ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Monday, May 5, 2025

ದೇವರು ಇರೋದೆಲ್ಲಿ?

ಮುಖ್ಯ ದೇವತೆಗಳಿಗೆ  ಮುಕ್ತಿ ಸಿಕ್ಕಿದೆ ಅಸುರರಿಗೆ ಮುಕ್ತಿ ಸಿಗದೆ ಅತೃಪ್ತ ಆತ್ಮಗಳಾಗಿ ಭೂಮಿಯಲ್ಲಿಯೇ ಉಳಿದಿವೆ. ಇದನ್ನು ಸರಿಪಡಿಸಲು ದೈವೀಕ  ಶಿಕ್ಷಣಜ್ಞಾನವನ್ನು ಕೊಡುವುದು ಧರ್ಮ. ಇಲ್ಲದಿದ್ದರೆ ಅಸುರರೆ ಬೆಳೆಯುತ್ತಾ ದೇವರನ್ನು ಆಳುವರು. ಹಾಗಾದರೆ ದೇವರಿರೋದೆಲ್ಲಿ? ಒಳ್ಳೆಯ ಗುಣದಲ್ಲಿ  .ಜ್ಞಾನವೇ ಸರಿಯಿಲ್ಲದೆ ವಿಜ್ಞಾನ ‌ಬೆಳೆಸಿದರೆ  ಅಜ್ಞಾನವೇ ಬೆಳೆಯೋದು.
ಅಜ್ಞಾನ ವೆಂದರೆ ಸತ್ಯ ಧರ್ಮ ವಿಲ್ಲದ  ತಿಳುವಳಿಕೆಯಷ್ಟೆ.
ಏನೂ  ಅರಿಯದವನಲ್ಲಿರುವ ದೈವೀಕ ಶಕ್ತಿಗೂ ಎಲ್ಲಾ ತಿಳಿದವನಲ್ಲಿನ ದೈವಭಕ್ತಿಗೂ ಅಂತರವಿದೆ. ಮಧ್ಯೆ ನಿಂತಿರುವ ದೇವರಂತೆ‌ನಟಿಸುವ ಮಾನವರೆ ದೇವರೆಂದರೆ ಅನರ್ಥಕ್ಕೆ ದಾರಿಯಾಗುತ್ತದೆ. 

ಎಲ್ಲೋ ಕೆಲವರು  ಬದಲಾವಣೆ ಬಯಸಿದ್ದರೂ ಅದಕ್ಕೆ ಸರಿಯಾದ ಸಹಕಾರವಿಲ್ಲದೆ ಹಿಂದುಳಿದಿರುವರು. ಕೆಲವು ಕಡೆ  ಬದಲಾಗುತ್ತಿದೆ  ಇದನ್ನು ಜನಸಾಮಾನ್ಯರಿಗೆ ತಲುಪಿಸುವುದರಲ್ಲಿ ಮಧ್ಯವರ್ತಿಗಳು ಸೋತಿರುವರು.
ಎಷ್ಟೇ ವಿಷಯ ತಲುಪಿಸಿದರೂ ಮನೆಯೊಳಗೆ ಸಹಕಾರ ಇಲ್ಲದಿದ್ದರೆ  ಏನೂ ಮಾಡಲಾಗದು. ಆಗ ಒಳಗಿದ್ದೇ ಉತ್ತಮ ಕಾರ್ಯ ನಡೆಸುತ್ತಾ  ದೇವರೆಡೆಗೆ ಸಾಗುವ ಸ್ವಾತಂತ್ರ್ಯ ಇದ್ದರೆ ಅದೇ  ಪುಣ್ಯ.ಪುಣ್ಯಕ್ಕೆ ಪುಣ್ಯಕ್ಷೇತ್ರ  ದರ್ಶನಗಳಿವೆ.‌ಆದರೆ ಎಲ್ಲಾ ದೇಶದೊಳಗೆ ಇದ್ದರೂ ಪಾಪಿಷ್ಟರು ಬೆಳೆದಿರಲು ಕಾರಣ  ಒಳಗಿನ ಪಾಪ ಕಳೆಯಲು ಪುಣ್ಯಕ್ಷೇತ್ರ ಕ್ಕೆ ಹೋಗುವರು. ಇದರ ಬದಲು ಪಾಪ ಮಾಡದೆ ಇದ್ದಲ್ಲಿ ಪುಣ್ಯಕಾರ್ಯ ನಡೆಸಿದರೆ‌ ದೈವಭೂಮಿಯಾಗಿರುತ್ತದೆ
ಮನಸ್ಸು ದೇವಾಲಯವಾದರೆ ಅಸುರರು ಯಾರನ್ನು ಓಡಿಸುವರು? ಯಾವಾಗ ಮನಸ್ಸನ್ನು ಹರಿದಾಡಿಸುತ್ತಾ ಹೊರಗೆ.ಮನುಷ್ಯ ತಿರುಗುವನೋ ಅದೇ  ಮನುಸ್ಸು ಅಸುರರ ವಶವಾಗಿರುತ್ತದೆ.  ಹಿಂದೆ ನಡೆಯುವಾಗ ಮುಂದೆ ಯಾರಿರುವರು ಎನ್ನುವ ಜ್ಞಾನ ಅಗತ್ಯವಿದೆ. ಸದ್ಗರುಗಳಿದ್ದರೆ ಸತ್ಸಂಗದಲ್ಲಿ ದೇವರನ್ನು ಕಾಣಬಹುದು.

ದೇವರನ್ನು ಗುಡಿಯೊಳಗೆ ಕಾಣೋದಕ್ಕೆ ಸರದಿಸಾಲಿನಲ್ಲಿ ನಿಲ್ಲುವ ಜನರೊಳಗೇ ಇರುವ ದೈವತ್ವಕ್ಕೆ ಸರಿಯಾದ ಗುರು ಶಿಕ್ಷಣ ಕೊಡಲು ತಯಾರಿಲ್ಲವೆಂದರೆ  ಅಸುರ ಶಕ್ತಿಗೆ ಬೇಕಿರೋದು ಆಳೋದಷ್ಟೆ.

ಸತ್ಯವೇ ದೇವರೆಂದರು ಸತ್ಯ ಬಿಟ್ಟು ದೇವರನ್ನು ಯಾರು ಕಂಡರು? ದೇವರು ಒಳಗೇ ಇರುವನೆಂದರು ಹೊರಗೆಳೆದು ದೇವರನ್ನು  ಬೆಳೆಸಿದವರು ಮಾನವರಾದರು. ಮಾನವನೊಳಗೇ ಅಸುರಿಗುಣವಿದ್ದರೆ ಸ್ವಾರ್ಥ ದ ಅಹಂಕಾರದಿಂದ  ಜನರನ್ನು ಆಳುವರಷ್ಟೆ. ಹೀಗೇ ಸರಳವಾಗಿ ಅರ್ಥ ಮಾಡಿಕೊಳ್ಳಲು  ಒಳಗಿರುವ  ಅಸುರಿ ಶಕ್ತಿ  ಬಲವಾಗಿದ್ದರೆ  ದೇವರು ಕಾಣೋದಿಲ್ಲ.
ಶ್ರೀ ಸ್ವಾಮಿ ವಿವೇಕಾನಂದರು  ಗುರುವನ್ನು ಅರಸುತ್ತಾ ಹೋಗಿದ್ದು  ಇದೇ ಪ್ರಶ್ನೆ ಹಿಡಿದು.ನೀವು ದೇವರನ್ನು ಕಂಡಿರುವಿರೆ? ಎಲ್ಲಿದ್ದಾನೆಂದು ತೋರಿಸಿ ಎಂದು.ಕೊನೆಗೆ ರಾಮಕೃಷ್ಣ ಪರಮಹಂಸರು  ಅವರಿಗೆ ದೇವರ ಅಸ್ತಿತ್ವ ತಿಳಿಸಿ ನೀನೇ  ಒಳಗೆ ನೋಡಬೇಕೆಂದರು..ಈಗಲೂ ‌ಮಕ್ಕಳು ಕೇಳಿದರೆ ಯಾರೂ ಉತ್ತರ‌ನೀಡುವವರಿಲ್ಲ. ಹೊರಗೆ ತೋರಿಸುವವರೆ  ಎಲ್ಲಾ. ಹೀಗೆ ಹೊರಗೆ ದೇವರು ಹೋದರೆ‌ಒಳಗಿನ  ದೇವರನ್ನು ನೋಡೋರು ಯಾರು?

ಮೊದಲು ಮಾನವೀಯತೆ ಅರ್ಥ ವಾದರೆ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.
ಕೇಳಿದ್ದೆಲ್ಲಾ ಕೊಡೋದು ದೇವರಲ್ಲ. ಏನು ಕೇಳಿದರೆ ದೇವರು  ಕಾಣುವರೆನ್ನುವ ಜ್ಞಾನದ ಮೇಲೇ ಎಲ್ಲಾ ನಿಂತಿದೆ. ಅಂತಹ ಜ್ಞಾನವನ್ನು ಹಿಂದೆ ತಳ್ಳಿ ಮುಂದೆ ಮುಂದೆ ನಡೆದವರು ದೇವರಲ್ಲ. ಇಲ್ಲಿ  ದೇವತೆಗಳಿಗೇ ದೇವರಾಗುವವರು, ಮಾನವರಿಗೆ ದೇವರಾಗುವವರು,ಅಸುರರಿಗೆ ದೇವರಾಗುವವರು  ಅವರವರ ಇಷ್ಟಕಷ್ಟದಂತಿರುವರು.
ಆದರೆ ಸ್ವತಂತ್ರ ವಾಗಿರುವ ಆತ್ಮವೇ ದೇವರೆಂದವರು ಕಣ್ಣಿಗೆ ಕಾಣುತ್ತಿಲ್ಲ. ಎಲ್ಲರಲ್ಲಿಯೂ ಅಡಗಿರುವ ಈ ಚೇತನಾಶಕ್ತಿಯ ಪ್ರಕಾರ  ಎಲ್ಲಾ ನಡೆಯಲಾಗಿಲ್ಲ. ಎಲ್ಲರಲ್ಲಿಯೂ ವಿಶೇಷವಾದ ಸುಜ್ಞಾನದ ಜೊತೆಗೆ ವಿಜ್ಞಾನ ವಿದ್ದರೂ ಗುರುತಿಸುವ ಗುರುಗಳಿಲ್ಲದ ಶಿಕ್ಷಣ ದಿಂದ  ಹೊರಗೆ ದೇವರನ್ನು  ಬೇಡೋರೆ ಎಲ್ಲಾ.
ಹೊರಗಿನಿಂದ ಎಷ್ಟು ಬೇಡಿದರೂ  ಅದು ಶಾಶ್ವತವಾಗಿರಲ್ಲ.

ಕಣ್ಣಿಗೆ ಕಾಣದ ಎಷ್ಟೋ ದೈವೀಕಶಕ್ತಿ ಇರುವ ಕಾರಣದಿಂದ ಇಂದು ಮನುಕುಲ ಉಳಿದಿದೆ. ಮನಸ್ಸಿನ ನಿಗ್ರಹವು ಯೋಗವಾಗಿದೆ. ಯೋಗದಿಂದ  ದೈವತ್ವ ಪಡೆಯುವುದೇ ಸ್ವಾಮಿ ವಿವೇಕಾನಂದರ ಸಂದೇಶವಾಗಿದೆ.
ಭಗವದ್ಗೀತೆ ಯಲ್ಲಿನ ನಾಲ್ಕು ಯೋಗಗಳೂ ಅಧ್ಯಾತ್ಮ ವೇ ಆಗಿದೆ.
ನಿನ್ನ ಜ್ಞಾನದಿಂದ ಭಗವಂತನ ದರ್ಶನವಾದರೆ ಅದೇ ಜ್ಞಾನಯೋಗ,ಇನ್ಯಾರೋ ಒಳಗಿಳಿದು ತೋರಿಸಲಾಗದು.
ಶ್ರೀ ಶಂಕರಭಗವತ್ಪಾದರಂತಹ ಮಹಾಜ್ಞಾನಿಗಳು ಜ್ಞಾನಯೋಗಿಗಳಾಗಿದ್ದು ರಾಜಯೋಗ ಭಕ್ತಿಯೋಗ ಕರ್ಮ ಯೋಗದಿಂದ  ಭಗವಂತನ ದರ್ಶನ ಸಾಧ್ಯವೆಂದರು.


ನಿನ್ನ ನೀ ಅರಿತು ನಿನ್ನ ನೀ ಆಳಿಕೊಳ್ಳುವುದೇ ರಾಜರ ಧರ್ಮ
ನೀನೇ ಪರಕೀಯರ ವಶದಲ್ಲಿದ್ದರೆ  ಬೇರೆಯವರನ್ನು ಆಳೋದೇ ಅಧರ್ಮ.ಈಗಿನ ರಾಜಕಾರಣಿಗಳು ಇದರ ಬಗ್ಗೆ ಚಿಂತನೆ ನಡೆಸಬೇಕಿದೆ ಜೊತೆಗೆ ಪ್ರಜೆಗಳೂ  ನಮ್ಮ ದೇಶವನ್ನು ಯಾರಿಗೆ‌ಬಿಟ್ಟುಕೊಟ್ಟು  ನಮ್ಮ ಜೀವನ ಯಾರ ಕೈಕೆಳಗಿದೆ ಎನ್ನುವ ಬಗ್ಗೆ ತಿಳಿಯುವುದು ಬಹಳ ಮುಖ್ಯ.ಕಾರಣ ಇದು ಪ್ರಜಾಪ್ರಭುತ್ವ ದೇಶ.ಪ್ರಜೆಗಳ ಸಹಕಾರವೇ ಎಲ್ಲಾ ಆಳೋದಕ್ಕೆ ಕಾರಣ.
ಭಕ್ತಿ ಯೋಗದಲ್ಲಿ ಆಂತರಿಕ ಭಕ್ತಿಯಿಲ್ಲದವನು ಯೋಗಿ ಆಗಲಾರ.
ಒಳಗೆ ದೇಶವನ್ನು ಆಳೋದು ಹೊರಗೆ ವಿದೇಶವನ್ನು ಬೆಳೆಸೋದು . ಇದರಿಂದಾಗಿ  ಭೋಗ ಜೀವನ ಇದ್ದರೂ ಯೋಗವಿರದು. 
ಕರ್ಮ ಯೋಗವೂ ಎಲ್ಲದರ  ಬುಡವಾಗಿದೆ. ಬುಡ ಸರಿಯಿಲ್ಲದೆ ನಡಿಗೆ ಸರಿಯಿಲ್ಲದೆ  ತಲೆಗೆ ಎಷ್ಟು ಬುದ್ದಿ ತುಂಬಿ ಉಪಯೋಗವಿಲ್ಲ.
ತಲೆಗೆ ತುಂಬಿದ ವಿಚಾರವೇ  ಮುಂದೆ ನಡೆಸುವುದಕ್ಕೂ ಮಧ್ಯವರ್ತಿ ಯಾಗಿರುವ  ರಾಜಕಾರಣ ಮತ್ತು ವ್ಯವಹಾರ ಅಡ್ಡಲಾಗಿದ್ದರೆ  ಸ್ವತಂತ್ರ ವಾಗಿ  ಯೋಗ ಮಾರ್ಗ ಯೋಗ್ಯ ದಾರಿಯಲ್ಲಿ ನಡೆಯುತ್ತಿದ್ದರು ಮಹಾತ್ಮರು.
ಈಗಂತೂ ಎಲ್ಲಾ  ವಿರುದ್ದವೆ ಆದಾಗ ತಲೆಯೇ ಸರಿಯಿಲ್ಲದೆ ಕಾಲಿಗೆ ಬುದ್ದಿ ಹೇಳೋರು ಹೆಚ್ಚಾಗಿರುವರು.
ಕಲಿಕೆಯ ಪ್ರಭಾವ. ದೇವರನ್ನು ಹೊರಗೆ ಬೆಳೆಸುವವರು ದೈವತ್ವದ ಶಿಕ್ಷಣ ವನ್ನು ಕೊಡಬೇಕಷ್ಟೆ. ಇದಕ್ಕೆ ರಾಜಕೀಯ ವ್ಯವಹಾರ  ಅಡ್ಡಲಾಗಿದ್ದರೆ ಸ್ವತಂತ್ರ ವಾಗಿ  ರಾಜಕೀಯ ವ್ಯವಹಾರ ಬಿಟ್ಟು  ಬರೋರು ಯಾರಿದ್ದಾರೆ?
ಜನರ ಹಣ ಬೇಕು.ಜ್ಞಾನ ಬೇಡ. ಜನರನ್ನು ಹೊರಗೆಳೆದು  ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಸಿದರೆ  ದೇವರಾಗುವರೆ? ದೇವರು ಕಾಣುವರೆ? ಅಗೋಚರ ಶಕ್ತಿಯನ್ನು ಕಾಣೋದಕ್ಕೆ ಅಂತರಂಗ ಶುದ್ದಿ ಬೇಕೆಂದರು.ಅಂತರಂಗ ಶುದ್ದಿಗೆ ಸತ್ಯ ಧರ್ಮದ  ಕರ್ಮ  ಅಥವಾ ಕೆಲಸ ಮಾಡಬೇಕೆಂದರು.
ಯಾವ ಕ್ಷೇತ್ರದಲ್ಲಿ ಸತ್ಯಧರ್ಮ ವಿದೆ? ಇದ್ದರೂ ರಾಜಕೀಯ ಇದೆಯೆ? ವ್ಯವಹಾರವೇ ತುಂಬಿದೆಯೆ? ಗಮನಿಸೋದಕ್ಕೆ  ಜನರಿಗೆ ಪುರುಸೊತ್ತಿಲ್ಲ. ಪುರುಸೊತ್ತಿದ್ದವರು  ಗುರುತಿಸೋದಿಲ್ಲ. ಗುರುತಿಸಿದವರಿಗೆ ಹೇಳುವ ಅಧಿಕಾರವಿಲ್ಲ. ಅಧಿಕಾರವಿದ್ದವರಿಗೆ ಹಣವೇ ಎಲ್ಲಾ.

No comments:

Post a Comment