತ್ರ ಇನ್ನೊಂದು ಕಡೆ ಅಂತರಗಳ ತಂತ್ರಕ್ಕೆ ಜನರೊಳಗಿದ್ದ ಸ್ವತಂತ್ರ ಬುದ್ದಿಜ್ಞಾನವನ್ನು ಹಿಂದುಳಿಸಿ ಹಿಂದುಳಿದವರ ಸಂಖ್ಯೆಬೆಳೆಯುತ್ತದೆ. ಈಗ ಸ್ವಾತಂತ್ರ್ಯ ಪದಕ್ಕೆ ಅರ್ಥ ತಿಳಿಯಿತೆ ? ಎಷ್ಟು ಹೊರಗೆ ಹೋದರೂ ಸ್ವಾತಂತ್ರ್ಯ ಸಿಗದು.
ಈಗ ಹೊರಗಿರೋದು ಸ್ವೇಚ್ಚಾಚಾರ. ಅದಕ್ಕಾಗಿ ಹಣ ಅಧಿಕಾರ ಹೆಸರು ದುರ್ಭಳಕೆ ಆದರೂ ಅವರಿಗೆ ಸ್ವಾತಂತ್ರ್ಯ ವಿದೆ.
ಆ ಸ್ವಾತಂತ್ರ್ಯ ಕೊಟ್ಟವರು ಎಲ್ಲಿರುವರು? ಹಿಂದುಳಿದರೆ ಅಥವಾ ಮುಂದುವರಿದರೆ? ಯಾವುದರಲ್ಲಿ ಹಿಂದುಳಿದರು ಎಂದರೆ ತತ್ವಜ್ಞಾನದಲ್ಲಿ ಮುಂದುವರಿದವರು ತಂತ್ರಜ್ಞಾನಿಗಳಾಗಿ ಹೊರಗೆಹೋಗಿರುವರು. ಇವರಿಬ್ಬರ. ಮಧ್ಯೆ ನಿಂತು ಪ್ರಚಾರ ಮಾಡುವವರ ಕುತಂತ್ರದಿಂದ. ಅಂತರ ಹೆಚ್ಚಾಗಿ ಮಾನವನ ದೈವಗುಣ ಅಸುರಗುಣದೆಡೆಗೆ ಹೋಗಿದೆ.
ಒಟ್ಟಿನಲ್ಲಿ ದ್ವೇಷ ಯಾವತ್ತೂ ಶಾಂತಿ ಕೊಡದು.
ದ್ವೇಷಕ್ಕೆ ಕಾರಣವೇ ಅತೃಪ್ತ ಆತ್ಮಗಳಾಗಿ ವೆ
ಆತ್ಮ ಕಣ್ಣಿಗೆ ಕಾಣದಿದ್ದರೂ ಅತೃಪ್ತರನ್ನು ನೋಡಿದಾಗ ತಿಳಿಯಬಹುದು ಆ ದೇಹದಲ್ಲಿ ಅತೃಪ್ತಿ ಹೆಚ್ಚಾಗಿದೆ ಎಂದು.
ಎಷ್ಟು ದೊಡ್ಡ ಮನೆ ಒಳ್ಳೆಯ ಸಂಸಾರ ,ಅತ್ಯುತ್ತಮ ಕೆಲಸ ಇದ್ದರೆ ಪುಣ್ಯವಂತರೆನ್ನುವರು. ಇವು ಯೋಗದ ಮೂಲಕವೇ ಸಿಗಬೇಕೆಂದರೆ ಅದಕ್ಕೆ ಪೂರಕ ಶಿಕ್ಷಣವಿರಬೇಕಿತ್ತು.ಶಿಕ್ಷಣದಲ್ಲಿಯೇ ತೃಪ್ತಿ ಕಾಣದ ಮಕ್ಕಳಿಗೆ ತೃಪ್ತಿ ಸಿಗೋದು ಸಾಧ್ಯವೆ?
ಎಲ್ಲದ್ದಕ್ಕೂ ಕಾರಣ ರಾಜಕೀಯ ವ್ಯವಸ್ಥೆ. ಇದು ಧಾರ್ಮಿಕ ಶಿಕ್ಷಣ ,ಸಾಹಿತ್ಯ, ಸಂಗೀತ ಕಲಾಕ್ಷೇತ್ರವನ್ನೂ ಬಿಡದೆ ಆಳುತ್ತಿದ್ದರೂ ಈವರೆಗೆ ಇದೇ ಸತ್ಯ ಶುದಗದವೆಂದರಿತು ಹಿಂದೆ ನಿಂತು ಸಹಕಾರ ಕೊಟ್ಟವರು ಈಗಹಿಂದಿರುಗಲಾಗದೆ ಅದನ್ನು ಮತ್ತಷ್ಟುಬೆಳೆಸಿಜನರಿಗೆ ಮೋಸಮಾಡಿದರೆ ಪಾಪದ ಫಲ ಕೊಡುವ ಮೇಲಿನ ನ್ಯಾಯಾಧೀಶನಿಂದ .ಬಿಡಿಸಿಕೊಳ್ಳಲು ಕಷ್ಟಪಡಲೇಬೇಕಲ್ಲವೆ? ಅವತಾರ ಪುರುಷ ಸ್ತ್ರೀ ಯರನ್ನೂ ಬಿಡದ ಕರ್ಮ ಹುಲುಮಾನವನನ್ನು ಬಿಡುವುದೆ?
ಎಲ್ಲಾ ತಿಳಿದರೂ ಕೆಲಸದಲ್ಲಿ ತಪ್ಪಾಗಬಹುದು. ಆದರೆ ತಪ್ಪು ಮಾಡಿದ ಮೇಲೂ ಅದೇ ದಾರಿಯಲ್ಲಿನಡೆಯುವುದರಿಂದ ಸತಿ ಆಗಬಹುದೆ?
ಕಂಬಾರ ನಿಗೆ ಒಂದು ವರುಷ ದೊಣ್ಣೆಗೆ ಒಂದೇ ನಿಮಿಷ ಎಂದಂತೆ
ನಾವೆಷ್ಟು ಉತ್ತಮದಾರಿಯಲ್ಲಿ ನಡೆಯಲು ಬಿಟ್ಟು ಮಕ್ಕಳು ದೊಡ್ಡವರಾದಂತೆ ದಾರಿತಪ್ಪಿಸುವವರೊಂದಿಗೆ ಬಿಟ್ಟರೆ ವ್ಯರ್ಥ. ಇದು ಹೊರಗಿರುವ ರಾಜಕೀಯ ಶಕ್ತಿಯಾಗಿದೆ.
No comments:
Post a Comment