ಇಂದು ಕೂರ್ಮ ಜಯಂತಿ ಯ ಜೊತೆಗೆ ಬುದ್ದ ಜಯಂತಿ ಇದೆ.
ಬುದ್ದ ನನ್ನು ಭಗವಂತನ ಹತ್ತನೇ ಅವತಾರವೆಂದರೆ ಕೂರ್ಮ ಅವತಾರ ಎರಡನೇ ಅವತಾರವಾಗಿದೆ.ರಾಕ್ಷಸರ ಉಪಟಳತಾಳಲಾರದೆ ದೇವತೆಗಳು ಅಮೃತಕ್ಕಾಗಿ ನಡೆಸಿದ ಸಮುದ್ರಮಥನದಲ್ಲಿ ಭಗವಂತ ಕೂರ್ಮ ರೂಪದಲ್ಲಿ ನಿಂತು ಸಹಕರಿಸಿರೋದು ವಿಶೇಷ. ಕಲಿಯುಗದ ಅಂತ್ಯದಲ್ಲಿ ಭಗವಂತನ ಹತ್ತನೇ ಅವತಾರವೆನ್ನುವ ಕಾರಣದಿಂದ ಬುದ್ದನನ್ನು ಅವತಾರ ಪುರುಷ ಹಲವರು ಎನ್ನುವುದಿಲ್ಲ.
ಆದರೆ ಇಂದಿನ ಕ್ರಾಂತಿಕಾರಕ ಜಗತ್ತಿನಲ್ಲಿ ಯಾವ ದೇವರು ಯಾವ ಅವತಾರ ತಾಳಿದರೂ ಅಸುರರ ಪ್ರಭಾವವೇ ಹೆಚ್ಚಾಗಿರಲುಕಾರಣವೇ ಭಗವಂತನನ್ನು ಅರ್ಥ ಮಾಡಿಕೊಳ್ಳಲು ಸೋತಿರುವ ಮನುಕುಲವಾಗಿದೆ.
ಕಲಿಕೆಯೇ ದಾರಿತಪ್ಪಿರುವಾಗ ಪರಮಾತ್ಮ ಕಾಣುವನೆ?
ನಾನೇ ದೇವರು ಎನ್ನುವುದು ಸ್ವಲ್ಪ ಸರಿಯಾದರೂ ನನ್ನಲ್ಲಿ ದೈವತ್ವದ ಗುಣವಿದೆಯೆ ಎನ್ನುವ ಪ್ರಶ್ನೆಗೆ ಉತ್ತರ ಬೇಕಿದೆ.
ಭೂಮಿಯನ್ನು ಆಳೋದೇ ನನ್ನ ಗುರಿಯಾಗಿದ್ದರೆ ಭೂಮಿ ಮೇಲೆ ನಿಂತಿರುವ ನನ್ನ ಮನಸ್ಸಿನಲ್ಲಿ ಪರಮಾತ್ಮ ಇದ್ದಾನೆಯೆ ಎಂದು ಅರಿತಿರಬೇಕು.
ಸ್ವಯಂ ಪರಮಾತ್ಮನ ಅವತಾರವೇ ಬಂದರೂ ಕಣ್ಣಿಗೆ ಕಾಣೋದು ಕೇವಲ ರೂಪವಷ್ಟೆ. ಒಂದೇ ದೇವರಿಗೆ ಹಲವು ವೇಷ ಹಾಕಿ ಅಲಂಕಾರ ಮಾಡಬಹುದು.ಆದರೆ ಅದರ ಹಿಂದೆ ಇರುವ ಜ್ಞಾನವನರಿಯದಿದ್ದರೆ ಅಜ್ಞಾನ ವಷ್ಟೆ.
ಪ್ರತಿಯೊಂದು ಲೇಖನಗಳಲ್ಲಿ ನಕಾರಾತ್ಮಕ ಕಾಣುತ್ತಿದೆ ಎಂದರೆ ಕೆಲವು ಸತ್ಯ ಎಷ್ಟು ಕಠೋರವಾಗಿರುತ್ತದೆಂದರೆ ನಮ್ಮ ಈ ಸ್ಥಿತಿಗೆ ಕಾರಣ ಮತ್ತು ಪರಿಹಾರ ಒಳಗೇ ಇದ್ದರೂ ನಾವದನ್ನು ಬಳಸಲಾಗದ ಸ್ಥಿತಿ ಯಲ್ಲಿರುತ್ತದೆ.ಕೆಲವರಿಗೆ ಅರ್ಥ ಆದರೆ ಹಿಂದಿರುಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವಾಸ್ತವದಲ್ಲಿ ನಮಗೇ ತಿಳಿಯದೆ ಪುರಾಣ ಇತಿಹಾಸವನ್ನು ತಿರುಚಿ ಜನರನ್ನು ದಾರಿತಪ್ಪಿಸಿ ಶ್ರೀಮಂತ ರಾದವರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂದು ನಕಾರಾತ್ಮಕವಾಗಿ ತಿಳಿಸಿದರೆ ಸುದ್ದಿಯಾಗಬಹುದು.
ಅಸತ್ಯಕ್ಕೆ ಸತ್ಯ ನಕಾರಾತ್ಮಕ ವಾಗಿಯೇಇರುತ್ತದೆ.
ಸತ್ಯ ಯಾವತ್ತೂ ಬದಲಾಗೋದಿಲ್ಲ.ದೈವತ್ವದೆಡೆಗೆ ಸಾಗಲು ಸತ್ಯ ಬೇಕು. ಆತ್ಮಜ್ಞಾನವು ಸತ್ಯದಿಂದ ಬೆಳೆಯುತ್ತದೆ. ಸತ್ಯ ಇದ್ದ ಕಡೆ ಧರ್ಮ ಇರುತ್ತದೆ. ಆದರೆ ವಿಪರ್ಯಾಸವೆಂದರೆ ಇಂದಿನ ಮತಗಳು ಯಾವುದೇ ಧರ್ಮ ವನ್ನು ಸರಿಯಾಗಿ ಅರ್ಥ ಮಾಡಿಸಿಲ್ಲ. ಹೀಗಾಗಿ ಜನರಲ್ಲಿ ಅಧರ್ಮ ಇದ್ದರೂ ಸರಿ ಹಣ ಬಂದರೆ ಸಾಕು ಎನ್ನುವ ಅಜ್ಞಾನ ಮನೆ ಮಾಡಿದೆ.
ಬುದ್ದನಂತಹ ವಿರಾಗಿ ಸಂಸಾರ ತೊರೆದು ಹೊರಬಂದರೆ ಈಗಿನವರು ಭೋಗಕ್ಕಾಗಿ ಸಂಸಾರದೊಳಗೇ ಸಿಲುಕಿರುವರು.
ಬುದ್ದನ ಜ್ಞಾನ ಆತ್ಮಜ್ಞಾನವಾಗಿದ್ದರೆ ಇಂದಿನ ಜ್ಞಾನ ವೈಜ್ಞಾನಿಕ ಜ್ಞಾನ. ನಿಜ ಯಾವುದೂ ಸಂಶೋಧನೆ ಮಾಡದೆ ಒಪ್ಪಲಾಗದು. ಆದರೆ ಅಧ್ಯಾತ್ಮ ಸಂಶೋಧನೆಯು ಸಂನ್ಯಾಸಿಗಳಿಗೆ ಅರ್ಥ ವಾದಂತೆ ಸಂಸಾರಿಗಳಿಗಾಗದು.
ಆದರೆ ಸಂಸಾರಸಾಗರವನ್ನು ದಾಟಿಕೊಂಡು ಮುಕ್ತಿ ಮೋಕ್ಷ ಪಡೆದಾಗಲೇ ಅದು ಅಧ್ಯಾತ್ಮ ಸಂಶೋಧನೆಯಾಗುತ್ತದೆ.
ಆದರಿದು ಬಹಳಕಷ್ಟ.ಹೀಗಾಗಿ ಎಷ್ಟೋ ಮಹಾತ್ಮರುಗಳು
ಸಂಸಾರ ತೊರೆದು ಭಗವಂತನೆಡೆಗೆ ಸಾಗಿದ್ದರೆ ಕೆಲವರಷ್ಟೆ ಸಂಸಾರದೊಳಗಿದ್ದೂ ಬ್ರಹ್ಮಜ್ಞಾನಿಗಳಾಗಿರುವರು.
ಬ್ರಹ್ಮಾಂಡದ ರಹಸ್ಯವನರಿತವರಿಗೆ ಜ್ಞಾನಿಗಳೆಂದರು.
ಇದರಲ್ಲಿ ತ್ರಿಮೂರ್ತಿ ಗಳ ಪಾತ್ರ ಪ್ರಮುಖ ವಾಗಿದೆ.
ಸೃಷ್ಟಿ ಸ್ಥಿತಿ ಲಯವು ಭೂಮಿಯಲ್ಲಿ ನಿರಂತರವಾಗಿ ನಡೆದು ಬರುವ ಕ್ರಿಯೆ. ಅದರ ಒಂದು ಸಣ್ಣ ಭಾಗವೇ ಮನುಕುಲ.
ಮನುಕುಲದ ಒಳಿತಿಗಾಗಿ ಧರ್ಮ ಸತ್ಯವನ್ನು ಬಳಸಲಾಗಿದೆ.
ಆದರೆ ಇದರಲ್ಲಿ ಅಡಗಿರುವ ದ್ವಂದ್ವವೇ ಭಿನ್ನಾಭಿಪ್ರಾಯ ,ದ್ವೇಷ ಕ್ಕೆ ಕಾರಣವಾದಾಗ ಎರಡಾಗುತ್ತದೆ.
ಎರಡರ ನಡುವೆ ನಿಂತು ಸಮತೋಲನ ಮಾಡೋನೆ ಮಹಾವಿಷ್ಣುವಿನ ಕೆಲಸ.
ಯಾವಾಗ ಹತೋಟಿಯಿಲ್ಲದೆ ನಿಲ್ಲುವುದೋ ಭೂಮಿಯಲ್ಲಿ
ಯುದ್ದ ಕಲಹ ಪ್ರಳಯ ಪ್ರಕೃತಿ ವಿಕೋಪ ಗಳಿಂದ ಜೀವ ಹೋಗುವುದು. ಈ ಕೆಲಸ ಲಯವಾಗಿದೆ.
ಸೃಷ್ಟಿ ಸರಿಪಡಿಸದೆ ಲಯವನ್ನು ಸರಿಯಿಲ್ಲವೆಂದರೆ ಅರ್ಥ ವಿಲ್ಲ.
ಹಾಗಾಗಿ ಯಾವಾಗ ದೇವತೆಗಳನ್ನು ದುರ್ಭಳಕೆ ಮಾಡಿಕೊಂಡು ಆಳುವರೋ ಆಗ ಅಸುರರ ಮೂಲಕವೇ
ಮಾನವರ ಪ್ರಾಣ ಹೋಗುವುದು. ಒಟ್ಟಿನಲ್ಲಿ ಮೂಲ ದೇವತೆಗಳಿಗೆ ಸಾವಿಲ್ಲವೆಂದಾಗ ಸಾಯುತ್ತಿರುವುದು ಯಾರು?
ಬುದ್ಧನನ್ನು ಬುದ್ದಿವಂತಿಕೆಯಿಂದ ಅಳೆಯಲಾಗದು. ಬುದ್ದಿವಂತರು ಬುದ್ದರಾಗಲಾರರು. ಹಾಗೆ ದೈವತ್ವವನ್ನು ಪಡೆಯಬೇಕಾದರೆ ದೈವೀಕ ಜ್ಞಾನಶಕ್ತಿ ಇರಬೇಕು. ಇದು ಕಣ್ಣಿಗೆ ಕಾಣೋದಿಲ್ಲ ಹೀಗಾಗಿ ಅಸುರಿಶಕ್ತಿ ಬೆಳೆಯುತ್ತಲೇ ಇರುತ್ತದೆ.
ಮಾನವನೊಳಗೆ ಇರುವ ಈ ಶಕ್ತಿಯನ್ನು ಯೋಗದಿಂದ ಪಡೆಯಬಹುದು.ಯೋಗವೆಂದರೆ ಕೂಡುವುದು ಸೇರುವುದು
ಯಾರನ್ನು ಯಾರು ಸೇರಬೇಕು? ಸುರರನ್ನು ಅಸುರರು ಸೇರಿದರೆ ಸರಿಯೆ? ಅಥವಾ ಅಸುರರನ್ನು ಸುರರು ಸೇರಿದರೆ ಸರಿಯೆ? ಒಬ್ಬರಿಗೊಬ್ಬರು ನೋಡಿಕೊಳ್ಳದೆ ತಾವೇ ಸರಿ ಎಂದು ನಡೆದರೆ ಸರಿಯೆ?
ಮಧ್ಯವರ್ತಿ ಮಾನವನಿಗೆ ಇಬ್ಬರೂ ಸರಿಯಾಗಿ ಕಾಣುವರು.
ಕಾರಣವಿಷ್ಟೆ ದೇವರಿಲ್ಲದ ಜಗತ್ತಿಲ್ಲ.ಅಸುರರಿಲ್ಲದ ಭೂಮಿ ಇಲ್ಲ. ಅಂದರೆ ನಮ್ಮೊಳಗೇ ಇರುವ ನಕಾರಾತ್ಮಕ ಗುಣವೇ ಅಸುರ ಶಕ್ತಿಯಾಗಿ ಭೂಮಿಯಲ್ಲಿ ಜನ್ಮ ಪಡೆದಾಗ ಅದನ್ನು ಸತ್ಯ ಧರ್ಮದ ಮೂಲಕ ಸರಿಪಡಿಸಿಕೊಳ್ಳಲು ದೈವತ್ವ ದ ಅಗತ್ಯವಿದೆ.
ದೇವರಿರೋದೆಲ್ಲಿ?
ಎಲ್ಲಿ ಸತ್ಯ ಧರ್ಮ ನ್ಯಾಯ ನೀತಿ ಸಂಸ್ಕೃತಿ ಸದಾಚಾರ ಸಙಸ್ಕಾರಯುತ ಗುಣಜ್ಞಾನ ವಿರುವುದೋ ಅಲ್ಲಿ ದೇವರಿರುವರು. ಯಾವಾಗಿದು ವ್ಯವಹಾರಕ್ಕೆ ಸೀಮಿತವಾಗಿ ನಾಟಕದ ಮೂಲಕ ಜನರನ್ನು ದಾರಿತಪ್ಪಿಸಿ ಆಳುವುದೋ ಆಗಲೇ ಅಸುರರು ಬೆಳೆಯುವರು.ಹಾಗಾದರೆ ಅಸುರರನ್ನು ಬೆಳೆಸಿರೋದು ಯಾರು?
ಅಸುರರಿರೋದೆಲ್ಲಿ?
ಪ್ರಶ್ನೆಗೆ ಉತ್ತರ ಒಳಗೇ ಇದೆ.ಒಳಗೇ ಅಡಗಿರುವ ಎರಡೂ ಶಕ್ತಿಯನ್ನು ಬಳಸಿಕೊಂಡು ಜೀವನನಡೆಸುವ ಮಾನವ ದೇವರೆ? ಅಸುರನೆ?
ತಾನೇ ದೇವರಾದರೆ ಸಾವಿಲ್ಲವೆ? ಸಾವಿದೆಯೆಂದರೆ ಯಾರ ಸಾವಾಗುತ್ತಿದೆ? ಜೀವಾತ್ಮನಿಗೆ ಸಾವು ನೋವುಗಳ ಭಾಧೆ ಹೆಚ್ಚು.ಕಾರಣ ಕರ್ಮ ವಾಗಿದೆ. ಕೆಲಸದಲ್ಲಿ ಸತ್ಯ ಧರ್ಮ ಇಲ್ಲವೆಂದಾಗ ಅದು ಪರಮಾತ್ಮನೆಡೆಗೆ ತಲುಪುವುದಿಲ್ಲ.
ಪರಮಾತ್ಮನೊಬ್ಬನಿಗೇ ಮಾತ್ರ ಯಾವುದೂ ಅಂಟೋದಿಲ್ಲ.
ಹೀಗಾಗಿ ಯೋಗದಿಂದ ಮಾತ್ರ ಪರಮಾತ್ಮನ ಅರಿಯಬಹುದು.
ಭೌತಿಕದಲ್ಲಿ ಸೇರಿರುವ ಈ ಜೀವಕ್ಕೆ ಅಧ್ಯಾತ್ಮ ಶಿಕ್ಷಣ ನೀಡದೆ ಬೆಳೆಸಿದರೆ ಸತ್ಯ ಅರ್ಥ ವಾಗದೆ ಹೋಗುತ್ತದೆ. ಹೀಗಾಗಿ ಹಿಂದೂ ಧರ್ಮ ಹಿಂದಿನ ಶಿಕ್ಷಣದಲ್ಲಿ ಅಧ್ಯಾತ್ಮ ಸಂಶೋಧನೆಗೆ ಒತ್ತು ಕೊಟ್ಟು ಗುರುಗಳಾದವರು ದೇವರಾಗಿದ್ದರು. ಈಗ ದೇವರಿದ್ದರೂ ದೈವತ್ವದ ಶಿಕ್ಷಣವಿಲ್ಲದೆ ಅಸುರರೆ ಬೆಳೆಯುತ್ತಿರುವುದು ಕಲಿಕೆಯ ಪ್ರಭಾವವಷ್ಟೆ.
ಎಲ್ಲಾ ಇಲ್ಲೇ ಇರೋದು. ಎಷ್ಟೋ ಜನ್ಮಗಳ ಪಾಪಪುಣ್ಯದ ಫಲವನ್ನು ಅನುಭವಿಸುತ್ತಿರುವುದು. ಅನುಭವವಿಲ್ಲದೆ ಸತ್ಯ ಅರ್ಥ ವಾಗದು. ಇದಕ್ಕಾಗಿ ಬುದ್ದನಂತೆ ಸುಮ್ಮನೆ ಕೂರಲೂ ಬಾರದು. ಕೂರ್ಮ ದಂತೆ ನಿಧಾನವಾದರೂ ಸರಿ ಸತ್ಯದ ಕಡೆಗೆ ಧರ್ಮದೆಡೆಗೆ ಸಾಗುವ ಪ್ರಯತ್ನ ಇದ್ದರೆ ಎಲ್ಲಾ ಆಗೋದು ಒಳ್ಳೆಯದಕ್ಕೆ. ಕೆಟ್ಟವರಲ್ಲೂ ಒಳ್ಳೆಯ ಗುಣವಿದೆ.ಒಳ್ಳೆಯವರಲ್ಲೂ ಕೆಟ್ಟಗುಣಗಳಿವೆ.
ಅಸುರರೊಳಗೇ ಸುರರಿರೋವಾಗ ನೋಡುವ ದೃಷ್ಟಿ ನಮಗಿರಬೇಕಷ್ಟೆ. ಯಾರನ್ನು ಯಾರು ಆಳಬೇಕು?
ಆಳುತ್ತಿರುವವರು ಯಾರು? ಪ್ರಜಾಪ್ರಭುತ್ವದಲ್ಲಿ ರಾಜರು ಯಾರು?.
ಇದರ ಬಗ್ಗೆ ಚರ್ಚೆ ನಡೆಸೋದಿಲ್ಲ.ಕಾರಣವಿಷ್ಟೆ ಚರ್ಚೆ ಆದರೆ ನಮ್ಮ ಬೇಳೆ ಬೇಯೋದಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಬೇಕೆನ್ನುವ ಕಾಲ.
ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟಜನರಿಗೇ ಸುಭಿಕ್ಷಕಾಲ ದಾಸರು ಅಂದೇ ನುಡಿದಿದ್ದರೂ ಇಂದಿಗೂ ದುಷ್ಟರು ಬೆಳೆದು ನಿಂತಿರುವರೆಂದರೆ ಅಸತ್ಯಕ್ಕೆ ಅಧರ್ಮಕ್ಕೆ ನೀಡಿದ ಜನರ ಸಹಕಾರ. ಹಣಕ್ಕಾಗಿ ಜ್ಞಾನವನ್ನು ಬಿಟ್ಟರೆ ನಷ್ಟ ಯಾರಿಗೆ?
ಜೀವ ಒಳಗಿದೆ ಸರ್ಕಾರ ಇದನ್ನು ಉಳಿಸುವುದೆ?
ಜೀವ ಒಮ್ಮೆ ಹೋಗೋದೆ ಆದರೆ ಹೋಗುವಾಗ ಅದರ ಜೊತೆಗೆ ಪಾಪಪುಣ್ಯದ ಫಲ ಹೊತ್ತು ನಡೆಯುತ್ತದೆ.ಆಸ್ತಿ ಅಂತಸ್ತು ಹಣ ಒಡವೆ ವಸ್ತು ಸಂಘ ಸಂಬಂಧ ವೆಲ್ಲವೂ ಕ್ಷಣಿಕವಷ್ಟೆ. ಅದಕ್ಕಾಗಿ ಇರೋವಾಗಲೇ ಸತ್ಯವರಿತರೆ ಆತ್ಮಕ್ಕೆ ತೃಪ್ತಿ. ಸತ್ಸಂಗದಲ್ಲಿ ಸತ್ಯವಿದ್ದರೆ ಸರಿ ಅಸತ್ಯದ ರಾಜಕೀಯ ಇದ್ದರೆ?
ಮನೆಯೊಳಗೆ ಇದ್ದ ದೇವರನ್ನು ಬಿಟ್ಟು ಹೊರಗೆ ನಡೆದಂತಾಗುತ್ತದೆ. ಕಾಲಹರಣಮಾಡೋದಕ್ಕಾಗಿ ಸಂಘದ ಅಗತ್ಯವಿರದು. ಕಾಲವನ್ನು ಸದ್ಬಳಕೆ ಮಾಡಿಕೊಂಡು ಕಾಲ ಬೆಳೆದಾಗಲೇ ಜೀವನದಲ್ಲಿ ಸುಖ ಶಾಂತಿ ಸಮಾಧಾನ ತೃಪ್ತಿ ಮುಕ್ತಿ ಸಿಗುವುದೆಂದರು ಮಹಾತ್ಮರುಗಳು.
ದೇವರಿಗಿಂತ ಗುರುವೇ ದೊಡ್ಡವರೆಂದರು.ಗುರುವಿನಲ್ಲಿಯೂ ಮೂರು ವರ್ಗ ವಿದೆ.ದೇವಗುರು ಮಾನವಗುರು ಅಸುರಗುರು.ಯಾರು ದೈವತ್ವದೆಡೆಗೆ ನಡೆಸುವರೋ ದೇವಗುರು, ಯಾರು ಸಂಸಾರದಿಂದ ಬಿಡುಗಡೆಗೊಳಿಸುವರೋ ಅವರು ಮಾನವಗುರು, ಯಾರು ದೇವರನ್ನು ವಿರೋಧಿಸುವರೋ ಅವರು ಅಸುರಗುರು.
ಇನ್ನೊಂದು ಗುರು ಸ್ವತಂತ್ರ ವಾಗಿರೋದೆ ಅರಿವು.ಜ್ಞಾನ.
ಇದು ಪ್ರತಿಯೊಬ್ಬರೊಳಗೂ ಇದ್ದರೂ ಕಂಡುಕೊಳ್ಳಲು ಕಷ್ಟ. ಇದಕ್ಕಾಗಿ ಹೊರಗಿನಿಂದ ಗುರುಗಳನ್ನು ಆಶ್ರಯಿಸಿ ನಡೆಯಬೇಕಿದೆ.
ಯಾವಾಗ ಗುರುವಾದವರು ನಮ್ಮನ್ನು ಹೊರಗೆಳೆದು ರಾಜಕೀಯಕ್ಕೆ ಬಳಸುವರೋ ಎಚ್ಚರವಾಗಿರಬೇಕಷ್ಟೆ.ಆತ್ಮ ಯಾವತ್ತೂ ಸ್ವತಂತ್ರ ವೆ. ಯಾವಾಗಿದು ಅಸುರರ ವಶವಾಗುವುದೋ ಹೊರಗಿನ ಸತ್ಯವಷ್ಟೆ ಕಣ್ಣಿಗೆ ಕಾಣುತ್ತದೆ. ಒಳಗಿದ್ದ ಸತ್ಯ ಹಿಂದುಳಿದಷ್ಟೂ ಅಂತರದಲ್ಲಿ ಮಧ್ಯವರ್ತಿಗಳು ನಿಂತು ಆಟವಾಡಿಸೋದು ಆಟವಾಡೋದರಲ್ಲಿಯೇ ಕಾಲ ಮುಗಿಯುತ್ತದೆ.ಇಷ್ಟಕ್ಕೂ ಜೀವನವೆಂಬ ನಾಟಕದಲ್ಲಿ ಪಾತ್ರಧಾರಿ ಯಾರು ಸೂತ್ರಧಾರ ಇರೋದೆಲ್ಲಿ?
ಸುಸೂತ್ರವಾಗಿ ಜೀವನ ನಡೆಸಬೇಕಾದರೆ ಅದರಲ್ಲಿ ಸತ್ವ ತತ್ವ ಸತ್ಯಕ್ಕೆ ಸ್ಥಾನಮಾನವಿರಲೇಬೇಕಲ್ಲವೆ? ಇದನ್ನು ಬಿಟ್ಟು ಹೊರಗೆ ಹೊರಟವರ ಗತಿ ಅಧೋಗತಿ. ಪುರಾಣ ಇತಿಹಾಸದ ಕಥೆಗಳೇ ಇದಕ್ಕೆ ಸಾಕ್ಷಿ.ಇದನ್ನು ಹೇಳೋರಲ್ಲಿ ಸತ್ಯವಿದೆಯೆ? ಮಿಥ್ಯವೇ ಅಡಗಿದೆಯೆ ಸೂಕ್ಷ್ಮ ವಾಗಿ ಗಮನಿಸಲೂ ನಮಗೆ ಜ್ಞಾನ ಬೇಕಿದೆ. ಯಾರೂ ಶಾಶ್ವತವಲ್ಲ.ಸತ್ಯ ಒಂದೇ ಶಾಶ್ವತ.ಅದರಲ್ಲಿ ಅಧ್ಯಾತ್ಮ ಸತ್ಯ ಒಗ್ಗಟ್ಟು ಬೆಳೆಸಬೇಕಷ್ಟೆ.
ಅಜ್ಞಾನದೊಳಗೆ ಜ್ಞಾನ, ವಿಜ್ಞಾನದಲ್ಲಿ ಜ್ಞಾನ, ಅಸತ್ಯದೊಳಗೆ ಸತ್ಯ, ಅಧರ್ಮದೊಳಗೆ ಧರ್ಮ, ಅಸುರರೊಳಗೆ ಸುರರು ಅದ್ವೈತ ದೊಳಗೆ ದ್ವೈತ ಇವೆಲ್ಲವೂ ಕಣ್ಣಿಗೆ ಕಂಡರೂ ಒಳಗೆ ಹೊಕ್ಕಿ ನೋಡುವವರಿಲ್ಲದೆ ಬೆಳೆದು ನಿಂತವರನ್ನು ತಡೆಯುವ ಪ್ರಯತ್ನ ಮಾಡಿದರೆ ಸತ್ಯ ಅರ್ಥ ವಾಗದೆ ವೈರತ್ವದಿಂದ ಜೀವ ಹೋಗುತ್ತದೆ. ಅದೇ ರೀತಿಯಲ್ಲಿ ಜನ್ಮ ಪಡೆದು ಅದೇ ಕಾರ್ಯದಲ್ಲಿ ಮುಂದುವರಿಯುತ್ತದೆ. ಇದಕ್ಕಾಗಿ ಇಂದು ಭೂಮಿಯಲ್ಲಿ ಅಸುರರು ಬೆಳೆದಿರೋದು. ಸತ್ಯ ತಿಳಿಸದ ಧರ್ಮಕ್ಕೆ ವಿರುದ್ದವಿರುವ ಶಿಕ್ಷಣ ಒಳಗಿರುವಾಗ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚಾಗಿರೋದು. ಇದು ನಮ್ಮ ಅಹಂಕಾರ ಸ್ವಾರ್ಥ ವನ್ನು ಬೆಳೆಸುತ್ತಾ ಹೊರಗೆಳೆದು ಆಳುತ್ತಿದೆ. ಇದಕ್ಕೆ ಕಾರಣ ನಮ್ಮದೇ ಸಹಕಾರವಲ್ಲವೆ?
ಬೇರೆಯವರ ತಪ್ಪುಗಳನ್ನು ಸರಿಪಡಿಸುವ ಮೊದಲು ನಮ್ಮ ತಪ್ಪು ನಮಗೆ ಅರಿವಾದರೆ ಎಲ್ಲಾ ಸರಿಯಾಗಿ ಕಾಣುತ್ತದೆ.
ಭಾರತ ಒಳಗಿರುವ ಜ್ಞಾನಜ್ಯೋತಿ ಬೆಳಗಿಸುವ ದೇಶವಾಗಿತ್ತು.ಈಗಿದು ಹೊರಗಿನಬೆಳಕಿಗೇ ಹೆಚ್ಚು ವಾಲಿದೆ.ಹೀಗಾಗಿ ಒಳಗೆ ಕತ್ತಲು ಆವರಿಸಿದೆ.
ಶತ್ರು ಹೊರಗಿಲ್ಲ ಒಳಗೇ ಅಡಗಿರೋದು. ನಾವೇ ಆಶ್ರಯ ಕೊಟ್ಟು ಬೆಳೆಸಿರುವಾಗ ಅತಿಥಿಗಳಾಗಿ ಬಂದವರು ಹೊರಹೋಗದೆ ಒಳಗಿದ್ದೇ ತಿಥಿ ಕಾರ್ಯ ಮಾಡುವರಷ್ಟೆ.
ತಿಥಿಕಾರ್ಯ ವೂ ಶ್ರದ್ದೆ ಭಕ್ತಿಯಿಂದ ನಡೆಸಿದರೆ ಅದೆ ಸುಖ.
ಎರಡರ್ಥ ಬರೋ ಪದಗಳ ಹಿಂದೆ ಇರುವ ಸತ್ಯವನ್ನು ಅಧ್ಯಾತ್ಮ ದಿಂದ ತಿಳಿದರೆ ಉತ್ತಮ ಬದಲಾವಣೆ ಹಿಂದೂಗಳಲ್ಲಿ ಆಗಬಹುದು.ಏನಂತೀರ?
ಸ್ವತಂತ್ರ ಯಾರಿಗೆ ಸಿಕ್ಕಿದೆ ಎಂದರೆ ಮಧ್ಯವರ್ತಿಗಳಿಗಷ್ಟೆ.
ಅರ್ಧ ಸತ್ಯದಿಂದ ಏನಾದರೂ ಬದಲಾವಣೆ ಸಾಧ್ಯವೆ? ತುಂಬಿದ ಕೊಡ ತುಳುಕುವುದಿಲ್ಲ.ಖಾಲಿ ಕೊಡ ಬಾಯಾರಿಕೆ ನೀಗಿಸುವುದಿಲ್ಲ. ಆ ಕಾರಣದಿಂದ ಮಹಾತ್ಮರುಗಳು ನಿನ್ನ ನೀ ಅರಿತು ನಡೆ. ನಿನ್ನ ಆತ್ಮಕ್ಕೆ ನೀನೇ ರಾಜ ಎಂದರು.
ಸಮಸ್ಯೆ ಒಳಗಿದೆ ಪರಿಹಾರದ ಹಣ ಹೊರಗಿನಿಂದ ಪಡೆದರೆ ಜ್ಞಾನ ಬರೋದಿಲ್ಲ.
ಆತ್ಮಾಹುತಿ ದಾಳಿಕೋರರು ಅವರ ಧರ್ಮ ರಕ್ಷಣೆಗಾಗಿ ಹೋರಾಡಿ ಸಾಯುವರು.ಆದರೆ ಹೋರಾಡದೆಯೇ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಧರ್ಮ ಜ್ಞಾನವೇ ಇರದು.
ಅತಂತ್ರಸ್ಥಿತಿಗೆ ತಲುಪಿರುವ ಅತೃಪ್ತಿ ಪಡೆದ ಆತ್ಮಗಳೇ ಇವು.
ಯಾರೊಳಗೋ ಸೇರಿಕೊಂಡು ಆಡಿಸೋದು ಕುಣಿಸೋದರಲ್ಲಿಯೇ ಕಾಲಹರಣಮಾಡಿಕೊಂಡಿರುವವು.
ಒಟ್ಟಿನಲ್ಲಿ ಇಲ್ಲಿ ದೇವರು ಮಾನವರು ಅಸುರರು ಎನ್ನುವ ಮೂರು ವರ್ಗದಲ್ಲಿಯೂ ಅಡಗಿರುವ ಒಂದೇ ಶಕ್ತಿಯನ್ನು ಸರಿಯಾಗಿ ತಿಳಿಯುವುದೇ ಅದ್ವೈತ. ಎರಡು ತಿಳಿಯುವುದು ದ್ವೈತ. ಮೂರನ್ನು ನೋಡುವುದು ವಿಶಿಷ್ಟಾದ್ವೈತ.
No comments:
Post a Comment