ದೇವರಿರೋದೆಲ್ಲಿ?

: ಹಿರಣ್ಯ ಕಶ್ಯಪುವನ್ನು ಸಂಹಾರ ಮಾಡಲು‌ದೇವತೆಗಳು ಅವನ‌ ಮಗನನ್ನೇ ಬಳಸಿಕೊಂಡು ಗೆದ್ದರು , ಕಂಸನ ವಧೆ ಶ್ರೀ ಕೃಷ್ಣನಿಂದ ಎಂದು ತಿಳಿದವನಿಗೆ  ನಾರದರು  ಕಂಸನ ಪಾಪದ ಕೊಡ ತು...

Monday, May 11, 2026

ಮತಾಂತರದಿಂದಾದ ಅವಾಂತರಗಳೆಷ್ಟು?

ಮತಾಂತರದಿಂದಾದ ಅವಾಂತರಗಳೆಷ್ಟು?

ಮತಗಳ ಅಂತರವು ಮಾನವನ ಜೀವನವೇ ಅತಂತ್ರಸ್ಥಿತಿಗೆ ತರುತ್ತಿದೆ. ಇದರಿಂದ ಯಾರಿಗೂ ಲಾಭವಾಗಿಲ್ಲ ಎನ್ನುವ ಸತ್ಯವನ್ನು ಆಧ್ಯಾತ್ಮಿಕ ವಾಗಿ ಅರ್ಥ ಮಾಡಿಕೊಳ್ಳಲು ಆತ್ಮಜ್ಞಾನದಿಂದ ಮಾತ್ರ ಸಾಧ್ಯ.
ಮತಾಂತರ ದಲ್ಲೂ ತಾತ್ವಿಕ  ಮತ್ತು ತಾಂತ್ರಿಕ ಎಂಬ ಎರಡು ರೀತಿಯಿದೆ.
ತತ್ವಗಳ ಪ್ರಕಾರ ಅಂತರ‌ಬೆಳೆದಾಗ ಧರ್ಮ ಒಡೆಯುತ್ತದೆ
ತಂತ್ರದ ಮೂಲಕ ಅಂತರ ಬೆಳೆದಾಗ ಮನಸ್ಸೇ‌ಒಡೆಯುತ್ತದೆ.

ಇರೋದೆಂದೆ ಧರ್ಮ ಸತ್ಯ ಜಾತಿ  ಪರಮಾತ್ಮ ದೇವರು ಎನ್ನುವ ಸತ್ಯದೆಡೆಗೆ ಹೋಗಲು ತತ್ವದೊಳಗಿರುವ ಏಕತ್ವವನ್ನು  ಅರಿತು ನಡೆಯಬೇಕು. ಅದರಲ್ಲಿ ‌ ಬಹುತ್ವ ಬಂದಾಗಲೇ  ಹಲವು  ರೀತಿಯಲ್ಲಿ ವಾದ ವಿವಾದ ಗಳಾಗುತ್ತಾ  ಮೇರುಸತ್ಯ ಬಿಟ್ಟು  ಕೆಳಗಿಳಿಯೋದು ಆತ್ಮ.
ಆತ್ಮಕ್ಕೆ ಸಾವಿಲ್ಲ  ಆದರೆ  ಜೀವಾತ್ಮನಿಗೆ  ಮುಕ್ತಿ ಸಿಗೋದಕ್ಕೆ  ಆತ್ಮಜ್ಞಾನ ಅಗತ್ಯವಿದೆ.

ಕಲಿಯುಗದ ಪ್ರಭಾವದಿಂದಾಗಿ ಇಂದಿನ ವೈಜ್ಞಾನಿಕ ಚಿಂತನೆಗಳು  ಆಕಾಶದೆತ್ತರ  ಬೆಳೆದಿದೆ ಭೂಮಿಯ‌ಮೇಲೆ ನಿಂತು  ಜೀವನ ನಡೆಸುತ್ತಿದ್ದೇವೆನ್ನುವ ಸಾಮಾನ್ಯ ಪ್ರಜ್ಞೆ  ಇಲ್ಲದೆ ಭೂಮಿಯನ್ನು  ದುರ್ಭಳಕೆ ಮಾಡುವಷ್ಟು ತಂತ್ರವೂ ಇದೆ.
ತಂತ್ರವಿರಲಿ ಆದರೆ ಅದರಿಂದ ಸ್ವತಂತ್ರ ಬುದ್ದಿ ಜ್ಞಾನ‌ಬೆಳೆದರೆ  ಅದೇ ನಿಜವಾದ ಧರ್ಮದೆಡೆಗೆ‌ನಡೆಸುತ್ತದೆ.
ಅಧ್ವೈತ   ಧ್ವೈತ  ವಿಶಿಷ್ಟಾದ್ವೈತ ಎಲ್ಲಾ ಭೂಮಿಯಲ್ಲಿದೆ. ಆದರೆ ಮೂರೂ‌ಬೇರೆ ಬೇರೆ  ದಾರಿಯಲ್ಲಿ ‌ನಡೆದರೂ ಭೂಮಿ ಒಂದೇ ಆಗಿರುತ್ತದೆ. ಈ ಒಂದನ್ನು ಅರ್ಥ ಮಾಡಿಕೊಳ್ಳಲು ಸೋತರೆ  ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.
 ಪುರಾಣ ಇತಿಹಾಸ‌ಕಾಲದಿಂದಲೂ ಮನುಕುಲವಿರೋದು ಇದೇ ಭೂಮಿಯಲ್ಲಿಯೇ ಎನ್ನುವ ಸತ್ಯ ತಿಳಿಸುವ ಅಗತ್ಯವಿಲ್ಲ. ಆದರೆ ಅರಿತು ನಡೆಯದವರಿಗೆ  ಭೂಮಿಯೇ ಆಸರೆ  ನೀಡೋದನ್ನು ಬಿಟ್ಟಿಲ್ಲ. ಈ ಭೂಮಿ ಎನ್ನುವ ಮಾಧ್ಯಮದಲ್ಲಿ  ಮಾಡಬಾರದ ಕರ್ಮ  ಮಾಡಿದರೆ ಅದಕ್ಕೆ ತಕ್ಕಂತೆ ಫಲವನ್ನು ಅನುಭವಿಸಲು ಭೂಮಿಗೇ‌ಬರಬೇಕು.
ಅಂತರಗಳ ಹಿಂದಿನ ಅರ್ಧ ಸತ್ಯದಿಂದ  ಈ ಕಡೆ ದೇವರು ಇನ್ನೊಂದು ಕಡೆ ಅಸುರರು ನಿಂತು ಎಳೆದಾಡುತ್ತಿರುವ ಸತ್ಯ ತಿಳಿದರೆ  ನಾವೆಲ್ಲರೂ ಇದ್ದೂ ಸತ್ತಂತೆ. ಶ್ರೀ ಕೃಷ್ಣ ‌ಪರಮಾತ್ಮ ಕುರುಕ್ಷೇತ್ರ ಯುದ್ದದ ಸಮಯದಲ್ಲಿ ಅರ್ಜುನನ ವಿಷಾಧವನ್ನು ಹೋಗಲಾಡಿಸಲು ತಿಳಿಸಿರುವ ಸತ್ಯ ಇದೇ ಆಗಿದೆ. ಇಡೀ ಬ್ರಹ್ಮಾಂಡವನ್ನು  ತನ್ನೊಳಗಿಟ್ಟುಕೊಂಡಿರುವ
ಪರಮಾತ್ಮನ ಒಳಗಿರುವ ಎಲ್ಲಾ ಜೀವಾತ್ಮ ರು  ಆಟಕ್ಕುಂಟು ಲೆಕ್ಕಕ್ಕಿಲ್ಲದ ಅಣುಗಳಂತೆ. ಆದರೆ ಮಾನವ‌ಜನ್ಮದಲ್ಲಿರುವ ಸ್ವಾತಂತ್ರ್ಯ ಎಂದರೆ ಆತ್ಮತತ್ವನರಿತು ನಡೆಯುವುದರಿಂದ  ಸದ್ಗತಿ  ಮುಕ್ತಿ ಮೋಕ್ಷ ದ ಸ್ಥಿತಿ. 
ಮುಕ್ತಿ ಒಂದು ತಾತ್ಕಾಲಿಕ ಬಿಡುಗಡೆ ಯಾದರೆ ಮೋಕ್ಷ ಶಾಶ್ವತ ಬಿಡುಗಡೆ ಯಾಗಿರುತ್ತದೆ.
ಮೋಕ್ಷ  ಯಾರಲ್ಲಿ ಮೋಹದ ಕ್ಷಯವಾಗಿರುವುದೋ ಅವರಿಗಷ್ಟೆ ಸಿಗುತ್ತದೆಂದರೆ ವಾಸ್ತವದಲ್ಲಿ  ನಮ್ಮಲ್ಲಿರುವ ಅತಿಯಾದ ಮೋಹವೇ ಕಾಮ ಕ್ರೋಧ ಲೋಭ ಮಧ ಮತ್ಸರಗಳನ್ನು  ಬೆಳೆಸುತ್ತಿದೆ  ಹಾಗಾದರೆ  ತತ್ವಜ್ಞಾನ ದ ಅಂತರವೇ ತಂತ್ರಜ್ಞಾನದ ಅಂತರಕ್ಕೆ ಕಾರಣವಾಯಿತೆ?
ತತ್ವವಿಲ್ಲದೆ  ತಂತ್ರ‌ಬೆಳೆಯಿತೆ?
ಭೂಮಿಯ ಮೇಲಿರುವ  ಮಂತ್ರ ತಂತ್ರ ಯಂತ್ರಗಳು ಸ್ವತಂತ್ರ ವೆ?
ಇವಿಲ್ಲದೆ  ಮಾನವರು‌ ಬದುಕಬಲ್ಲರೆ?  ಹಿಂದೆ  ಎಷ್ಟೋ ತಪಸ್ವಿಗಳು ಸ್ವತಂತ್ರವಾಗಿ  ಕಾಡಿನಲ್ಲಿದ್ದು ಮೋಕ್ಷ ಸಾಧಕರಾದರು ಎಂದರೆ ಈಗ ಅಸಾಧ್ಯ.
ಎಲ್ಲವೂ ಮನುಕುಲದ ಒಳಿತಿಗಾಗಿ ಮಾನವನ ಸುಖ ಜೀವನಕ್ಕಾಗಿ ಸಂಸಾರ ನಡೆಸುವುದಕ್ಕಾಗಿ ಪರಮಾತ್ಮನು ಕೊಟ್ಟಿರುವಾಗ  ಅದನ್ನು ಬೇರೆಯಾಗಿಸಲಾಗದು. ಬೇರೆ ಮಾಡಿದಷ್ಟೂ ಅಂತರದಲ್ಲಿ  ಮಾನವನ ಸ್ಥಿತಿ ಅತಂತ್ರ ವೆ.

ವಾಸ್ತವದಲ್ಲಿ  ನಮ್ಮ ಮುಂದಿರುವ‌ಮೂರು ಮತಗಳ ಅಂತರವು ಅಜ್ಞಾನವನ್ನು ‌ಬೆಳೆಸುತ್ತಾ‌ಜನರನ್ನು ಆಳಲು ಹೊರಟು  ತಾವೇ ಆಳಾಗಿರುವ ಸತ್ಯದಿಂದ ದೂರವಾದರೂ ಇದನ್ನು ಧರ್ಮ ಎನ್ನುವ  ರಾಜಕೀಯ ಮನೆ‌ಮನೆಯಲ್ಲಿದೆ.
ಇದರಿಂದ ಸಂಸಾರ ಒಡೆದು ಹೊರಬರುತ್ತಿವೆ. ಹೊರಗಿದ್ದವರು  ಒಳಹೊಕ್ಕಿ ಇನ್ನಷ್ಟು ಕುತಂತ್ರದಿಂದ  ಮನೆ ಆಳುತ್ತಿದ್ದರೂ  ನಮ್ಮ ಅಜ್ಞಾನ ನಮಗೆ ಅರಿವಾಗದೆ ಅದನ್ನು ಪ್ರಗತಿ ಎಂದು  ವಾದ ಮಾಡುವವರಿದ್ದಾರೆ.
ಸ್ವತಂತ್ರ ಜೀವನ ಎಂದರೆ ಮೂಲ ಬಿಟ್ಟು  ಯಾರದ್ದೋ ಅಡಿ ಇರೋದಲ್ಲ. ಮೂಲವರಿತು  ನಡೆಯೋದಷ್ಡೆ. ಮೂಲದ ಶಿಕ್ಷಣವೇ  ಕೊಡದೆ ತಂತ್ರದಿಂದ  ಹೊರಗೆಳೆದು ಯಂತ್ರದಂತೆ ದುಡಿಸಿಕೊಂಡರೆ  ಸ್ವೇಚ್ಚಾಚಾರವಾಗುತ್ತದೆ.‌ಯಂತ್ರಗಳಲ್ಲಿಯೂ  ಸಾತ್ವಿಕ ರಾಜಸಿಕ ತಾಮಸಿಕ ಗುಣಗಳಿವೆ. ಆಹಾರ ವಿಹಾರ ಶಿಕ್ಷಣ  ಯಾವ ಗುಣಮಟ್ಟವನ್ನು  ಅನುಸರಿಸುವುದೋ ಹಾಗೆ  ಮಾನವನ  ಜೀವನ ನಡೆಯುತ್ತಿರುತ್ತದೆ.
ಸತ್ವಗುಣಕ್ಕೆ ತಾಮಸಿಕ ಗುಣ ವಿರುದ್ದ. ಇವೆರಡರ ಮಧ್ಯೆ ಇರುವ ರಾಜಸಿಕ ಗುಣವೇ ಅಂತರ ಸೃಷ್ಟಿ ಮಾಡುತ್ತಿರುವಾಗ  ಇದರಿಂದ ದೂರವಿದ್ದವರಿಗಷ್ಟೆ ತತ್ವದರ್ಶನ ಆಗಿದೆ. 
ರಾಜಪ್ರಭುತ್ವದ   ಭಾರತೀಯ ಶಿಕ್ಷಣವು ಸತ್ವಯುತವಾಗಿತ್ತು.ಯಾವಾಗಿದು ಅನ್ಯರ ಮಧ್ಯ ಪ್ರವೇಶದಿಂದ ರಾಜಕೀಯಕ್ಕೆಳೆದು ಆಳಲು ಪ್ರಾರಂಭಿಸಿತೋ
ಆಗಲೇ  ತಾಮಸ ಜೀವನ  ಹೆಚ್ಚಾಯಿತು. ಸ್ವತಂತ್ರ ಬುದ್ದಿ ಜ್ಞಾನ ಇಲ್ಲದೆ ಹೊರ ಬಂದರೆ  ತಂತ್ರದಿಂದ ಆಳುವರು ಕೊನೆಗೆ ಅದೇ ಜೀವನವು ಅತಂತ್ರಸ್ಥಿತಿಗೆ ತಲುಪಿಸುತ್ತಾ ಅಜ್ಞಾನಕ್ಕೆ ತಿರುಗುತ್ತದೆ.
ನಿಮ್ಮ ನಿಮ್ಮ ಮನವ,ತನುವ ಸಂತೈಸಿಕೊಳ್ಳಿ ಎಂದಿರುವ ಮಹಾತ್ಮರಾದವರು  ಈ ರೀತಿಯ ತಂತ್ರಕ್ಕೆ ಒಳಗಾಗದೆ ಅಂತರಂಗದೆಡೆಗೆ ನಡೆದರು. ಅವರನ್ನು ಬಡವರೆನ್ನಬಹುದೆ ಶ್ರೀಮಂತ ರೆ?

ಅಜ್ಞಾನ ಎಂದರೆ ತಿಳುವಳಿಕೆಯಿಲ್ಲದವರೆಂದರ್ಥ ವಲ್ಲ. ಸತ್ಯದ ತಿಳುವಳಿಕೆಯಿಲ್ಲದಿರೋದಷ್ಟೆ. ಭೂಮಿ ವಿಶಾಲವಾಗಿದೆ ಎಂದು ಮನಸ್ಸಿಗೆ ಬಂದಂತೆ ಬಳಸುವುದೆ ಅಜ್ಞಾನದ ಲಕ್ಷಣ. ಇದಕ್ಕೆ ತಕ್ಕಂತೆ ಬೆಲೆಕಟ್ಟಬೇಕು. ಬೆಲೆ ಎಂದರೆ ಹಣವಲ್ಲ ಋಣದ ಲೆಕ್ಕಾಚಾರವಾಗಿದೆ. ಇದನ್ನು ತತ್ವಜ್ಞಾನದಿಂದ  ಅರಿತು  ನಡೆದರೆ ಮಾತ್ರ ಸಾಧ್ಯ. ಅದರಲ್ಲಿ ಅಂತರ ಬೆಳೆಸಿಕೊಂಡರೆ  ಅಸುರರ ಸಾಮ್ರಾಜ್ಯ ವಾಗುತ್ತದೆ.
ಅಸುರರು  ನೋಡೋದು ಹೆಣ್ಣು ಹೊನ್ನು ಮಣ್ಣು ಮಾತ್ರ.
ಈಗ ನಮ್ಮನ್ನು ಆಳುತ್ತಿರೋರು ಯಾರು? ನಮ್ಮೊಳಗೆ ನಿಂತು ನಡೆಸೋ ಪರಮಾತ್ಮನೇ ಪರಕೀಯರೆ?
ಆತ್ಮಾವಲೋಕನ ದಿಂದಷ್ಟೆ ಆತ್ಮನಿರ್ಭರ ಭಾರತ ಸಾಧ್ಯ.
ಸರಳ ಜೀವನ ನಡೆಸಲು ರಾಜಕೀಯ ಶಕ್ತಿ ಬೇಕೆ?
ಅಧ್ವೈತ ದೊಳಗೆ ಧ್ವೈತ ದ ರಾಜಕೀಯವಿದ್ದರೆ  ಬೇರೆ ಹೇಗೆ?
ಪ್ರಜಾಪ್ರಭುತ್ವದ  ದೇಶದಲ್ಲಿ  ಪ್ರಜೆಗಳಾದವರು ದೇಶರಕ್ಷಣೆ ಮಾಡಬೇಕೆ ಅಥವಾ ದೇಶವೇ ಪ್ರಜೆಗಳನ್ನು ರಕ್ಷಣೆ ಮಾಡಬೇಕೆ?. ಆತ್ಮರಕ್ಷಣೆಗಾಗಿ  ಜೀವ ಪ್ರಾಣ ಬಿಟ್ಟಿರುವ  ದೇಶಭಕ್ತರಲ್ಲಿ   ಮತ ಜಾತಿ ಧರ್ಮದ ಅಂತರವಿತ್ತೆ?
ಈಗಿದೆ ಎಂದರೆ  ನಾವು ದೇಶಭಕ್ತರಾಗಬಹುದೆ? ದೇವರು ಇರೋದೆಲ್ಲಿ ಹೊರಗೋ ಒಳಗೋ? ದೈವತ್ವದ. ಶಿಕ್ಷಣ ಕೊಡಲು ಸರ್ಕಾರ ಬೇಕೆ? ಒಟ್ಟಿನಲ್ಲಿ ನಮ್ಮ ಈ ಅಂತರಕ್ಕೆ ಕಾರಣವೇ ಅತಿಯಾದ ಸ್ವಾರ್ಥ ಅಹಂಕಾರ ದ  ಅಜ್ಞಾನ.
ಮಾನವನ‌ಹಿತ ಶತ್ರುಗಳೇ ಒಳಗಿರುವ ಸ್ವಾರ್ಥ ಅಹಂಕಾರ ಎನ್ನುವರು. ಈ ಶತ್ರುಗಳು ತತ್ವದೆಡೆಗೆ ನಡೆಸದೆ ತಂತ್ರದೆಡೆಗೆ ಹೊರಗೆ  ನಡೆಸಿ ಆಳುತ್ತವೆ  ಹೀಗಿರುವಾಗ ಹೊರಗಿನ ಶತ್ರು
ಒಳಗಿನ ಶತ್ರುಗಳು ಒಂದಾಗಿ  ವಿಶ್ವ ವೇ ನಮ್ಮದು ಎಂದರೆ ಸತ್ಯವಿರದು. ಸೃಷ್ಟಿ ಸ್ಥಿತಿ ಲಯಗಳನ್ನು  ತಡೆದವರಿಲ್ಲ.‌ಇದರಲ್ಲಿ ಅಂತರವೂ ಇರಲಿಲ್ಲ. ಆದರೂ ಮಾನವ ಬ್ರಹ್ಮ ವಿಷ್ಣು ಮಹೇಶ್ವರರ ನಡುವೆ ಅಂತರ ಸೃಷ್ಟಿ ಮಾಡಿಕೊಂಡು ಜನರನ್ನು ಆಳುತ್ತಿರೋದರಿಂದ ಅಂತರದಲ್ಲಿ  ಮಧ್ಯವರ್ತಿಗಳು  ನಿಂತು ಆಳುತ್ತಿರುವುದಾಗಿದೆ. ಆಳುವವರೂ ಆಳಾಗಿ‌ ಜನಿಸಲೇಬೇಕು.ವಿಧಿನಿಯಮ ಮೀರಿ  ಯಾರೂ ನಡೆಯಲಾಗದು.
ನಮ್ಮನ್ನು ನಾವು ಆಳಿಕೊಳ್ಳಲು ಕಷ್ಟಪಡುವ ನಮಗೆ ಅನ್ಯರನ್ನು ಅಸತ್ಯ ಅಧರ್ಮ ಅನ್ಯಾಯದಿಂದ ಆಳಲು ಹೊರಟವರ ವಿನಾಶ ನಿಶ್ಚಿತ. 

No comments:

Post a Comment