ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Monday, May 12, 2025

ಸುರಾಸುರರು ಯಾರು? ಇರೋದೆಲ್ಲಿ?

ಸುರರಿಗೂ ಅಸುರರಿಗಿರುವ ವ್ಯತ್ಯಾಸವಿಷ್ಟೆ.ಅಸುರರಿಗೆ ಭೂಮಿಯ ಭೋಗ ಭಾಗ್ಯವೇ  ಮುಖ್ಯ.ಹೀಗಾಗಿ ಹೆಣ್ಣು ಹೊನ್ನು ಮಣ್ಣಿನ‌ಹಿಂದೆ ನಡೆಯಲು ಸಾಕಷ್ಟು ಶ್ರಮಪಟ್ಟು ಹಣಗಳಿಸಿದರೂ  ಸಾಲದು.ಅಂದರೆ ಸಾಲವೇ ಅದು.
ಆ ಸಾಲ ತೀರಿಸಲು ಮತ್ತೆ ಜನ್ಮ ಪಡೆದಾಗಲೂ ಅದೇ  ಅಜ್ಞಾನದಿಂದ  ಭೂಮಿಯನ್ನು ಪ್ರಕೃತಿಯನ್ನು ದುರ್ಭಳಕೆ ಮಾಡಿಕೊಂಡು  ಜನರನ್ನು ತನ್ನ ವಶದಲ್ಲಿ ಇಟ್ಟುಕೊಂಡು ಆಳೋದೇ  ರಾಜಕೀಯವಾಗಿರುತ್ತದೆ. ಇವರ ಹಿಂದೆ ‌ನಡೆದರೆ ಹಣಸಿಗಬಹುದು.ಅದರ ಜೊತೆಗೆ ಅಜ್ಞಾನ,ಅಶಾಂತಿ,ಅತೃಪ್ತಿ ಅಸಮಾಧಾನ  ಹೆಚ್ಚಾಗುತ್ತಾ  ಆತ್ಮಹತ್ಯೆಯವರೆಗೂ ನಡೆಸಬಹುದು. ಆತ್ಮ ಯಾವತ್ತೂ ಶುದ್ದ. ಆದರಿದು‌ಜೀವನದಲ್ಲಿ  ಎಷ್ಟು ಮುಖ್ಯ ಎನ್ನುವುದೇ ದೈವತ್ವದ ಗುಣ ಜ್ಞಾನವಾಗಿದೆ.
ಒಟ್ಟಿನಲ್ಲಿ ಮಧ್ಯವರ್ತಿ ಮಾನವರಿಗೆ‌ಕಾಣದ‌ದೇವರನ್ನು ಹುಡುಕೋದೆ ಕೆಲಸ. ಈ ಕೆಲಸದಲ್ಲಿ ಕೈ ಜೋಡಿಸುವವರು ಸುರರೆ ಅಸುರರೆ ಎನ್ನುವ ಜ್ಞಾನವಿದ್ದರೆ ಸುರಕ್ಷಿತ.
ರಕ್ಷಣೆ ಮಾಡಬೇಕಾದವರೆ ಭಕ್ಷಕರಾದರೆ  ದೇವರಾದರೂ ಏನೂ ಮಾಡಲಾಗದು. ದೇವರನ್ನು ಹೊರಗೆಳೆದಷ್ಟೂ ಜನ ಹೊರಗೆ ಬರುವರು.ಅದೇ ಜನರಿಗೆ ದೈವತ್ವದೆಡೆಗೆ ಹೋಗಲು ದಾರಿ ಮಾಡಿಕೊಟ್ಟರೆ ಸ್ವತಂತ್ರ ರಾಗಿರುವರು. ಇದಕ್ಕೆ ಅಡ್ಡ ನಿಂತು ವ್ಯವಹಾರ ನಡೆಸಿದರೆ  ಹಣಸಿಗುತ್ತದೆ ದೇವರಲ್ಲ.
ಇದನ್ನು ಮಹಾತ್ಮರುಗಳು ಮೊದಲೇ ನುಡಿದು ನಡೆದು ಮುಂದೆ ಹೋಗಿರುವರು. ಅವರನ್ನು  ಭೂಮಿಗೆಳೆದು  ಆಳೋದು  ಸರಿಯೆ?
ಹಣ ಬೇಕಿದೆ ಅದರೊಂದಿಗೆ ಜ್ಞಾನ ಅಗತ್ಯವಾಗಿದೆ. ಅಜ್ಞಾನದಲ್ಲಿ ಹಣ ದುರ್ಭಳಕೆ ಆದರೆ  ಸಾಲವಾಗುತ್ತದೆ.
ಅದೇ ಹಣವು  ಸದ್ಬಳಕೆಯಾಗಲು ಸಜ್ಜನರ ಕೈ ಸೇರಿದರೆ ದೈವಶಕ್ತಿ  ಬೆಳೆಯುತ್ತದೆ. 
ಇದರ ಮೂಲವೇ ಶಿಕ್ಷಣವಾಗಿದೆ. ಲಕ್ಷಾಂತರ ರೂ ಸಾಲ ಮಾಡಿ  ಹೊರಗಿನ ಶಿಕ್ಷಣ ಮಕ್ಕಳಿಗೆ ನೀಡಿದರೆ ಆ ಸಾಲ ತೀರಿಸಲು ಮಕ್ಕಳೇ ಮನೆ ಬಿಟ್ಟು ಹೊರಗೆ ಹೊರಗಿನ ದೇಶದಲ್ಲಿ ದುಡಿಯಬೇಕು. ಅದೇ ಹಣವನ್ನು  ಸಂಸ್ಕಾರಯುತ ಶಿಕ್ಷಣಕ್ಕೆ ಬಳಸಿದರೆ ಮಕ್ಕಳ ಜ್ಞಾನವೂ ಶುದ್ದ  
ಹಣವೂ  ಶುದ್ದವಾಗಿರುತ್ತದೆ.
ಒಳಗೆಳೆದುಕೊಳ್ಳುವ ಆಹಾರ ವಿಹಾರಕ್ಕಿಂತ ಮುಖ್ಯವಾದ ವಿಷಯಜ್ಞಾನದಿಂದ ಅಮೃತ ದೊರೆಯುವುದೋ ವಿಷವೋ ಎನ್ನುವ ಬಗ್ಗೆ ಅರಿವಿದ್ದರೆ ಈಗಿನ‌ಪರಿಸ್ಥಿತಿಗೆ ಕಾರಣ ಮತ್ತು ಪರಿಹಾರ ಒಳಗೇ ಸಿಗುತ್ತದೆ.
ಒಳಗೆಳೆದುಕೊಂಡ ಮೇಲೆ  ಅದೇ ನಮ್ಮನ್ನು ನಡೆಸುತ್ತದೆ. ಬೇರೆಯವರ ಅಸತ್ಯ ಒಪ್ಪಿಕೊಂಡು  ಮುಂದೆ ನಡೆದರೆ ಅಸತ್ಯವೇ ಆಳೋದು.ಸತ್ಯ ತಿಳಿದು ನಡೆದವರಿಗಷ್ಟೆ ಸತ್ಯ ಅರ್ಥ ಆಗೋದು. ಎಲ್ಲಾ ಒಳಗಿನ ಶಕ್ತಿಯ ಪ್ರೇರಣೆ ಯಿಂದ ಜಗತ್ತು ನಡೆದಿದೆ. ಹೊರಗೆ ಕಾಣೋದು ವ್ಯಕ್ತಿಯಷ್ಟೆ.ಶಕ್ತಿ ಅವನ‌ನಡೆ ನುಡಿಯೊಳಗಿರುತ್ತದೆ. ನಾಟಕದಲ್ಲಿ ದೇವರಂತೆ ವೇಷಹಾಕಿದರೆ ದೇವರಾಗೋದಿಲ್ಲ.ಹಾಗೆ ಅಸುರ ವೇಷ ಹಾಕಿದವರೆಲ್ಲ ಅಸುರರಾಗಿರೋದಿಲ್ಲ ಆದರೂ ಅದನ್ನು ನೋಡಿ ನಡೆದವರಿಗೆ  ಇದರ ಅನುಭವ ಸಾಧ್ಯ.ಹಾಗಾಗಿ ನಾಟಕದಲ್ಲಿ ಒಳ್ಳೆಯ ಪಾತ್ರಮಾಡಿದವರನ್ನು ದೇವರೆಂದು ಜನ ಕರೆಯುವರು. ಆದರೆ ಅವರು ದೇವರೆ? 
ಹೀರೋಗಳನ್ನು  ಜನರು ದೇವರೆಂದರೆ ವಿಲನ್ ಅಸುರನೆ?
ನಾವು  ಯಾವ ರೀತಿಯಲ್ಲಿ ಯಾರಿಗೆ ಸಂದೇಶ ಕೊಡುವೆವೋ  ಅದರ  ಬಗ್ಗೆ ಎಚ್ಚರವಿದ್ದರೆ ಉತ್ತಮ. ನಮ್ಮ ಸ್ವಾರ್ಥ ಸುಖಕ್ಕಾಗಿ ನಾಟಕವಾಡಿದರೆ ಜನರನ್ನು ದಾರಿತಪ್ಪಿಸುವ  ಪಾತ್ರವಿದ್ದರೆ  ಸಮಾಜಕಂಟಕರೆ ಬೆಳೆಯೋದು.
ಡಾ.ರಾಜ್ ಕುಮಾರ್ ಇನ್ನಿತರ ನಟ ನಟಿಯರು ನಟಿಸಿದ್ದ ಎಷ್ಟೋ ಚಲನಚಿತ್ರದಲ್ಲಿ ಸತ್ವವಿತ್ತು. ಇದರಿಂದಾಗಿ ಸಮಾಜದಲ್ಲಿ ಉತ್ತಮ ಬದಲಾವಣೆ ಆಗುತ್ತಿತ್ತು.ಕಾಲಾನಂತರದಲ್ಲಿ  ಪ್ರತಿಯೊಂದು ವ್ಯವಹಾರಕ್ಕೆ ಸೀಮಿತವಾಗಿ ಹೊಡಿ ಬಡಿಕೊಚ್ಚು ಕೊಲ್ಲು ಹೋರಾಟದ ಪಾತ್ರಕ್ಕೆ ಹೆಚ್ಚಿನ  ಬೇಡಿಕೆಯೆಂದರೆ ಜನರ ಮನಸ್ಥಿತಿ ಹೇಗಿರಬಹುದು? ಇದನ್ನು ಮನೆಮನೆಯೊಳಗೆ ತಲುಪಿಸಿ ಮನರಂಜನೆ ಎಂದರೆ ಅರ್ಥ ವೇ ಇಲ್ಲದ  ಜೀವನವಷ್ಟೆ.
ಶಾಂತಿಯಿಂದ  ಗಳಿಸಬೇಕಾದ ಜ್ಞಾನವನ್ನು ಕ್ರಾಂತಿಯಿಂದ ಬೆಳೆಸಬಹುದೆ? 
ಭಾರತದಂತಹ ಪವಿತ್ರ ದೇಶದಲ್ಲಿ ಮಹಿಳೆ ಮಕ್ಕಳೇ ಮನರಂಜನೆಯ ವಸ್ತು ವಾದರೆ  ಅಧೋಗತಿ. ಇದರ ಬಗ್ಗೆ  ಜ್ಞಾನಿಗಳಾದವರು  ಉಸಿರೆತ್ತಿದರೆ ಸಂಕಷ್ಟ ಎನ್ನುವ ಸ್ಥಿತಿಗೆ ಬಂದಿದೆ ಪರಿಸ್ಥಿತಿ.
ಯಾಕೆ  ಸ್ತ್ರೀ ಜ್ಞಾನಕ್ಕೆ ಬೆಲೆಯಿಲ್ಲದೆ  ಸ್ತ್ರೀ ಯನ್ನು ಆಳಿದರು?
ಕಾರಣವಿಷ್ಟೆ ಅಜ್ಞಾನದ ರಾಜಕೀಯ ಶಕ್ತಿ.

ರಾಜಕೀಯವನ್ನು ರಾ ರಾವಣ, ಜ ಜರಾಸಂಧ, ಕೀ ಕೀಚಕ ಯ ಯಮನೆಂದು ಹೆಸರಿಸಿದ್ದಾರೆಂದರೆ ಇದರಲ್ಲಿ ದೇವರು ಇರುವರೆ? ಅಸುರರೆ? 

No comments:

Post a Comment