ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Thursday, May 8, 2025

ಗುರುವೇ ದೇವರು

ಈ ದಿನ ದೇವಗುರು ಬ್ರೃಹಸ್ಪತಿಯವರ ಜನ್ಮದಿನ.
ಗುರುವೇ ದೇವರೆಂದರು.ದೇವರಿಗೊಬ್ಬರು ಗುರುವಿದ್ದರು ಅಂದರೆ ಅಸುರರಿಗೂ ಗುರು ವಿದ್ದರು  ಅವರೆ ಶುಕ್ರಾಚಾರ್ಯರು. ಹೀಗೇ ದೇವನೊಬ್ಬನೆ ನಾಮಹಲವು ಎಂದಂತೆ ಗುರುಗಳು ಒಬ್ಬರಾಗಿದ್ದರೂ ಅವರ ಶಿಷ್ಯರು ಹಲವರಿದ್ದಾರೆ.ಅವರವರ‌ಕಾಲಕ್ಕನುಗುಣವಾಗಿ ಭೂಮಿಯಲ್ಲಿ ನಡೆದಿದ್ದರು.ನಡೆ ನುಡಿಗಳೂ ಬದಲಾದವು.
ದೇವರನ್ನು ಅಸುರರು  ವಿರೋಧಿಸಿದರೆ ಅಸುರರನ್ನು ದೇವರು ವಿರೋಧಿಸಿದರು.ದೇವತೆಗಳು ಭಗವಂತನ ಮೇಲ್ಮಟ್ಟದ ಸತ್ಯವನರಿತು ನಡೆದಿದ್ದರೆ ಅಸುರರು ಕೆಳಮಟ್ಟದ ಸತ್ಯವರಿತು ಪಾತಾಳದವರೆಗೂ ಹೋದರು.
ಅಂದರೆ ಸತ್ಯ ಮತ್ತು ‌ಮಿಥ್ಯದ‌ನಡುವಿರುವ ಅರ್ಧ ಸತ್ಯ ಇಂದಿಗೂ‌ ಮಧ್ಯವರ್ತಿ ‌ಮಾನವನನ್ನು ನಡೆಸುತ್ತಿದೆ. ಹೀಗೆ ಅತಂತ್ರಸ್ಥಿತಿಗೆ  ಮಾನವ ತಲುಪಿದಾಗ  ಆತ್ಮಕ್ಕೆ ತೃಪ್ತಿ ಸಿಗದೆ ಈ ಕಡೆ ದೇವರೂ ಕಾಣೋದಿಲ್ಲ.ಅಸುರರೂ ಇರೋದಿಲ್ಲ.
ಆತ್ಮವೇ ದೇವರು ಎಂದಾಗ ಅಸುರರಲ್ಲಿ ಆತ್ಮವಿರೋದಿಲ್ಲವೆ?
ಆತ್ಮಜ್ಞಾನದ  ಕೊರತೆ ಅಸುರರಲ್ಲಿ ಹೆಚ್ಚಾಗಿದ್ದು ಭೂಮಿಯನ್ನು ದುರ್ಭಳಕೆ ಮಾಡಿಕೊಳ್ಳುವರು.ಭೂಮಿಯ ಮೇಲಿದ್ದೂ ಅದನ್ನು  ತನ್ನ ವಶಕ್ಕೆ ಅಧರ್ಮ ಅನ್ಯಾಯ ಅಸತ್ಯದಿಂದ‌  ಪಡೆದಾಗ  ಭೂಮಿ‌ಯಲ್ಲಿ ಸತ್ವ ಸತ್ಯ ತತ್ವ ಉಳಿಯದು. ಇದನ್ನು ಸರಿಯಾದ ಜ್ಞಾನ ಮಾರ್ಗದಲ್ಲಿ  ನಡೆಯುವ ಗುರುಗಳಿಂದಷ್ಟೇ ಸರಿಪಡಿಸಬಹುದು.ಯಾವಾಗ ಗುರುವನ್ನು ತಮ್ಮ ಹತೋಟಿಯಲ್ಲಿಡಲು  ರಾಜರು‌ ಪ್ರಯತ್ನ ಪಡುವರೋ ಮುಗಿಯಿತು ಕಥೆ.
ಈಗ ಇದೇ ಹೆಚ್ಚಾಗಿ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ.ಮೇಲಿರುವ ಅಧಿಕಾರಿಗಳು ಗುರುಗಳು ಪ್ರಸಿದ್ದರು ಪ್ರಭಾವಿಗಳು  ರಾಜಕೀಯದೆಡೆಗೆ ‌ನಡೆದಷ್ಟೂ ಜನಸಾಮಾನ್ಯರ ಅರಿವಿನಲ್ಲಿ ಕೊರತೆ‌ಹೆಚ್ಚಾಗಿ ಸರಿಯಾದ ಸತ್ಯ ತಿಳಿಯದೆ ಅವರ ಹಿಂದೆ ನಡೆದರೆ  ಮೇಲಿನ ಪರಮಾತ್ಮನ ದರ್ಶನ ಆಗುವುದೆ?  ಇಲ್ಲಿ ಪರಮಾತ್ಮನ ದರ್ಶನಕ್ಕೆ ಬೇಕಾದ ಜ್ಞಾನದ ಶಿಕ್ಷಣ‌ಕೊಡದೆ ಆಳಿದವರನ್ನು ದೇವರೆನ್ನಬಹುದೆ? ಒಟ್ಟಿನಲ್ಲಿ ಎಲ್ಲಿ ಹಣ ಅಧಿಕಾರ ಸ್ಥಾನ ಹೆಸರು  ವೈಭೋಗವಿದೆಯೋ ಅಲ್ಲಿ ಜನಸಂಖ್ಯೆ ಬೆಳೆದು ನಿಂತಾಗ ಅಸುರರಿಗೆ ಸ್ವರ್ಗ ಸುಖ. ಆದರೆ ಒಮ್ಮೆ ಅಸುರರೂ ಮರೆಯಾದಾಗ  ಪಾತಾಳಕ್ಕೆ  ಇಳಿಯುವ ಜನರಿಗೆ ನರಕ ದರ್ಶನ ಆಗೋದೂ ಸತ್ಯವೆ ಆಗಿದೆ. 
ಈಗ ಭಯೋತ್ಪಾದಕರು ಭಯವಿಲ್ಲದೆ ಉತ್ಪಾದನೆಯಲ್ಲಿ ತೊಡಗಿದ್ದಾರೆ.ಅದನ್ನು  ಉಪಯೋಗಿಸಿಕೊಂಡು ಅಧಿಕಾರ ಸ್ಥಾನ ಸನ್ಮಾನವನ್ನು  ಜನ ಪಡೆಯುತ್ತಿದ್ದರೂ  ಯಾವಾಗಿದು ತನ್ನ  ನಿಜವಾದ ಮುಖಕಳಚುವುದೋ  ಗೊತ್ತೇ ಆಗದು.
ಒಟ್ಟಿನಲ್ಲಿ  ಗುರುವನ್ನು ಆರಿಸುವಾಗ ಶಿಷ್ಯನ ಸ್ವಂತ ಬುದ್ದಿ ಜ್ಞಾನ  ಎಚ್ಚರವಾಗಿರಬೇಕು. ಮಕ್ಕಳ ಜ್ಞಾನ ಶುದ್ದವಾಗೇ ಇದ್ದರೂ ಪೋಷಕರು ಅದನ್ನು  ಸರಿಯಾದ ಗುರುಗಳ‌ಮೂಲಕ ಬೆಳೆಸಿದಾಗಲೇ ಸದ್ಗತಿ.ಇಲ್ಲವೆಂದರೆ ಅಧೋಗತಿ.
ಎಷ್ಟು ಹಣ ಸಂಪಾದನೆ ಮಾಡಿದರೂ ಜ್ಞಾನ ಸಂಪಾದನೆಗೆ ಸರಿಯಾಗಿರದು. ಹಾಗೆ ಎಷ್ಟು ಜ್ಞಾನವಿದ್ದರೂ ಹಣಗಳಿಸಿ  ಜೀವನ ನಡೆಸೋದಕ್ಕೆ ಗುರುಗಳಿರಲೇಬೇಕು. ಹಣವನ್ನು ಸದ್ಬಳಕೆ ಮಾಡಿಕೊಂಡರೆ‌  ಜೀವನದ ಗುರಿ ಕಾಣಬಹುದು.
ದುರ್ಭಳಕೆ ಆದರೆ‌  ಅದರ ಮೂಲವೇ  ಬೇರೆಯಾಗಿರುತ್ತದೆ. ಜೀವಾತ್ಮ ಪಾತಾಳಕ್ಕೆ ಇಳಿಯುವ‌ ಮುನ್ನ  ಎಚ್ಚರದಿಂದ ಇದ್ದರೆ  ಗುರುಗಳ ಜ್ಞಾನಕ್ಕೆ ಬೆಲೆಯಿದೆ.
ಹಣದಿಂದ ಗುರುವನ್ನು ಪಡೆಯಲಾಗದು.ಹಣ ನೀಡಿದರೆ ಗುರುಗಳು ಒಲಿಯಲೂಬಾರದು.ಕಾರಣ ಹಣದ ಹಿಂದಿನ  ಕರ್ಮದ  ಬಗ್ಗೆ ಅರಿವಿರಬೇಕು.ಭ್ರಷ್ಟಾಚಾರ ದ ಹಣದಿಂದ ಧಾರ್ಮಿಕ ಕಾರ್ಯಕ್ರಮ ನಡೆಸಿದರೂ ಧರ್ಮ ನಿಲ್ಲದು.
ಇಂದಿನ‌ಪರಿಸ್ಥಿತಿಯಲ್ಲಿ ಸುತ್ತಮುತ್ತಲೂ ಗುರುವಿದ್ದರೂ ಜ್ಞಾನದ ಕೊರತೆಯಿದೆ ಎಂದರೆ ಸುಜ್ಞಾನದ ಶಿಕ್ಷಣ ಇಲ್ಲದೆ ಅಜ್ಞಾನ ಬೆಳೆದಿದೆ ಎಂದರ್ಥ. ಇದಕ್ಕೆ ಕಾರಣಕರ್ತರು ಯಾರು? ದೇವಗುರುಗಳೆ?  ಅಸುರ ಗುರುಗಳೆ? 
ಜನರಲ್ಲಿ ಅಡಗಿರುವ ಸಾಮಾನ್ಯಜ್ಞಾನದಿಂದಲೇ ಇದಕ್ಕೆ ಉತ್ತರ ಸಿಗುತ್ತದೆ. ಯಾರ ಹಿಂದೆ ಯಾರು‌ನಡೆಯಬೇಕು? ಯಾರು ನಡೆಯುತ್ತಿರುವುದು? ಎಲ್ಲಾ ಗೊಂದಲದಲ್ಲಿದ್ದರೆ ಗದ್ದಲವೇ ಹೆಚ್ಚು. ಗದ್ದಲದಲ್ಲಿ ಗೆದ್ದಲು ಹಿಡಿದಿರೋ ಜ್ಞಾನವನ್ನು ‌ ಬಿಡಿಸಿಕೊಂಡು ಬರೋರೆ ನಿಜವಾದ ಗುರು.‌
ಇದಕ್ಕೆ ಸಾಕಷ್ಟು ಪರಿಶ್ರಮ, ಪರಿಜ್ಞಾನ, ಸ್ವಂತ ಬುದ್ದಿ , ನಿಸ್ವಾರ್ಥ ನಿರಹಂಕಾರ  ಸಮಾಧಾನ,ಶಾಂತಿಯ ಅಗತ್ಯವಿದೆ.
ಸತ್ಯ ಕಾಣೋದೇ ಬೇರೆ ಇರೋದೆ ಬೇರೆ.
ಕಾಣುವ ಸತ್ಯದ ಹಿಂದೆ ಸಾಕಷ್ಟು ಗುರುಹಿರಿಯರಿದ್ದಾರೆ.ಕಾಣದ ಸತ್ಯವನ್ನು ತೋರಿಸುವ ಗುರುಗಳು  ಕೆಲವರಿದ್ದಾರೆ. ಅವರ ಹಿಂದೆ ಹೋಗೋರು ಕಡಿಮೆಯಾಗಿ ಇಂದು ಜನಸಂಖ್ಯೆ ಬೆಳೆದಿದೆ.ಜ್ಞಾನಿಗಳ ಸಂಖ್ಯೆ ಇಳಿಯುತ್ತಿದೆ.ಎಲ್ಲಾ ಓದಿ ತಿಳಿಯೋದಾದರೆ ಅದರೊಳಗೆ ಹೊಕ್ಕಿ ಸತ್ಯ ಅರಿಯೋದು ಯಾವಾಗ? ಇದನ್ನು ಸ್ವಯಂ ಗುರುಗಳಾದವರೆ ಮಾಡಬೇಕಿದೆ.‌ಎಲ್ಲಾ ಮಂತ್ರ ತಂತ್ರ ಯಂತ್ರದಿಂದ  ಮಾಡಬಹುದಾದರೆ ಸ್ವತಂತ್ರವಾಗಿರುವ ಸತ್ಯ ತಿಳಿಯೋದು ಕಷ್ಟ. ಒಟ್ಟಿನಲ್ಲಿ ಯಾರಲ್ಲಿ ಸ್ವತಂತ್ರ ಜ್ಞಾನವಿದ್ದು  ನಡೆದು ಸತ್ಯವರಿತರೋ  ಅವರು ದೇವ ಗುರುಗಳಾದರು.
ತಪ್ಪು ದೇವತೆಗಳಿಂದಲೂ ನಡೆಯುತ್ತದೆ. ಹೀಗಾಗಿ ಗುರು ಇಲ್ಲದೆ ದೇವರಾಗೋದಿಲ್ಲ. ಪರಮಾತ್ಮನ  ದರ್ಶನ ಗುರುಗಳ ಮೂಲಕವಾದಾಗ  ಗುರುವೇ ದೇವರಾಗುವರು.‌ ಹಿಂದಿನ ಗುರುಗಳು ಸ್ವತಂತ್ರ ವಾಗಿ ನಡೆದು  ಸತ್ಯದರ್ಶನ ಮಾಡಿಕೊಂಡು  ನಮಗೆ ಸತ್ಯ ತಿಳಿಸಿ ಹೋಗಿರುವರು.ಅವರನ್ನು ಅನುಸರಿಸಿದವರೂ ಗುರು ವಾದರು. ಅವರ ಅನುಭವಕ್ಕೂ ಈಗಿನವರಿಗೂ ವ್ಯತ್ಯಾಸವಿದ್ದರೂ ತತ್ವ ಒಂದೇ. ಗುರಿ ಒಂದೇ  ಆದರೆ ಹೋಗುವ ದಾರಿ  ಬೇರೆಯಾಗಿರುವ ಕಾರಣ ಅಧರ್ಮ ಬೆಳೆದಿದೆ. ಅಂತರಂಗದೆಡೆಗೆ ಸಾಗೋದಕ್ಕೆ ಅಂತರಾಷ್ಟ್ರೀಯ ಪ್ರಯಾಣಯ ಅಗತ್ಯವಿಲ್ಲ. ಇದೀಗ ಅಂತರಾಷ್ಟ್ರೀಯ ಪ್ರಯಾಣದಲ್ಲಿ ಅಂತರಂಗದ ಪರೀಕ್ಷೆ ನಡೆಸಕಾಗದೆ ಹೊರಮುಖವಾಗಿರೋದು ಕಲಿಕೆಯ ಪ್ರಭಾವ ಎಂದರೆ ಸರಿಯಾಗುತ್ತದೆ. ಎಲ್ಲಿಯವರೆಗೆ ಓದಿ ಸತ್ಯ ತಿಳಿದು ಅದನ್ನು ಅಳವಡಿಸಿಕೊಂಡು  ನಡೆಯಲಾಗದೋ ಅಲ್ಲಿಯವರೆಗೆ ವಿಜ್ಞಾನದಲ್ಲಿ ಅರ್ಧ ಸತ್ಯವಿರುವುದು. ಭೌತವಿಜ್ಞಾನ  ಇದರಲ್ಲಿ ಮುಂದೆ ನಡೆದಿದೆ.ಅಧ್ಯಾತ್ಮ ವಿಜ್ಞಾನ ಅನುಭವವಿಲ್ಲದೆ ಹಿಂದುಳಿಯುತ್ತಾ ಹಿಂದೂಗಳು  ಸರಿಯಾದ ಗುರುವನ್ನು  ಅರಿಯದೆ ಮುಂದೆ ನಡೆದು ಹಿಂದೆ ತಿರುಗಿ ನೋಡಲಾಗದೆ ಹೋಗುತ್ತಿರುವುದು ಭಾರತಕ್ಕೆ  ಸಮಸ್ಯೆಯಾಗುತ್ತಿದೆ.
ಎಲ್ಲಾ ಒಳಗಿದೆ ಆದರೆ ಹೊರಗೆಳೆದು  ಅಪಾರ್ಥರಿಗೆ ಹಂಚಿದರೆ  ಅನರ್ಥ ವಾಗುತ್ತದೆ. ಸತ್ಯಕ್ಕೆ ಬೆಲೆ ಕಟ್ಟಲಾಗದು.
ಯಾವಾಗಿದು ಹಣದ ಹಿಂದೆ ನಡೆಯಿತೋ  ಅಜ್ಞಾನ ಬೆಳೆಯಿತು.ಜೊತೆಗೆ ಅಸತ್ಯ ಅಧರ್ಮ ವೂ ಸೇರಿಕೊಂಡು ಜನರನ್ನು ಆಳತೊಡಗಿತು.
ಈಗಲೂ  ಆಳೋರಿಗೆ ಸಹಕಾರ ಕೊಟ್ಟು  ಅಳುವುದೇ ಜೀವನವಾಗಿರುವುದು ದುರಂತ. ಆಳೋರ ಗುರಿಯ ಬಗ್ಗೆ ಅರಿವಿರಲಿ. ಎಲ್ಲಾ ಒಂದೇ .ಎಲ್ಲಾ ಮಾನವರೆ ಆದರೆ ಎಲ್ಲಾ ಗುರುವಾಗಿರೋದಿಲ್ಲ. ಗುರುಗಳನ್ನು ಗುರುತಿಸುವುದಕ್ಕೂ  ಜ್ಞಾನವಿರಬೇಕು. 
ಜ್ಞಾನ ದೇವತೆಗೆ  ಸರಿಯಾದ  ಅಧಿಕಾರ ಸಹಕಾರ ಗೌರವ ಕೊಡದೆ ಆಳಿದರೆ ಅಜ್ಞಾನವಷ್ಟೆ.
ಶ್ರೀ ಗುರುಭ್ಯೋ ನಮ:
ಓಂ ನಮೋ ನಾರಾಯಣಾಯ

No comments:

Post a Comment