ಒಳ್ಳೆಯದು ಕೆಟ್ಟದ್ದು ಎನ್ನುವ ವಿಚಾರವೇ ಮಾಡದೆ ಎಲ್ಲಾ ವಿಷಯವನ್ನು ಪ್ರಚಾರ ಮಾಡಿದಾಗ ಯಾವುದೂ ಸರಿಯಾಗಿ ಅರ್ಥ ವಾಗದು. ಒಳ್ಳೆಯವರು ಕೆಟ್ಟವರು ಎನ್ನುವುದು ನಮ್ಮ ಮನಸ್ಸಿನ ರೋಗ. ನಮಗೆ ಒಳ್ಳೆಯದೆನಿಸಿದ್ದು ಹೊರಗಿನವರಿಗೆ ಕೆಟ್ಟದ್ದು ಎನಿಸಬಹುದು. ಹೀಗಾಗಿ ಯಾವುದರಲ್ಲಿ ಲೋಕಕಲ್ಯಾಣವಾಗುವುದೋ ಮನುಕುಲದ ಉದ್ದಾರವಾಗುವುದೋ ಅದನ್ನು ಒಳ್ಳೆಯದೆಂದರು.
ಲೋಕದೊಳಗೆ ಇರುವ ಇವೆರಡರ ಮಧ್ಯೆ ನಿಂತು ಒಳ್ಳೆಯದು ಮಾಡೋರು ಯಾರು? ಒಳ್ಳೆಯದಾಯಿತು ಎನ್ನುವವರು ಯಾರು ಕೆಟ್ಟದ್ದಾಯಿತು ಎನ್ನುವವರು ಯಾರು? ಎಲ್ಲಾ ನಾವೇ ಆದ್ದರಿಂದ ಒಳ್ಳೆಯದರ ಹಿಂದೆ ಕೆಟ್ಟದ್ದು ಇರುತ್ತದೆ. ಕೆಟ್ಟದ್ದರ ಹಿಂದೆ ಒಳ್ಳೆಯದೂ ಇರುತ್ತದೆ.
ಹೇಗೆ ನಮ್ಮ ರಾಜಕೀಯ ಪಕ್ಷಗಳು ಒಳ್ಳೆಯದೆಂದು ಮಾಡಿದ ಯೋಜನೆಗಳಿಂದ ಕೆಟ್ಟದ್ದು ಆಗಿದೆಯೋ ಹಾಗೆ ಕೆಟ್ಟದ್ದನ್ನು ತಡೆಯಲಾಗದೆ ಸಹಕಾರ ನೀಡಿದ ಜನರಿಗೆ ಒಳ್ಳೆಯದೂ ಆಗಿದೆ ಕೆಟ್ಟದ್ದೂ ಹೆಚ್ಚಾಗಿದೆ.
ಉಚಿತವಾಗಿ ಸಾಲ ಪಡೆದು ಶೀಮಂತನಾದವನಿಗೆ ಒಳ್ಳೆಯದೆನಿಸಿದ್ದರೂ ಅದನ್ನು ತೀರಿಸದೆ ಹೋದರೆ ಕೆಟ್ಟದ್ದು ಅನುಭವಿಸಲೇಬೇಕಷ್ಟೆ. ಯಾವುದೂ ಅತಿಯಾಗಬಾರದು. ಹಾಸಿಗೆ ಇದ್ದಷ್ಟು ಕಾಲುಚಾಚು ಎಂದರು ಒಳ್ಳೆಯವರು.
ಕೆಟ್ಟದ್ದನ್ನು ತಡೆಯಲು ಅಧಿಕಾರವಿದ್ದರೆ ಸಾಧ್ಯ.ಇಲ್ಲವೆಂದರೆ ಕಷ್ಟ. ಆ ಕಷ್ಟವನ್ನು ಅನುಭವಿಸಲೇಬೇಕಿದೆ.ಕಾರಣ ಇಲ್ಲಿ ಯಾರೂ ಯಾರನ್ನೂ ತಡೆಯಲಾಗದು,ತಡೆಯುತ್ತಿಲ್ಲ ತಡೆದಂತೆ ನಾಟಕವಾಡಿಕೊಂಡಿರುವುದರಿಂದ ನಾಟಕದಲ್ಲಿ ಒಳ್ಳೆಯ ಪಾತ್ರ ಮಾಡಿದವನಲ್ಲೂ ಕೆಟ್ಟಗುಣವಿದೆ.ಕೆಟ್ಟ ಪಾತ್ರ ಮಾಡಿದವನಲ್ಲೂ ಒಳ್ಳೆಯ ಗುಣವಿದೆ. ಆದರೆ ನಾಟಕವನ್ನು ನೋಡಿದವರಲ್ಲಿ ಯಾವ ಗುಣಬೆಳೆದಿದೆ ಎನ್ನುವುದೇ ಮುಖ್ಯವಾಗಿರುತ್ತದೆ.
ಜನಸೇವಕರನ್ನು ಒಳ್ಳೆಯವರೆನ್ನುವರು ಆದರೆ ಅದಕ್ಕಾಗಿ ಭ್ರಷ್ಟಾಚಾರ ಬೆಳೆಸಿದರೆ ಒಳ್ಳೆಯದಾಗುವುದೆ?
ಒಳ್ಳೆಯವರು ಬೆಳೆದರೆ ಉತ್ತಮ ಸಂಸಾರ ಸಮಾಜ
ಕೆಟ್ಟವರೆ ಬೆಳೆದರೆ ಅಧಮ ಸಂಸಾರ ಸಮಾಜ ನಿರ್ಮಾಣ.
ಒಟ್ಟಿನಲ್ಲಿ ಸಂಸಾರ ಸಮಾಜದ ಸಣ್ಣ ಭಾಗವಷ್ಟೆ. ಅದನ್ನು ಸಣ್ಣದಾದ ಒಳ್ಳೆಯ ಕಾರ್ಯ ನಡೆಸುವುದರ ಮೂಲಕ ನಡೆಸೋದೇ ಮಾನವಧರ್ಮ. ಸಮಾಜದ ಋಣ ತೀರಿಸುವ ಸತ್ಕರ್ಮದಿಂದ ಒಳ್ಳೆಯದೇ ಆಗುತ್ತದೆ. ಯಾವಾಗಿದು ಸಮಾಜವಿರೋಧಿ ಕಾರ್ಯಕ್ರಮಕ್ಕೆ ತಿರುಗುವುದೋ ಅಥವಾ ನಾಟಕಕ್ಕೆ ಸೀಮಿತವಾಗುವುದೋ ಆಗಲೇ ದುಷ್ಟ ರು ಭ್ರಷ್ಟರು ಬೆಳೆಯುವರು. ಇದನ್ನು ಒಳ್ಳೆಯದೆನ್ನುವವರಿಲ್ಲ ಆದರೂ ಅದಕ್ಕೆ ಸಹಕಾರ ಕೊಟ್ಟು ಕೆಟ್ಟದ್ದನ್ನು ಬೆಳೆಸಿದರೆ ಒಳ್ಳೆಯದಾಗೋದು ಹೇಗೆ ಸಾಧ್ಯ?
ಭಾರತದ ಭ್ರಷ್ಟಾಚಾರ ಕ್ಕೆ ಸರ್ಕಾರದ ನಡೆ ನುಡಿ ಯೋಜನೆಗಳು ಕಾರಣವೆಂದರೆ ಜನ ಒಪ್ಪೋದಿಲ್ಲ. ಇದರಲ್ಲಿ ಯಾವ ಪಕ್ಷ ಒಳ್ಳೆಯದು ಕೆಟ್ಡದ್ದು ರ ಎನ್ನುವ ಬದಲು ನಮ್ಮ ಪಕ್ಷಪಾತವನ್ನು ಸರಿಪಡಿಸಿಕೊಂಡು ದೇಶದ ಹಣವನ್ನು ಯಾವ ರೀತಿಯಲ್ಲಿ ಬಳಸಲಾಗುತ್ತಿದೆ.ಧರ್ಮ ಸತ್ಯವನ್ನು ಹೇಗೆ ತಿರುಚಿ ಜನರನ್ನು ಆಳಲಾಗುತ್ತಿದೆ.ಶಿಕ್ಷಣವನ್ನು ಹೇಗೆ ವ್ಯಾಪಾರಿಕರಣವಾಗಿಸಿದ್ದಾರೆ ವಿಷಯದೊಳಗೇ ವಿಷವನ್ನು ತುಂಬಿ ಹರಡಲಾಗಿದೆ ತಾವೇ ಭ್ರಷ್ಟರ ವಶದಲ್ಲಿರುವಾಗ ಭ್ರಷ್ಟರ ವಿರುದ್ದ ನಿಂತರೆ ಫಲವಿದೆಯೆ?ಹೀಗೇ ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಒಳ್ಳೆಯದು ಕೆಟ್ಟದ್ದು ಒಳಗೇ ಇರುವ ನಮ್ಮ ಜ್ಞಾನದಿಂದ ಅರ್ಥ ಆಗುತ್ತದೆ.
ಒಬ್ಬ ದೇಶರಕ್ಷಣೆ ಮಾಡುವ ಸೈನಿಕನ ಪ್ರಾಣ ಲಕ್ಷಜನರ ಪ್ರಾಣಕ್ಕೆ ಸಮಾನ. ಅದೇ ಲಕ್ಷಜನರು ದೇಶದ ಪರನಿಂತು ಒಳ್ಳೆಯ ಕೆಲಸ ಮಾಡಿದರೆ ಅದೇ ನಿಜವಾದ ಜೀವನ.
ಇಲ್ಲಿ ಭ್ರಷ್ಟ ದುಷ್ಟರು ಹೋದರೂ ದೇಶದ ಹಣವನ್ನು ಬಳಸುವರು. ಅದೇ ಒಳ್ಳೆಯವರು ಹೋದರೆ ಕೇಳೋರೆ ಇಲ್ಲ
ಸಾಮಾನ್ಯವಾಗಿ ಅಧಿಕಾರ ಹಣ ಸ್ಥಾನ ಹೆಸರು ಇದ್ದವರು ಒಳ್ಳೆಯವರಂತೆ ನಟನೆ ಮಾಡಿದರೆ ಎಲ್ಲಾ ನೋಡುವರು ಗೌರವಿಸುವರು ಇನ್ನಷ್ಟು ಬೆಳೆಸುವರು.
ಆದರೆ ಅದೇ ಒಳ್ಳೆಯ ಕೆಲಸ ಸಾಮಾನ್ಯರು ಮಾಡಲು ಹೋದರೆ ನಿನಗೇನು ಅಧಿಕಾರವಿದೆ ಎಂದು ತಡೆದುನಿಲ್ಲಿಸುವರು.ಇದೊಂದು ರೋಗವಲ್ಲದೆ ಮತ್ತೇನು?
ಇದನ್ನು ಅಜ್ಞಾನದ ರೋಗವೆನ್ನಬಹುದಷ್ಟೆ.
ಕಲಿಗಾಲದಲ್ಲಿ ಒಳ್ಳೆಯದನ್ನು ಕಲಿಸೋದೆ ಕಷ್ಟ.ಕಲಿತವರನ್ನು ನಡೆಸೋದೇ ಕಷ್ಟ.ನಡೆದವರನ್ನು ಜೀವಂತ ಉಳಿಸೋದೆ ಕಷ್ಟ ಎನ್ನುವ ಕಾರಣಕ್ಕಾಗಿ ಜನ ಅಡ್ಡದಾರಿ ಹಿಡಿದು ಒಳ್ಳೆಯದನ್ನು ಮರೆತು ಕೆಟ್ಟದ್ದರ ಹಿಂದೆ ನಿಂತು ಹೋರಾಟ ಹಾರಾಟ ಮಾರಾಟದಲ್ಲಿ ಜೀವನನಡೆಸಿದರೆ ಕೆಟ್ಟದ್ದಕ್ಕೆ ಬೆಲೆಕೊಟ್ಟು ಒಳ್ಳೆಯದಕ್ಕೆ ನೆಲೆಯಿಲ್ಲದೆ ಜೀವಕ್ಕೆ ಮುಕ್ತಿ ಸಿಗದು.
ದೇವಸ್ಥಾನ ಕಟ್ಟುವುದಕ್ಕೆ ಜನಬಲ ಹಣಬಲ ಅಧಿಕಾರ ಬಲ ಬೇಕು. ಆದರೆ ಅದರೊಳಗೆ ದೇವರನ್ನು ಕೂರಿಸೋದಕ್ಕೆ ಜ್ಞಾನಬಲ ಅಗತ್ಯವಿದೆ. ಇದು ಒಳ್ಳೆಯದು ಮಾಡಿದಾಗಷ್ಟೆ ಸಿಗೋದು ಎಂದಾಗ ಹೊರಗಿನ ಒಳ್ಳೆಯವರು ಒಳಗಿನ ಒಳ್ಳೆಯವರ ನಡುವೆ ಅಂತರ ಬೆಳೆಯುವುದು.
ದೇವಸ್ಥಾನ ಕಟ್ಟಿದ ಶ್ರೀಮಂತ ನಿಗೂ ದೇವರನ್ನು ಪೂಜಿಸುವ ಅರ್ಚಕನಿಗೂ ಕೇವಲ ಹಣದಿಂದ ಅಳೆಯಲಾಗದು.
ಇಬ್ಬರಿಗೂ ಒಳ್ಳೆಯಗುಣವಿದ್ದರೂ ಯಾವಾಗ ವ್ಯವಹಾರಕ್ಕೆ ತಿರುಗುವುದೋ ಆಗ ಕೆಟ್ಟ ಗುಣ ಬರುತ್ತದೆ. ವ್ಯವಹಾರ ಯಾವತ್ತೂ ಧರ್ಮ ಮಾರ್ಗ ಹಿಡಿದಿರಬೇಕು.ಅಸತ್ಯ ಅನ್ಯಾಯ ಅಧರ್ಮಕ್ಕೆ ದೇವರನ್ನು ಬಳಸಿದರೆ ಒಳ್ಳೆಯದಾಗದು. ಒಟ್ಟಿನಲ್ಲಿ ದೇವರನ್ನು ಧರ್ಮ ವನ್ನು ಸತ್ಯವನ್ನು ಅರ್ಥ ಮಾಡಿಕೊಳ್ಳಲು ನಮ್ಮ ಅಂತರಂಗ ಶುದ್ದಿ ಅಗತ್ಯವಿದೆ ಎಂದರು. ಎಷ್ಟು ಹೊರಗೆ ಪೂಜಿಸಿದರೂ ಒಳಗೆ ಶುದ್ದಿಯಿರಲಿಲ್ಲವೆಂದರೆ ಪರಮಾತ್ಮನೆಡೆಗೆ ಜೀವಾತ್ಮ ಹೋಗಲಾಗದು. ನಾಟಕದ ಜಗತ್ತಿನಲ್ಲಿ ದೇವರ ವೇಷ ಹಾಕಿಕೊಂಡವರು ಒಳ್ಳೆಯವರು ಎಂದು ಹಿಂದೆ ನಡೆದರೆ ಕೆಟ್ಟದ್ದೇ ಆಗೋದು.
ಹಾಗಾಗಿ ಇಂದು ಒಳ್ಳೆಯ ವಿಚಾರಗಳು ಒಳಗೆ ತಿಳಿದರೂ ಅದನ್ನು ಕಾರ್ಯ ರೂಪಕ್ಕೆ ತರಲು ಅಧಿಕಾರ ಹಣ ಸ್ಥಾನವಿದ್ದವರ ಸಹಕಾರ ಸಿಗದೆ ಅವರ ಮನಸ್ಸಿಗೆ ಬಂದಂತೆ ಕಾರ್ಯಕ್ರಮ ಹೊರಗೆ ನಡೆಸುತ್ತಾ ಹೋಗುವರು. ಇದನ್ನು ಒಳ್ಳೆಯದೆಂದು ಜನ ಅವರ ಹಿಂದೆ ಮನೆಯೊಳಗಿನಿಂದ ಹೊರಗೆ ಬರುವರು. ಹೊರಗೆ ಬಂದವರನ್ನು ಮಧ್ಯವರ್ತಿಗಳು ತಮ್ಮ ಸ್ವಾರ್ಥ ಕ್ಕೆ ಬಳಸಿದರೆ ಮುಗಿಯಿತು ಕಥೆ. ಒಳಗೇ ಇದ್ದ ನೆಮ್ಮದಿ ಸಂತೋಷ ತೃಪ್ತಿ ಹೊರಗೆ ಹುಡುಕಿದರೆ ಸಿಗದು.ಹಾಗೆ ಒಳ್ಳೆಯ ಗುಣವೂ ಒಳಗಿನಿಂದ ಬೆಳೆಸಿಕೊಂಡರೆ ಬೇರೆಯವರಿಗೆ ನಾವು ಒಳ್ಳೆಯವರೆಂದು ತೋರಿಸಿಕೊಳ್ಳುವ ಬದಲು ಪರಮಾತ್ಮನಲ್ಲಿ ನಂಬಿಕೆ ಇದ್ದರೆ ಒಳ್ಳೆಯದೇ ಆಗುವುದು.
ಒಟ್ಟಿನಲ್ಲಿ ಯಾರೂ ಸಂಪೂರ್ಣ ಒಳ್ಳೆಯವರಲ್ಲ ಕೆಟ್ಟವರೂ ಆಗಿರೋದಿಲ್ಲ.ಕೆಟ್ಟವರಾಗೋದಕ್ಕೆ ಒಳ್ಳೆಯವರೆ ಕಾರಣ.
ಇಲ್ಲಿ ನಮ್ಮ ದೃಷ್ಟಿಯಿಂದ ಅದು ಕೆಟ್ಟದ್ದು ಎಂದಾಗ ಅದನ್ನು ಸರಿಪಡಿಸುವ ಶಿಕ್ಷಣನೀಡದಿರೋದೆ ಕೆಟ್ಟದ್ದು ಬೆಳೆಯಲು ಕಾರಣ. ಪೋಷಕರಿಗೆ ಮಕ್ಕಳ ಒಳ್ಳೆಯ ಗುಣ ಕಾಣದೆ ಕೆಟ್ಟದ್ದು ಕಂಡಾಗ ಶಿಕ್ಷೆ ನೀಡಿ ಸರಿಪಡಿಸುವ ಗುಣವಿಲ್ಲದೆ ಬೆಳೆಸಿದರೆ ಒಳ್ಳೆಯದೂ ಹಿಂದುಳಿಯುವುದು.
ಕೊಡುವ ಶಿಕ್ಷಣ,ಆಹಾರವೇ ಕಲಿಷಿತವಾಗಿರುವಾಗ ಎಲ್ಲಿಯ ಶುದ್ದಿ? ಏನೂ ನಾವು ಒಳ್ಳೆಯವರಂತೆ ನಟನೆ ಮಾಡೋ ಅಸಂಖ್ಯಾತ ಜನರ ನಡುವೆ ಕೆಟ್ಟದ್ದು ಮಾಡಿಕೊಂಡು ಕೆಟ್ಟವರು ಎನಿಸಿಕೊಂಡು ಭಯೋತ್ಪಾದಕರು ಬೆಳೆದರೆ ಇದಕ್ಕೆ ಕಾರಣಕರ್ತರೆ ನಾಟಕದ ವಿಚಾರಗಳಾಗಿವೆ.
ಉತ್ತಮ ದೇವತೆಗಳ ಕಥೆ ಪುರಾಣಗಳು ಜನರಿಗೆ ಅರ್ಥ ಆಗದು. ಅದರೊಳಗಿದ್ದ ಅಸುರರ ವಿಷಯ ಅರ್ಥ ಆಗುತ್ತದೆ ಎಂದರೆ ನಮ್ಮಲ್ಲಿ ಏನಿದೆಯೋ ಅದು ಸೇರಿಕೊಂಡು ಬೆಳೆಸುತ್ತದೆ ಎಂದರ್ಥ. ಕೆಟ್ಟದ್ದನ್ನು ಕೆಟ್ಟದ್ದು ಆಕರ್ಷಿಸುತ್ತದೆ.
ಹೀಗಾಗಿ ನಕಾರಾತ್ಮಕ ಸುದ್ದಿಗಳು ಜನಪ್ರಿಯವಾಗುತ್ತಿದೆ.
ಸಕಾರಾತ್ಮಕ ಸುದ್ದಿಗಳಿಂದ ಒಳ್ಳೆಯದಾಗುತ್ತದೆ.
ಎಲ್ಲದಕ್ಕೂ ಅಲ್ಲ ಅಲ್ಲ ಎಂದರೆ ನಕಾರಾತ್ಮಕ ವಾಗುತ್ತದೆ.
ಸತ್ಯ ಒಂದೇ ಇರೋವಾಗ ಆ ಒಂದರ ಹಿಂದೆ ನಡೆಯುವುದರಿಂದ ಒಳ್ಳೆಯದು ಕಾಣುತ್ತದೆ. ಆದರಿದು ಹೊರಗಿಲ್ಲ ಒಳಗೇ ಇರುವುದರಿಂದ ಹೊರಗೆ ಸಿಗದೆ ಜನರಿಗೆ ಕೆಟ್ಟದ್ದು ಕಾಣುತ್ತಿದೆ. ಆದರೂ ಆಗೋದೆಲ್ಲಾ ಒಳ್ಳೆಯದಕ್ಕೆ ಎನ್ನುವ ಸತ್ಯವರಿತರೆ ಒಳ್ಳೆಯದು ಕಾಣಬಹುದು.
ರಾಮ ಎಂದು ಹೆಸರಿಟ್ಟು ರಾವಣನ ಗುಣ ಬೆಳೆಸಿದರೆ ರಾಮನಾಗೋದಿಲ್ಲ.
ಹಾಗೆ ಭಾರತದೊಳಗಿದ್ದು ಅದರ ಧರ್ಮ ಸಂಸ್ಕೃತಿ ಭಾಷೆಯ ಮಹತ್ವ ತಿಳಿಸದೆ ಹೊರಗಿನವರ ಹಿಂದೆ ನಡೆಸಿದರೆ ಒಳ್ಳೆಯದಾಗದು.
ಮನೆಯೊಳಗಿನ ಕಸ ಹೊರಗೆ ಹಾಕಿದಾಕ್ಷಣ ಒಳ್ಳೆಯದಾಗದು.
ಕಸ ಹೆಚ್ಚಾಗದಂತೆ ನೋಡಿಕೊಂಡು ಬದುಕುವುದು ಒಳ್ಳೆಯದು. ಅಂತರಂಗ ಶುದ್ದಿಯಿಂದ ಬಹಿರಂಗ ಶುದ್ದಿ ಮಾಡೋದು ಒಳ್ಳೆಯದೆಂದರು ಮಹಾತ್ಮರುಗಳು.
ಈಗ ದೇವರಿಗೆ ಹೊರಗೆ ಅಲಂಕಾರ ಮಾಡೋದೇ ಒಳ್ಳೆಯದೆನಿಸಿದೆ ಆದರೆ ಅದರಿಂದ ಎಷ್ಟು ಜನರ ಮನಸ್ಸು ಶುದ್ದವಾಗಿದೆ. ಅಲಂಕಾರಿಕ ವಸ್ತು ಎಷ್ಟು ಶುದ್ದವಾಗಿತ್ತು.ಆನಂತರ ಅದನ್ನು ಹೇಗೆ ತೆಗೆದು ಎಲ್ಲಿ ಹಾಕಲಾಗುತ್ತಿದೆ? ಇವೆಲ್ಲವೂ ಗಣನೆಗೆ ತಂದುಕೊಂಡರೆ ಪರಮಾತ್ಮನಿಗೆ ಇವು ಯಾವುದರ ಅಗತ್ಯವಿಲ್ಲ. ಇದು ಮಾನವನ ಮನಶುದ್ದಿ ಆತ್ಮಶುದ್ದಿಗಾಗಿದೆ. ಇದರಲ್ಲಿ ವ್ಯವಹಾರವೇ ಮುಖ್ಯವಾಗುತ್ತಾ ಹೋದರೆ ಜ್ಞಾನ ಬರೋದಿಲ್ಲ. ಆಚಾರ ವಿಚಾರ ಪ್ರಚಾರ ಇರಬೇಕು.ಆದರೆ ಅದರಲ್ಲಿ ಶುದ್ದ ಸತ್ಯ ಧರ್ಮ ಕ್ಕೆ ಬೆಲೆಕೊಡಬೇಕಿತ್ತು. ಅರ್ಧ ಸತ್ಯದ ವಿಚಾರದಲ್ಲಿ ನಾಟಕವೇ ಹೆಚ್ಚು.
ನಾಟಕದಲ್ಲಿ ನಕಾರಾತ್ಮಕ ವಿಚಾರವೇ ಹೆಚ್ಚು. ಹೀಗಾದರೆ ಫಲವೂ ನಕಾರಾತ್ಮಕ ವಾಗಿರುತ್ತದೆ.
ಹುಚ್ಚು ಹಿಡಿದವರನ್ನು ಸರಿಪಡಿಸಬಹುದು.
ಹುಚ್ಚು ಹಿಡಿಸಿದವರನ್ನು ಸರಿಪಡಿಸೋದು ಕಷ್ಟ.ಹುಚ್ಚರಂತೆ ನಟನೆ ಮಾಡೋದೇ ಕೆಟ್ಟದ್ದು ಬೆಳೆಸಿದೆ ಎಂದರೂ ಕಷ್ಟ.
ಹಾಗೆಯೇ ಸುದ್ದಿ ಮಾದ್ಯಮ ಗಳು ಒಳ್ಳೆಯ ಸುದ್ದಿ ಹರಡಿದರೆ ಜನರಲ್ಲೂ ಒಳ್ಳೆಯ ಗುಣ ಬೆಳೆಯುತ್ತದೆ.ಕೆಟ್ಟದ್ದು ಹರಡಿದರೆ ಕೆಟ್ಟದ್ದೇ ಬೆಳೆಯುತ್ತದೆ.ಮನಸ್ಸೇ ಎಲ್ಲದ್ದಕ್ಕೂ ಕಾರಣ. ಹೀಗಾಗಿ ಸತ್ಯ ಹೇಳೋದು ಕೇಳೋದು ಒಳ್ಳೆಯದೆ ಆಗಿದ್ದರೂ ನಡೆಯೋದಕ್ಕೆ ಕಷ್ಟವೆಂದಾಗ ಅಸತ್ಯ ಆ ಸ್ಥಳ ತುಂಬುತ್ತದೆ. ಖಾಲಿಸ್ಥಾನವನ್ನು ಅಸತ್ಯದಿಂದ ತುಂಬಿದರೆ ಕಷ್ಟ ನಷ್ಟ ಹೆಚ್ಚು. ಆದರೆ ನಮ್ಮ ಶಿಕ್ಷಣದಲ್ಲಿ ಮಕ್ಕಳಿಗೆ ಕೊಡುವ ಪ್ರಶ್ನೆ ಪತ್ರಿಕೆಯಲ್ಲಿ ಬಿಟ್ಟ ಜಾಗ ತುಂಬೋದಕ್ಕೆ ಅಂಕವಿದೆ. ಅದು ಶಿಕ್ಷಕರಿಗೆ ಉತ್ತರ ಸರಿಯಿರಬಹುದು ಆದರೆ ಮೇಲಿರುವವರಿಗೆ ಸರಿಕಾಣದಿರೋದೆ ಕೆಟ್ಟದ್ದಾಗಲು ಕಾರಣ.
ಎಲ್ಲಿಂದ ಎಲ್ಲಿಗೆ ಪ್ರಶ್ನೆ ಉತ್ತರ ಹೋಗುತ್ತದೆ ಎನ್ನುವ ಬಗ್ಗೆ ಅರಿವಿದ್ದರೆ ನಮ್ಮ ಖಾಲಿಸ್ಥಾನವನ್ನು ನಮ್ಮವರಿಗೇ ಬಿಟ್ಟು ಕೊಟ್ಟು ನೆಮ್ಮದಿಯಿಂದ ಒಗ್ಗಟ್ಟಿನಿಂದ ಬಾಳಬಹುದಲ್ಲವೆ?
ಇದನ್ನು ಬಹಳ ಬೇಗ ಮಾಡಬೇಕಿದೆ.ಏನಂತೀರ?
ಯಾರೋ ಹೊರಗಿನವರು ಹೆಚ್ಚು ಹಣ ಕೊಡುವರೆಂದು ಜಾಗ ಕೊಟ್ಟರೆ ನಮ್ಮವರಿಗೆ ಒಳ್ಳೆಯದಾಗದು.ಕೊನೆಗೆ ಮಕ್ಕಳು ಮೊಮ್ಮಕ್ಕಳವರೆಗೂ ಅದರ ಫಲ ಅನುಭವಿಸಬೇಕು.ದ್ವೇಷ ಮರೆತು ಧರ್ಮ ಉಳಿಸಬೇಕಿದೆ.
ಒಳ್ಳೆಯದನ್ನು ಹರಡಬೇಕಿದೆ.
No comments:
Post a Comment