ಯಾಕೆ ಅನ್ಯಧರ್ಮದವರ ಸಂಖ್ಯೆದೇಶದಲ್ಲಿ ಬೆಳೆಯುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಒಂದೇ ಸಾಲ.ವಿದೇಶಗಳಲ್ಲಿ ಮುಸ್ಲಿಂ ಕ್ರಿಸ್ಟಿಯನ್ ಹಿಂದೂಗಳಿದ್ದಂತೆ ನಮ್ಮಲ್ಲೂ ಇದ್ದಾರೆ.ಆದರೆ ಇದರ ಮೂಲ ಹಿಂದೂಗಳೇ ಆಗಿದ್ದರೂ ಅವರ ಶಿಕ್ಷಣ ಮಾತ್ರ ಕೊಡದೆ ಆಳಿದವರು ಅನ್ಯರಾದರೂ ಅವರಿಗೆ ಹೆಚ್ಚಿನ ಸಹಕಾರ ಕೊಟ್ಟು ಬೆಳೆಸಿದವರು ನಮ್ಮವರೆ.
ಇದೀಗ ಜನಸಂಖ್ಯೆ ಮಿತಿಮೀರಿದ್ದರೂ ಜ್ಞಾನದಿಂದ ಹಿಂದುಳಿದವರ ಸಂಖ್ಯೆ ಇನ್ನಷ್ಟು ಬೆಳೆದಿದೆ.
ಯಾರದ್ದೋ ದುಡ್ಡು ಯಲ್ಲಮ್ಮನಜಾತ್ರೆ, ಯಾರದ್ದೋ ಶಿಕ್ಷಣ, ಧರ್ಮ ಸಂಸ್ಕೃತಿ,ವ್ಯವಹಾರ,ಬಂಡವಾಳ ತಂದು ನಮ್ಮದು ಎಂದರೆ ಸರಿಯಾಗುವುದೆ? ಸಾಲವಾಗುತ್ತದೆ.
ಸ್ವಾವಲಂಬನೆ ಸ್ವರ್ಗ ಪರಾವಲಂಬನೆ ನರಕ ಎಂದುಅನುಭವಿಗಳೇ ತಿಳಿಸಿದ್ದರೂ ಈಗಲೂ ನಾವು ವೈಜ್ಞಾನಿಕ ಪ್ರಗತಿಯತ್ತ ಪರಾವಲಂಬನೆಯ ಜೀವನ ನಡೆಸುತ್ತಾ ಒಳಗಿದ್ದ ಮೂಲ ಜ್ಞಾನಶಕ್ತಿ ಧರ್ಮ ಕರ್ಮಕ್ಕೆ ವಿರುದ್ದ ನಡೆದರೆ ಜೀವ ಅನ್ಯರ ವಶವಾಗೋದು ಸಹಜ.
ಇನ್ನು ಕುಟುಂಬ ವ್ಯವಸ್ಥೆ ಕಣ್ಣಿಗೆ ಕಾಣುವಂತೆ ಬೇರೆ ಬೇರೆ ಆಗುತ್ತಿದೆ. ಒಗ್ಗಟ್ಟಿನ ಮಂತ್ರ ಪ್ರಚಾರಮಾಡೋರಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ ಅಂತರದ ರಾಜಕೀಯ ಇದ್ದಾಗ ಸಾಮಾನ್ಯರಪಾಡೇನು?
ಆದರೂ ಜನರ ಮುಗ್ದತೆಯನ್ನು ಕೆಲವರು ಸದ್ಬಳಕೆ ಮಾಡಿಕೊಂಡು ದೈವೀಕತೆಯತ್ತ ಎಳೆದರೆ ಹಲವರಿಗೆ ದುರ್ಭಳಕೆ ಮಾಡಿಕೊಂಡರೆ ಜನಬಲ ಹಣಬಲ ಅಧಿಕಾರಬಲ ಎಲ್ಲಾ ಸಿಗುತ್ತಿದೆ. ಇದನ್ನು ಆತ್ಮನಿರ್ಭರ ಎಂದರೆ ತಪ್ಪು. ಒಟ್ಟಿನಲ್ಲಿ ಜನನಮರಣಗಳ ನಡುವಿನ ಜೀವನದಲ್ಲಿ ಧರ್ಮ ಯಾವುದು ಸತ್ಯ ಯಾವುದು ದೇವರು ಯಾರು ಅಸುರರು ಯಾರೆಂಬ ಜ್ಞಾನ ನೀಡುವುದು ನಿಜವಾದ ಗುರುಹಿರಿಯರ ಧರ್ಮ ವಾಗಿತ್ತು.
ಇರುವಮೂರು ಮತಗಳಲ್ಲಿಯ ಅಂತರದಲ್ಲಿ ಯಾವಮತದ ಜನಸಂಖ್ಯೆ ಹೆಚ್ಚಿದೆ ಎನ್ನುವ ಬದಲಾಗಿ ಯಾವ ಮತದಿಂದ ಲೋಕಕಲ್ಯಾಣವಾಗುತ್ತದೆ ಆತ್ಮಜ್ಞಾನ ಸಿಗುತ್ತದೆ ಜೀವನ್ಮುಕ್ತಿ ಪಡೆಯಬಹುದೆನ್ನುವ ಬಗ್ಗೆ ಜನರಲ್ಲಿ ಚಿಂತನೆ ನಡೆಸುವಷ್ಟು ಸಮಯವಿಲ್ಲದೆ ಮಹಿಳೆ ಮಕ್ಕಳೆನ್ನದೆ ಮನೆಯಿಂದ ಹೊರ ಬಂದು ಹಣ ಮಾಡುವಲ್ಲಿ ಆಸಕ್ತಿ ಹೊಂದಿರುವುದೆ ಅಜ್ಞಾನ.
ಇಲ್ಲಿ ಹಣವಿಲ್ಲದೆ ಜೀವನವಿಲ್ಲ.ಆದರೆ ಅದಕ್ಕಿಂತ ಮುಖ್ಯವಾದ ಸುಜ್ಞಾನವಿಲ್ಲದ ಜೀವನ ಜೀವನವೇ ಅಲ್ಲ.
ಎಲ್ಲದರಲ್ಲೂ ಅಲ್ಲನಿರೋದು ಎಂದರೆ ನಕಾರಾತ್ಮಕ ಶಕ್ತಿ ನಮ್ಮಲ್ಲಿದೆ ಎಂದರ್ಥ. ಮುಸ್ಲಿಂ ಬಾಂಧವರ ಒಗ್ಗಟ್ಟು ಅವರ ಮತಕ್ಕೆ ಇದ್ದಾಗ ಅಲ್ಲಿ ಅವರ ಪ್ರಗತಿ .ಹಾಗೆ ಕ್ರೈಸ್ತ ಮತವೂ ಒಂದೇ ದೇವರನ್ನು ಹಿಡಿದು ಪ್ರಾರ್ಥನೆ ಮಾಡುತ್ತದೆ. ಆದರೆ ಹಿಂದೂಗಳು ಅಸಂಖ್ಯಾತ ದೇವತೆಗಳನ್ನು ನೋಡುವ ದೃಷ್ಟಿ ಬದಲಾದರೆ ನಮ್ಮ ಹತ್ತಿರವೇ ದೇವರಿದ್ದರೂ ನಮಗೆ ಕಾಣದೆ ಹೊರಗೆ ನಡೆದಿರೋದರ ಸತ್ಯ ತಿಳಿಯಬಹುದಷ್ಟೆ.
ಮನೆಮನೆಯಲ್ಲಿ ದೇವರಿದ್ದರೂ ಹೊರಗೆ ಹುಡುಕೋದು.
ಮನಸ್ಸಿನಲ್ಲಿ ತಪ್ಪು ಮಾಡುತ್ತಿದ್ದೇವೆ ಎಂದು ತಿಳಿದರೂ ತಪ್ಪು ದಾರಿಯಲ್ಲಿ ನಡೆಯೋದು
ಮಕ್ಕಳ ಜ್ಞಾನ ಗುರುತಿಸದೆ ಅನ್ಯಭಾಷೆಯ ಶಿಕ್ಷಣ ಕೊಟ್ಟು ಬೆಳೆಸೋದು.
ಪರಮಾತ್ಮ ಎಲ್ಲರಲ್ಲಿಯೂ ಇದ್ದಾನೆ ಎಂದು ಭಾಷಣ ಪ್ರವಚನ ಮಾಡುವವರೆ ಸತ್ಯ ಧರ್ಮ ವರಿಯದೆ ನಡೆಯೋದು.
ಭಾರತ ವಿಶ್ವ ಗುರು ಎಂದು ಸಾರುವವರೆ ವಿದೇಶಿ ವ್ಯಾಮೋಹಕ್ಕೆ ಒಳಗಾಗಿರೋದು.
ಅನ್ಯರ ಹಣ ಬಂಡವಾಳ ಸಾಲವ್ಯವಹಾರ ಎಲ್ಲಾ ಬೇಕು ಆದರೆ ಅವರನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಕಾರಣ ಒಳಗಿಳಿಸಿದ ಸುಖವನ್ನು ಬಿಟ್ಟು ದು:ಖ ಅನುಭವಿಸೋದು ಕಷ್ಟ.
ಆದರೆ ಜೀವನದಲ್ಲಿ ಸುಖಕ್ಕೆ ತಕ್ಕಂತೆ ದು:ಖವೂ ಬರುವುದನ್ನು ಯಾರೂ ತಡೆಯಲಾಗದು. ತಡೆದರೂ ಅದು ತಾತ್ಕಾಲಿಕ ತಂತ್ರವಾಗಿರಬಹುದು.ಹೀಗಾಗಿನಮ್ಮಮಹಾತ್ಮರು ಸ್ವತಂತ್ರ ಬುದ್ದಿ ಜ್ಞಾನದಿಂದ ಪರಮ ಸತ್ಯ ಧರ್ಮ ದೆಡೆಗೆ ಕಷ್ಟಪಟ್ಟು ನಡೆದರೆಂದರೆ ಹಿಂದೂ ಧರ್ಮ ಉಳಿದಿರೋದು ನಮ್ಮ ಮಹಾತ್ಮರಿಂದಷ್ಟೆ. ಅವರ ಹೆಸರಿನಲ್ಲಿ ವ್ಯವಹಾರ ನಡೆಸಿದರೆ ಹಣದ ಲಾಭವಾದರೂಹಣವನ್ನು ಸದ್ಬಳಕೆ ಮಾಡುವ ಸುಜ್ಞಾನವಿಲ್ಲವಾದರೆ ಅನ್ಯರ ವಶದಲ್ಲಿಯೇ ಜೀವಇರುತ್ತದೆ.ಹೀಗಾಗಿ ಅನ್ಯಧರ್ಮದಲ್ಲಿ ಮಕ್ಕಳು ಜನಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರೋದು.ಕಾರಣ ಸಾಲ ಅಥವಾ ಋಣ ತೀರಿಸಲು ಅದೇ ಮತದಲ್ಲಿ ಜನ್ಮ ಪಡೆಯಲೇಬೇಕಲ್ಲವೆ?
ಇನ್ನು ಹಿಂದೂಗಳಲ್ಲಿ ಸಂಸಾರಕ್ಕೆ ಬರದೆ ಮದುವೆ ಬೇಡ ಮದುವೆ ಆದವರಿಗೆ ಮಕ್ಕಳು ಬೇಡ ,ಮಕ್ಕಳಾದವರಿಗೆ ಶಿಕ್ಷಣ ಕೊಡೋದೆ ದೊಡ್ಡ ಹೊರೆ.ಉಚಿತ ಶಿಕ್ಷಣ ಇದ್ದರೂ ಸರಿಯಾದ ಶಿಕ್ಷಕರಿರೋದಿಲ್ಲ ವ್ಯವಸ್ಥೆ ಇರೋದಿಲ್ಲ.
ಖಾಸಗಿ ಶಾಲೆಗಳಂತೂ ಅನ್ಯರ ರಾಜಕೀಯದಲ್ಲಿ ಮಿತಿಮೀರಿ ಬೆಳೆಯುತ್ತಿದೆ. ಹಿಂದೂ ಮಕ್ಕಳನ್ನು ಹೊರಗೆಳೆಯುವ ಪ್ರಯತ್ನವಾಗುತ್ತಿದ್ದರೂ ಪೋಷಕರು ಮಕ್ಕಳು ಹೆಸರು ಮಾಡುವರೆನ್ನುವುದು ಕಾಣುತ್ತಿದೆ.ಇದು ಮುಂದೆ ಹೋದಂತೆಲ್ಲ ದೂರಹೋದವರು ಹಿಂದಿರುಗಿ ಬರೋದಿಲ್ಲ. ಹೊರಗೆ ಹೋದವರಿಗೂ ಆಸ್ತಿ ಮಾಡಿಟ್ಟು ಹತ್ತಿರವಿದ್ದವರನ್ನು ಆಳುವವರು ಹೆಚ್ಚಾಗಿದ್ದಾರೆಂದರೆ ಅಜ್ಞಾನ ಮಿತಿಮೀರಿದೆ ಎಂದರ್ಥ.
ಇದನ್ನು ಯಾರು ತಡೆಯಬಹುದು? ಮಾಡಿದ ಕರ್ಮಕ್ಕೆ ತಕ್ಕಂತೆ ಫಲ ಸಿಗೋವಾಗ ಹೊರಗಿನ ಸರ್ಕಾರ ,ಸಮಾಜ ದೇಶ ಶಿಕ್ಷಣ. ಕಾರಣವೆಂದರೆ ಸರಿಯಾಗದು.ಈಗಲೂ ನಮ್ಮ ಹತ್ತಿರವಿರುವ ಮಕ್ಕಳ ಭವಿಷ್ಯ ನಮ್ಮ ಕೈಯಲ್ಲಿ ಇದೆ.ಅವರಿಗೆ ಕೊಡುವ ಸಂಸ್ಕಾರದ ಮೇಲಿದೆ. ಸಂಸ್ಕೃತಿ ,ಸಂಪ್ರದಾಯ, ಶಾಸ್ತ್ರ ಪುರಾಣ ಇತಿಹಾಸದ ಹಿಂದಿನ. ಆತ್ಮಶುದ್ದಿ ನಮ್ಮೊಳಗೇ ಆದರೆ ಸತ್ಯದ ಜೊತೆಗೆ ಧರ್ಮ ರಕ್ಷಣೆ ಸಾಧ್ಯ.
ಯಾವಾಗಿದು ಅಸತ್ಯ ಅಧರ್ಮಕ್ಕೆ ತಲೆಬಾಗಿ ವ್ಯವಹಾರಕ್ಕೆ ಇಳಿಯಿತೋ ಆಗಲೇ ಅನ್ಯರ ವಶದಲ್ಲಿ ಜೀವ ಸೇರುತ್ತಿದೆ.
ಮೇಲಿರುವ ಪರಮಾತ್ಮನಿಗೆ ಯಾವುದೇಮತ ಜಾತಿ ಧರ್ಮ ಅಂಟೋದಿಲ್ಲ. ಯಾವ ಜಾತಿಮತ ಧರ್ಮದಡಿ ಜನನ ಆಗಿದೆಯೋ ಅದರ ಋಣ ಇದೆಯಂದು ಅರ್ಥ ಮಾಡಿಕೊಂಡು ಅದರ ಮೂಲ ಶಿಕ್ಷಣದೆಡೆಗೆ ಮಕ್ಕಳನ್ನು ಸಾಕಿ ಸಲಹಿದರೆ ಹಿಂದಿನವರ ಜ್ಞಾನದೆಡೆಗೆ ಒಗ್ಗಟ್ಟಿನಿಂದ ಸಾಗಬಹುದು. ಹೀಗಾಗಿ ನಾವೆಷ್ಟು ಹೊರಗೆ ಹೋರಾಟ ನಡೆಸಿ ರಾಜಕೀಯದಿಂದ ಸರಿಪಡಿಸಬಹುದೆಂದರೆ ಇದು ಭ್ರಮೆಯಷ್ಟೆ.
ವೈಚಾರಿಕತೆಯ ಹಿಂದಿನ ವಿಜ್ಞಾನದಲ್ಲಿ ಆತ್ಮಶುದ್ದಿ ಆಗಬೇಕಿತ್ತು. ಆಗಿಲ್ಲ ಎಂದರೆ ಅದರಲ್ಲಿ ತಂತ್ರವೇ ಹೆಚ್ಚಾಗಿದೆ ಎಂದರ್ಥ. ಸ್ವತಂತ್ರ ಎನ್ನುವ ಪದವನ್ನು ಅಪಾರ್ಥ ಮಾಡಿಕೊಂಡು ತಮ್ಮ ಸ್ವಾರ್ಥ ಸುಖಕ್ಕಾಗಿ ಬೆಳೆಸಿದ ಸ್ವೇಚ್ಚಾಚಾರದಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಇದು ಅನ್ಯರನ್ನೂ ಸೇರಿಸಿಕೊಂಡು ಹೊರಗೆ ನಡೆದಾಗಲೇ ಮಾನವ ಒಳಗಿರುವ ಮಹಾತ್ಮರು ಕಾಣದೆ ಹಣ ಮಾತ್ರ ಕಾಣುತ್ತದೆ. ಹಣದಿಂದ ಹೆಣವನ್ನು ಖರೀದಿಸುವಷ್ಟುವಿಜ್ಞಾನ ಕಲಿಕೆಯಲ್ಲಿದೆ. ಆದರೆ ಆತ್ಮನನ್ನು ಖರೀದಿಸಲಾಗದು ಎನ್ನುವ ಸತ್ಯ ಒಂದೇ ಆಗಿರುತ್ತದೆ.
ಎಷ್ಟು ವರ್ಷ ಬದುಕಿದೆ ಎನ್ನುವ ಬದಲು ಎಷ್ಟು ಆತ್ಮಸಂಶೋಧನೆಯು ಬದುಕಿನಲ್ಲಾಗಿದೆ ಎನ್ನುವುದು ಮುಖ್ಯ.
ಏನೇ ಇರಲಿ ನನ್ನ ಅನುಭವದಪ್ರಕಾರ ಇಂದು ಬೇಲಿಯೇ ಸರಿಯಿಲ್ಲದ ಹೊಲದಲ್ಲಿ ಮೇಯುವುದೇ ಸ್ವಾತಂತ್ರ್ಯ ಎಂದು ತಿಳಿದ ಮಾನವರು ಅಸುರರ ವಶದಲ್ಲಿ ಚೆನ್ನಾಗಿ ತಿಂದು ಕೊಬ್ಬಿರೋ ಕುರಿಗಳಾಗಿ ಕೊನೆಯಲ್ಲಿ ಅಸುರರ ಆಹಾರ ಆಗುತ್ತಿದ್ದರೂ ಹೇಳಿದರೆ ಅರ್ಥ ವಾಗುವ ಜ್ಞಾನವಿಲ್ಲದೆ ಅನ್ಯರ ಸಂಖ್ಯೆ ಮಿತಿಮೀರಿದೆ.
ಮನೆಯಲ್ಲಿ ಎಷ್ಟು ಮಕ್ಕಳಿದ್ದಾರೆ ಎನ್ನುವ ಬದಲು ಮಕ್ಕಳಲ್ಲಿ ಯಾರ ಜ್ಞಾನವಿದೆ ಎಂದು ಗುರುತಿಸುವುದು ಪೋಷಕರ ಧರ್ಮ.
ನಮಗೇ ಅಜ್ಞಾನ ವಿರೋವಾಗ ಮಕ್ಕಳ ಸುಜ್ಞಾನ ಕಾಣದು.
ಹೀಗಾಗಿಮಕ್ಕಳನ್ನು ಆಟದ ಗೊಂಬೆಯಂತೆ ಹೊರಗೆ ಕುಣಿಸಿ ಮನರಂಜನಾ ಮಾದ್ಯಮ ಬೆಳೆದಿದೆ. ಇದು ಯಾರಿಗೆ ಲಾಭ ನಷ್ಟ ಎನ್ನುವ ಸತ್ಯ ಅರಿವಿಗೆ ಬರದಿದ್ದರೆ ಜೀವದ ಗತಿ ಅಧೋಗತಿ. ಅದರಲ್ಲೂ ಮಕ್ಕಳ ಭವಿಷ್ಯ ಅವರ ಆತ್ಮಜ್ಞಾನದ ಮೇಲಿರುವಾಗ ಅಂತಹ ಶಿಕ್ಷಣದಿಂದ ವಂಚಿತರಾಗಿರುವ ಅಸಂಖ್ಯಾತ ಮಕ್ಕಳು ಮುಂದಿನ ದೇಶದ ಪ್ರಜೆಗಳಾಗುವುದು ಖಚಿತ.ಇಲ್ಲಿ ಮುಂದಿನ ದೇಶ ಎಂದರೆ ನಮ್ಮ ದೇಶವಲ್ಲ ಹೊರದೇಶವಾಗಬಹುದು.ಯಾರಿಗಾಗಿ ಈ ಹೋರಾಟ ಹಾರಾಟ ಮಾರಾಟ?
ಪರಮಾತ್ಮನಿಗೋ? ದೇಶಕ್ಕೋ? ಧರ್ಮ ಕ್ಕೋ? ಸತ್ಯಕ್ಕೋ?
ಮಕ್ಕಳಿಗೋ? ಯಾವುದೂ ಇಲ್ಲ. ಪರಕೀಯರ ವಶದಲ್ಲಿದ್ದು ನಮ್ಮವರ ವಿರುದ್ದವೇ ಹೋರಾಟ ನಡೆದಿದೆ ಎಂದರೆ ಜೀವಕ್ಕೆ ತೃಪ್ತಿ ಸಿಗದು. ತೃಪ್ತಿ ಸಿಗದೆ ಜೀವನ್ಮುಕ್ತಿಯಿಲ್ಲ.ಜೀವನ್ಮುಕ್ತಿ ಇಲ್ಲದವರು ಅತೃಪ್ತ ಆತ್ಮಗಳಾಗಿ ಜನನಮರಣದ ಬಂಧನದಿಂದ. ಬಿಡಿಸಿಕೊಳ್ಳಲಾಗದು ಎಂದರೆ ನಾವು ಸ್ವತಂತ್ರರೆ?
ಅಂತರ ಹೆಚ್ಚಾದಷ್ಟೂ ಶಾಂತಿ ಸಿಗದು. ಇದರಲ್ಲಿ ಮತಾಂತರ ಜಾತ್ಯಾಂತರ, ಧರ್ಮಾಂತರ, ಪಕ್ಷಾಂತರ ಕೊನೆಗೆ ಉಳಿಯೋದು ದೇಶಾಂತರ. ಈ ಅವಾಂತರಕ್ಕೆ ಅಜ್ಞಾನ ಕಾರಣ.ಅಜ್ಞಾನ ಎಂದರೆ ಸತ್ಯದ ತಿಳುವಳಿಕೆಯಿಲ್ಲದಿರೋದಷ್ಟೆ.ಇದರಲ್ಲಿ ಅಸತ್ಯ ಅಧರ್ಮ ಅನ್ಯಾಯ ವೆಲ್ಲವೂ ಹಣದಿಂದ ಬೆಳೆಯುತ್ತಿರುತ್ತದೆ. ಅದರ ಹಿಂದೆ ಋಣವೂ ಸೇರಿಕೊಂಡು ಸಮಸ್ಯೆ ಹೆಚ್ಚುತ್ತಿರುತ್ತದೆ.
ಸಮಸ್ಯೆಗೆ ಪರಿಹಾರ ಒಳಗಿನ ಜ್ಞಾನದಿಂದ ಆದರೆ ಉತ್ತಮ.ಯಾವಾಗಿದು ಹೊರಗೆ ಹರಡುವುದೋ ಇನ್ನಷ್ಟು ಬೆಳೆಯುತ್ತದೆ. ಇದನ್ನು ಯಾರೂ ತಡೆಯಲಾಗದು. ಒಟ್ಟಿನಲ್ಲಿ ಸಮಸ್ಯೆ ಅಜ್ಞಾನದಿಂದ ಬೆಳೆದರೆ ಜ್ಞಾನದ ಮೂಲಕ ಪರಿಹಾರ ಕೊಡಬೇಕು.ಅಜ್ಞಾನದಿಂದ ಪಡೆದಷ್ಟು ಇನ್ನಷ್ಟು ಹೆಚ್ಚುವುದು.
ಇಷ್ಟೇ ಜೀವನ ಸತ್ಯ. ಜೀವ ಎಲ್ಲರಲ್ಲಿಯೂ ಇದೆ.ಆದರೆ ಋಣ ಮತ್ತು ಕರ್ಮದ ಲೆಕ್ಕಾಚಾರ ಬೇರೆಯಾಗಿರುತ್ತದೆ.ಇದನ್ನು ಹಿಂದಿನವರು ಧರ್ಮ ಕರ್ಮ ಸತ್ಯವನರಿತು ತತ್ವದಿಂದ ಬಗೆಹರಿಸಿದ್ದರೆ ಈಗಿನವರು ತಂತ್ರದಿಂದ ಬೆಳೆಸಿರುವರಷ್ಟೆ.
ಸತ್ಯ ಸತ್ವ ತತ್ವವಿಲ್ಲದ ಜೀವನದಲ್ಲಿ ಮಂತ್ರ ತಂತ್ರ ಯಂತ್ರಗಳಿಗೆ ಸ್ವಾತಂತ್ರ್ಯ. ಇವುಗಳು ಮಧ್ಯವರ್ತಿಗಳಷ್ಟೆ.
ಇದು ನಮ್ಮನ್ನು ಸ್ವತಂತ್ರ ಬುದ್ದಿ ಜ್ಞಾನದೆಡೆಗೆ ನಡೆಸಿತೋ ಅಥವಾ ಅತಂತ್ರಸ್ಥಿತಿಗೆ ತಲುಪಿಸಿತೋ ಪ್ರಶ್ನೆಗೆ ಉತ್ತರ ಆತ್ಮಾವಲೋಕನ ದಲ್ಲಿರುತ್ತದೆ. ಆತ್ಮಕ್ಕೆ ಸಾವಿಲ್ಲ.ಯಾರ ಋಣದಲ್ಲಿರುವುದೋ ಅಲ್ಲಿಯೇ ಮತ್ತೆ ಜೀವಾತ್ಮನಪಯಣ ನಡೆಯುತ್ತಲೇ ಇರುವುದೆಂದು ಮಹಾತ್ಮರು ತಿಳಿಸಿರುವರು.
ಈಗ ನಾವು ಯಾರ ಋಣದಲ್ಲಿದ್ದೇವೆ? ಯಾರ ಜ್ಞಾನದ ಶಿಕ್ಷಣ ಪಡೆಯುತ್ತಿದ್ದೇವೆ? ಯಾರ ಹಿಂದೆ ನಡೆದಿರೋದು? ದೇವರನ್ನು ಒಳಗೆ ಕಂಡೆವೋ ಹೊರಗೋ? ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ ಎಂದರೆ ಸತ್ಯವೇ ದೇವರಾಗುವರು. ಒಳಗಿನ ಸತ್ಯ ಬಿಟ್ಟು ಹೊರಗೆ ನಡೆದಷ್ಟೂ ಅಂತರದ ಅವಾಂತರ. ಇಲ್ಲಿ ಯಾವ ಮತವೂ ಸ್ವತಂತ್ರ ವಾಗಿಲ್ಲ.ಹೀಗಿರುವಾಗ ಯಾರನ್ನೂ ನಂಬಿ ಕೆಟ್ಟವರೆ ಎಲ್ಲಾ. ಆಗೋದೆಲ್ಲಾ ಒಳ್ಳೆಯದೆ ಆದರೂ ಅದರಿಂದ ಕಲಿಯುವುದೆ ಕಲಿಯುಗ. ಹಿಂದಿರುಗಿ ಮೂಲದೆಡೆಗೆ ಬಂದವರಿಗೆ ನೆಮ್ಮದಿ ಶಾಂತಿ ಸಿಕ್ಕಿದೆ ಎಂದರೆ ದಾರಿ ಇದ್ದವರು ಹಿಂದಿರುಗಬಹುದು.
ವಿಷಯದಲ್ಲಿನ ವಿಷ ಹರಡದೆ ಅಮೃತ ತತ್ವವರಿತರೆ ಜ್ಞಾನ.
ಅತಿಥಿಗಳು ದೇವರಾಗಬಹುದು ದೆವ್ವಗಳಾಗಿರಲೂ ಬಹುದು.
ದೇವತೆಗಳಿಗೆ ತೃಪ್ತಿ ಸಿಗದಿದ್ದರೆ ದೆವ್ವಗಳೇ ಆಗೋದು.ಹಾಗಾದರೆ ದೇವರಿರೋದೆಲ್ಲಿ ತತ್ವಜ್ಞಾನದಲ್ಲಿ ತಂತ್ರ ಕುತಂತ್ರದಿಂದ ದೆವ್ವಗಳಾಗಿ ಆತ್ಮ ಅಲೆಯುತ್ತವೆ.
ಎಷ್ಟೋ ಜನ್ಮಗಳ ಪಾಪ ಪುಣ್ಯಗಳ ಲೆಕ್ಕಾಚಾರ ಒಂದೇ ಜನ್ಮದಲ್ಲಿ ತೀರಿಸಲಾಗದು. ಆದರೆ ಸತ್ಕರ್ಮ ಸ್ವಧರ್ಮ ಸುಜ್ಞಾನ ಪ್ರತಿ ಜನ್ಮ ದಲ್ಲಿರುವುದು ಅದನ್ನರಿತು ನಡೆಸೋ ಶಿಕ್ಷಣ ಕೊಡುವುದಷ್ಟೆ ಮಾನವ ಧರ್ಮ. ಏನಂತೀರ?
ಮಾನವಜನ್ಮ ದೊಡ್ಡದು ಹಾಳುಮಾಡದಿರಿ ಹುಚ್ಚಪ್ಪಗಳಿರ ಎಂದಿರುವ ದಾಸಶ್ರೇಷ್ಟರು ಜ್ಞಾನದಿಂದ ಪರಮಾತ್ಮನ ಕಡೆಗೆ ನಡೆದ ಮಹಾತ್ಮರಾಗಿದ್ದರು.
ಉತ್ತಿಷ್ಟತಾ ಜಾಗ್ರತ ಮನುಜ..ಗುರಿಯನು ಸೇರುವವರೆಗೂ ನೀ ಅರೆಕ್ಷಣ ನಿಲ್ಲದೆಮುನ್ನಡೆ ಸಖನೆ". ಸ್ವಾಮಿ ವಿವೇಕಾನಂದ ರ ರಾಜಯೋಗದ ವಿಷಯ ರಾಜಕೀಯವಾಗಿಸಿ ಮಹಿಳೆ ಮಕ್ಕಳನ್ನು ಹೊರಗೆಳೆದರೆ ಆತ್ಮದುರ್ಭಲ ವಾಗುತ್ತದೆ.
ಸಂನ್ಯಾಸವೆಂದರೆ ಕಾವಿತೊಟ್ಟು ಸಂಸಾರ ಬಿಟ್ಟಿರೋದಲ್ಲ.
ಸಂಸಾರದ ಸಮಸ್ಯೆಗೆ ಆಧ್ಯಾತ್ಮಿಕ ಪರಿಹಾರ ಕೊಡುವ ಸತ್ಯಜ್ಞಾನವಿರಬೇಕು. ಸತ್ಯ ಕ್ಕೆ ಸಾವಿಲ್ಲ ಆದರೆ ಈಗ ಸತ್ತಿರೋದು ಯಾವುದು? ಹಿಂದುಳಿದಿದೆ ಎಂದರೆ ಸತ್ತಿದೆ ಎಂದಲ್ಲ.
No comments:
Post a Comment