ನನ್ನ ಒಳಗಿನಿಂದ ಏಳುತ್ತಿದ್ದ ಪ್ರಶ್ನೆಗಳಿಗೆ ಹೊರಗೆ ಉತ್ತರ ಹುಡುಕುತ್ತಾ ನಡೆದಂತೆ ಉತ್ತರದಲ್ಲಿ ತೃಪ್ತಿ ಸಿಗದೆ ಯಾಕೆ ಈ ಪ್ರಶ್ನೆ ಎನ್ನುವುದು ದೊಡ್ಡ ಪ್ರಶ್ನೆಯಾಗಿರುತ್ತಿತ್ತು.
ಯಾರೂ ಈ ಪ್ರಶ್ನೆ ಮಾಡುತ್ತಿರಲಿಲ್ಲವಾದ್ದರಿಂದ ಎಲ್ಲಿಂದ ಇದು ಬರುತ್ತಿದೆ ಯಾಕೆ ನನಗಿದು ಬೇಕು? ಎಲ್ಲರಂತೆ ಯಾಕಿರಬಾರದು ಹೀಗೇ ನನಗೆ ನಾನೇ ಪ್ರಶ್ನೆ ಹಾಕಿಕೊಂಡರೂ ಉತ್ತರವಿಲ್ಲ.ಒಟ್ಟಿನಲ್ಲಿ ನಾನೇ ಬೇರೆ ರೀತಿಯಲ್ಲಿ ಚಿಂತನೆ ನಡೆಸುವುದೆಂದಾಗ ನನ್ನಲ್ಲಿ ಏನೋ ತಪ್ಪಾಗುತ್ತಿದೆಯೆ ಎಂದೂ ಅನೇಕ ವೇಳೆ ತಪ್ಪು ಸರಿಪಡಿಸಿಕೊಳ್ಳಲು ಪ್ರಯತ್ನ ಪಟ್ಟಾಗ ನೀನು ಸರಿಯಾಗೇ ಇದ್ದೀಯ ಎನ್ನುವ ಉತ್ತರ ಬರುತ್ತಿತ್ತು.
ಹಾಗಾದರೆ ಹೊರಗಿನವರಿಗೆ ನಾನ್ಯಾಕೆ ತಪ್ಪಾಗಿ ಕಾಣುತ್ತೇನೆ.ಬೇರೆಯವರ ಮನಸ್ಸಿಗೆ ನೋವುಮಾಡಬಾರದೆಂದರೆ ಅವರು ಹೇಳಿದ್ದು ಕೇಳಿಕೊಂಡಿರಬೇಕಷ್ಟೆ ಎಂದು ತೀರ್ಮಾನ ಮಾಡಿ ನಡೆದಾಗ ಎಲ್ಲೋ ಅಸತ್ಯಕ್ಕೆ ಒಪ್ಪಿಗೆ ಕೊಡುವ ಪರಿಸ್ಥಿತಿ ಎದುರಾದಾಗ ಹಿಂದೆ ಸರಿಯುವುದೇ ಮೇಲು. ಇಲ್ಲವೆಂದರೆ ಒಳಗಿದ್ದ ಮನಸ್ಸು ನೀನು ಸುಳ್ಳು ಹೇಳಿದ್ದಿ ಎನ್ನುವುದನ್ನು ನಾನೇ ಕೇಳಬೇಕು .ಒಟ್ಟಿನಲ್ಲಿ ಸತ್ಯದಬೆನ್ನತ್ತಿ ಹೋಗುತ್ತಿದ್ದ ಮನಸ್ಸಿಗೆ ಅಸತ್ಯ ಅನ್ಯಾಯವೇ ಕಂಡಾಗ ಯಾಕಿಷ್ಟು ಅಂತರವೆನಿಸಿ ತನ್ನಪಾಡಿಗೆ ತಾನರಿರೋದರಲ್ಲಿ ಶಾಂತಿ ಇದೆ ಎನ್ನುವ ಸತ್ಯ ತಿಳಿಯಿತು.ಎಷ್ಟು ವರ್ಷ ಇರಬಹುದು? ನಂತರದ ದಿನಗಳಲ್ಲಿ ಆಟ ಪಾಠ ಇನ್ನಿತರ ಚಟುವಟಿಕೆಗಳ ಒಡನಾಟದಲ್ಲಿ ಒಳಗಿನ ಒಡನಾಟವಿರದೆ ಹೊರಗೆ ಮನಸ್ಸು ಹೊರಟಾಗ ಹೊರಗಿರುವ ಅಂತರ ಭಿನ್ನಾಭಿಪ್ರಾಯದಲ್ಲಿ ಏನಿದೆ ಎನ್ನುವ ಚಿಂತನೆ ಕಾಡಿತ್ತು. ಎಲ್ಲಾ ಇದ್ದೂ ಏನೂ ಇಲ್ಲವೆನ್ನುವವರು ಏನೂ ಇಲ್ಲದೆಯೂ ಸಂತೋಷವಾಗಿರುವವರನ್ನು ನೋಡಿದಾಗ ಸಂತೋಷ ಯಾವುದು ಎನ್ನುವ ವಿಚಾರದಲ್ಲಿ ಗೊಂದಲ.ಯಾರು ಸಂತೋಷವೆನ್ನುವರೋ ಅದರೊಳಗೆ ಸಂತೋಷ ಸಿಗದೆ ದು:,ಖವಾದಾಗ ನಾನೇ ಸರಿಯಾಗಿ ತಿಳಿದಿಲ್ಲವೆನ್ನುವ ಬೇಸರ.
ಓದಿನಲ್ಲೂ ಏನೂ ಸಂತೋಷ ವಿಲ್ಲವಾದರೂ ಓದಲೇ ಬೇಕು. ಹಾಗೆ ಪುಸ್ತಕದ ವಿಚಾರದಲ್ಲಿ ಆಸಕ್ತಿ ಇಲ್ಲದೆಯೇ ಡಿಗ್ರಿ ಮಾಡಿ ಕೆಲಸವೂ ಸಿಗದೆ ಮದುವೆ ಆದರೂ ಚಿಂತನೆ ಒಳಗೇ ಎದುರಾಗುತ್ತಿತ್ತು.
ಹೀಗೇ ಮಕ್ಕಳು ಬೆಳೆಯುವಾಗ ಅವರ ಶಿಕ್ಷಣದ ವಿಷಯವೂ ಸರಿಯಿಲ್ಲವೆನ್ನುವುದರಿಂದ ಬೇರೆಯವರಿಗೆ ನಿನ್ನ ಆಲೋಚನೆಯೇ ಸರಿಯಿಲ್ಲ ಎನ್ನುವ ಹಂತಕ್ಕೆ ತಲುಪಿ ಮಾತಾಡದೆಯೇ ಇದ್ದರೂ ಆಲೋಚನೆ ಹೆಚ್ಚಾಗಿಯೇ ಇರುತ್ತದೆ.
ಇವೆಲ್ಲವೂ ಸಹಜವಾಗಿ ನಡೆಯುತ್ತಿದ್ದರೂ ಒಳಗಿನ ಕೂಗಿನ ದ್ವನಿಗೆ ಏನೂ ಉತ್ತರ ಕೊಡಲಾಗದೆ ಹೊರಗೆ ತನ್ನ ಕೆಲಸ ಮಾಡಿಕೊಂಡು ಮುಂದೆ ಬಂದಾಗ ನಿಜವಾದ ಸತ್ಯದ ಅರಿವಾಗುತ್ತಾ ಬಂದಿತ್ತು.
ಸಂಸಾರ ನರಕ ಎಂದರೆ ಎಲ್ಲಾ ನಕಾರಾತ್ಮಕತೆಯೇ ಇಲ್ಲಿ ಹೆಚ್ಚಾಗಿದೆ ಎಂದರ್ಥದಲ್ಲಿ ನಮ್ಮ ಮನಸ್ಸಿಗೆ ಬರೋದೆ ಬೇರೆ ನಡೆಯೋದೆ ಬೇರೆ ಎಂದಾಗ ಸ್ವರ್ಗ ಎಂದರೇನು ಎನ್ನುವ ಪ್ರಶ್ನೆ ಏಳುತ್ತದೆ.
ಅಧ್ಯಾತ್ಮ ಪದಕ್ಕೆ ಅರ್ಥ ವೇ ತಿಳಿಯದ ಮುಗ್ದ ಮನಸ್ಸಿಗೆ ಅಧ್ಯಾತ್ಮ ವಿಚಾರದಲ್ಲಿ ಎಲ್ಲಿಂದಲೋ ಸಂದೇಶಗಳು ಬರುತ್ತಿದ್ದವು.ಪುಸ್ತಕಗಳನ್ನು ಓದೋದೆಂದರೆಬೇಸರವೆನಿಸಿದ್ದ ಮನಸ್ಸಿಗೆ ಅಧ್ಯಾತ್ಮಕ್ಕೆ ಸಂಭಂದಿಸಿದ ಪತ್ರಿಕೆಗಳು ಮನೆಗೆ ಬರುತ್ತಿದ್ದವು. ಅದರಲ್ಲಿ ನನ್ನ ಪ್ರಶ್ನೆಗೆ ಉತ್ತರ ನೇರವಾಗಿ ಸಿಗದಿದ್ದರೂ ಅದಕ್ಕೆ ಹತ್ತಿರವಿದ್ದ ವಿಚಾರಗಳನ್ನು ತಿಳಿದಾಗ ನಾನು ಸರಿಯಾಗಿದ್ದೇನೆ ಎನ್ನುವ ಆತ್ಮವಿಶ್ವಾಸ ನಿಧಾನವಾಗಿ ಬೆಳೆಯುತ್ತಾ ಆ ವಿಚಾರಕ್ಕೆ ಮನಸ್ಸು ಹೊರಳಿತು. ಓದದಿರುವ ವಿಷಯಗಳು ಒಳಗಿನಿಂದ ತಿಳಿದಾಗ ಅದನ್ನು ಸರಿಯೋ ತಪ್ಪೋ ಎಂದು ಸ್ಪಷ್ಟವಾಗಿ ತಿಳಿಯುವ ಆಸೆ.ಹೊರಗಿನವರಿಗೆ ಕೇಳುವ ಧೈರ್ಯ ವಿಲ್ಲ.ಆದರೂ ಅದಕ್ಕೆ ಸರಿಹೊಂದುವ ವಿಚಾರ ಅಧ್ಯಾತ್ಮ ಪತ್ರಿಕೆ ಯಲ್ಲಿದ್ದಾಗ ಸತ್ಯ ಒಳಗಿದೆ ಎಂದು ಸತ್ಯವೇ ದೇವರೆನ್ನುವರು ಅಸತ್ಯ ಯಾಕೆ ಹೇಳುವರು?
ಒಟ್ಟಿನಲ್ಲಿ ಒಂದೇ ಜನ್ಮದಲ್ಲಿ ಎರಡೂ ಕಡೆ ಮನಸ್ಸು ಹೊರಟು ಕೊನೆಗೆ ಒಳಗೇ ನಡೆದಾಗ ಸತ್ಯದ ಅರಿವಾಗುತ್ತಾ ಹೋಯಿತು.
ಇದನ್ನು ಆತ್ಮಾವಲೋಕನ ಎನ್ನಬೇಕೋ ಆತ್ಮಸಂಭಾಷಣೆಯೋ ಆತ್ಮಪರಿಶೀಲನೆಯೋ ಆತ್ಮಸಂಶೋಧನೆಯೋ ಆತ್ಮವಿಶ್ವಾಸ ವೋ ಒಟ್ಟಿನಲ್ಲಿ ಎಲ್ಲವೂ ಆತ್ಮಕ್ಕೆ ಸಂಭಂಧಿಸಿದ ವಿಚಾರವೇ. ಇದನ್ನು ದೇವರೆಂದರೆ ಯಾರಿಗೂ ಕಾಣೋದಿಲ್ಲ. ಹೀಗಾಗಿ ಬರವಣಿಗೆಯ ಮೂಲಕ ವಿಚಾರಗಳನ್ನು ಹೊರಗಿಳಿಸುವ ಪ್ರಯತ್ನ 20 ವರ್ಷದಿಂದ ನಡೆಯುತ್ತಿದೆ. ಆಳವಾಗಿರುವ ಅರಿವಿನವರೆಗೆ ಹೋಗದಿದ್ದರೂ ವಾಸ್ತವದಲ್ಲಿ ಹೇಗಿರಬೇಕು ಹೇಗಿದ್ದೇವೆ ಯಾಕೆ ಹೀಗಾಯಿತು ಸತ್ಯ ಯಾವುದು ಧರ್ಮ ಎಲ್ಲಿದೆ? ಅಧ್ಯಾತ್ಮ ವನ್ನು ಸರಳವಾಗಿ ಅರಿಯಲು ನಾನು ಹೋಗಬೇಕಷ್ಟೆ.
ಭಗವಂತ ಎಲ್ಲರಲ್ಲಿಯೂ ಅಡಗಿರುವಂತೆ ಭಗವತಿಯ ಜ್ಞಾನ ಎಲ್ಲರಲ್ಲಿಯೂ ಇದೆ. ಭಗವಂತನನ್ನು ಅರಿಯಲು ಜ್ಞಾನ ಬೇಕೆಂದರೆ ಜ್ಞಾನ ದೇವತೆ ಭಗವತಿ ಒಲಿಯಲೇಬೇಕು.
ಸತ್ಯ ಒಂದೇ ಎನ್ನುವವರಲ್ಲಿಯೇ ಅನೇಕ ಸತ್ಯದ ತಿರುವುಗಳಿದ್ದರೂ ಎಲ್ಲದರ ಮೂಲ ಒಂದೇ. ಆ ಮೂಲ ತಲುಪಲು ಒಳಹೊಕ್ಕಿ ನೋಡಲೇಬೇಕು.
ದೇಶ ಸುತ್ತು ಕೋಶ ಓದು ಇದು ಭೌತವಿಜ್ಞಾನವಾದರೆ
ದೇಶ ಸುತ್ತದೆ ಕೋಶ ಓದದೆಯೇ ಅಧ್ಯಾತ್ಮ ವಿಜ್ಞಾನಿ ಆದವರು ಪೂಜನೀಯರಾದರು. ಹಾಗಾದರೆ ಯಾರು ಶ್ರೇಷ್ಠ ರು? ಒಳಗಿದ್ದವರೆ ಹೊರಗಿಳಿದವರೆ? ಇಬ್ಬರೂ ಅಗತ್ಯವೆ.
ಕಾರಣ ಮಾನವನ ಜೀವನ ಕೇವಲ ಚಿಂತನೆ ಮಾಡೋದರಿಂದ ನಡೆಯೋದಿಲ್ಲ.ಅದನ್ನು ಕಾರ್ಯರೂಪಕ್ಕೆ ಇಳಿಸುವುದು ಬಹಳಮುಖ್ಯ. ಹೀಗಾಗಿ ಕಾರ್ಯ ನಡೆಸೋ ಮೊದಲು ಇದರ ಸತ್ಯಾಸತ್ಯತೆಯ ಬಗ್ಗೆ ಅರಿವಿರೋದು ಮುಖ್ಯ. ಎಷ್ಟು ಸತ್ಯವೆಂದರೂ ಇನ್ನೊಂದು ರೂಪದಲ್ಲಿ ಅಸತ್ಯವಾಗಿ ಕಂಡಾಗ ಹೊರಗಣ್ಣಿನ ಸತ್ಯ ಒಳಗಣ್ಣಿಗೆ ಅಸತ್ಯ ಎಂದರೆ ಸಮಸ್ಯೆ ಯೇ ಒಳಗಿಳಿಯುತ್ತದೆ. ಹಾಗೆ ಒಳಗಣ್ಣಿನ ಸತ್ಯ ಹೊರಗಣ್ಣಿಗೆ ಅಸತ್ಯವಾದಾಗ ಸಮಸ್ಯೆ ಹೊರಗೆ ಬೆಳೆಯುತ್ತಲೇ ಇರುತ್ತದೆ.
ಇವೆರಡರ ಮಧ್ಯೆ ನಿಂತು ಜೀವನನಡೆಸೋದೇ ಮಾನವನ ಸಾಧನೆ. ನಾವೆಲ್ಲರೂ ಒಂದು ರೀತಿಯ ಸಾಧಕರೆ.ಸತ್ಯ ತಿಳಿದೂ ಮೌನವಾಗಿರಬೇಕೆಂದರೆ ನಮಗೆ ತಾಳ್ಮೆ ಸಹನೆ ಕರುಣೆ ಪ್ರೀತಿ ವಿಶ್ವಾಸವಿದೆ ಎಂದರ್ಥ. ಆದರೆ ಇದು ಅತಿಯಾದಾಗಲೇ ಎಲ್ಲಾ ಒಳ್ಳೆಯ ಗುಣ ಬಿಟ್ಟು ಕೆಟ್ಟಗುಣ ಬೆಳೆಯೋದು.
ಅಸುರಿ ಗುಣ ದೈವಶಕ್ತಿಯನ್ನು ಮೀರಿ ಬೆಳೆದಾಗ ದೇವರೂ ಏನೂ ಮಾಡಲಾಗದೆ ಹಿಂದುಳಿಯುವುದು.ಹಾಗೆಯೇ ಇಂದು ಮಾನವನಲ್ಲಿ ಒಳ್ಳೆಯ ಗುಣವಿದ್ದರೂ ಜೀವನ ನಡೆಸಬೇಕಾದರೆ ಹೊರಗೆ ನಡೆಯಬೇಕು. ನಡೆದ ಮೇಲೆ ಅಸತ್ಯ ಅನ್ಯಾಯ ಅಧರ್ಮ ನೋಡಿಯೂ ಸುಮ್ಮನಿರಬೇಕು.ತಿಳಿಯದವರ ತಪ್ಪು ತಪ್ಪಲ್ಲ.ತಿಳಿದೂ ನಡೆಯುವವರ ಪರಿಸ್ಥಿತಿ ಯಾರಿಗೂ ಅರ್ಥ ವಾಗದು.
ಅದಕ್ಕೆ ಇರಬೇಕು ಜ್ಞಾನ ಬಂದಮೇಲೆ ಭೂಮಿಯಲ್ಲಿ ಬದುಕೋದು ಕಷ್ಟವೆಂದರು. ಈ ಕಡೆ ಧರ್ಮ ಇನ್ನೊಂದು ಕಡೆ ಅಧರ್ಮ. ಹಾಗೆ ಸತ್ಯ ಅಸತ್ಯಗಳ ಹೋರಾಟ ಹಾರಾಟಮಾರಾಟದ ನಡುವೆ ಮನುಕುಲ ನಿಂತಿದೆ. ಇದನ್ನು ಮನರಂಜನೆ ಎನ್ನಬೇಕೆ ಆತ್ಮವಂಚನೆಯೆ?
ಅಧ್ಯಾತ್ಮ ದ ಪ್ರಕಾರ ಆತ್ಮವಂಚನೆ.ಭೌತಿಕದಲ್ಲಿ ಜೀವಕ್ಕೆ ಮನರಂಜನೆ. ಮನರಂಜನೆಯಲ್ಲಿ ಉತ್ತಮ ಗುಣಮಟ್ಟದ ವಿಚಾರವಿದ್ದರೆ ಆತ್ಮವಿಶ್ವಾಸ ವಾಗಬಹುದು ಆತ್ಮಸಂಶೋಧಕರಾಗಬಹುದು. ಆದರಿದು ಹೆಚ್ಚು ಜನರನ್ನು ಸೆಳೆಯದ ಕಾರಣ ಇಂದು ಆತ್ಮಹತ್ಯೆಗಳು ಹೆಚ್ಚಾಗಿವೆ.
ಜೀವ ಹತ್ಯೆ ಪ್ರತಿದಿನವೂ ಇದೆ. ಆತ್ಮಹತ್ಯೆ ಎಂದರೆ ಆತ್ಮಕ್ಕೆ ಸಾವಿಲ್ಲ ಹತ್ಯೆ ಹೇಗಾಗುತ್ತದೆ ಎಂದರೆ ಅಸತ್ಯ ಅನ್ಯಾಯ ಅಧರ್ಮ ದೆಡೆಗೆ ಜೀವನಡೆದರೂ ಆತ್ಮಹತ್ಯೆ ಗೆ ಸಮಾನ.
ಇಷ್ಟಕ್ಕೂ ನಮ್ಮ ಜನ್ಮ ಜನ್ಮಾಂತರದ ಧರ್ಮ ಕರ್ಮ ದ ಬಗ್ಗೆ ತಿಳುವಳಿಕೆಯಿಲ್ಲ. ಈಗಿನ ಜನ್ಮದಲ್ಲಿ ತಿಳಿದರೆ ಅದೇ ಪುಣ್ಯ.
ಇದಕ್ಕೆ ಸರಿಯಾದ ಗುರು ಬೇಕು.ಸಹಕಾರ ಬೇಕು.ಶಿಕ್ಷಣ ಬೇಕಷ್ಟೆ. ಆಗ ಆತ್ಮನಿರ್ಭರ ಭಾರತ ಸಾಧ್ಯ.
ಯಾರೋ ಹೊರಗಿನವರು ತಿಳಿಸಿರೋದು ಸತ್ಯವೆಂದರೆ ನಮ್ಮೊಳಗಿನ ಕೂಗು ಅಸತ್ಯವೆ? ಆತ್ಮಜ್ಞಾನ ಹೊರಗಿದೆಯೆ?
ಸತ್ಯ ಹೊರಗಿದೆಯೆ? ದೇವರು ಪರಮಾತ್ಮ ಹೊರಗೆ ಮಾತ್ರ ಇರೋದೇ?
ಪ್ರಶ್ನೆಗೆ ಉತ್ತರ ಎರಡೂ ಕಡೆಯಿದ್ದರೂ ಹೊರಗೆ ಬೇಗ ಕಾಣುತ್ತದೆ ಶಾಶ್ವತವಿರದು. ಒಳಗೆ ನಿಧಾನವಾಗಿ ಕಂಡರೂ ತೋರಿಸಲಾಗದು. ಹೀಗಾಗಿ ಎಲ್ಲಾ ಒಂದು ನಾಟಕವಷ್ಟೆ.
ಸೂತ್ರಧಾರ ಮೇಲಿರುವನು ಪಾತ್ರಧಾರಿ ಕೆಳಗಿರುವನು.
ಸೂತ್ರಧಾರನಮರೆತು ನಾಟಕವಾಡೋದರಲ್ಲಿ ಅರ್ಥ ವಿಲ್ಲ.
No comments:
Post a Comment