ಶಿಕ್ಷಣದಿಂದ ವ್ಯಕ್ತಿತ್ವ ನಿರ್ಮಾಣ ವಾಗಬೇಕೇ ಹೊರತು ವ್ಯಕ್ತಿ ಬೆಳೆಯೋದಷ್ಟೆ ಅಲ್ಲ. ತತ್ವಜ್ಞಾನದಿಂದ ವ್ಯಕ್ತಿತ್ವ. ತಂತ್ರದಿಂದ ವ್ಯಕ್ತಿ ಬೆಳೆಯುವನು.
ಸಾತ್ವಿಕ ಶಿಕ್ಷಣದ ಮೂಲ ಗುರಿ ಸತ್ಯಾನ್ವೇಷಣೆ. ಆಧ್ಯಾತ್ಮ ಮತ್ತು ಭೌತಿಕ ಸತ್ಯದ ನಡುವಿರುವ ಮಾನವನಿಗೆ ನಾನ್ಯಾರು ಎನ್ನುವ ಸತ್ಯದ ಪರಿಚಯವಾದ ನಂತರವೇ ಮಹಾತ್ಮರಾಗೋದಕ್ಕೆ ಸಾಧ್ಯ.
ಅಂತರಂಗದ ಸಂಸ್ಕಾರದ ನಂತರವೇ ಬಹಿರಂಗದ ಶುದ್ದಿ ಸಾಧ್ಯ.
ಬಸವಣ್ಣನವರು ಕಲಬೇಡ ಕೊಲಬೇಡ...ಬೇಡವಾಗಿದ್ದನ್ನು ಬಿಟ್ಟು ಬೇಕಾದ್ದನ್ನಷ್ಟೆ ತಲೆಗೆ ತುಂಬಿದರೆ ಅದೇ ಸ್ವಚ್ಚ ಶಿಕ್ಷಣವಾಗುತ್ತದೆ.
ಒಟ್ಟಿನಲ್ಲಿ ಶಿಕ್ಷಣವು ವ್ಯಾಪಾರಿಕರಣವಾಗೋದಕ್ಕೆ ಕಾರಣವೇ ಮಾನವನ ಅಲ್ಪ ಜ್ಞಾನ ಎನ್ನಬಹುದು. ಮಕ್ಕಳಿಗೆ ಕಲಿಸುವ ವಿಷಯಗಳು ಅಮೃತವಾಗಿದ್ದರೆ ಅಮೃತಪುತ್ರರು ವಿಷತುಂಬಿದ ದ್ವೇಷದ ವಿಷಯವಾದಷ್ಟೂ ವಿಷಜಂತುಗಳು. ಕೋಟ್ಯಾಂತರ ಜೀವರಾಶಿಗಳಲ್ಲಿ
ಮಾನವನಿಗೆ ಮಾತ್ರ ಈ ಆತ್ಮಜ್ಞಾನದೆಡೆಗೆ ಸಾಗುವ ಅವಕಾಶವಿರೋದು. ಇದರ ಮೂಲವೇ ಶಿಕ್ಷಣವಾಗಿದೆ. ಶಿಕ್ಷೆ ನೀಡುವ ಕ್ಷಣ ಶಿಕ್ಷಣ ಎಂದರೆ ಯಾವುದಕ್ಕೆ ಶಿಕ್ಷೆ ನೀಡಬೇಕು ಎಂದರೆ ತನ್ನ ಆತ್ಮಶುದ್ದಿಯತ್ತ ನಡೆಯಲು ಮಗುವಿನಲ್ಲಿನ ಹಲವು ದೋಷಗಳನ್ನು ತಿದ್ದಲು ಸ್ವಲ್ಪ ಮಟ್ಟಿಗೆ ಶಿಕ್ಷೆ ಅಗತ್ಯವಿದೆ.
ಬುದ್ದಿವಂತನಿಗೆ ಮಾತನಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎನ್ನುವರು. ಹಿಂದೆ
ಮಾತಿನಿಂದ ಕಲಿಯದಿದ್ದರೆ ದೊಣ್ಣೆ ಯ ಪ್ರಯೋಗವಾಗುತ್ತಿತ್ತು.
ಆದರೆ ಇಂದಿನ ಶಿಕ್ಚಣದ ವಿಷಯಗಳೇ ಆತ್ಮತತ್ವಕ್ಕೆ ವಿರುದ್ದವಾಗಿ ಭೌತಿಕದೆಡೆಗೆ ನಡೆದಿದೆ. ಇದನ್ನು ಕಲಿಯದಿದ್ದರೆ ಶಿಕ್ಷೆ ನೀಡುತ್ತಿರುವುದರಿಂದ ಮಕ್ಕಳು ಇನ್ನಷ್ಟು ಅಜ್ಞಾನದೆಡೆಗೆ ಸಾಗಿದ್ದಾರೆ.
ಅಜ್ಞಾನ ಎಂದರೆ ತಿಳುವಳಿಕೆ ಇಲ್ಲದಿರೋದೆಂದರ್ಥ ವಲ್ಲ.ಇಲ್ಲಿ ನಮ್ಮ ಸ್ವಂತ ಬುದ್ದಿ ಜ್ಞಾನದ ತಿಳುವಳಿಕೆಯಿಲ್ಲದಿರೋದೆಂದರ್ಥ.
ಯಾರೋ ಹೇಳಿದ್ದು ಕೇಳಿದ್ದು ಬರೆದದ್ದು ನುಡಿದದ್ದು ತಿಳಿಯುವುದಷ್ಟೆ ಶಿಕ್ಷಣವಾಗದು. ಅದು ಇಂದಿನ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯವೆ ಸಾಧ್ಯವೆ ಎಷ್ಟು ಅಗತ್ಯವಿದೆ ಎನ್ನುವ ಬಗ್ಗೆ ನಮ್ಮ ದೇ ಪ್ರಯತ್ನಗಳು ನಮ್ಮ ಆತ್ಮಕ್ಕೆ ಸತ್ಯಕ್ಕೆ ಧರ್ಮಕ್ಕೆ ಚ್ಯುತಿಬರದಂತೆ ನೋಡಿಕೊಳ್ಳುವ ಜ್ಞಾನ ಬೇಕು.
ವಿದ್ಯೆ ಕಲಿತರೆ ಜ್ಞಾನ ಬೆಳೆಯುತ್ತದೆ. ಜ್ಞಾನದಿಂದ ವಿನಯವಂತಿಕೆ ಬೆಳೆಯುತ್ತದೆ.ವಿನಯವು ವಿಶಾಲ ಮನೋಭಾವನೆಗೆ ಸಹಕರಿಸುತ್ತದೆ
ವಿಶಾಲವಾಗಿ ಹರಡಿರುವ ಈ ಇಡೀ ಬ್ರಹ್ಮಾಂಡವನ್ನು ಅರ್ಥ ಮಾಡಿಕೊಳ್ಳಲು ಆಧ್ಯಾತ್ಮ ದಿಂದಷ್ಟೆ ಸಾಧ್ಯವೆನ್ನುವುದೆ ನಮ್ಮ ಹಿಂದಿನ ಶಿಕ್ಷಣದ ಗುರಿ. ಕಾಲಾನಂತರದಲ್ಲಾದ ಅಂತರಗಳಪ್ರಭಾವದಿಂದಾಗಿ ಎಷ್ಟೋ ಮೂಲ ಸತ್ಯ ಹೊರಬರದೆ ಅರ್ಧ ಸತ್ಯದ ರಾಜಕೀಯ ವಿಚಾರಗಳು ಪಠ್ಯ ಪುಸ್ತಕದಲ್ಲಿ ಸೇರಿ ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶಮಾಡುವಂತೆ ಮಾಡಿದಾಗ ರಾಜಯೋಗ ಹಿಂದುಳಿಯುತ್ತದೆ.
ವಿವೇಕಾನಂದರ ನಿನ್ನ ಯ ಗುರಿಯು ಆತ್ಮದರುಶನ....
ಈಗಿಲ್ಲ.
No comments:
Post a Comment