ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Wednesday, May 7, 2025

ಜೀವನ ಯಾತ್ರೆ ಅಂದು ಇಂದು

ಅಂದಿನ ಯಾತ್ರೆ ಇಂದಿನ ಯಾತ್ರೆ ನಡುವೆ ಸಾಕಷ್ಟು ಜಾತ್ರೆಗಳು ಸೃಷ್ಟಿ ಯಾಗಿವೆ. ವ್ಯವಹಾರಕ್ಕೆ ಇಳಿದಾಗ ಇದೊಂದು ಜನ ಮರುಳೋ ಜಾತ್ರೆಯೋ ಎಂದಾಗುತ್ತದೆ.
ಮಾನವನ ಜೀವದ ಯಾತ್ರೆಯಲ್ಲಿ  ಪ್ರವಾಸ ಬೆಳೆದಷ್ಟೂ ಸಮಸ್ಯೆ ಬೆಳೆಯುತ್ತದೆ.  ಹಿಂದೆ ಇದ್ದಲ್ಲಿಯೇ  ಜೀವನವನ್ನು ಅರ್ಥ ಮಾಡಿಕೊಂಡು  ಪರಮಾತ್ಮನೆಡೆಗೆ ಸಾಗಿದವರ ಸಮಸ್ಯೆ   ಒಳಗೇ ನಿವಾರಣೆಯಾಗಿತ್ತು. ಹಾಗಾದರೆ ನಮ್ಮ ಸಮಸ್ಯೆಗಳಿಗೆ ಕಾರಣ  ಹೊರಗಿದೆಯೋ ಒಳಗಿದೆಯೋ?
 ಒಳಗಿನ ಸಮಸ್ಯೆಗೆ ಕಾರಣ ಹೊರಗಿನ‌ ವಿಷಯವಾಗಿದೆ.
ಹೊರಗಿನ ಸಮಸ್ಯೆಗೆ ಕಾರಣ ಒಳಗಿನ ವಿಷಯವಾಗಿದೆ.
ಹಾಗಾಗಿ ಎಲ್ಲಿಂದ ಸಮಸ್ಯೆ ಸೃಷ್ಟಿ ಯಾಗಿದೆಯೋ ಅದನ್ನು ತಡೆಯುವ ಪ್ರಯತ್ನ ಅಲ್ಲಿದ್ದೇ ಮಾಡಿದರೆ  ಉತ್ತಮವಲ್ಲವೆ?

ಈಗ ಹೊರಗೆ ಯುದ್ದವಾದರೆ ಹೊರಗಿನ ಸೈನಿಕರು ಮಾಡುವರು .ಒಳಗಿರುವ ಜನ ಹೋಗಬಹುದೆ?
ಹಾಗೆ ಒಳಗಿನ ಯುದ್ದಕ್ಕೆ ಒಳಗಿರುವವರ ಸಹಕಾರ  ಸಹಾಯವೂ ಇರುತ್ತದೆ. ಆದರೆ ಇದರಲ್ಲಿ ಸತ್ಯ ಧರ್ಮದ ಕೊರತೆಯಿರುತ್ತದೆ. 

ಮಕ್ಕಳಿಗೆ ಮೂಲ ಶಿಕ್ಷಣವೇ ಸರಿಯಾಗಿ ಕೊಡದೆ ಹೊರಗೆ ಕಳಿಸಿ  ಹೊರಗೆ ಸರಿಯಿಲ್ಲವೆಂದರೆ ತಪ್ಪು ಒಳಗೇ ಬೆಳೆಯುತ್ತದೆ.
ಹಾಗೆಯೇ ಹೊರಗಿನವರಿಂದ  ಸಮಸ್ಯೆ ಬೆಳೆದಿರೋದಕ್ಕೆ ಕಾರಣವೇ ಅವರ ಶಿಕ್ಷಣ, ವ್ಯವಹಾರ, ಧರ್ಮ ,ಸಾಲ .
ಇದರಿಂದ ಮುಕ್ತಿ ಪಡೆಯಲು ಒಳಗಿನವರೊಂದಿಗೆ  ಬಾಳೋದನ್ನು ಕಲಿಯಬೇಕಷ್ಟೆ. ಒಳಗೇ ಇರುವ ಸತ್ಯಜ್ಞಾನವನ್ನು  ಅರ್ಥ ಮಾಡಿಕೊಳ್ಳುವ ಶಿಕ್ಷಣ ನೀಡಬೇಕು.
ಇದನ್ನು ಹೊರಗಿನವರು ಮಾಡಬೇಕೆ? 
ಮಾಡಿದ್ದುಣ್ಣೋ ಮಹಾರಾಯ ಎಂದಂತೆ ನಾವೇನು ಒಳಗೆ ಹಾಕಿಕೊಂಡರೂ  ಅದೇ ನಮ್ಮನ್ನು ನಡೆಸುತ್ತದೆನ್ನುವಾಗ ನಮ್ಮ  ತಪ್ಪಿಗೆ ಒಪ್ಪಿಗೆ ಸರಿಯಾಗಿ  ಪ್ರತಿಫಲವಿದೆ.
ಕರ್ಮಕ್ಕೆ ತಕ್ಕಂತೆ ಫಲ ಎನ್ನುವುದೇ ಸತ್ಯವಾಗಿದೆ.ಇದನ್ನು ಹೊರಗಿನ ಸರ್ಕಾರ ಸರಿಪಡಿಸಲಾಗದು.ಇನ್ನಷ್ಟು ದುಷ್ಕರ್ಮ ಬೆಳೆಯಬಹುದು..ಒಳಗೆ ಎಚ್ಚರವಾಗಿದ್ದರೆ ಎಲ್ಲಾ ಸರಿಯಾಗಿ ಅರ್ಥ ವಾಗಬಹುದು. ಒಳಗೆ ನಿದ್ದೆ ಮಾಡುತ್ತಿದ್ದು ಹೊರಗೆ ಎಚ್ಚರವಿದ್ದರೆ  ಅಧೋಗತಿ.

No comments:

Post a Comment