ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Friday, May 16, 2025

ನಂಬಿಕೆಯೇ ದೇವರು.

🌹 *ಸ್ಪೂರ್ತಿ ಕಿರಣ*👍               
*ನಂಬಿಕೆಗಳು ಯಾವತ್ತೂ ನಮ್ಮನ್ನು ಕೈ ಬಿಟ್ಟು ಹೋಗುವುದಿಲ್ಲ. ನಮಗಿರುವ ಅವಸರದಿಂದ ನಾವೇ ಅವುಗಳನ್ನು ಬಿಟ್ಟು ಬಿಡುತ್ತೇವೆ.* *ಸಂಬಂಧ ಎಂದರೆ ನಮ್ಮವರನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು*.*ನಮ್ಮ ಜೀವನದಲ್ಲಿ ಕೆಲವೊಂದಿಷ್ಟು ಜನ ನಮ್ಮ ಸಾಧನೆಯ ಏಳಿಗೆಗಾಗಿ ಕಾಯುತ್ತಿದ್ದರೆ, ಇನ್ನೂ ಕೆಲವು ಜನರು ನಮ್ಮ‌ ಪತನಕ್ಕಾಗಿ ಕಾಯುತ್ತಿರುತ್ತಾರೆ. ಏಳಿಗೆಗಾಗಿ ಕಾಯುವವರನ್ನು ನೋಡಿ ಹುಮ್ಮಸ್ಸು ಹೆಚ್ಚಾಗಬೇಕು, ಪತನಕ್ಕಾಗಿ ಕಾಯುವವರಿಗೆ ಉತ್ತರ ಕೊಡಲು ನಮ್ಮಲ್ಲಿಯ ಛಲದ ಕಿಚ್ಚು ಹೊತ್ತಿ ಉರಿಯಬೇಕು*
ಇದರಲ್ಲಿ ಎರಡು ರೀತಿಯ ನಂಬಿಕೆಗಳಿವೆ.ದೇವರಲ್ಲಿ ನಂಬಿಕೆ ಇಡೋದು‌ ಪರಮಾತ್ಮನಲ್ಲಿ  ನಂಬಿಕೆ ಇಡೋದು.‌ಸಾಮಾನ್ಯವಾಗಿ ದೇವರಲ್ಲಿ ‌  ನಂಬಿಕೆ ಇಡೋ ಜನರು ಇರುವರು.ಪರಮಾತ್ಮನಲ್ಲಿ ನಂಬಿಕೆ ಬೆಳೆಸಿಕೊಂಡು ‌ಇದ್ದೋರು ವಿರಳ.
ದೇವರು ಬೇರೆ ಪರಮಾತ್ಮ ‌ಬೇರೆಯೆ?
ಎಂದರೆ ದ್ವೈತ ವಾಗುತ್ತದೆ. ಇಬ್ಬರೂ ಒಂದೇ ಎನ್ನುವಾಗ ಅಧ್ವೈತ. ದೇವರು  ಅವತಾರವೆತ್ತಿ ಬರಬಹುದು.
ಪರಮಾತ್ಮನ ಒಂದು ಭಾಗ ದೇವರಷ್ಟೆ. ಹಾಗೆ ಅಸುರರೂ‌ ಇರುವರು. ನಂಬಿಕೆ ಒಳ್ಳೆಯದೆ ಆದರೆ ಯಾರನ್ನು ನಂಬಬೇಕೆಂಬ ಅರಿವು ಅಗತ್ಯವಿದೆ.
ನಂಬಿಕೆ ದ್ರೋಹವಾದಾಗ ಎಂತಹ ವ್ಯಕ್ತಿಯಾದರೂ ತಿರುಗಿ  ನಿಲ್ಲಬಹುದು. 
ಪುರಾಣಗಳನ್ನು ನಂಬಬಹುದು. ಆದರೆ ವಾಸ್ತವವನ್ನು ಅರ್ಥ ಮಾಡಿಸದ ಪುರಾಣಗಳಿಂದ  ಕಷ್ಟ‌ನಷ್ಟವೇ ಆದಾಗ ದೇವರ ಮೇಲಿನ ನಂಬಿಕೆ ಕುಸಿದು ಅಸುರರೆಡೆಗೆ  ಸಾಗಬಹುದು.
ಆದರೆ  ಎಷ್ಟು ಹೊರಗೆ ನಡೆದರೂ ಒಳಗೆ ಬರದೆ ಜೀವನ್ಮುಕ್ತಿ ಸಿಗದು ಎನ್ನುವುದು  ಪರಮಸತ್ಯ.ಹೀಗಾಗಿ  ಅವಸರವೇ ಅಪಘಾತಕ್ಕೆ ಕಾರಣವೆಂದಂತೆ ಸತ್ಯದ ಮೇಲೆ ಧರ್ಮ ದ‌ಕಡೆಗೆ ನಡೆದವರಿಗೆ  ಜೀವನದಲ್ಲಿ ಏರಿಳಿತಗಳು ಹೆಚ್ಚು.‌ಮಧ್ಯವರ್ತಿಗಳನ್ನು  ದಾಟಿ ಮುಂದೆ ಹೋಗೋದಕ್ಕೆ
ಆತ್ಮವಿಶ್ವಾಸ ಅಗತ್ಯವಿದೆ. ಇದನ್ನು ಹೊರಗಿನ ಸಾಧನೆಗೂ‌ ಬಳಸುವರು.ಒಳಗಿನ ಸಾಧನೆಗೂ‌ಬಳಸುವರು. ಒಟ್ಟಿನಲ್ಲಿ ಸಾಧನೆ ಮಾಡೋದು  ಅವರವರ ಇಚ್ಚೆಯಾಗಿದ್ದರೂ ಅದರ ಮೇಲೆ ಅಡೆತಡೆಗಳು  ಅಡ್ಡಗಾಲುಗಳು, ವಿರೋಧಿಗಳು  ಬರುವುದು ಸಹಜ. ಏನೇ ಬಂದರೂ ಇರೋದು ಒಂದೇ ಸತ್ಯ. ಧರ್ಮ ವಾದರೂ   ಹಲವು ರೂಪದಲ್ಲಿ ಬೆಳೆದಿದೆ.
ಸಂಬಂಧ ಜೋಡಣೆಗೆ  ಸಾಕಷ್ಟು  ರೀತಿಯಲ್ಲಿ ಕಟ್ಟುಪಾಡುಗಳನ್ನು ವಿಧಿಸಿ ಸಂಸಾರದೊಳಗಿರಲು  ಸನಾತನಿಗಳು ಮಂತ್ರ ತಂತ್ರ ಯಂತ್ರ ಬಳಸಲಾಗಿದೆ. ಆದರೆ ಆತ್ಮಕ್ಕೆ ಬೇಧವಿಲ್ಲವೆನ್ನುವಾಗ ಸ್ವತಂತ್ರ ಜ್ಞಾನದಿಂದ ಸಂಸಾರದಲ್ಲಿರೋದೆ ಸಾಧನೆಯಾಗುತ್ತದೆ.ಇದು ಬಹಳ ಕಷ್ಟ.
ಸ್ತ್ರೀ ಧರ್ಮ ಪುರುಷ ಧರ್ಮ ಮಾನವ ಧರ್ಮ ಅಸುರ ಧರ್ಮ ದೇವರ ಧರ್ಮ ....ಹೀಗೇ ಹೊರಗೆ ಬೆಳೆದ ಧರ್ಮದ ಜೊತೆಗೆ ಸತ್ಯ ಬರಲೇಇಲ್ಲ. ಪರಮಾತ್ಮನ ಕಡೆಗೆ ನಡೆಯಲು ಒಂದೇ ಸತ್ಯವರಿತು ಧರ್ಮ  ಉಳಿಸಲಾಗಿಲ್ಲ.ಕಾಲಕ್ಕೆ ತಕ್ಕಂತೆ ಕಾಲಚಕ್ರ ತಿರುಗುವಾಗ ಅದರ ಮೇಲಿನಮಾನವನ ಕಾಲು ತಿರುಗದೆ ನಿಲ್ಲುವುದೆ?
ಕಾಲಿಗೆಚಕ್ರ ಕಟ್ಟಿಕೊಂಡು ಹೊರಗೆ ಸುತ್ತಿದರೆ ಒಳಗಿರುವ ಪರಮಾತ್ಮನ ದರ್ಶನವಾಗದು.ಹಿಂದಿನ ಮಹರ್ಷಿಗಳು ಇದ್ದಲ್ಲಿ ಯೇ ಪರಮಾತ್ಮನ ಸತ್ಯವರಿತರು. ಹಾಗೆ ಎಷ್ಟೋ ಕಾಲಜ್ಞಾನಿಗಳು ತ್ರಿಕಾಲಜ್ಞಾನಿಗಳಾಗಿದ್ದರು.ಅವರ ಕಾಲದಲ್ಲಿ ಇದನ್ನು  ತಿಳಿಯದೆ  ವಿರೋಧಿಸಿದವರೂ ಇಂದೂ ಇರುವರು.
ಹಾಗಾಗಿ  ಕಾಲವನ್ನು ತಡೆಯಲಾಗದೆ ಜನ್ಮ ಪಡೆಯೋದು‌
ಮಾನವ. ಮಾನವ‌ ದೇವರಾಗೋದು  ಹಣದಿಂದ ಆದರೆ ನಿಜವಾದ ದೇವರಿರೋದೆ ಆತ್ಮಜ್ಞಾನದಿಂದ ಎಂದರೆ ಜ್ಞಾನ ದಲ್ಲಿ ಸತ್ಯಧರ್ಮ ವಿದ್ದರೆ‌‌ ನೇರವಾಗಿ  ಭಗವಂತನೆಡೆಗೆ ಜೀವ ಹೋಗುತ್ತದೆ. 
ದೇವರೆನ್ನಿಸಿಕೊಳ್ಳಲು  ಸಹಾಯ ಮಾಡುವ‌ ಗುಣ‌ಬೇಕಷ್ಟೆ. ಆದರೆ ಯಾವಾಗಿದು‌ ಮಿತಿಮೀರುವುದೋ ಆವಾಗ ಅಸುರರು ಬೆಳೆಯುವರು.
ಕಾಲೆಳೆದು ಬೀಳಿಸಿದರೂ ಭೂಮಿಯ ಆಸರೆ ಇದ್ದಾಗ ಎದ್ದು ನಿಲ್ಲುವ ಛಲ ಇರಬೇಕಷ್ಟೆ. ಹಾಗೇ ಮಲಗಿದ್ದರೆ ತುಳಿದು ನಡೆಯೋರಿಗೇನೂ ಕೊರತೆಯಿಲ್ಲ. ಅಜ್ಞಾನವೇ ಇದಕ್ಕೆ ಕಾರಣ.

No comments:

Post a Comment