ಜೀವಾತ್ಮ ಪರಮಾತ್ಮರ ಹೆಸರಿನಲ್ಲಿ ಜೀವಾಣು ಪರಮಾಣುಗಳ ಸಂಘರ್ಷಣೆ.ಒಂದು ಅಧ್ಯಾತ್ಮ ಇನ್ನೊಂದು ಭೌತಿಕ. ಅಣು ರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ.
ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೆ....
ಯಾವಾಗ ಹೇಗೆ ಯಾರಿಂದ ಯಾಕೆ ಜೀವ ಹೋಗುವುದೋ ಗೊತ್ತಿರದ ಈ ನಶ್ವರ ಜಗತ್ತಿನಲ್ಲಿ ಸಾಕಷ್ಟು ಆಸ್ತಿ ಅಂತಸ್ತು ಹಣ ಅಧಿಕಾರ ಸ್ಥಾನವಿದ್ದರೂ ಕಷ್ಟ.ಇಲ್ಲದಿದ್ದರೂ ಕಷ್ಟ.
ಒಟ್ಟಿನಲ್ಲಿ ಕಷ್ಟ ತಪ್ಪಿದ್ದಲ್ಲ ಎಂದಾಗ ಅದಕ್ಕೆ ಕಾರಣ ಮತ್ತು ಪರಿಹಾರ ತಿಳಿದು ನಡೆಯೋದೇ ಸರಿಯಾದ ಮಾರ್ಗ.
ಮಾಯೆಯ ವಶದಲ್ಲಿ ಜೀವ ಸಿಲುಕಿದಾಗ ಮೇಲಿರುವ ಪರಮಾತ್ಮನೂ ಕಾಣೋದಿಲ್ಲ.ಒಳಗಿರುವ ಜೀವಾತ್ಮನೂ ಉಳಿಯೋದಿಲ್ಲ.
ಜನನ ಮರಣಗಳ ನಡುವಿರುವ ಈ ಜೀವನದಲ್ಲಿ ಸಾಧನೆ ಮಾಡೋದೆಂದರೆ ಏನು?
No comments:
Post a Comment