ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Friday, May 9, 2025

ಧರ್ಮ ಯಾವುದು ದೇವರೆಲ್ಲಿ?

ಧರ್ಮ ಮತ್ತು ದೇವರು ಒಂದೆಯೇ ಬೇರೆಯೆ?

ಧರ್ಮ ವಿರೋದು ದೇವರನ್ನು ಬೆಳೆಸೋದರಲ್ಲಿಯೇ ಅಥವಾ ‌ಬಳಸೋದರಲ್ಲಿಯೆ?
 ದೇವರನ್ನು ಬೆಳೆಸೋದು‌ ಮಾನವರು. ಬಳಸೋದು ಅಸುರರು. ಹಾಗಾದರೆ ನಾವ್ಯಾರು?
ಯಾರು ದೇವರ ಹೆಸರಿನಲ್ಲಿ ಅಸತ್ಯ ಅಧರ್ಮ ಅನ್ಯಾಯ ಭ್ರಷ್ಟಾಚಾರ. ಭಯೋತ್ಪಾದನೆ ಬೆಳೆಸಿರುವರೋ ಅವರಲ್ಲಿ ದೈವತ್ವವೇ ಇರೋದಿಲ್ಲ.
ಜನಸಾಮಾನ್ಯರ ಒಳ್ಳೆಯ ಗುಣಜ್ಞಾನವನ್ನು ಬೆಳೆಸದೆ ದೇವರನ್ನು ಅಡ್ಡ ನಿಲ್ಲಿಸಿ ದೇವರನ್ನು ಆಳೋದರಿಂದ ಧರ್ಮ ನೆಲೆಸೋದಿಲ್ಲ.
ಅವರವರ ಮೂಲದ ಧರ್ಮ ಕರ್ಮ ದಲ್ಲಿ ‌ ನಿಂತು  ಶ್ರದ್ದೆ ಭಕ್ತಿಯಿಂದ  ಜೀವನದ ಸತ್ಯವರಿತವರು ಮಹಾತ್ಮರಾದರು.
ಆದರೆ ಇಂದು ಅದನ್ನು ಬಿಟ್ಟು ಹೊರಗೆ ಬಂದು ದೇವರನ್ನು ಬೆಳೆಸಿ  ಜನರನ್ನು ‌ಮನೆಯಿಂದ ಹೊರಗೆಳೆದರೆ  ದೇವರು ಕಾಣುವನೆ?
ಹಿಂದೂ  ದೇವತೆಗಳನ್ನು  ಅನ್ಯ ಧರ್ಮದವರು ದೇವರಲ್ಲ ಎಂದರು. ಆ ಅಲ್ಲನ‌ ಹಿಂದೆ ಹೋದವರು ಇಲ್ಲವಾದರು.
ಇಲ್ಲವಾದವರನ್ನು ಮತ್ತೆ  ಮತ್ತೆ ಭೂಮಿಗೆಳೆದರೆ  ಅವರ ಹಿಂದಿನ ಕರ್ಮ  ಅಳಿಯುವುದೆ? 

ಒಟ್ಟಿನಲ್ಲಿ ನಾವು ಯಾರ ಹಿಂದೆ ‌ನಡೆದೆವೋ ಅದೇ‌ಗುಣ ಜ್ಞಾನ ನಮ್ಮನ್ನು ನಡೆಸಿರುವಾಗ  ಅವರಲ್ಲಿ ದೈವತ್ವ ವಿತ್ತೆ ಅಸುರತ್ವ ಇತ್ತೆ ಎನ್ನುವ ಬಗ್ಗೆ ನಾವೇ ಚಿಂತನೆ ನಡೆಸಿದರೆ  ಯಾಕಿಷ್ಟು  ದ್ವೇಷ ಭಿನ್ನಾಭಿಪ್ರಾಯ ಸೇಡು ? ಯಾರಿಂದ ‌ಜನ್ಮ‌ಪಡೆದಿದೆ. ಇದರಿಂದ ಯಾರಿಗೆ ಶಾಂತಿ ಸಿಕ್ಕಿದೆ? ಈ ಪ್ರಶ್ನೆಗೆ ದೇವರು ಉತ್ತರ ಕೊಡೋದಿಲ್ಲ.ಕಾರಣ ಅಸುರರಿಗೆ ಸಹಾಯ ಮಾಡಿದವರೆ ಅವರೊಳಗೆ ಸೇರಿಕೊಂಡಾಗ  ಅಸುರರೊಳಗೆ ಸುರರು, ಕಣ್ಣಿಗೆ ಕಾಣುವರು.

ದೇವರು ನಮಗೆ ಎಲ್ಲಾ ಕೊಡಬಹುದು.ಆದರೆ ದೇವ ಋಣ ತೀರಿಸುವ ಜ್ಞಾನವನ್ನು ನಾವೇ ಸಂಪಾದನೆ ಮಾಡಿಕೊಳ್ಳಬೇಕಿದೆ.‌ಹೀಗಿರುವಾಗ ಮಾನವರಾಗಿರುವ  ಜೀವಾತ್ಮರಿಗೆ  ದೈವತ್ವದ ಶಿಕ್ಷಣ ಜ್ಞಾನ ಕೊಡಲು ಅಂತರಂಗ ಶುದ್ದಿ ಅಗತ್ಯವೆಂದರು. ಆದರೆ ಇದು ಅಂತರ ಬೆಳೆಸಿದಷ್ಟೂ ಅವಾಂತರಕ್ಕೆ ಹೋಗುವುದೂ ಅಷ್ಟೇ ಸತ್ಯ.
ಯಾವುದೂ ರಾಜಕೀಯಕ್ಕೆ ಬಳಸಿದರೆ  ವಿನಾಶವೇ ಗತಿ.
ರಾಜಕೀಯ ಹೊರಗಿದೆ ರಾಜಯೋಗ‌ಒಳಗಿದೆ. ರಾಜಯೋಗದಿಂದ ರಾಜಕೀಯದೆಡೆಗೆ  ನಡೆದವರು ವಿವೇಕಾನಂದರು. ಯಾರನ್ನು ಯಾರು ಆಳಬೇಕಿತ್ತು ಆಳದೆ  ಇನ್ಯಾರೋ  ಮಧ್ಯೆ ಪ್ರವೇಶ ಮಾಡಿದರೆ  ಆಗೋದು ಹೀಗೆ.
 ನೀತಿ ಶಿಕ್ಷಣ ಕೊಡದೆ ಆಳೋದರಲ್ಲಿ ಅರ್ಥ  ವಿರದು.
ಒಟ್ಟಿನಲ್ಲಿ ವ್ಯವಹಾರಕ್ಕೆ ಇಳಿದಾಗ ದೇವರೂ  ಅಸುರರ ವಶವೆ. ಕಾರಣ ಹಣ ಹೆಚ್ಚಾಗಿರೋದು ಅಸುರರಲ್ಲಿಯೇ.
ಭೂಮಿಯ ಋಣ ತೀರಿಸಲು  ಜ್ಞಾನದಿಂದ ಸಾಧ್ಯವಾದರೆ ಸುಜ್ಞಾನದಿಂದ ಹೆಚ್ಚಿನ ಹಣಗಳಿಸಲಾಗದು. ಅದರಲ್ಲೂ ವಿದ್ಯೆ ಮಾರಾಟದ ವಸ್ತುವಲ್ಲ ಎನ್ನುವ ಸನಾತನಧರ್ಮದಲ್ಲಿ ಸರಿಯಾಗಿ ನಡೆದವರು‌ ಹಣವನ್ನು ದಾನ ಮಾಡಿ ಹೋದರು.
ಆ ದಾನದ ಹಣ  ಸಂಗ್ರಹಿಸಿಟ್ಟುಕೊಂಡು‌  ಮಾನವರು ಬೆಳೆದು  ರಾಜಕೀಯಕ್ಕೆ ಇಳಿದಾಗ  ಜನರ ಜ್ಞಾನ ಕಾಣದೆ ಅಜ್ಞಾನ ಬೆಳೆಯಿತು .ಅಗೋಚರ ಶಕ್ತಿಯಾಗಿರುವ ದೇವಾಸುರರು ಎಲ್ಲರಲ್ಲಿಯೂ ಅಡಗಿರುವರು.ಆದರೆ ದೇವರಾಗಲು ಹಣ ಬೇಕೆಂದರೆ ಜ್ಞಾನಿಗಳಲ್ಲಿ ಹಣವಿಲ್ಲ.
ಹಣವಿದ್ದವರಲ್ಲಿ ಜ್ಞಾನವಿಲ್ಲ. ಜ್ಞಾನ ಎಂದರೆ ತಿಳುವಳಿಕೆ ಎಂದಾಗ ಇದರಲ್ಲಿ ಸತ್ಯ ಮಿಥ್ಯ ಎನ್ನುವುದಿದೆ. ಸತ್ಯ ತಿಳಿದಾಗ  ಹಣದ ಮೇಲಿನ‌ ವ್ಯಾಮೋಹ ನಾಶವಾಗುತ್ತದೆ.
ಮಿಥ್ಯದೆಡೆಗೆ ಸಾಗಿದಾಗ ಎಷ್ಟು ಹಣವಿದ್ದರೂ ಸಾಲದು.
ಅಂದರೆ ಸಾಲವಾಗೇ ಬೆಳೆಯುತ್ತದೆ. ಆ ಸಾಲ ತೀರಿಸಲು ದೇವರನ್ನು ಕೇಳಿದರೆ  ಹಣ ಸಿಗಬಹುದು ಆದರೆ ಅದೂ ಹೊರಗಿನ ಸಾಲವೇ ಆಗಿರುತ್ತದೆ. ಸಾಲ ತೀರಿಸದಿದ್ದರೆ ಕಷ್ಟ. ಒಟ್ಟಿನಲ್ಲಿ  ದೇವರ ಸಾಲ ತೀರಿಸಲು ಜ್ಞಾನ ಬೇಕು.
ಅಸುರರ ಸಾಲ ತೀರಿಸಲು ವಿಜ್ಞಾನ ಬೇಕು.
ವಿಜ್ಞಾನ ಹೆಚ್ಚಾದಷ್ಟೂ  ಮಾನವನಿಗೆ ಅಹಂಕಾರ ಸ್ವಾರ್ಥ ಹೆಚ್ಚುವುದು. ಇವೇ‌ನಿಜವಾಗಿಯೂ ಮಾನವನೊಳಗಿರುವ ಹಿತಶತ್ರುಗಳೆಂದಿರುವರು.ಒಳಗೇ ಶತ್ರುವಿರೋವಾಗ ಹೊರಗಿನ ಶತ್ರು ನಾಶ ಮಾಡಿದರೂ ಒಳಗಿನವರು ಬೆಳೆಯುವರು. 
ಪರಮಾತ್ಮನಿಗೆ ಯಾರೂ ಶತ್ರುವಲ್ಲ.ಮಿತ್ರರೂ ಇಲ್ಲ.
ಜೀವವಿರೋವರೆಗೆ ಹೋರಾಟ ಹಾರಾಟ ಮಾರಾಟದಲ್ಲಿ ಮೈ‌ಮರೆತ ಮಾನವನಿಗೆ ದೇವರು ಕಂಡಿಲ್ಲ.ಕಾಣಿಸೋದು ಇಲ್ಲ.ಕಂಡವರು ತೋರಿಸಲಾಗಿಲ್ಲ.ಕಾರಣವಿಷ್ಟೆ ಒಳಗಿರುವ ದೇವರನ್ನು  ದೈವತ್ವದಿಂದ ಸತ್ಯ ಧರ್ಮದಿಂದ ಮಾತ್ರ ಕಾಣಬಹುದು. ಹೀಗಾಗಿ ಕಾಣದ ದೇವರಿಗಾಗಿ  ಹುಡುಕೋದೆ ಮಾನವನ ಕೆಲಸ. ಹೊರಗೆ ಹುಡುಕಿದರೆ ಸಿಗುವನೆ?

ನಿರಾಕಾರ ಬ್ರಹ್ಮನ ಅರಿವಿದ್ದರೆ  ಬ್ರಹ್ಮಾಂಡದ ರಹಸ್ಯವರಿತರೆ ಅದೇ ಬ್ರಹ್ಮಜ್ಞಾನ.
ಒಟ್ಟಿನಲ್ಲಿ ತಾಯಿಯೇ ದೇವರು ಎಂದರೆ ಜನ್ಮವಿಲ್ಲದಿದ್ದರೆ ದೇವರನ್ನು ನೋಡೋದಾಗಲಿ ಹುಡುಕೋದಾಗಲಿ ಅರಿಯೋದಾಗಲಿ ಸಾಧ್ಯವಿತ್ತೆ? ಮೂಲ ದೇವರನ್ನೇ ಅಪಾರ್ಥ ಮಾಡಿಕೊಂಡರೆ ಅಥವಾ ಮೂಲ ದೇವರಿಗೆ ಅಜ್ಞಾನ ಆವರಿಸಿದರೆ  ಹೊರಗಿನ ದೇವರೆ ಆಳೋದು. ಆಳೋರೂ ಒಂದು ರೀತಿಯ ಆಳುಗಳೆ ಸೇವಕರೆ ಆದಾಗ ಯಾರ ಸೇವಕರು? ಪರಮಾತ್ಮನ ಸೇವಕರಾದರೆ ಉತ್ತಮ.
ಪರಕೀಯರ ಸೇವಕರಾದರೆ ಅಧಮ. ಇಲ್ಲಿ ಮಾನವನ ಗುರಿ  ಯಾವ ಗುರುಗಳ ಹಿಂದೆ ನಡೆದಿದ್ದಾನೋ ಅದರ ಮೇಲೆ ನಿಂತಿದೆ.
ಬೇಲಿಯೇ ಎದ್ದು ಹೊಲಮೇಯ್ದರೆ  ಅಸುರಗುರು.
ಹೆಣ್ಣು ಹೊನ್ನು ‌ಮಣ್ಣಿನಿಂದ‌ ದೂರವಿದ್ದವರು ಮಹರ್ಷಿಗಳಾದರು. ಮಹಾಋಷಿಗಳ  ಪೀಳಿಗೆ ಇಂದಿಗೂ  ದೇವರನ್ನು ಹೊರಗೆ ಹುಡುಕುತ್ತಿರೋದು ಕಲಿಯುಗದ ಪ್ರಭಾವ. ಸಿಕ್ಕಿದರೆ ಮಾತ್ರ ಸತ್ಯದರ್ಶನ. ಸತ್ಯ ಹೇಳದೆ ಕೇಳದೆ ಇದ್ದರೆ  ಸತ್ಯ ಅರ್ಥ ವಾಗದು.ಅನುಭವಿಸಿಯೇ ಸತ್ಯ ಅರಿಯಬೇಕೆಂದವರು ಮಹಾತ್ಮರಾದರು.ಮಹಾರಾಜರಾಗಿದ್ದರು. ಈಗ ನಾವೆಲ್ಲರೂ ಮಹಾಪ್ರಜೆಗಳಷ್ಟೆ.  ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೊಳಗೆ ದೈವತ್ವದ ಗುಣಜ್ಞಾನ ಇದ್ದರೆ  ಭಾರತವೇ ಗುರು. ಯಾವಾಗ ಭಾರತೀಯ ಶಿಕ್ಷಣದಿಂದ ದೂರವಾದರೂ ಆಗಲೇ ಅಸುರರು ಒಳಗೆ ಸೇರಿದರು. 
ಅಂದಿನ ಋಷಿಮುನಿಗಳು ಸಾದು ಸಂತ ದಾಸ ಶರಣರಲ್ಲಿದ್ದ  ಸತ್ಯಜ್ಞಾನವೆಲ್ಲಿ ಇಂದಿನ‌ಮಿಥ್ಯಜ್ಞಾನವೆಲ್ಲಿ? ಇವೆರಡರ ನಡುವಿರುವ ಸಾಮಾನ್ಯ ಜ್ಞಾನದಿಂದ  ದೈವತ್ವ ದೆಡೆಗೆ ಮಾನವರು ನಡೆಯಬಹುದು.
"ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮ ಒಂದಿದ್ದರೆ ಸಾಕೋ"

No comments:

Post a Comment