: ಹಿರಣ್ಯ ಕಶ್ಯಪುವನ್ನು ಸಂಹಾರ ಮಾಡಲುದೇವತೆಗಳು ಅವನ ಮಗನನ್ನೇ ಬಳಸಿಕೊಂಡು ಗೆದ್ದರು , ಕಂಸನ ವಧೆ ಶ್ರೀ ಕೃಷ್ಣನಿಂದ ಎಂದು ತಿಳಿದವನಿಗೆ ನಾರದರು ಕಂಸನ ಪಾಪದ ಕೊಡ ತುಂಬಿಸಲು ದೇವಕಿಯ ಏಳೂ ಮಕ್ಕಳನ್ನು ಕಂಸ ಕೊಲ್ಲುವಂತೆ ಮಾಡಿದರು. ಅಂದರೆ ಯಾವುದೇ ನಕಾರಾತ್ಮಕ ಶಕ್ತಿಯನ್ನು ಅಷ್ಟು ಸುಲಭವಾಗಿ ತಡೆಯಲಾಗದು. ಅದು ವಿಪರೀತ ಬೆಳೆದಾಗಷ್ಟೆ ಅದರ ಅಂತ್ಯವಾಗೋದು.
ಈಗಲೂ ಹಾಗೆಯೆ ಭೂಮಿಯ ಮೇಲಿರುವ ಮಾನವನಿಗೆ ಭೂಮಿಯಿಲ್ಲದೆ ನಾನಿಲ್ಲ ಎನ್ನುವ ಸಾಮಾನ್ಯ ಜ್ಞಾನವಿಲ್ಲದೆ ಭೂಮಿಯನ್ನು ಹೆಣ್ಣು ಹೊನ್ನು ಮಣ್ಣನ್ನು ದುರ್ಭಳಕೆ ಮಾಡಿಕೊಂಡರೂ ಅವರು ಬೆಳೆಯುತ್ತಿರೋದಕ್ಕೆ ಕಾರಣ ಮಧ್ಯವರ್ತಿಗಳ ಸಹಕಾರವಾಗಿದೆ. ಈ ಕಡೆ ಸತ್ಯ ಇನ್ನೊಂದು ಕಡೆ ಮಿಥ್ಯ ನಡುವೆ ಅರ್ಧಸತ್ಯದ ರಾಜಕೀಯ ದಲ್ಲಿ ಗೆದ್ದವರು ಯಾರು? ಸೋತವರೆಲ್ಲಿ?
ಕಣ್ಣಿಗೆ ಕಾಣುವ ಭ್ರಷ್ಟ ದುಷ್ಟರಿಗೆ ಮತದಾನ ಮಾಡುವ ಜನರ ಅಜ್ಞಾನಕ್ಕೆ ಸರಿಯಾದ ಜ್ಞಾನದ ಶಿಕ್ಷಣವೇ ಕೊಡದೆ ದೇವರನ್ನು ದೇವಸ್ಥಾನವನ್ನು ಬೆಳೆಸಿದರೆ ಆ ದೇವರನ್ನೂ ಸೇರಿಸಿ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ಅಸುರರಿದ್ದಾರೆ. ಇದು ಹಿಂದೆ ಯೂ ನಡೆದಿತ್ತು. ಈಗಲೂ ನಡೆಯುತ್ತಿದೆ ಮುಂದೆಯೂ ನಡೆಯಬಹುದು. ನಡೆಸುತ್ತಿರುವವರು ಯಾರು? ನಾವ್ಯಾರು? ದೇವರೆ,ಮಾನವರೆ ಅಸುರರೆ? ನಮ್ಮ ಸಹಕಾರವಿಲ್ಲದೆ ಯಾವುದು ನಡೆದಿದೆ? ಪ್ರಜಾಪ್ರಭುತ್ವದ ಅರ್ಥ ತಿಳಿಯದೆ ರಾಜರನ್ನು ಬೆಳೆಸಿದರೆ ಅಧರ್ಮ ವಲ್ಲವೆ?
ಅಸುರರೊಳಗೆ ಸುರರು ಇರುವಾಗ ನಮ್ಮೊಳಗೆ ಇರೋದು ಯಾರು?
ಎಲ್ಲರಲ್ಲಿಯೂ ನಿಂತು ನಡೆಸೋ ಪರಮಾತ್ಮನಿಗೆ ಎಲ್ಲಾ ಒಂದೇ. ಎಲ್ಲರೂ ಸತ್ತವರೆ ಆದರೂ ತಮ್ಮ ತಮ್ಮ ಹಿಂದಿನ ಋಣಕ್ಕನುಸಾರ ಭೂಮಿಗೆ ಬರೋದನ್ನು ತಡೆಯಲಾಗದು.
ಯಾರಿಂದ ಏನಾಗಬೇಕೋ ಅದು ಆಗೇ ತೀರುತ್ತದೆ.
ದೇವತೆಗಳು ಮಾನವರು ಅಸುರರು ಮೂವರೂ ಭೂಮಿ ಆಳಲು ಹೊರಟರೆ ಭೂಮಿಯ ಋಣ ತೀರುವುದೆ? ಅದಕ್ಕೆ ಧರ್ಮ ಮತ್ತು ಸತ್ಯವೇ ಮೂಲಾಧಾರವಾಗಿತ್ತು. ಅದನ್ನರಿತು ನಡೆದವರಿಗೆ ಮುಕ್ತಿ ಸಿಕ್ಕಿದೆ.
ದೇವರನ್ನು ತೋರಿಸಿದವರಿಲ್ಲ ನೋಡಿದವರಿದ್ದಾರೆ ಅರಿತವರಿದ್ದಾರೆ ಅರ್ಥ ಮಾಡಿಸಿದವರಿದ್ದಾರೆ ಹಾಗಾದರೆ ಕಣ್ಣಿಗೆ ಕಾಣದ ಆ ಶಕ್ತಿ ಯಾವುದು ಆತ್ಮವಾಗಿದೆ. ಇದು ಒಳಗೇ ಅಡಗಿರುವಾಗ ಹೊರಗಿನಿಂದ ತೋರಿಸಲಾಗದು.ತೋರಿಸಿದರೂ ಸ್ಪಷ್ಟವಾಗಿ ನೋಡಲಾಗದು. ಚಿತ್ರದ ಹಿಂದಿನ ಶಕ್ತಿ ಕಾಣುವುದೆ?
ಅಂತರಂಗ ಶುದ್ದವಾದರೆ ಮಾತ್ರ ಸತ್ಯದರ್ಶನ. ಸತ್ಯವೇ ದೇವರು. ಸತ್ಯವೇ ನುಡಿಯದೆ ಧರ್ಮ ರಕ್ಷಣೆಗಿಳಿದರೆ ಅನರ್ಥ ಗಳಾಗುತ್ತದೆ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ. ಸತ್ಯಹರಿಶ್ಚಂದ್ರನಂತಿರಲಾಗದು ಎಂದು ಸತ್ಯವನ್ನೇ ಬಿಟ್ಟರೆ ಹರಿ ಕಾಣುವನೆ?
No comments:
Post a Comment