🚩🔯🌸🌄⚛🌅🌸🔯
*ನ ಸಾ ಸಭಾ ಯತ್ರ ನ ಸಂತಿ ವೃದ್ಧಾ*
*ನ ತೇ ವೃದ್ಧಾ ಯೇ ನ ವದಂತಿ ಧರ್ಮಮ್ |*
*ನಾಸೌ ಧರ್ಮೊ ಯತ್ರ ನ ಸತ್ಯಮಸ್ತಿ*
*ನ ತತ್ಸತ್ಯಂ ಯಚ್ಛಲೇನಾಭ್ಯುಪೇತಮ್ ||*
(ಮಹಾಭಾರತ)
ಯಾವ ಸಭೆಯಲ್ಲಿ ವೃದ್ಧರಾದವರಿರುವುದಿಲ್ಲವೋ-ಆದು ಸಭೆಯೇ ಅಲ್ಲ. ಅದಕ್ಕೆ ಸಭೆಯೆಂದು ಕರೆಸಿಕೊಳ್ಳುವ ಯೋಗ್ಯತೆಯಿಲ್ಲ. ವೃದ್ಧರಿಂದ ಕೂಡಿರುವ ಸಭೆಯೂ ಆಗಿರಬಹುದು. ಆದರೆ ಧರ್ಮವನ್ನು ಪ್ರತಿಪಾದಿಸದ ವೃದ್ಧರಿರುವ ಒಂದು ಸಭೆಯಲ್ಲಿ ವೃದ್ಧರಿರುವರೆಂದು ಪರಿಗಣಿಸುವ ಸಾಧ್ಯತೆಯಿಲ್ಲ. (ಧರ್ಮವನ್ನು ಪ್ರತಿಪಾದಿಸದವರು ವೃದ್ದರೇ ಅಲ್ಲ.) ಒಂದು ವೇಳೆ ಅವರು ಧರ್ಮವನ್ನೂ ಹೇಳಬಹುದು. ಸತ್ಯಾಂಶವನ್ನು ಬಿಟ್ಟು ಧರ್ಮವನ್ನು ಹೇಳಹೋದರೆ ಅದು ಧರ್ಮವೆನಿಸುವುದಿಲ್ಲ. ವಂಚನೆಯಿಂದ ಕೂಡಿದ, ಕೇವಲ ತೋರಿಕೆಯ ಸತ್ಯವು ಸತ್ಯವೆನಿಸಿಕೊಳ್ಳುವುದಿಲ್ಲ.
ವಯಸ್ಸಿನಲ್ಲಿ ವೃದ್ದರೆಂದು ಕರೆಸಿಕೊಳ್ಳಬಹುದು.ಆದರೆ ಜ್ಞಾನದಲ್ಲಿ ಪ್ರವೃದ್ದರಾಗೋದು ಕಷ್ಟ. ಆದರೂ ಅವರವರ ಸಂಸಾರದ ವಿಚಾರದಲ್ಲಿ ಹೆಚ್ಚಿನ ಅನುಭವವಿರೋದು ಹಿರಿಯರಿಗೇ ಆದ್ದರಿಂದ ಹಿರಿಯರ ಮಾತನ್ನು ಕೇಳಬೇಕೆಂದು ಕಿರಿಯರಿಗೆ ತಿಳಿಸುವುದು ರೂಢಿಯಲ್ಲಿದೆ.
ವಾಸ್ತವದಲ್ಲಿ ಸಾಕಷ್ಟು ವಿದ್ಯೆ ಹಣ ಅಧಿಕಾರ ಆಸ್ತಿ ಮಾಡಿದ ಮಕ್ಕಳಿಗೆ ಗುರುಹಿರಿಯರ ಜ್ಞಾನವಿರದೆ ದೂರ ಮಾಡುವರು.
ಆದರೆ, ಮೂಲಧರ್ಮ ಕರ್ಮ ಸಿದ್ಧಾಂತಗಳು ರಕ್ತಗತವಾಗಿ ಒಳಗಿರುವಾಗ ದೈಹಿಕವಾಗಿ ಸಬಲ ರಾದರೂ ಅಧ್ಯಾತ್ಮ ದಲ್ಲಿ ದುರ್ಭಲರೆ ಆಗಿರುತ್ತಾರೆ. ಹೀಗಾಗಿ ಅದರ ಫಲ ಕೊನೆಯಲ್ಲಿ ಅನುಭವಿಸುವಾಗ ತತ್ವದರ್ಶನ ಕಷ್ಟವಾಗಿ ತಂತ್ರಕ್ಕೆ ಜೀವ ಬಲಿಯಾಗುತ್ತದೆ.
ದೇಹದೊಳಗಿರುವ ಅಂಗಾಂಗಗಳನ್ನು ಹೇಗೆ ವೈಧ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಯಿಂದ ತಿಳಿಸುವುದೋ ಹಾಗೆ ಅಂಗಾಂಗದೊಳಗಿರುವ ದೈವೀಕ ಶಕ್ತಿಯನ್ನು ಅಧ್ಯಾತ್ಮ ದ ಸಂಶೋಧನೆಯಿಂದ ಗುರುತಿಸಿ ಸಂಸ್ಕಾರಿಸುವ ವಿದ್ಯೆಯ ಮೂಲಕ ಆತ್ಮಶುದ್ದಿ ಮಾಡಿಕೊಳ್ಳಲು ಗುರು ಹಿರಿಯರಾದವರು ತಿಳಿಸಿ ಬೆಳೆಸುವುದೇ ನಿಜವಾದ ಧರ್ಮ
ಶಿಕ್ಷಣ.
ಎಷ್ಟು ಓದಿದರೂ ಹೊರಗಿನ ಆಹಾರ ವಿಹಾರ ವ್ಯವಹಾರ ಶುದ್ದವಿಲ್ಲದಿದ್ದರೆ ವಯಸ್ಸಾದರೂ ಜ್ಞಾನ ಬರದು.
ಹಿಂದೂ ಸನಾತನ ಧರ್ಮದಲ್ಲಿ ಒಳಗಿನ ಶುದ್ದತೆಗೆ ಮೊದಲು ಪ್ರಾಮುಖ್ಯತೆ ಕೊಟ್ಟು ನಂತರಹೊರಗಿನ ಶುದ್ದತೆಗೆ ಸಹಕಾರ ಕೊಟ್ಟಿರುವ ಕಾರಣದಿಂದ ಒಳಗಿರುವ ಗುರು ಹಿರಿಯರಲ್ಲಿ ಧರ್ಮ ಸೂಕ್ಮತೆ ಇದ್ದು ಸಭೆ ಸಮಾರಂಭಗಳಲ್ಲಿ ಮೊದಲು ಅವರಿಗೆ ಸ್ಥಾನಮಾನಕೊಟ್ಟು ಅವರ ಉಪಸ್ಥಿತಿ ಉಪದೇಶ ಆದೇಶ ಸಹಕಾರದಿಂದ ಕಾರ್ಯಕ್ರಮ ನಡೆಯುತ್ತಿತ್ತು.
ಆದರೆ ಇಂದು ಹಣವೇ ಎಲ್ಲಾ ಮೂಲವಾಗಿ ಜ್ಞಾನಕ್ಕೆ ಬೆಲೆ ಇರದೆ ಅಕ್ರಮವಾಗಿ ಆಕ್ರಮಣಕ್ಕೆ ಹೆಸರುವಾಸಿಯಾಗಿರುವವರನ್ನು ಮುಂದೆ ತಂದು ಸಂಸಾರದ ಜೊತೆಗೆ ಸಮಾಜವೂ ಅಶಾಂತಿಯ ಕಡೆಗೆ ನಡೆದಿರೋದು ಅಧರ್ಮ ವಾಗುತ್ತಿದೆ.
ಒಂದು ಸಣ್ಣ ಹೇಳಿಕೆಯನ್ನು ದೊಡ್ಡ ಮಾಡಿಕೊಂಡು ಹೊರಗೆ ಹೋರಾಟ ಹಾರಾಟ ಮಾರಾಟಕ್ಕೆ ಇಳಿದರೆ ದೊಡ್ಡದಾಗಿದ್ದ ಸತ್ಯ ಧರ್ಮ ಹಿಂದುಳಿಯುತ್ತದೆ. ಮೊದಲು ನಮ್ಮ ಕಾಲುಬುಡದ ಕಸ ತೆಗೆದುಕೊಂಡು ಸ್ವಚ್ಚ ವಾದರೆ ಹೊರಗಿನ ಕಸ ಹೆಚ್ಚುವುದಿಲ್ಲ. ನಾವೇ ಸರಿಯಿಲ್ಲದೆ ಕಿರಿಯರಿಗೆ ಬುದ್ದಿ ಹೇಳೋದರಲ್ಲಿ ಅರ್ಥ ವಿಲ್ಲ. ಇದೇ ಕಾರಣದಿಂದ ಇತ್ತೀಚೆಗೆ ಮಕ್ಕಳು ಗುರು ಹಿರಿಯರಲ್ಲಿ ಭಕ್ತಿ ಭಯವಿಲ್ಲದೆ ಹೊರಗಿದ್ದಾರೆ. ಇದನ್ನು ಬೆಳೆಸಿದ ಶಿಕ್ಷಣವನ್ನು ಸರಿಪಡಿಸುವ ಜವಾಬ್ದಾರಿ ಹಿರಿಯರಿಗಿದೆ. ಕೇವಲ ಮಾತಿನಿಂದ ಕಾಲಹರಣ ಮಾಡದೆ ಕೃತಿ ಮನೆಯೊಳಗೆ ನಡೆಸಿದರೆ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಆಸ್ತಿ ಜ್ಞಾನವಾಗಬಹುದು.
ವಯಸ್ಸಾದಂತೆ ದೈಹಿಕ ಶಕ್ತಿ ಕ್ಷೀಣವಾದರೂ ಅನುಭವ ಜ್ಞಾನ ಇರುತ್ತದೆ. ಅನುಭವ ಅಧ್ಯಾತ್ಮ ದೆಡೆಗೆ ಇದ್ದರೆ ಉತ್ತಮ.
ಕೇವಲ ಭೌತಿಕಾಸಕ್ತಿಯೇ ಇದ್ದರೆ ಅಧಮ.
ಮಕ್ಕಳು ಮೊಮ್ಮಕ್ಕಳವರೆಗೂ ಆಸ್ತಿ ಮಾಡಲು ಹಣಮಾಡಿದವರ ಕಥೆ ಈಗ ವೃದ್ದಾಶ್ರಮ ಗಳಲ್ಲಿ ಕಾಣಬಹುದು. ಏನೂ ಆಸ್ತಿ ಮಾಡದೆ ಇದ್ದವರಿಗೂ ಕಷ್ಟ.
ಕಾರಣವಿಷ್ಟೆ ಆಸ್ತಿ ಮಾಡೋದೇ ವಿದ್ಯೆಯ ಗುರಿಯಾಗಿದೆ. ಅದರೊಳಗೆ ಸತ್ವ ತತ್ವ ಸತ್ಯವಿದ್ದರೆ ಮಾತ್ರ ಮಾನವನಿಗೆ ಜ್ಞಾನವಿರುತ್ತದೆ .ಜೀವನದ ಗುರಿಕಡೆಗೆ ನಡೆಯುತ್ತಾ ಉತ್ತಮವಾದ ಕಾರ್ಯದಿಂದ ಪ್ರವೃದ್ದರಾಗಿ ವೃದ್ದರಾಗುವರು.
ಧರ್ಮ ಎಂದಾಕ್ಷಣ ಹಲವು ಬರುತ್ತದೆ. ಆದರೆ ಮಾನವನಾಗಿ ಮಹಾತ್ಮರಾಗುವ ಧರ್ಮ ಅಧ್ಯಾತ್ಮ ದಿಂದ ಸಾಧ್ಯ. ಅಧ್ಯಾತ್ಮ ದಲ್ಲಿ ತನ್ನ ತಾನರಿತು ಅಂತರಂಗ ಶುದ್ದಿ ಮಾಡಿಕೊಂಡು ಪರಮಾತ್ಮನಿಗೆ ಶರಣಾಗೋದು. ಪರಮಾತ್ಮನ ಸತ್ವ ತತ್ವ ಸತ್ಯವಿದ್ದರೆ ಅಲ್ಲಿ ಧರ್ಮ ಇರುತ್ತದೆ.
ಆದರೆ ಭೂಮಿಯಲ್ಲಿ ಧರ್ಮಾಧರ್ಮಗಳ ನಡುವೆ ಅಂತರ ಬೆಳೆದಷ್ಟೂ ಮದ್ಯವರ್ತಿಗಳು ಬೆಳೆಯುತ್ತಾ ಅರ್ಧ ಸತ್ಯದ ರಾಜಕೀಯ ಮನೆ ಮಾಡಿ ಆಳುತ್ತದೆ. ಇದಕ್ಕೆ ಗುರುಹಿರಿಯರ ಸ್ತ್ರೀ ಯರ ಸಹಕಾರ ಸಿಕ್ಕಿದರೆ ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ. ಆದರೆ ವಿಪರ್ಯಾಸವೆಂದರೆ ಈ ಅರ್ಧ ಸತ್ಯವೇ ವ್ಯವಹಾರ ಮಾದ್ಯಮ ವಾದಾಗ ಹಣಗಳಿಸುವ ಸಾಧನವೇ ಮಹಾಸಾಧನೆಯಾಗುತ್ತದೆ. ಇದೇ ಭ್ರಷ್ಟ ದುಷ್ಟರ ವಶವಾದರೆ ವಯಸ್ಸಾದರೂ ಭ್ರಷ್ಟಚಾರ ಏನು ಎನ್ನುವ ಸತ್ಯ ತಿಳಿಯದೆ ಮಾನವನ ಜೀವ ಹೋಗುತ್ತದೆ.ಮತ್ತದೇ ಪುನರಾವರ್ತನೆ.. ಕಲಿಕೆಯ ಪ್ರಭಾವವಷ್ಟೆ.
No comments:
Post a Comment