ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Friday, May 16, 2025

ಅಣು ಪರಮಾಣುಗಳ ಶಸ್ತ್ರ ಅಸ್ತ್ರ ಬಾಣಗಳ ಅಸ್ತ್ರ ಶಸ್ತ್ರ

ಹಿಂದಿನ ಯುದ್ದಕ್ಕೆ ಬಳಸುತ್ತಿದ್ದ ಅಸ್ತ್ರ ಶಸ್ತ್ರ ಸಾಮಾಗ್ರಿಗಳ ಹಿಂದೆ  ಬಹಳಷ್ಟು ದೈವೀಕ ಶಕ್ತಿ ಅಡಗಿದ್ದು ಮಂತ್ರದಿಂದ ದೇವತೆಗಳ ಸಹಕಾರ ಪಡೆದು  ಅಸುರರ  ವಧೆಯಾಗಿತ್ತು.
ಆದರಿಂದು ಮಂತ್ರವಿಲ್ಲ ಯಂತ್ರವಿದೆ. ಯಂತ್ರದಿಂದ  ಅಣು ಪರಮಾಣುಗಳಿವೆ.‌ಇದರಲ್ಲಿಯೂ  ಅಡಗಿರೋದು ಆ ಭಗವಂತನ ಶಕ್ತಿಯೇ ಆಗಿದೆ. ಅಂದು ನೇರವಾಗಿ ಯುದ್ದ ನಡೆದರೆ ಇಂದು ದೂರದಿಂದಲೇ ನಡೆಯುತ್ತದೆ.‌ ಪರೋಕ್ಷವಾಗಿ  ನಾನೇ  ಯುದ್ದ ಮಾಡೋದೆನ್ನುವ ಭಾವನೆ ಇದ್ದರೂ ಅದರ ಹಿಂದೆ ಅಗೋಚರ ಶಕ್ತಿಯ ಕೈವಾಡವೇ ಹೆಚ್ಚಾಗಿರುತ್ತದೆ.
ಜನಸಾಮಾನ್ಯರಿಗೆ  ಕಾಣೋದು  ಕೇವಲ ಅರ್ಧ ಸತ್ಯ.ಪೂರ್ಣ ಸತ್ಯ ಬೇರೆಯೇ ಇರುತ್ತದೆ. ಒಟ್ಟಿನಲ್ಲಿ ಯುದ್ದ ಯುಗಯುಗದಿಂದಲೂ ನಡೆಯುತ್ತಿದೆ. ಅಂದು ತತ್ವವಿತ್ತು ಇಂದು ತಂತ್ರವಿದೆ. ಯಾರದ್ದೋ ಕುತಂತ್ರಕ್ಕೆ ಯಾರದ್ದೋ ಜೀವಬಲಿ. ಇದರಿಂದಾಗಿ ಸ್ವತಂತ್ರ ವಾಗಿರುವ‌ ನಿಜವಾದ ಭ್ರಷ್ಟ ದುಷ್ಟರನ್ನು  ಗಮನಿಸಲೂ ಸಾಧ್ಯವಾಗದು. ಕಾರಣ ಯುದ್ದಕ್ಕೆ ಕರೆಕೊಡೋದು ರಾಜಕೀಯ. ನಡೆಸೋದೂ ರಾಜಕೀಯ ಮಾಡೋರು ಮಾತ್ರ ಸಾಮಾನ್ಯರು ಎನ್ನುವಂತೆ ವರ್ತನೆ ಮಾಡುವ  ಪ್ರತಿ ಪಕ್ಷದ ರಾಜಕೀಯತೆ ಮನೆ ಮಾಡಿರೋದು ದುರಂತವೇ ಸರಿ.
ದೇಶಕ್ಕಾಗಿ ಹೋರಾಡುವ ಸೈನಿಕರ ಜೀವಕ್ಕೂ ದೇಶವಾಳುವ ನಾಯಕರಿಗೂ  ವ್ಯತ್ಯಾಸ ಬೆಳೆದರೆ  ಮಧ್ಯವರ್ತಿಗಳು  ತಮ್ಮ ಬೇಳೆ ಬೇಯಿಸಿಕೊಂಡು ತಿರುಗುವರು.
ಒಟ್ಟಿನಲ್ಲಿ ದ್ವೇಷಕ್ಕೆ  ದ್ವೇಷ ಬೆರೆಸೋದು ದೊಡ್ಡ ಬಾಂಬ್.ಈ ಬಾಂಬ್  ಪ್ರತಿದಿನವೂ ಸಿಡಿಸೋದೆ ಮಧ್ಯವರ್ತಿಗಳ ಕೆಲಸ.
ಅದರಿಂದ  ದೇಶವೇ ಹತ್ತಿ ಉರಿಯಬಹುದೆನ್ನುವ ಸಾಮಾನ್ಯಜ್ಞಾನದ ಕೊರತೆಯೇ ಎಲ್ಲಾ  ರಾಜಕೀಯದ ತಂತ್ರ.
ಯಾರು ಆಳಿದರೇನು ಬಂತು  ಜ್ಞಾನವಿಲ್ಲವಾದರೆ  ಪರಮಾತ್ಮನ ಅರಿಯಲಾಗದು. ವೀರಸ್ವರ್ಗ ಸೇರೋರಿಗೆ  ಯುದ್ದವೇ  ಮುಖ್ಯ. ನರಕ ತೋರಿಸುವುದೊಂದು ಸಾಧನೆಯೆ?  ಯಾರದ್ದೋ ಕುಟುಂಬ  ಯಾರದ್ದೋ ದ್ವೇಷಕ್ಕೆ ಬಲಿಯಾದರೆ  ಏನರ್ಥ?
ಸಂಧಾನ ಮಾಡಿಕೊಂಡರೂ  ಶತ್ರುಗಳಿಗೆ ಸಮಾಧಾನವಿಲ್ಲ. ಯುದ್ದ ಸಮಾಧಾನದಲ್ಲಿ ಯಾವತ್ತೂ ನಡೆಯೋದಿಲ್ಲ.
ಅದಕ್ಕೆ ಹೇಳೋದು  ತಾಳಿದವನು ಬಾಳಿಯಾನು.
ಅತಿಯಾದ ತಾಳ್ಮೆಯೂ‌ ಬಾಳನ್ನು ಹಾಳು ಮಾಡುತ್ತದೆ.
ಅದರ ಫಲವೇ ಭಯೋತ್ಪಾದನೆ.
ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ‌ಕಡ್ಡಿಯೂ ಅಲ್ಲಾಡದು ಎಂದಾಗ ಯುದ್ದವೂ ಇದರಲ್ಲಿ ಒಂದು.

No comments:

Post a Comment