ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Thursday, May 8, 2025

ಸದ್ಗುರುಗಳು ಯಾರು?

ಗುರುವನ್ನು ಗುರುತಿಸುವ ಬಗ್ಗೆ ಅರಿವಿದ್ದರೆ ಸದ್ಗರುಗಳ ಕೃಪೆ ಆಗುತ್ತದೆ.
ಕಲಿಯುಗದಲ್ಲಿ ಎಲ್ಲಾ ಗುರುಗಳೇ ಆದಾಗ ಶಿಷ್ಯರು ಯಾರು? ತಾಯಿಯೇ ಮಕ್ಕಳಿಗೆ ಗುರು ತಂದೆ ಎರಡನೆ ಗುರು ಹಾಗೇ ಹೊರಜಗತ್ತಿನಲ್ಲಿ ಅಸಂಖ್ಯಾತ ವಿದ್ಯೆಗಳಿಗೆ ಒಂದೊಂದು ಗುರುವಿರುವರು. ಆ ವಿದ್ಯೆ ನನ್ನ ಅಂತರಂಗದ  ಕಡೆಗಿದ್ದು ಆತ್ಮಸಾಕ್ಷಿಯಂತೆ ಸತ್ಯದಲ್ಲಿ ಧರ್ಮ ದಲ್ಲಿ ‌ನಡೆಸಿದೆಯೆ ಇಲ್ಲವೆ ಎನ್ನುವ ಪ್ರಶ್ನೆಗೆ ಉತ್ತರ  ಸಿಕ್ಕರೆ ಅದು ನಿಜವಾದ ಗುರು ಕೃಪೆ.
 ವಿರುದ್ದವಿದ್ದು ಹೊರಗಿನ ರಾಜಕೀಯಶಕ್ತಿಯ ವಶವಾಗಿದ್ದರೆ  ಚಿಂತನೆ ಮಾಡಿಕೊಳ್ಳಲು ಸಮಯವಿದೆ ಎಂದರ್ಥ.
ಎಷ್ಟು ಹೊರಗೆ ಹೋರಾಡಿದರೂ ಒಳಗಿನ ಹೋರಾಟ ಬೆಳೆಯುತ್ತಲೇ ಇರುವುದು. ಒಟ್ಟಿನಲ್ಲಿ ಹೋರಾಟವೇ‌ಜೀವನ. ಇದು ಸತ್ಯ ಧರ್ಮದಿಂದ ಕೂಡಿದ್ದರೆ ಯೋಗ. ಇಲ್ಲವೆಂದರೆ  ರೋಗ.
ಆರೋಗ್ಯವಾಗಿದ್ದ ಈ ಶರೀರವನ್ನು ಯಾವ ಗುರು ಯಾವ ಗುರಿಯೆಡೆಗೆ ನಡೆಸಿದರೂ ನಡೆಯುತ್ತದೆ. ಅದಕ್ಕೆ ಶಾಂತಿ ಸಮಾಧಾನ ತಾಳ್ಮೆಯನ್ನು ಕಲಿಸುವುದೇ ಗುರುವಿನ‌ಕಲಕ್ಷಣ.
ಇದರಲ್ಲಿ  ವಿರೋಧವಿದ್ದರೆ ಅಂತಿಮ  ಗುರಿ ತಲುಪಲಾಗದು.
ರಾಜಕೀಯ ಗುರುವಿಗೂ ರಾಜಯೋಗದ ಗುರುವಿಗೂ ಅಂತರ ಬೆಳೆಯಲು ಕಾರಣವೇ ಈ ವಿರೋಧವಾಗಿದೆ.
ಯಾವಾಗ ಗುರು ಅಧಿಕಾರ ಸ್ಥಾನ ಹಣ ಸನ್ಮಾನವೇ ಮುಖ್ಯ ಎನ್ನುವ ಸಂದೇಶ ಕೊಡುತ್ತಾ ತಾನೂ ಅದೇ ದಾರಿಯಲ್ಲಿ ಹೊರಗೆ ನಡೆಯುವರೋ ಶಿಷ್ಯರೂ ಹೊರಗೇ ಇರುವರು.
ಇದರಿಂದ ದೂರವಾಗುತ್ತಾ  ಪರಮಾತ್ಮನ ಕಡೆಗೆ ನಡೆದಾಗ ರಾಜಕೀಯವಿರದು  ರಾಜಯೋಗವಾಗುವುದು.ಅಂದರೆ ಸ್ವತಂತ್ರ  ಜೀವನ ಸ್ವಾಭಿಮಾನ, ಸ್ವಾವಲಂಬನೆ, ಸರಳ ಜೀವನ,ಸತ್ಯದರ್ಶನ ಧರ್ಮ ರಕ್ಷಣೆಯೇ  ಗುರುಗಳ ಗುರಿಯತ್ತ ನಡೆಸುತ್ತದೆ. ಇದಕ್ಕೆ ವಿರುದ್ದ ನಡೆದಾಗ ಅಧರ್ಮ ಕ್ಕೆ ತಿಳಿದೋ ತಿಳಿಯದೆಯೋ ಜೀವ ಸಿಲುಕಿ  ಜೀವಾತ್ಮನಿಗೆ ಪರಮಾತ್ಮನ  ಸತ್ಯ ತಿಳಿಯದೆ ಜೀವ ಹೋಗುತ್ತದೆ.ಮತ್ತೆ ಮರಳಿ ಬಂದರೂ  ಅದೇ ಅಜ್ಞಾನ. ಹೀಗಾಗಿ ಯಾವುದೇ ಗುರುವಾಗಿರಲಿ  ಸತ್ಯಜ್ಞಾನದ ಶಿಕ್ಷಣ ಕೊಟ್ಟು ಅದರಲ್ಲಿ ಶಿಷ್ಯ ನಡೆಯುವಂತೆ  ಸ್ವತಂತ್ರ ವಾಗಿ ಬಿಟ್ಟು  ಆತ್ಮಜ್ಞಾನದಿಂದ ಜೀವನ ನಡೆಸುವಂತೆ  ಮಾಡುವುದೇ ಪರಮಧರ್ಮ ವಾಗಿತ್ತು. ಕಾಲಾನಂತರದಲ್ಲಿ ಆದ ಶಿಕ್ಷಣದ‌ಬದಲಾವಣೆ ಇಂದಿಗೂ ಗುರುವಾದವರಿಗೆ ಶಿಷ್ಯರ ಮನಸ್ಥಿತಿ ಪರಿಸ್ಥಿತಿ ಆರ್ಥಿಕ ಸ್ಥಿತಿ ಗೆ ಅವರಲ್ಲಿ ತುಂಬಿರುವ  ವಿಷಯಗಳೇ ಕಾರಣ ಎನ್ನುವ ಸತ್ಯ ತಿಳಿಯದೆ ಶಿಷ್ಯರೆ ಸರಿಯಿಲ್ಲ ಮಕ್ಕಳೇ ಸರಿಯಿಲ್ಲ ರಾಜಕಾರಣಿಗಳೇ ಸರಿಯಿಲ್ಲ,ಸಮಾಜವೇ ಸರಿಯಿಲ್ಲ ಕೊನೆಗೆ ಭೂಮಿಯೇ ಸರಿಯಿಲ್ಲ ಎಂದರೆ  ಸರಿ ಆಗಿರೋದು ಯಾವುದು? ಸರಿಮಾಡಬೇಕಾಗಿರೋದು ಯಾರು? ಯಾರಿಂದ ತಪ್ಪಾಗಿದೆ? ಎಲ್ಲಿ ಎಡವಿರೋದು ಎನ್ನುವ ಪ್ರಶ್ನೆಗೆ ಉತ್ತರ ಮೂಲದಲ್ಲಿಯೇ  ಜ್ಞಾನವನ್ನು ತಡೆದು  ಹೊರಗಿನ ವಿಷಯವನ್ನು ತುಂಬಲಾಗಿದೆ. ಇದನ್ನು ಹೊರಹಾಕೋದಕ್ಕೆ ಯೋಗ ಬೇಕು.ಯೋಗ್ಯ ಗುರು ಬೇಕು.ಯೋಗ್ಯ ಸಹಕಾರ ಬೇಕು. ಇದರ ಕೊರತೆ ಭಾರತವನ್ನು  ಇಂದಿಗೂ ಕಾಡುತ್ತಿದೆ.ಹೊರಗಿನವರಿಗೆ ಸಿಗುವ ಗೌರವ ಒಳಗಿನವರಿಗೆ ಸಿಗದೆ ಒಳಗಿದ್ದವರು ಹೊರಗೆ ಹೊರಟರೆ  ಹೊರಗಿನವರು ಒಳಬಂದು ಆಳುವರು.
ಅವರನ್ನು ಗುರು ಎನ್ನಬಹುದೆ?

ಕಲಿಕೆ ಹೊರಗಿನಿಂದ ಹೆಚ್ಚಾದರೆ  ಬುದ್ದಿವಂತರಾದರೂ ಜ್ಞಾನದ ಕೊರತೆಯಿರುತ್ತದೆ.‌ಅದೇ ಕಲಿಕೆ ಒಳಗಿನಿಂದ ನಡೆಸಿದಾಗ ನಿಧಾನವಾದರೂ  ಸತ್ಯದ ಅರಿವಾಗುತ್ತದೆ. ಆದರೆ ಇದಕ್ಕೆ ಪ್ರೋತ್ಸಾಹ ಸಹಕಾರ ಸಹಾಯಧನ ಯಾವುದೂ ಇರೋದಿಲ್ಲ.ಹೀಗಾಗಿ ಮನಸ್ಸು ಹೊರಗೇ ಬಹಳ ಬೇಗ ನಡೆಯುತ್ತದೆ. ಮತ್ತೆ ಹಿಂದಿರುಗಿ ಬರೋದಕ್ಕೆ ಜನ್ಮ ಜನ್ಮ ಕಾಯಬೇಕು. ಕಾದರೂ ಸರಿ ಗುರಿ ತಲುಪುವುದು ಮುಖ್ಯವಲ್ಲವೆ? 
ಜೀವನ್ಮುಕ್ತಿ ಸಿಗೋದು ಪರಮಾತ್ಮನೊಳಗೆ.ಇದು ಒಳಗಿನ ಅರಿವಿನ ಮೇಲೇ ನಿಂತಿದೆ. ಹೊರದೇಶದವರಿಗೆ ಅವರ ಧರ್ಮ ವೇ ಶ್ರೇಷ್ಠ ವಾದಂತೆ ನಮ್ಮ ದೇಶಕ್ಕೆ ನಮ್ಮ ಮೂಲ ಧರ್ಮ ಕರ್ಮ ವೇ ಶ್ರೇಷ್ಠ. ಇದನ್ನು ಬಿಟ್ಟು ಹೊರಗಿನವರ ಹಿಂದೆ ನಡೆದರೆ  ಗುರಿ ತಲುಪಲು ಸಾಧ್ಯವೆ?
ಗುರಿ ಅಧ್ಯಾತ್ಮ ವಾದಾಗ ಒಳಗಿದ್ದೇ ಗುರುಶಿಷ್ಯರು ಜೊತೆಗೆ ನಡೆಯಬೇಕು. ಹೊರಗೊಂದು ದಾರಿ ಒಳಗೊಂದು ದಾರಿ ಆದರೆ  ಧರ್ಮ  ರಕ್ಷಣೆ ಕಷ್ಟ.
ಯುದ್ದ ಮಾಡಿ  ಜೀವ ತೆಗೆದರೂ ಅದೇ ಜೀವ ಮತ್ತೆ ಜನ್ಮ ಪಡೆದಾಗ  ಸರಿಯಾದ ಶಿಕ್ಷಣ ಹಾಗು ಗುರು ಸಿಗೋದಕ್ಕೆ ಪುಣ್ಯ ಮಾಡಿರಬೇಕು. ಪುಣ್ಯವಂತರಿಗೆ ಉತ್ತಮ ಗುರು ಕೃಪೆ ಆಗುತ್ತದೆಂದರೆ ಗುರುಗಳಲ್ಲೂ ಬೇರೆ ಬೇರೆ ಇರೋದು‌ಸತ್ಯ.
ಕಳ್ಳ ಸುಳ್ಳಭ್ರಷ್ಟ ದುಷ್ಟರಿಗೂ ಗುರುವಿರುವರು. ಆದರೆ ಗುರಿ ಮಾತ್ರ ನರಕವಾಗಿರುತ್ತದೆ. 
ಸ್ವರ್ಗ ಸುಖವೆಂದು ಕಣ್ಣಿಗೆ ಕಾಣೋದರ ಹಿಂದೆ ನರಕವೂ ಅಡಗಿರುವುದು. ಹೀಗಾಗಿ ಸುಖ ದು:ಖಗಳಿಂದ ಜೀವ ತಪ್ಪಿಸಿಕೊಳ್ಳಲು ಕಷ್ಟ. ಇದನ್ನು ಸರಿಯಾಗಿ ತಿಳಿಸಿ ನಡೆಸುವ ಗುರುವಿದ್ದರೆ  ಕಷ್ಟದಲ್ಲೂ ಸುಖ ಕಾಣುವ ಶಕ್ತಿ  ಶಿಷ್ಯನಿಗೆ.ಇರುತ್ತದೆ.
ಈಗಾಗಲೇ ಎಷ್ಟೋ  ಬಡವರು ಕಷ್ಟಪಟ್ಟು ದುಡಿದು ಜೀವನ ನಡೆಸುತ್ತಿದ್ದಾರೆ.ಅವರಿಗೆ ಹೊರಗಿನ ದೇವರು ಗುರುಗಳನ್ನು ಬೇಟಿಮಾಡೋದಕ್ಕೂ ಸಮಯವಿರದು.ಆದರೂ ಅವರ ಜೀವನದಲ್ಲಿ ಶಾಂತಿ ಸುಖ ನೆಮ್ಮದಿ ತೃಪ್ತಿ ಇದೆ ಎಂದರೆ ಅವರ ಅರಿವೇ ಗುರು.
ಅರಿವನ್ನು ಸದ್ಬಳಕೆ ಮಾಡಿಕೊಂಡು ಮುಂದೆ ನಡೆದಾಗ ಜೀವ ಗುರಿ ತಲುಪುತ್ತದೆ. ಜೀವನವೇ ಜೀವಿಗಳ ವನ. ಆ ವನವನ್ನು ಹೇಗೆ ಬಳಸಬೇಕು ,ಬೆಳೆಸಬೇಕು ಎನ್ನುವ ಜ್ಞಾನ ಮಾನವನಿಗೆ  ಕೊಡೋದೆ ಗುರು.
ದೇವರು ಕಣ್ಣಿಗೆ ಕಾಣೋದಿಲ್ಲ ಆದರೆ ಕೇಳಿದ್ದೆಲ್ಲಾ ಬೇಡಿದ್ದೆಲ್ಲಾ ಕೊಡಬಹುದು. ಅದರಿಂದ ನಮ್ಮ ಜ್ಞಾನ ಹೆಚ್ಚುವುದೆ? ಸರಿಯಾದ ಜ್ಞಾನ ಕೊಟ್ಟು ಸ್ವತಂತ್ರ ಜೀವನ‌ನಡೆಸೋದಕ್ಕೆ ಬಿಡೋರು ಗುರು. ಹೀಗಾಗಿ ತನ್ನ ಆತ್ಮಜ್ಞಾನಕ್ಕೆ ನಾನೇ ರಾಜನಾದಾಗ  ಅಹಂಕಾರ ಬಿಟ್ಟು ಆತ್ಮವಿಶ್ವಾಸ ಹೆಚ್ಚಬೇಕು. ಯಾವಾಗಿದು ಅಹಂಕಾರ ಸ್ವಾರ್ಥ ಕ್ಕೆ ಬಳಸಲಾಗುವುದೋ ಅದೇ  ವಿನಾಶದೆಡೆಗೆ ನಡೆಸುತ್ತದೆ.
ಇದರಲ್ಲಿ ತಪ್ಪು ಯಾರದ್ದು? ಎನ್ನುವ ಬದಲು ಕರ್ಮಕ್ಕೆ ತಕ್ಕಂತೆ ಫಲ ಎಂದರೆ ಸರಿ. ಯಾರೂ ಸಂಪೂರ್ಣರಲ್ಲ.ಯಾರೂ ಅಪೂರ್ಣರಲ್ಲ ಎಲ್ಲರಲ್ಲಿಯೂ ಅಡಗಿರುವ ಗುರು ಒಬ್ಬರೆ ಆದರೆ ಜ್ಞಾನ ಮಾತ್ರ ಬೇರೆ ಬೇರೆ.
ಆ ಜ್ಞಾನವನ್ನು ಗುರುತಿಸಿ ಶಿಕ್ಷಣ ನೀಡಿ ಬೆಳೆಸುವುದೇ ಗುರು.
ಸಂಸ್ಕಾರವಿಲ್ಲದ ಅಸತ್ಯ ಅನ್ಯಾಯ ಅಧರ್ಮ ದ  ವಿಷಯ ಎಷ್ಟು ತುಂಬಿದರೂ   ಜೀವನವ್ಯರ್ಥ. 
ಭಯೋತ್ಪಾದಕರು  ಹೊರಗೆ ಬೆಳೆದಷ್ಟೂ  ಸಮಸ್ಯೆಗೆ ಪರಿಹಾರ ಸಿಗದು. ಪ್ರಾಣ ಹೋದರೂ ಆತ್ಮಕ್ಕೆ ಸಾವಿಲ್ಲವಲ್ಲ.
ಅದಕ್ಕೆ ಸನಾತನ ಧರ್ಮ ತಿಳಿಸುತ್ತದೆ ಆತ್ಮಜ್ಞಾನದಿಂದ ‌ಮುಕ್ತಿ ಮೋಕ್ಷ ಎಂದು. ಇದು ಹೊರಗಿದೆಯೆ?ಒಳಗಿದೆಯೆ?
ಆತ್ಮಶುದ್ದಿಯಿಂದಷ್ಟೇ ಸಿಗೋದಾದರೆ ಶುದ್ದ ಮಾಡುವ ಶಿಕ್ಷಣ  ನೀಡುವ ಗುರು ಬೇಕಲ್ಲವೆ? 
ಮೊದಲ ಗುರುವಾದ ತಾಯಿಯ ಜ್ಞಾನವೇ ಸದ್ಬಳಕೆ ಆಗದೆ ಹೋದರೆ ಅಥವಾ ತಾಯಿಯನ್ನೇ ಅಧರ್ಮ ದಿಂದ ನಡೆಸಿಕೊಂಡರೆ ಮಕ್ಕಳ ಪಾಡೇನು? ಭಾರತಮಾತೆ ವಿಶ್ವಕ್ಕೆ ಗುರು. ಹಾಗಾದರೆ ವಿಶ್ವ ಭಾರತವನ್ನು ಹೇಗೆ ಕಾಣುತ್ತಿದೆ? ಭಾರತೀಯರು ಭಾರತವನ್ನು ಹೇಗೆ ನಡೆಸಿಕೊಂಡು ಹೊರಗೆ ಹೋಗುತ್ತಿರುವರು? ಒಳಗಿರುವ ಜ್ಞಾನಕ್ಕೆ ಬೆಲೆಕೊಡದ ಶಿಕ್ಷಣದಿಂದ ಯಾರ ಉದ್ದಾರ ಆಗುತ್ತಿದೆ? ಒಂದು ಜೀವಕ್ಕೆ ಕೊಡುವ  ಬೆಲೆ ಆತ್ಮಕ್ಕೆ ಕೊಡದಿದ್ದರೆ ಆತ್ಮಜ್ಞಾನ ಬರುವುದೆ?
ಇಷ್ಟಕ್ಕೂ ನಾವ್ಯಾರು? ಭಾರತೀಯರೆ ವಿದೇಶಿಗಳೆ? ಎಲ್ಲಾ ಭಾರತದ ಒಳಗಿದ್ದರೂ ವಿದೇಶಿ ವ್ಯಾಮೋಹ ಆವರಿಸುವ ಶಿಕ್ಷಣ ಪಡೆದವರೆ ಎನ್ನುವ ಸತ್ಯ ಒಪ್ಪಲೇಬೇಕಿದೆ. ಯಾವುದೇ ಶಿಕ್ಷಣವಿರಲಿ ಅದರಲ್ಲಿ ನಮ್ಮತನ  ಬೆಳೆದಾಗಲೇ ಸ್ವಯಂ ಗುರುವಾಗಬಹುದು. ಕಲಿಕೆಯಲ್ಲಿ ಪಠ್ಯ ಪುಸ್ತಕ ಒಂದು ಮಾಧ್ಯಮವಷ್ಟೆ.ಇದು ಉತ್ತಮ ವಿಚಾರಗಳಾಗಿದ್ದರೆ ಜ್ಞಾನ. ಇಲ್ಲವಾದರೆ ಅಜ್ಞಾನ ದ ಅಂಧಕಾರದಲ್ಲಿ ಜೀವನವಿರುತ್ತದೆ.
ಇದನ್ನು ಹೊರಗಿನ ಸರ್ಕಾರ ಕೊಡುವ ಸಾಲ ಸೌಲಭ್ಯ ಗಳಿಂದ  ಕಳೆಯಲಾಗದು. ಕಾರಣ ಸಾಲವೇ ಶೂಲ ಎನ್ನುವ ಸತ್ಯ ಒಂದೇ. ಸಾಲ ಮಾಡಿದರೂ ತೀರಿಸಲು ಜ್ಞಾನ ಬೇಕು.
ಅದರಲ್ಲಿ ಸತ್ಯ ಧರ್ಮ ವಿದ್ದರೆ ಮೇಲಿನ  ಸಾಲ‌ಮನ್ನಾ.
 
ಋಣಭಾರ ಕಡಿಮೆಯಾದಾಗಲೇ ಆತ್ಮಕ್ಕೆ ತೃಪ್ತಿ ಮುಕ್ತಿ.
ಭಾರವಿದ್ದಾಗ ಮೇಲೆ ಹೋಗೋದು ಕಷ್ಟ.ಇನ್ನಷ್ಟು ಕೆಳಗೇ ಕುಸಿಯುತ್ತದೆ ಅಲ್ಲವೆ? 
ಹೃದಯವಂತಿಕೆ ಭಾರವನ್ನು ಇಳಿಸುತ್ತದೆ.ಆದರೆ ಹೃದಯಹೀನರು  ಭೂಮಿಗೆ ಭಾರವಾಗಿರುವರು. ಭಾರತದಲ್ಲಿ ಭಾರವಾಗಿರುವವರು ಬೆಳೆದಷ್ಟೂ  ಕಷ್ಟ ನಷ್ಟ ತಪ್ಪಿದ್ದಲ್ಲ. 
ಎಷ್ಟು ಮನೆ ಮಠ ಮಂದಿರ ದೇವಸ್ಥಾನ ಚರ್ಚ್ ಮಸೀದಿ ಹೊರಗೆ ಬೆಳೆಸಿದರೂ  ಅದಕ್ಕೊಂದು ಗುರುವಿರಬೇಕು.
ಬೇಧಭಾವ ಹೆಚ್ಚಾದಲ್ಲಿ ಗುರಿ ಮುಟ್ಟಲು ಕಷ್ಟ. 
ಜಗದ್ಗುರು ವಾಗಲು ಹೊರಗೆ ಹೋಗಬಹುದು. ಆದರೆ ಒಳಗೇ ಇದ್ದು ಜಗತ್ತನ್ನು ತೋರಿಸುವುದೇ ಕಷ್ಟ. ಮಹರ್ಷಿಗಳು ತಪಶ್ಯಕ್ತಿಯಿಂದ ಭೂಮಿಯ ಮೇಲಿದ್ದೇ  ಗಗನಯಾತ್ರೆ ಮಾಡಿ ಸತ್ಯ ತಿಳಿದರು. ಈಗ ಗಗನಯಾತ್ರೆಗೆ ಹೆಚ್ಚಿನ  ಮಹತ್ವ ನೀಡಿದ್ದರೂ ಒಳಗಿನ ಗುರುಗಳ ಬಗ್ಗೆ ತಿಳುವಳಿಕೆಯಿಲ್ಲ ಎಂದರೆ  ಮೇಲೇ ಹೋಗಿ ಕೆಳಗೆ ಬೀಳೋದು ಸಹಜ. ಇರಲಿ ವಿಜ್ಞಾನ ಅದರಲ್ಲಿ ಅಧ್ಯಾತ್ಮ ದ ಅರಿವಿದ್ದರೆ  ಮಾನವನ ಹೃದಯವಂತಿಕೆ  ಬೆಳೆಯುವುದು.
ಹೃದಯ ಶಾಶ್ವತವಲ್ಲ ಹೃದಯವಂತಿಕೆ ಶಾಶ್ವತ. ಇದನ್ನು ಅಸುರರಿಗೆ ತೋರಿಸಿದರೂ  ಅಜ್ಞಾನವೇ ಎನ್ನುವರು ಜ್ಞಾನಿಗಳಾದವರು.‌

ಮನೆಯೊಳಗೆ ಇರುವ ಸ್ತ್ರೀ ಯ ಗುಣಜ್ಞಾನವನ್ನರಿತು ನಡೆಯೋದರಿಂದ ಮನೆಯಲ್ಲಿ ಸುಖ ಶಾಂತಿ ಸನೃದ್ದಿ ಸಮಾಧಾನಕರ ಜೀವನವಾಗಬಹುದು.
ಆದರೆ ಯಾವಾಗ ಸ್ತ್ರೀ ಯ ಆಸ್ತಿ ಅಂತಸ್ತು ಹಣದಿಂದ ಅಳೆದು  ಹೊರಗೆ ಹೊರಡುವರೋ ಇರುವ ಅಲ್ಪ ಸ್ವಲ್ಪ ಜ್ಞಾನವೂ ಮರೆಯಾಗಿ  ಅಶಾಂತಿ ಅತೃಪ್ತಿ ಮನೆಯೊಳಗೆ ಸೇರಿಕೊಂಡು  ಆಳುವುದು. ಯಾವುದು ಬೇಕು? 
ಹಾಗೆಯೇ ಗುರುವನ್ನು ಎರಡು ರೀತಿಯಲ್ಲಿ ಕಾಣಬಹುದು.ಇರುವ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಹೋಗಬೇಕೋ ಅಥವಾ ಬೇಡದ ಜ್ಞಾನವನ್ನು ಹೊರಗಿನಿಂದ ಕಲಿತು ಒಳಗೆ ಸೇರಿಸಬೇಕೋ‌  ನಮಗೇ ಬಿಟ್ಟ ವಿಚಾರ.

No comments:

Post a Comment