ಈಗಲೂ ತತ್ವಮಸಿ ಪದವಿದೆ.ನಾವೆಲ್ಲರೂ ಅದೇ ಆಗಿದ್ದೇವೆ ಆದರೆ ನಮ್ಮಲ್ಲಿ ತತ್ವವಿಲ್ಲ ತಂತ್ರವಿದೆ. ತಂತ್ರ ಯಾವತ್ತೂ ಅರ್ಧ ಸತ್ಯದೆಡೆಗೆ ನಡೆಸುತ್ತದೆ.ಇದೇ ಕುತಂತ್ರದಿಂದ ಮುಂದೆ ನಡೆದಾಗ ನಾವೆಲ್ಲರೂ ಅಸುರರ ವಶದಲ್ಲಿರುವ ಸುರರೆ ಎಂದಾಗಬಹುದು.
ಹಣಕ್ಕಾಗಿ ಅಧಿಕಾರಕ್ಕಾಗಿ ಸ್ಥಾನಕ್ಕಾಗಿ ಮಾನವನು ಏನುಬೇಕಾದರೂ ಮಾಡಬಹುದು. ಆದರೆ ಅದು ಸಿಕ್ಕಿದ ಮೇಲೆ ಯಾರು ಏನು ಹೇಳಿದರೂಕೇಳಲೇಬೇಕಷ್ಡೆ. ಅದಕ್ಕೆ ಅನ್ಯರ ವಶದಲ್ಲಿ ವೈಭೋಗದ ಜೀವನ ನಡೆಸೋದಕ್ಕಿಂತ ತಮ್ಮ ಮನೆಯ ಗಂಜಿ ಅನ್ನವೇ ಶ್ರೇಷ್ಠ ಎಂದಿರುವರು. ಒಳಗೆ ಸೇರಿಸಿಕೊಂಡ ಮೇಲೆ ಹೊರಗೆ ಹಾಕೋದು ಕಷ್ಟ. ಇದರಲ್ಲಿ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಜೀವ ಹೋದರೂ ಒಳಗೇ ಬೆಳೆಯುತ್ತದೆ.
ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಎರಡೂ ದೇಶವನ್ನೇ ಹಾಳುಮಾಡುತ್ತಿದೆ.ಜನರಿಗೆ ಭ್ರಷ್ಟಾಚಾರ ವನ್ನು ತಡೆಯಲಾಗದಿದ್ದರೆ ಭಯೋತ್ಪಾದನೆ ಬೆಳೆಯುತ್ತದೆ.
ಭ್ರಷ್ಟಾಚಾರ ಹಿಂದಿನಿಂದ ಜನರನ್ನು ತುಳಿದು ಮೇಲೇಳದಂತೆ ಮಾಡುತ್ತದೆ.
ಭಯೋತ್ಪಾದನೆ ಮುಂದಿನಿಂದ ಕೊಲ್ಲುತ್ತದೆ. ಒಂದು ಕಣ್ಣಿಗೆ ಕಾಣದೆ ರಾಜಾರೋಷವಾಗಿ ನಡೆದರೆ ಇನ್ನೊಂದು ರೋಷದಲ್ಲಿ ಓಡುತ್ತದೆ.
ನಡಿಗೆ ಸರಿಪಡಿಸಲಾಗದಿದ್ದರೆ ಓಡೋರನ್ನು ತಡೆಯುವುದು ಕಷ್ಟ. ಹಾಗಾಗಿಮೊದಲು ಮಾನವನಿಗೆ ನಡೆ ನುಡಿಯ ಸಂಸ್ಕಾರ ಅಗತ್ಯವಾಗಿದೆ. ಮಕ್ಕಳಿರುವಾಗಲೇ ಯಾರು ಇದನ್ನು ಕಲಿಸಿಬೆಳೆಸಿರುವರೋ ಅವರಿಗೆ ಭ್ರಷ್ಟಾಚಾರ ದ ಅರ್ಥ ತಿಳಿಯುತ್ತದೆ ಭಯೋತ್ಪಾದಕರು ಯಾರೆಂಬುದೂ ಅರಿವಿಗೆ ಬರುತ್ತದೆ.
ಕೆಲವರು ತಮ್ಮ ಸ್ವಾರ್ಥ ಸುಖಕ್ಕಾಗಿ ಜನರಲ್ಲಿ ಭಯಹುಟ್ಟಿಸಿ ಕೊಂದರೆ ಕೆಲವರಿಗೆ ಜೀವಭಯವಿಲ್ಲದೆ ಯಾರೋ ಕಲಿಸಿದ ಭಯೋತ್ಪಾದಕ ಕೃತ್ಯದಲ್ಲಿಯೇ ಕಾಲಕಳೆಯುತ್ತಾ ಜನರ ಜೀವವನ್ನು ತೆಗೆಯುವರು.
ಹೀಗಿರುವಾಗ. ಕಾಣದ ಕೈಗಳ ಭಯೋತ್ಪಾದನೆ ಜನರನ್ನು ಈ ಕಡೆ ಒಳ್ಳೆಯದೂ ಮಾಡಲಾಗದೆ ಕೆಟ್ಟದ್ದನ್ನು ಸಹಿಸಿಕೊಂಡು ಇರಲಾಗದೆ ಇದ್ದಲ್ಲೇ ಸಾಯುವರು.
ಸಾವು ಎಲ್ಲರಿಗೂ ಇದೆ. ಆದರೆ ಹೇಗೆ ಜೀವ ಹೋಯಿತು ಎನ್ನುವುದರ ಮೇಲೇ ಜೀವಾತ್ಮನಿಗೆ ಮುಂದಿನ ಗತಿ ದೊರೆಯುವುದು.
ಸತ್ಯ ತಿಳಿದುಹೋದರೆ ಸದ್ಗತಿ. ಧರ್ಮ ಕ್ಕಾಗಿ ಹೋರಾಡಿ ಮಡಿದರೆ ವೀರಗತಿ. ಎಲ್ಲಾ ತಿಳಿದೂ ಹಾಗೇ ನಡೆದರೆ ಅಧೋಗತಿ. ಹೀಗೇ ಗತಿಸಿದಮೇಲಿನ ಸ್ಥಿತಿಗತಿಯನ್ನು ಯಾವ ಭ್ರಷ್ಟಾಚಾರಿ ಭಯೋತ್ಪಾದಕರು ಕೇಳೋದಿಲ್ಲ. ಜೀವ ಎಲ್ಲರ ಒಳಗಿನ ಶಕ್ತಿ. ಅದನ್ನು ಹೇಗೆ ಯಾರ ಕೈಗೆ ಯಾಕೆ ಯಾವಾಗ ಒಪ್ಪಿಸಿಕೊಂಡು ಒಪ್ಪಂದ ಮಾಡಿಕೊಂಡರೂ ಅವರ ಪಾಲಾಗಿ ಹೋಗುವುದಷ್ಟೆ.
ಇಲ್ಲಿ ದೇವತೆಗಳು ಮಾನವರು ಅಸುರರು ಎನ್ನುವ ಮೂರು ವರ್ಗವಿದೆ. ದೇವತೆಗಳಿಗಾಗಿ ಜೀವನ ನಡೆಸೋರು ದೇವರ ವಶ, ಮನುಷ್ಯರಿಗಾಗಿ ಜೀವನ ನಡೆಸಿದರೆ ಮನುಷ್ಯರ ವಶ, ಅಸುರರಿಗಾಗಿ ಜೀವನನಡೆಸಿದರೆ ಅಸುರರ ವಶ.
ಅಂದರೆ ಯಾರು ದೈವತ್ವದೆಡೆಗೆ ನಡೆಯಲು ಸತ್ಯ ಧರ್ಮದ ಅರಿವಿನಲ್ಲಿರುವರೋ ಅವರನ್ನು ದೇವತೆಗಳೇ ನಡೆಸೋದು.
ಭೂಮಿಯಲ್ಲಿ ಜನಸೇವಕರಾಗಿ ಜನರಿಗಾಗಿ ನಡೆಸೋ ಕರ್ಮಕ್ಕೆ ತಕ್ಕಂತೆ ಜನಬಲ ಹಣಬಲ ಅಧಿಕಾರ ಬಲ ಕೊಡೋದು ಜನರೆ ಆಗಿರುವರು.ಇದರಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆದರೆ ಜನರ ಹಿತ ಸಂತೋಷವೆ ಮುಖ್ಯಗುರಿಯಾದಾಗ ನಾಟಕವಾದರೂ ಸರಿ ಜನಮೆಚ್ಚುವರು ಇದು ಮಧ್ಯಮವಾಗಿದೆ. ಇನ್ನು ಕೀಳುಮಟ್ಟದ ಕೆಲಸವೆಂದರೆ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ. ಇದನ್ನು ಅಸುರಿ ಗುಣವುಳ್ಳವರು ಹೆಚ್ಚಾಗಿಮಾಡುವರು.ತಮ್ಮ ಸ್ವಾರ್ಥ ಸುಖವೇ ಇದರ ಮೂಲ ಉದ್ದೇಶ. ಇದಕ್ಕೆ ಜೀವ ತೆಗೆಯುವುದೇ ಕೆಲಸ. ತನ್ನ ಜೀವ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದರೂ ಅನ್ಯರ ಜೀವ ತೆಗೆಯುವುದರಿಂದ ತನ್ನ ಉದ್ದಾರವಾಗುತ್ತದೆನ್ನುವ ಅಜ್ಞಾನ ಇವರಿಗಿರುತ್ತದೆ.
ಇದಕ್ಕೆ ಮಹಾತ್ಮರುಗಳು ತಿಳಿಸಿರೋದು ಅಜ್ಞಾನಕ್ಕಿಂತ ದೊಡ್ಡ ಶತ್ರು ಮಾನವನಿಗೆ ಬೇರೊಂದಿಲ್ಲ.
ಅಜ್ಞಾನ ಎಂದರೆ ತಿಳುವಳಿಕೆಯಿಲ್ಲದಿರೋದು ಮಾತ್ರವಲ್ಲ ಸತ್ಯದ ತಿಳುವಳಿಕೆ ಇಲ್ಲದಿರೋದಾಗುತ್ತದೆ.
ಎಷ್ಟು ಜೀವ ಹತ್ಯೆ ಮಾಡಿದರೂ ಆತ್ಮಕ್ಕೆ ಸಾವಿಲ್ಲ ಎಂದಾಗ ಹತ್ಯೆ ಮಾಡಿ ಪಾಪ ಕಟ್ಟಿಕೊಂಡು ಅನುಭವಿಸುವಬದಲು ಇದ್ದು ಸತ್ಯ ತಿಳಿಯುವುದೇ ಜೀವನದ ಗುರಿ.
ಇದನ್ನು ಸನಾತನಧರ್ಮ ತಿಳಿಸುತ್ತದೆ. ಕಣ್ಣಿಗೆ ಕಾಣದ ದೇವರು ಅಸುರರು ತಮ್ಮ ತಮ್ಮ ಕೆಲಸ ಮಾಡಿಕೊಳ್ಳಲು ಮಧ್ಯವರ್ತಿ ಮಾನವನನ್ನು ಆಡಿಸುವರು.ಗೊಂಬೆಯಂತೆ ಏನೂ ಅರಿವಿಲ್ಲದೆ ಕುಣಿಯುವುದರಿಂದ ಮನರಂಜನೆ ಸಿಗಬಹುದು.ಆದರೆ ಅದರ ಹಿಂದೆ ಧರ್ಮ ಸತ್ಯವಿಲ್ಲದೆ ಕುಣಿದರೆ ಆತ್ಮವಂಚನೆಗೆ ಗುರಿಯಾಗೋದನ್ನು ಯಾರೂ ತಪ್ಪಿಸಲಾಗದು.
ಭೂಮಿ ಒಂದು ಮಾಧ್ಯಮವಷ್ಟೆ.ಇಲ್ಲಿ ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಬೆಳೆಸಿದರೆ ಅದಕ್ಕೆ ತಕ್ಕ ಫಲ ಮನುಕುಲ ಅನುಭವಿಸಲೇಬೇಕೆನ್ನುತ್ತದೆ ಕರ್ಮ ಸಿದ್ದಾಂತ.
ಸತ್ಯವನ್ನು ಅಲ್ಲಗೆಳೆದಷ್ಟೂ ಅಲ್ಲ ಅಲ್ಲ ಎನ್ನುವವರೆ ಬೆಳೆಯೋದು.ಅಲ್ಲ ಎನ್ನುವ ನಕಾರಾತ್ಮಕ ಶಕ್ತಿ ಎಲ್ಲರಲ್ಲಿಯೂ ಇದೆ.ಕಾರಣ ಅಜ್ಞಾನ. ಅಜ್ಞಾನಕ್ಕೆ ಕಾರಣವೇ ಸಂಸ್ಕಾರರಹಿತ ಶಿಕ್ಷಣ.ಸಂಸ್ಕಾರವೆಂದರೆ ಶುದ್ದ ಮಾಡೋದು.ಯಾರನ್ನು ಯಾರು ಶುದ್ದಮಾಡಬೇಕು?
ಗುರು ಶಿಷ್ಯನನ್ನು ಶುದ್ದಗೊಳಿಸಬೇಕು.
ಮೊದಲಗುರು ತಾಯಿಮಗುವಿನ ತಪ್ಪು ತಿದ್ದಿ ಸರಿಪಡಿಸುವುದು ಧರ್ಮ ಹಾಗೆ ತಂದೆ ಹಿರಿಯರು,ಬಂಧು ಬಾಂಧವರು,ಸ್ನೇಹಿತರು....ಭಯ ಬಿಟ್ಟು ಸತ್ಯ ಧರ್ಮದ ಕಡೆಗೆ ನಡೆದು ನಡೆಸುವುದರಿಂದ ಭ್ರಷ್ಟಾಚಾರ ಯಾವುದು ಶಿಷ್ಟಾಚಾರ ಯಾವುದು ಸದ್ವಿದ್ಯೆ ಸುಜ್ಞಾನ ಯಾವುದೆನ್ನುವ ಬಗ್ಗೆ ಅರಿವಿಗೆಬರುತ್ತದೆ. ಭಯೋತ್ಪಾದನೆ ಹಿಂದಿರುವ ದುಷ್ಟ ಶಕ್ತಿಗಳಿಂದ ದೂರವಿರುವ ಜ್ಞಾನಬರುತ್ತದೆ. ಇಲ್ಲವೆಂದರೆ ಭಯ ಹುಟ್ಟಿಸುವವರೆ ಆಳಿದರೂ ತಿಳಿಯದೆಯೇ ಅವರಿಗೆ ಸಹಕಾರ ಕೊಟ್ಟು ಬೆಳೆಸುವ ಭಯೋತ್ಪಾದಕರ ಸಂಘಟನೆಗೆ ಬಲ ಬರುತ್ತದೆ.
ಹಣಕ್ಕಾಗಿ ಭಯ ಸೃಷ್ಟಿ ಮಾಡೋದು ಅಧರ್ಮ
ಸತ್ಯಧರ್ಮರಕ್ಷಣೆಗಾಗಿ ಭಯ ಸೃಷ್ಟಿ ಮಾಡೋದು ಧರ್ಮ.
ಇಲ್ಲಿ ಜೀವಾತ್ಮನಿಗೆ ಪರಮಾತ್ಮನ ದರ್ಶನ ಮಾಡಿಸಲು ಗುರು ಶಿಷ್ಯನಿಗೆ ಭಯ ಭಕ್ತಿಯ ಕಡೆಗೆ ನಡೆಸೋದು ದೇವರು.
ಇದನ್ನು ವಿರೋಧಿಸುತ್ತಾ ಮಕ್ಕಳನ್ನು ಅಜ್ಞಾನದೆಡೆಗೆ ನಡೆಸಿ ಅಂತರ ಬೆಳೆಸೋದು ಮಧ್ಯವರ್ತಿಗಳು. ಅಂತರದಲ್ಲಿ ನಿಂತು ಭಯ ಪ್ರಚಾರ ಮಾಡುತ್ತಾ ತಾವು ಸುಖವಾಗಿರೋರು ಯಾರು? ಯಾರು ಯಾವ ಗುಂಪಿಗೆ ಸಹಕರಿಸುವರೋ ಅವರ ಸೇವಕರು ಆಗಿರುವರು.
ಸೇವೆ ಎನ್ನುವ ಪದವನ್ನು ಅಪಾರ್ಥ ಮಾಡಿಕೊಂಡು ಆಳೋದು ಅಧರ್ಮ. ಪರಮಾತ್ಮ ತಿಳಿಸಿದಂತೆ ನಿಸ್ವಾರ್ಥ ನಿರಹಂಕಾರದಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಯಾರು ಯಾವ ರೀತಿಯಲ್ಲಿ ಸೇವೆ ಮಾಡಿದರೂ ನನ್ನನ್ನೇ ಸೇರುವರು ಎಂದರೆ ನಮಗೇ ತಿಳಿಯದೆಯೇ ಸೇವೆ ನಡೆಯುತ್ತದೆ. ಆದರೆ ಕಣ್ಣಿಗೆ ಕಾಣೋದು ಮಾತ್ರ ಮಾನವರಷ್ಟೆ.ಅವನೊಂದಿಗೆ ಯಾವ ರೂಪದಲ್ಲಿ ಯಾವ ಶಕ್ತಿ ಇರುವುದೋ ಯಾರಿಗೂ ತಿಳಿಯದು.ಸದ್ಗುರು ಸೇವೆ ಇದ್ದಂತೆ ದುಷ್ಟರ ಸೇವೆಯೂ ಜನ ಮಾಡುವರು.
ಭ್ರಷ್ಟಾಚಾರ ಎಂದು ತಿಳಿದರೂ ಅದರೊಂದಿಗೆ ಕೆಲಸ ಮಾಡಿ ತಮ್ಮ ಸಂಸಾರ ನಡೆಸೋದು ಇಂದು ಸಾಮಾನ್ಯರಿಗೆ ಅನಿವಾರ್ಯವಾಗಿದೆ.ಆದರೆ ಅದರ ಫಲವೂ ಜೊತೆಗೆ ಬರುವುದರಿಂದ ಕಷ್ಟ ನಷ್ಟವನ್ನು ಅನುಭವಿಸಲೇಬೇಕು.
ಕರ್ಮಕ್ಕೆ ತಕ್ಕಂತೆ ಫಲ.
ಪರಮಾತ್ಮನ ಅರಿವಿಲ್ಲದೆ ಏನು ಮಾಡಿದರೂ ಕರ್ಮ ವೆ.
ಅರಿತೂ ಧರ್ಮ ರಕ್ಷಣೆಗಾಗಿ ಮಾಡಿದರೆ ಅದರ ಫಲವನ್ನು ಸ್ವಯಂ ಪರಮಾತ್ಮನೇ ಅನುಭವಿಸುವನೆಂದು ಹಲವು ಪುರಾಣ ಕಥೆಗಳಲ್ಲಿದೆ. ಹೀಗಾಗಿ ಲೋಕಕಂಠಕರನ್ನು ಅಧರ್ಮ ವನ್ನು ಸದೆಬಡಿಯಲು ಯುದ್ದಗಳಾಗಿವೆ. ಸಾವು ನೋವುಗಳಾಗಿವೆ.
ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು ಎನ್ನುವುದು ಸತ್ಯವಾದಾಗ. ಈಗಿನ ಪರಿಸ್ಥಿತಿ ಯು ಪರಮಾತ್ಮನ ಇಚ್ಚೆಯೇ ಕಾರಣವೆಂದಾಯಿತು.
ಪರಮಾತ್ಮ ಇರೋದೆಲ್ಲಿ? ಚರಾಚರದಲ್ಲಿಯೂ ಇರುವ ಶಕ್ತಿಯನ್ನು ಕಾಣಲಸಾಧ್ಯ. ಆದರೆ ಇದನ್ನು ಸದ್ಬಳಕೆ ಮಾಡಿಕೊಂಡು ಜೀವನ ನಡೆಸೋದೇ ಮಾನವನಿಗೆ ಕಷ್ಟ ಎಂದಾಗ ದುರ್ಭಳಕೆ ಮಾಡಿಕೊಂಡು ಆಳೋರು ಬೆಳೆಯುವರು. ಅವರಿಗೆ ಸಹಕಾರ ಕೊಟ್ಟರೆ ಸಂಕಷ್ಟ ತಪ್ಪಿದ್ದಲ್ಲ.
ಸತ್ಸಂಗದಿಂದ ನಿಸ್ಸಂಗದೆಡೆಗೆ ಸಾಗಿದವರು ಮಹಾತ್ಮರಾದರು.
ಸತ್ಸಂಗದೊಳಗಿದ್ದೂ ದುಷ್ಟರಿಗೆ ಸಹಕಾರ ಕೊಟ್ಟವರೆ ಅಸುರರು.
No comments:
Post a Comment