ಭೂಮಿಯಲ್ಲಿ ಯಾವುದೂ ಉಚಿತವಾಗಿರದು.ಪ್ರಕೃತಿಯೇನೋ ಎಲ್ಲವನ್ನೂ ಉಚಿತವಾಗಿ ಕೊಡುತ್ತಿದೆ.ಆದರೆ ಅದನ್ನು ಆಳುವ ಮಾನವನು ಅದಕ್ಕೆ ಬೆಲೆ ಕಟ್ಟಿ ಪಂಚಭೂತಗಳನ್ನು ಮರೆತು ನಡೆದಿರೋದರಿಂದ. ಸಾಲ ಮಿತಿಮೀರಿದೆ.
ಭೂ ಸಾಲ ತೀರಿಸಲು ಬೇಕಾದ ಸತ್ಕರ್ಮ ಸ್ವಧರ್ಮ ಸದಾಚಾರ ಸರಳ ಜೀವನ ಸ್ವಾಭಿಮಾನ ಸ್ವತಂತ್ರ ಬುದ್ದಿ ಇಂದಿನ ಜನರಲ್ಲಿ ಮರೆಯಾಗಲು ಕಾರಣವೇ ಅತಿಯಾದ ವ್ಯಾಪಾರೀಕರಣ.
ಹೆಣ್ಣು ಹೊನ್ನು ಮಣ್ಣಿನ ಋಣ ತೀರದೆ ಆತ್ಮಕ್ಕೆ ತೃಪ್ತಿ ಶಾಂತಿ ಸಿಗದು ಎನ್ನುವ ಆಧ್ಯಾತ್ಮಿಕ ಜಗತ್ತಿನಲ್ಲಿಯೇ ಈ ವ್ಯವಹಾರ ಅತಿಯಾದಾಗ ಏನೂ ಅರಿಯದವರ ವ್ಯವಹಾರ ಹೇಗಿರಬಹುದು? ಇಲ್ಲಿ ಬೆಲೆ ಕಟ್ಟಬೇಕಾಗಿರೋದಕ್ಕೆ ಬೆಲೆ ಕಟ್ಟದೆ ಅನಗತ್ಯವಾಗಿದ್ದಕ್ಕೆ ಬೆಲೆಕೊಟ್ಟು ಸಾಲ ಹೆಚ್ಚಿಸಿಕೊಂಡರೆ ಅದಕ್ಕೆ ತಕ್ಕಂತೆ ಜನ್ಮಗಳಾಗುತ್ತವೆ.
ದೇವರಿಗೆ ಬೆಲೆ ಕಟ್ಟಬಹುದೆ? ದೈವತ್ವದ ಶಿಕ್ಷಣಕ್ಕೆ ಬೆಲೆ ಕಟ್ಟಬಹುದೆ
ಒಟ್ಟಿನಲ್ಲಿ ಯಾವುದೂ ಉಚಿತವಾಗಿ ಸಿಗದು. ನಮ್ಮ ಪಾಲಿಗೆ ಬಂದಿರುವುದನ್ನು ಜ್ಞಾನದಿಂದ ಬೆಲೆಕೊಟ್ಟು ಸದ್ಬಳಕೆ ಮಾಡಿಕೊಂಡರೆ ಧಾರ್ಮಿಕ ವ್ಯವಹಾರ ಇಲ್ಲ ಎಂದರೆ ಭೌತಿಕ ವ್ಯವಹಾರ. ಭೌತಿಕದಲ್ಲಿ ಸತ್ಯ ಧರ್ಮ ಕ್ಕೆ ಬೆಲೆಯಿರದು. ಇದರಿಂದ ಋಣ ಅಥವಾ ಸಾಲ ತೀರದು. ಹೀಗಾಗಿ ಮಾನವ ವ್ಯವಹಾರಕ್ಕೆ ಇಳಿದಾಗ ಎಚ್ಚರಿಕೆಯಿಂದ ಯಾರಿಗೆ ಯಾವುದಕ್ಕೆ ಯಾಕೆ ಎಷ್ಟು ಬೆಲೆಕೊಡಬೇಕೆಂಬ ಅರಿವಿದ್ದರೆ ಉತ್ತಮ ಪ್ರಗತಿ
ಋಣ ಮತ್ತು ಕರ್ಮಕ್ಕೆ ತಕ್ಕಂತೆ ಜನನ ಜೀವನ ಮರಣಗಳು ಭೂಮಿಯಲ್ಲಾಗುತ್ತಲೇ ಇರುತ್ತದೆ. ಇದರಲ್ಲಿ ಹೆಚ್ಚು ಲಾಭ ಕಡಿಮೆ ಲಾಭ, ಹೆಚ್ಚು ನಷ್ಟ ಕಡಿಮೆನಷ್ಟ ಇದು ಮಾನವನ ಲೆಕ್ಕಾಚಾರ.
ಭೂ ಋಣ ತೀರಿಸುವ ಸತ್ಕರ್ಮದಿಂದ ಧರ್ಮ ರಕ್ಷಣೆ.ಇದರಿಂದ ಪುಣ್ಯ ಪ್ರಾಪ್ತಿ, ಪುಣ್ಯದಿಂದ ಸದ್ಗತಿ.
ಬಡವರಿಗೆ ಉಚಿತ ಕೊಡಬಹುದು ಆದರೆ ಯಾವ ರೀತಿಯಲ್ಲಿ ಬಡವರಾಗಿದ್ದಾರೆಂದು ಖಚಿತಪಡಿಸಿಕೊಂಡರೆ ಸರಿ.
ಜ್ಞಾನದಲ್ಲೋ ಹಣದಲ್ಲೋ? ಜ್ಞಾನದ ಶ್ರೀಮಂತರ ಜ್ಞಾನ ಪಡೆದು ಹಣ ಕೊಟ್ಟರೆ ಧರ್ಮ. ಹಾಗೆ ಹಣ ಪಡೆದು ಜ್ಞಾನ ದಾಸೋಹ ಆದರೆ ಧರ್ಮ. ಜ್ಞಾನದಲ್ಲಿ ಸತ್ಯ ಮಿಥ್ಯವಿದೆ. ಇದರ ಬಗ್ಗೆ ಯೂ ಅರಿವಿರಬೇಕು.ಒಟ್ಟಿನಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ಜೀವನದಲ್ಲಿದೆ. ಜೀವನವೇ ವ್ಯವಹಾರವಾದಾಗ ಪಡೆಯೋದೇ ಹೆಚ್ಚಾಗುತ್ತದೆ. ಅಸತ್ಯ ಅಧರ್ಮ ಅನ್ಯಾಯಗಳಿಗೆಬೆಲೆ ಕಟ್ಟುತ್ತಾಹೋದಷ್ಟೂ ಭ್ರಷ್ಟಾಚಾರ. ಲೆಕ್ಕಾಚಾರ ದ ಪ್ರಕಾರ ಪುಣ್ಯ ಕೂಡಬೇಕು, ಪಾಪ ಕಳೆಯಬೇಕು,
ಹೆಚ್ಚು ಲಾಭವಾದರೆ ಹಿಂದೆ ನಷ್ಟವಿದೆ.
ಯಾವುದಕ್ಕಾದರೂ ಬೆಲೆ ಕಟ್ಟಬೇಕೆಂಬುದು ಇದರರ್ಥ. ಆದರೆ ಬೆಲೆ ಯಾರಿಗೆ ಎಷ್ಟು ಯಾಕೆ ಕಟ್ಟಬೇಕೆಂಬ ಜ್ಞಾನವೂ ವೇದಗಳಿಂದಲೇ ತಿಳಿಸುವುದು ಅಗತ್ಯವಿದೆ. ಇಂದಿನವರೆಗೂ ವರದಕ್ಷಿಣೆಯ ಅರ್ಥ ತಿಳಿಯದವರಿದ್ದಾರೆ. ವರಹ ದಕ್ಷಿಣೆ ಎನ್ನುವುದನ್ನೇ ಸ್ವಾರ್ಥಕ್ಕೆ ತಿರುಚಿಕೊಂಡು ವರದಕ್ಷಿಣೆ ಲಕ್ಷ ಕೋಟಿ ಕೊಟ್ಟಿರುವರಿದ್ದಾರೆ. ಧಾರ್ಮಿಕ ವಿಚಾರದಲ್ಲಿ ಹಣಕ್ಕಿಂತ ಮೊದಲು ಜ್ಞಾನದ ಅರಿವಿರುವಿದ್ದವರು ದಕ್ಷಿಣೆ ಸರಿಯಾಗಿ ಕೊಡುವರು.
ಕನ್ಯಾದಾನ ಪದದ ಮೂಲ ಕನ್ಯಾ ಆದಾನ. ಹೀಗೇ ಎಷ್ಟೋ ಮೂಲ ಅರ್ಥ ತಿಳಿಯದೆ ಆಚಾರ ವಿಚಾರಪ್ರಚಾರ ಬೆಳೆದುಜನರು ಅಜ್ಞಾನದಲ್ಲಿ ಕಣ್ಣಿಗೆ ಕಣೋ ಸತ್ಯವಷ್ಟೆ ಧರ್ಮ ಎನ್ನುವರು. ಅದರಲ್ಲೂ ಶಂಖದಿಂದಬಂದರಷ್ಟೆ ತೀರ್ಥ.
No comments:
Post a Comment