ಹಿಂದುಳಿದವರು ಯಾರು? ಯಾಕೆ?

ಡಾ ಅಂಬೇಡ್ಕರ್ ದಿನಾಚರಣೆಯ ಶುಭಾಶಯಗಳು. ಅಂಬೇಡ್ಕರ್ ರ ಗುರಿ  ಇಂದು  ತಪ್ಪಿ ನಡೆದಿದೆ ಎಂದರೆ  ವಿರೋಧಿಸುವವರು ಹೆಚ್ಚು  ಕೆಲವರಿಗಷ್ಟೆ ಇದರ ಹಿಂದಿನ  ಉದ್ದೇಶ ಅರ್ಥ ವಾಗಿ...

Monday, April 13, 2026

ಹಿಂದುಳಿದವರು ಯಾರು? ಯಾಕೆ?

ಡಾ ಅಂಬೇಡ್ಕರ್ ದಿನಾಚರಣೆಯ ಶುಭಾಶಯಗಳು.
ಅಂಬೇಡ್ಕರ್ ರ ಗುರಿ  ಇಂದು  ತಪ್ಪಿ ನಡೆದಿದೆ ಎಂದರೆ  ವಿರೋಧಿಸುವವರು ಹೆಚ್ಚು  ಕೆಲವರಿಗಷ್ಟೆ ಇದರ ಹಿಂದಿನ  ಉದ್ದೇಶ ಅರ್ಥ ವಾಗಿರಬಹುದು. ಆದರೂ  ಹಿಂದುಳಿದವರನ್ನು ಮೇಲೆತ್ತುವ ಕೆಲಸದಲ್ಲಿ ಸರ್ಕಾರಗಳು‌ನಡೆಸಿರುವ ಕಸರತ್ತು  ಕೆಸ ಎತ್ತುವ ಹಂತಕ್ಕೆ ತಲುಪಿದೆ ಎಂದರೆ ಸರಿಯಾಗಬಹುದು.
ಸ್ವಚ್ಚ ಭಾರತವನ್ನು ಕಸಗುಡಿಸುವುದರ ಮೂಲಕ  ಮಾಡುವ ಕೆಲಸವನ್ನು  ನಿರಂತರವಾಗಿ ‌ನಡೆಸಿದ್ದರೂ ಕಸದ ಸಮಸ್ಯೆ ಬಗೆಹರಿದಿಲ್ಲ ಎಂದರೆ ನಮ್ಮೊಳಗೇ ಇರುವ ಅಜ್ಞಾನವೆ ಇದಕ್ಕೆ ‌ಕಾರಣವಾಗಿದೆ.
 ಅಂದಿನ ಭಾರತದ ಸ್ಥಿತಿಗೂ ಇಂದಿನ ಸ್ಥಿತಿಗೂ ಬಹಳ ಅಂತರವಿದೆ. ಅಂದಿನ  ಬಡತನ ಇಂದಿನ‌ ಬಡತನ  ಸರಿಸಮನಾಗಿದೆ. ಆದರೆ ಅಂದಿನ  ಜ್ಞಾನ ಇಂದಿನ ವಿಜ್ಞಾನ  ಹೆಚ್ಚಾಗಿ ಅಜ್ಞಾನದೆಡೆಗೆ‌ ನಡೆಸಿದೆ ಎಂದಾಗ ದೇಶದ ಪ್ರಜೆಗಳ ಸುಜ್ಞಾನದಿಂದ  ಆತ್ಮನಿರ್ಭರ ಆಗುತ್ತದೆ. ಅಜ್ಞಾನದಿಂದ ದುರ್ಭಲರನ್ನು ದುರ್ಭಳಕೆ ಮಾಡಿಕೊಂಡು ಆಳೋದಕ್ಕೆ ಸುಲಭವಾಗಿರುತ್ತದೆ.
ಇಷ್ಟಕ್ಕೂ ಹಿಂದುಳಿದವರು ಯಾರು? ಹಣವಿಲ್ಲದವರೆ? ಜ್ಞಾನವಿಲ್ಲದವರೆ? ಬೇಡುವವರೆ? ನೀಡುವವರೆ? 
ಮೇಲಿರುವ ಪರಮಾತ್ಮನೆಡೆಗೆ ನಡೆದವರಲ್ಲಿ ಹಣವಿರಲಿಲ್ಲ  ಅವರನ್ನು ಹಿಂದುಳಿದವರೆನ್ನಲಾಗದು.  ಎಷ್ಟು ಕೊಟ್ಟರೂ ಸಾಲದು, ಎಷ್ಟು ಪಡೆದರೂ ಸಾಲದು.ಸಾಲವೇ ಅದು ಎಂದಾಗ ಯಾರಲ್ಲಿ ಹೆಚ್ಚು ಸಾಲ ಇರುವುದೋ ಅವರು ಬಡವರು. ಅವರಿಗೆ ಸರಿಯಾದ ಶಿಕ್ಷಣ ನೀಡಿ ಕೆಲಸ ಕೊಟ್ಟು ದುಡಿದು ತಿನ್ನುವ  ಹಂತಕ್ಕೆ ತರೋದು ಸರ್ಕಾರದ ಕೆಲಸ.
ಇದನ್ನು ಅಂಬೇಡ್ಕರ್  ತಮ್ಮ ಅತ್ಯದ್ಭುತ ಜ್ಞಾನದಿಂದ ತಿಳಿದು  ಬಡವರಿಗೆ ಉಚಿತ ಶಿಕ್ಷಣ ನೀಡಬೇಕೆಂದರು. ಅವರ ಜ್ಞಾನಕ್ಕೆ ಪೂರಕವಾದ ಶಿಕ್ಷಣ ನೀಡಿದ್ದರೆ  ಅವರವರ ಧರ್ಮ ಕರ್ಮಕ್ಕೆ ತಕ್ಕಂತೆ ಉದ್ಯೋಗ  ನಡೆಸಿಕೊಂಡು  ಯಾವುದೇ ಸರ್ಕಾರದ ಹಿಂದೆ ನಿಂತು ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ.
ಆದರೆ ಭಾರತೀಯ ಶಿಕ್ಷಣವನ್ನೇ ದಾರಿತಪ್ಪಿಸಿ ಆಳಿದವರಿಗೆ  ಇದರ ಜ್ಞಾನ ಇರದೆ ಜನಸಾಮಾನ್ಯರನ್ನು  ಎತ್ತಿ ಏಣಿಗೇರಿಸುವ ತಂತ್ರ ನಡೆಸಿ ಸಾಲ ಸೌಲಭ್ಯಗಳನ್ನು ‌ಉಚಿತವಾಗಿ ಸಿಗುವಂತೆ ಮಾಡಿ ಇಂದು ಸಾಲವೇ ಶೂಲ ಆಗಿದೆ. ಇದನ್ನು ತೀರಿಸಲು  ಮತ್ತಷ್ಟು ಸಾಲಕ್ಕೆ ಕೈ ಚಾಚುತ್ತಾ
ಒಂದು ಮನೆ ಸಾಲದು, ಒಂದು  ವಾಹನ ಸಾಲದು‌, ಒಂದು ಸಂಸಾರಕ್ಕೆ ಒಬ್ಬರಿಗೆ ಒಂದು  ಉದ್ದೋಗ   ಸಾಲದು. ಎನ್ನುವ ಹಂತಕ್ಕೆ ಬಂದು ಕುಟುಂಬದವರೆಲ್ಲರಿಗೂ ಮೀಸಲಾತಿ ನೀಡಿದ್ದರೂ ಸಾಲ ತೀರುತ್ತಿಲ್ಲ ಎಂದರೆ ಅರ್ಥ ವೇನು?
ಹಣದ ದುರ್ಭಳಕೆ ಆಗುತ್ತಿದೆ. ಜ್ಞಾನವಿಲ್ಲದೆ ಹಣವನ್ನು ನೀರಿನಂತೆ  ಖರ್ಚು ಮಾಡಿಕೊಂಡು ವೈಭೋಗದೆಡೆಗೆ‌ ನಡೆದರೆ ತೃಪ್ತಿ ಸಿಗದು. ಹೀಗಾಗಿ‌ಕಷ್ಟಪಡದೆ ಸುಖದೆಡೆಗೆ ಮಕ್ಕಳು ‌ಮಹಿಳೆಯರು‌ ಮೊಮ್ಮಕ್ಕಳು ಹೊರಗಿನ‌ಜಗತ್ತಿನಲ್ಲಿ
ಸುತ್ತಿದರೆ ಒಳಗಿನ ಜಗತ್ತಿನ ಸತ್ಯ ಅರ್ಥ ವಾಗದೆ ಮತ್ತದೇ ಜನ್ಮ . ಜಾತಿ  ಜಾತಿ ಎನ್ನುವ  ರಾಜಕೀಯತೆಯ ಹಿಂದೆ ‌ನಡೆದು  ಮಾನವ ಜಾತಿಗೆ ಸುಖವಿಲ್ಲವಾಗಿದೆ. ಇದರಲ್ಲಿ  ಕೆಲವರಿಗಷ್ಟೆ  ಮೀಸಲಾತಿ ಅಗತ್ಯವಿದ್ದರೂ  ಅದನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳದೆ  ಇನ್ನಷ್ಟು ಸರ್ಕಾರದ ಋಣ ತಲೆಗೇರಿಸಿಕೊಂಡರೆ ಬಿಡುಗಡೆಗೆ  ಸರ್ಕಾರದ ಸೇವೆ ಮಾಡಬೇಕು. ಸೇವೆಯಲ್ಲಿ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದಾಗಲೇ ಆತ್ಮಕ್ಕೆ ತೃಪ್ತಿ ‌ಮುಕ್ತಿ ಎನ್ನುವ ಆಧ್ಯಾತ್ಮ ಚಿಂತನೆ ನಡೆಸಲು ಇಂದು‌ಕಷ್ಟವಿದೆ.
ಯಾವಾಗ‌ ಮಾನವನಿಗೆ ಸುಖವಾಗಿ ಎಲ್ಲವೂ ದೊರೆಯುವುದೋ  ಆಗ ಸಹಜವಾಗಿ  ಮಾನವ‌ ಕಷ್ಟಪಡದೆ ಸೋಮಾರಿಯಾಗುವನು. ಸೋ, 'ಮಾರಿ 'ಯೂ  ಅವನೊಂದಿಗೆ  ಸೇರುತ್ತಾ‌ ಹಣವನ್ನು  ವೈಧ್ಯರಿಗೆ‌ಕೊಡಬೇಕು.
ವೈಧ್ಯಕೀಯ ಕ್ಷೇತ್ರ ಬೆಳೆದಿರೋದು ಅಜ್ಞಾನದ  ಅಶುದ್ದ ವಿಷಯಾಸಕ್ತಿ, ಆಹಾರ,ವಿಹಾರಗಳ ಜೊತೆಗೆ ಶಿಕ್ಷಣದ ವಿಷಯಗಳಿಂದ ಎಂದರೆ  ನಮ್ಮ ಆರೋಗ್ಯ( ಕಾಮ‌ಕ್ರೋಧ ,ಲೋಭ,ಮೋಹ‌ಮಧ ಮತ್ಸರ) ಉತ್ತಮವಿದ್ದರಷ್ಟೆ ಮಾನವ ಮಹಾತ್ಮನಾಗಬಹುದೆಂದರು.
ಇದಕ್ಕೆ ಸಂಸ್ಕಾರದ ಶಿಕ್ಷಣ ಅಗತ್ಯವಿದೆ ಎಂದರೆ ನಮ್ಮ ಇಂದಿನ ಈ ಪರಿಸ್ಥಿತಿಗೆ‌ ಮೂಲ‌ ಕಾರಣವೇ  ಅನ್ಯ ಭಾಷೆ ಅನ್ಯ ವಿಷಯಗಳಿಂದ ‌ಕೂಡಿದ ಶಿಕ್ಚಣಪದ್ದತಿ.
ತತ್ವ ಬಿಟ್ಟು ತಂತ್ರವೇ ಬೆಳೆದಾಗ ಜೀವನ ಅತಂತ್ರ ಸ್ಥಿತಿಗೆ‌ ಬರುತ್ತದೆ.

ಯಾವುದೇ  ಇರಲಿ ಅತಿಯಾಗಬಾರದು. ಶಿಕ್ಷಣದಲ್ಲಿ ಮೀಸಲಾತಿ  ಕೊಟ್ಟವರಿಗೆ ಅಂಕದಲ್ಲಿಯೂ ಮೀಸಲಾತಿ, ಜೊತೆಗೆ ಉದ್ಯೋಗದಲ್ಲೂ ಮೀಸಲಾತಿ  ಇದರಿಂದಾಗಿ  ಹೊರಬರುವ ಸಮಸ್ಯೆಗಳನ್ನು  ಪರಿಹರಿಸಲು  ಸರ್ಕಾರ ಮತ್ತೆ ಹಣ ನೀಡುತ್ತಾ‌ಬಂದರೆ ಒಳಗಿದ್ದ ಸ್ವಚ್ಚ ಜ್ಞಾನದ ಗತಿ ಅಧೋಗತಿ. ಇದನ್ನು ಸರಿಪಡಿಸಬಹುದೆ?
ಎಲ್ಲಿಗೆ ಹೋದರೂ‌ ಹಿಂದಿರುಗಿ ಬರೋದು ಜ್ಞಾನದ‌ಮೇಲೆ.
ಜನ್ಮತ:  ಪಡೆದು‌ ಬಂದಿರುವ‌  ವಿಶೇಷ‌ಜ್ಞಾನವನ್ನು  ಗುರುತಿಸದೆ  ಜಾತಿಯಿಂದ ಗುರುತಿಸಿ ಶಿಕ್ಷಣ ಸರಿಯಾಗಿ‌ ನೀಡದಯೇ  ಸಾಲ ನೀಡಿ‌ಹಣ ಕೊಟ್ಟರೆ ಅದರ ದುರ್ಭಳಕೆ  ಮಾಡಿಕೊಂಡವರನ್ನೇ  ದೇಶ ಆಳೋದಕ್ಕೂ ಬಿಟ್ಟರೆ  ಯಾರಿಗೆ ಕಷ್ಟ ನಷ್ಟ?
ಉತ್ತಮ  ಜ್ಞಾನ  ಸಂಸ್ಕಾರದ ಶಿಕ್ಷಣದಿಂದ ಸಿಕ್ಕವರು ಇಂದಿಗೂ  ಹಣವಿಲ್ಲದೆಯೂ  ಸಮಾಜದ ಋಣ ತೀರಿಸುವ ಕರ್ಮ ನಡೆಸಿರುವರು. ಆದರೆ  ಓದಿ ಮುಂದೆ ಬಂದ  ಬುದ್ದಿವಂತರು  ಎಲ್ಲೋ ಹೊರದೇಶದಲ್ಲಿ  ದುಡಿಯುತ್ತಿರುವರು.  ದೇಶದ ನೆಲ ಜಲ  ಆಸ್ತಿಬೇಕು  ಆದರೆ ದೇಶದ ಋಣ ತೀರಿಸುವ  ಜ್ಞಾನವಿಲ್ಲ ಎಂದರೆ ನಿಜವಾಗಿ ಹಿಂದುಳಿದವರು ಅಜ್ಞಾನಿಗಳಾಗಿರುವರು.ಅವರವರ ಕರ್ಮಕ್ಕೆ ತಕ್ಕಂತೆ ಫಲ  ಸಿಗೋದು ಸತ್ಯ. ಹಾಗಂತ ನಮ್ಮ ಧರ್ಮ ಬಿಟ್ಟು ನಡೆದರೆ  ಕರ್ಮ ವೂ ನಮ್ಮದಾಗಿರದು ಇದೂ ಸತ್ಯ. ಹೀಗಾಗಿ‌  ಇಂದಿಗೂ‌ಬಡತನ ಎದ್ದು ಕಾಣುತ್ತಿದೆ.
ಬೇಡೋನು ದೀನ ಸ್ಮರಿಸೋನೆ ಜಾಣ ಎಂದಂತೆ ನಾವು ದೇಶದೊಳಗೆ ಇರುವ ಪ್ರಜೆಗಳಾಗಿ  ದೇಶದ ಸಾಲ‌ಅಥವ
ಋಣ. ತೀರಿಸುವುದಕ್ಕೆ ನಮ್ಮ ಸ್ವಂತ ‌ಬುದ್ದಿ ಜ್ಞಾನಕ್ಕೆ ಪೂರಕವಾದ ಶಿಕ್ಷಣ ಕೊಟ್ಟಿದ್ದರೆ ಸ್ವಾವಲಂಬನೆ ಸ್ವಾಭಿಮಾನ ಸತ್ಯ ಸ್ವತಂತ್ರ ಜ್ಞಾನದಿಂದ ಇದ್ದಲ್ಲಿಯೇ  ಎದ್ದು ನಿಲ್ಲುವ ಆತ್ಮಶಕ್ತಿ  ಬರುತ್ತದೆ. ಒಟ್ಟಿನಲ್ಲಿ ಹಣದಿಂದ  ಹಿಂದುಳಿದವರನ್ನು ಗುರುತಿಸೋದೆ ಅಜ್ಞಾನ. ಜ್ಞಾನವನ್ನು  ಬೆಳೆಸೋದೆ ವಿಜ್ಞಾನ. ಜ್ಞಾನ ಎಲ್ಲರ ಆಸ್ತಿ ಅದನ್ನು ಸರಿಯಾದ ಮಾರ್ಗದಲ್ಲಿ  ಬೆಳೆಸೋದೆ ಗುರುಗಳ ಧರ್ಮ ಕರ್ಮ. ಯಾರೋ ಹೊರಗಿನವರ ಜ್ಞಾನವನ್ನು ನಮ್ಮದೆಂದು ತಿಳಿದು ನಮ್ಮ ಸ್ವಂತ ಬುದ್ದಿ ಜ್ಞಾನ ಅರಿಯದಿದ್ದರೆ  ನಾವು ಹಿಂದೂ ಆಗೋದಿಲ್ಲ. ಹಿಂದಿನವರ ಆಸ್ತಿ ಬೇಕು.ಅವರ ಧರ್ಮ ಕರ್ಮ ಜ್ಞಾನ ಬೇಡವೆಂದರೆ ಅಧರ್ಮ ವಾಗುತ್ತದೆ. ‌ಅದು ಆತ್ಮಕ್ಕೆ ತೃಪ್ತಿ ಸಿಗದಂತೆ  ಅಂತರ. ಹೆಚ್ಚಿಸಿಕೊಂಡು ಆಳುತ್ತದೆ. ಅನ್ಯರ ಕೈಕೆಳಗೆ ದುಡಿಯೋದರಿಂದ ಹಣ ಸಿಕ್ಕರೂ ತೃಪ್ತಿ ಸಿಗದು.
ಅದೇ ನಮ್ಮವರ ಸೇವೆ ಮಾಡಿದರೆ ಹಣವೂ ಸದ್ಬಳಕೆ ಆಗಿ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗುತ್ತದೆನ್ನುವುದೆ ಆಧ್ಯಾತ್ಮ ಸತ್ಯ.
 ಅರ್ಥ ವಾಗೋದು ಕಷ್ಟ .‌ಆದರೂ ಹಿಂದಿರುಗೋದು ಕಷ್ಟ.
ಕಷ್ಟಪಡದೆ  ಸುಖವಿಲ್ಲ.ಭೌತಿಕದಲ್ಲಿ  ಮೀಸಲಾತಿ ಇದ್ದರೂ ಆಧ್ಯಾತ್ಮಿಕ ಜಗತ್ತಿನಲ್ಲಿರಲಿಲ್ಲ.ಈಗ  ಆ ಕ್ಷೇತ್ರವೂ ಸರ್ಕಾರದ ವಶವಾಗುತ್ತಿರುವುದು  ಪರಮಾತ್ಮನ ಸತ್ಯದಿಂದ ಮಾನವ‌ದೂರವಿರೋದನ್ನು ಎತ್ತಿ ತೋರಿಸುತ್ತಿದೆ.‌ಹಾಗಾದರೆ ಪರಮಾತ್ಮನಿಗೆ ಮೀಸಲಾಗಿದ್ದ ಜೀವಾತ್ಮ ಕಥೆ  ಏನು?
ಸಾಲ ತೀರಿಸಲು‌ಬಂದ ಜೀವಾತ್ಮನಿಗೆ ಸಾಲ‌ಉಚಿತವಾಗಿ  ಏರಿಸಿದರೆ ತೀರಿಸುವ ಸುಜ್ಞಾನ  ಕೊಡೋದು ಯಾರು? ಎಷ್ಟು ಬೇಡಿದರೂ  ಕೊಡೋ ದೇವಾಸುರರ  ನಡುವಿರುವ ಮನುಕುಲ ಇಂದಿಗೂ  ಅತಂತ್ರಸ್ಥಿತಿಯಲ್ಲಿದೆ ಎಂದರೆ ಸ್ವತಂತ್ರ ಬುದ್ದಿ ಜ್ಞಾನದ ಕೊರತೆಯಿದೆ. ಸ್ವತಂತ್ರ ವಾಗಿದ್ದ ದೇಶವನ್ನು ಆಳಲು ಬಂದ‌ಪರಕೀಯರಿಗೆ  ಅರಿವಿಲ್ಲದೆ  ಭೌತಿಕಾಸಕ್ತಿ ಬೆಳೆದು  ಜನರನ್ನು ಆಳಾಗಿಸಿದರು. ಅದನ್ನು ಪ್ರಗತಿ ಎಂದು ಸಹಕರಿಸುತ್ತಾ  ಹೋದವರ ಗತಿ ಕೊನೆಯಲ್ಲಿ  ತಿಳಿದರೂ ಏನೂ ಮಾಡಲಾಗದೆ ಹೋದರು. ಇವರ ಚರಿತ್ರೆಯನ್ನು ಪುಸ್ತಕಕ್ಕೆ ಇಳಿಸಿ ಮಕ್ಕಳನ್ನೂ  ವಾಸ್ತವದಿಂದ ದೂರ ಉಳಿಸಿ ಭವಿಷ್ಯದ ಚಿಂತನೆ ನಡೆಸಿದವರ ಮಕ್ಕಳು ದೂರವಾದರು.‌ ಈಗಲೂ  ಸರಿಪಡಿಸಲು ಕಾಲವಿದೆ. ಆದರೆ ಮನಸ್ಸಿಲ್ಲ. ಎಲ್ಲಾ ಕಾಲವೇ ಉತ್ತರ ನೀಡುತ್ತದೆ.

ಆಕಾಶದೆತ್ತರ‌ಹಾರಿಸುವ ವೈಜ್ಞಾನಿಕತೆಗೂ ಭೂಮಿಯ ಋಣ ತೀರಿಸುವ ವೈಚಾರಿಕತೆಗೂ ಅಂತರವಿದೆ.‌ಆ ಅಂತರದಲ್ಲಿ ಸಾಮಾನ್ಯಜ್ಞಾನ  ಅಗತ್ಯವಿದೆ. ‌ನಂತರವೇ ವಿಶೇಷ ಜ್ಞಾನ ವಿಜ್ಞಾನ ಅರ್ಥ ವಾಗುತ್ತದೆ.
ಸದಾ ನಮ್ಮೊಳಗೇ ಇದ್ದು ನಮ್ಮನ್ನು ಮಾತನಾಡಿಸುವ  ಒಳ‌ಮನಸ್ಸಿನಿಂದ ದೂರವಾದಷ್ಟೂ ಕಳೆದುಹೋಗುವುದು ನಾವೇ ಎನ್ನುವ ಸತ್ಯ ಒಂದೇ ಆಗಿರುತ್ತದೆ.
ಆತ್ಮಾವಲೋಕನ ದಿಂದ ಆತ್ಮನಿರ್ಭರ ಭಾರತ. ಆಧ್ಯಾತ್ಮ ಎಂದರೆ ತನ್ನ ತಾನರಿತು ನಡೆಯೋದು.ಅರಿವು ಒಳಗಿದೆ ಅದರ ಹಿಂದೆ ನಡೆದರೆ ಹಿಂದೂಗಳಾಗಿರಬಹುದು. ಅದು ಸತ್ವ ಸತ್ಯ ತತ್ವವನ್ನು ಅರಿತು ನಡೆಸುತ್ತದೆ. ಇಷ್ಟೇ ಜೀವನ ರಹಸ್ಯ. 

No comments:

Post a Comment