ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Friday, May 16, 2025

ಹೆಣ್ಣಿನ ಜನ್ಮ ಪುಣ್ಯವೇ ? ಪಾಪವೆ?

ಫೇಸ್‌ಬುಕ್‌ ನಲ್ಲಿ ಒಬ್ಬರು ಕೇಳಿದ ಪ್ರಶ್ನೆ
ಮುಂದಿನ‌ಜನ್ಮದಲ್ಲೂ ಹೆಣ್ಣಾಗಿ‌ಹುಟ್ಟುವ ಆಸೆ ಇದೆಯೆ?ಎಂದಾಗಿತ್ತು ಅದರಲ್ಲಿ 99.9%  ಇಲ್ಲ   ಎನ್ನುವ ಉತ್ತರಕೊಟ್ಟಿರೋದು ನೋಡಿದರೆ ಭಾರತ ಹೇಗಿರಬಹುದು ಊಹಿಸಿ.‌

ಹೆಣ್ಣು ಸಂಸಾರದ ಕಣ್ಣು, ಹೆಣ್ಣಿಲ್ಲದ  ಭೂಮಿಯಿಲ್ಲ, ಗೃಹಲಕ್ಮಿ, ಗೃಹಮಂತ್ರಿ ಮನೆಯ  ದೀಪವಾಗಿರುವ. ಹೆಣ್ಣಿನ  ಜನ್ಮ ಪುಣ್ಯವೋ  ಪಾಪವೋ  ಎನ್ನುವ ಪ್ರಶ್ನೆಗೆ  ಉತ್ತರ ಜ್ಞಾನದೊಳಗಿದೆ. ಹೆಣ್ಣಿನ ಸುಜ್ಞಾನ  ಸದ್ಬಳಕೆಯಾದರೆ ಅದು ಪುಣ್ಯ. ದುರ್ಭಳಕೆ ಆದಷ್ಟೂ ಪಾಪ. ಇದನ್ನು ಅನುಭವಿಸೋದು   ಭೂಮಿಯ ಜನ.  ಕನ್ನಡಾಂಬೆ,ಭೂ ತಾಯಿ,ಪ್ರಕೃತಿ ಮಾತೆ,ಆದೇವಿ ಈ ದೇವಿ ಎಂದು  ಕರೆದು ಪೂಜಿಸುವ  ಜ್ಞಾನಿಗಳ ದೇಶ  ಈಗ ಅಜ್ಞಾನಿಗಳ ವಶವಾಗಿ  ಹೆಣ್ಣು ಆಟಕ್ಕುಂಟು ಲೆಕ್ಕಕ್ಕಿಲ್ಲವೆಂದಾಗ  ನಾರಿ‌ ಮುನಿದು ಹೋದರೂ‌ ಮಾರಿಯಾಗಿ ಹಿಂದಿರುಗುವಳು. ಯಾರೂ ಮೇಲೆ‌ಕೇಳಿಕೊಂಡು ಜನ್ಮ ಪಡೆದಿರೋದಿಲ್ಲ. ಅವರವರ ಮನಸ್ಥಿತಿ  ಜ್ಞಾನದ ಸ್ಥಿತಿಯ‌ಮೇಲೇ ಧರ್ಮ ಕರ್ಮ  ಇದ್ದು ಅದರಿಂದ ಅನುಭವಿಸಿದ ನೋವು‌ ನಿರಾಸೆ ಸಂಕಟ ಸಮಸ್ಯೆ ಗಳನ್ನು  ಕೇವಲ ಲಿಂಗರೂಪದಲ್ಲಿ  ಪರಿಹಾರ ಸಿಗದು.
 ವಿಪರ್ಯಾಸವೆಂದರೆ ಇಂದು ಭಾರತೀಯ ಸ್ತ್ರೀ ಯರು ಸ್ವತಂತ್ರ ವಾಗಿ‌  ದುಡಿದು ಹಣಗಳಿಸಿ ಸಂಸಾರ ನಡೆಸುವಷ್ಟು  ಮುಂದೆ ಬಂದಿದ್ದರೂ  ಹಲವರ. ಮನೆಯೊಳಗೆ ಅಜ್ಞಾನ  ಬೆಳೆದಂತೆಲ್ಲಾ  ಜೀವನವೇ ಸಾಕು ಎನ್ನುವ ಹಂತಕ್ಕೆ ತಲುಪುತ್ತದೆ. ಇದನ್ನು   ಬೆಳೆಸಿದವರು ಯಾರು?

ಕಲಿಗಾಲವೆಂದರೆ ಸರಿಯೆ? ಹಿಂದಿನ ಪುರಾಣ ಕಥೆಗಳಲ್ಲೂ ಸ್ತ್ರೀ ಯನ್ನು  ಶೋಷಣೆ ಮಾಡಿರುವುದಾಗಿದೆ. ಹಾಗೆಯೇ ಸ್ತ್ರೀ ಸಿಡಿದೆದ್ದು ಯುದ್ದವಾಗಿರೋದಕ್ಕೆ  ಎಲ್ಲದ್ದಕ್ಕೂ ಸ್ತ್ರೀ ಕಾರಣ ಎನ್ನುವ ಮೂಲಕ  ತಮ್ಮ ಅಜ್ಞಾನ ಹೊರಹಾಕಿದ್ದಾರೆ.
ಈಗಲೂ ನಮ್ಮ ಕಣ್ಣ ಮುಂದೆಯೇ  ಆಪರೇಷನ್ ಸಿಂದೂರ್
ಗೆ ಸ್ತ್ರೀ ಯರ ಸಿಂಧೂರವೇ ಕಾರಣವಾಗಿದೆ. ಇದರಲ್ಲಿ ಸತ್ಯ ಎಷ್ಟಿದೆ  ಮಿಥ್ಯ ಎಷ್ಟಿದೆ?
ಭೂಮಿ ತಾಯಿ ಇರೋದು  ಜೀವ ಉಳಿಸಲು  ತಾಯಿ ಜೀವವನ್ನು  ಹೊತ್ತು‌ಹೆತ್ತು ಸಾಕಿ ಸಲಹುತ್ತಾಳೆ, ಅದೇ ಜೀವಕ್ಕೆ ಜೀವನವೇ‌  ಬೇಡ ಎನ್ನುವಷ್ಟು ಕಷ್ಟ ಬಂದಾಗ  ಜೀವನದ  ಗುರಿ  ತಲುಪೋದು ಕಷ್ಟ.
ಈ ಸ್ಥಿತಿಗೆ ಬರೋದಕ್ಕೆ ಕಾರಣವೇ ಅಜ್ಞಾನ. ಸ್ತ್ರೀ ಜ್ಞಾನಿ ಎಂದವರು ಅವಳ ಜ್ಞಾನವನ್ನು  ಎತ್ತಿ ಹಿಡಿಯುವ ಕೆಲಸ‌ಮಾಡದೆ ಆಳಲು ಹೋದರೆ  ಧರ್ಮ ವೆ?
ಈಗಲೂ ಎಷ್ಟೋ ಬ್ರಹ್ಮವಾದಿನಿಯರು  ಜ್ಞಾನಿಗಳೆಂದು ಕರೆಸಿಕೊಂಡು  ಆಶ್ರಮದಲ್ಲಿ ಆರಾಮಾಗಿದ್ದಾರೆ.ಸಂಸಾರಕ್ಕೆ  ಬಂದವರ ಸಹಕಾರದಲ್ಲಿಯೇ ಅವರ ಜೀವನ‌ನಡೆದಿದೆ ಎಂದರೆ ಕಷ್ಟಪಡೋರಿಗೆ  ಬೆಲೆಕೊಡದ ಸಮಾಜದಲ್ಲಿ  ಹೆಣ್ಣು  ಸುಖವಾಗಿರಲು ಸಾಧ್ಯವಿಲ್ಲದೆ  ಎಷ್ಟೋ  ಹೆಣ್ಣು ಇನ್ನೊಂದು ಜನ್ಮ‌ಬೇಡವೆಂದಿರುವರು.
ಇದರಿಂದ ‌ಮುಕ್ತಿ  ಸಿಗುವುದೆ? ಆತ್ಮಕ್ಕೆ ಲಿಂಗಬೇಧವಿಲ್ಲ ಎಂದಾಗ ಈ ತಾರತಮ್ಯದ  ಜೀವನದಿಂದ  ಸಂತಾನವೂ  ಇಲ್ಲದೆ  ಕೇವಲ ಒಬ್ಬಂಟಿಯಾಗಿದ್ದರೂ  ಪೂರ್ಣ ತೃಪ್ತಿ ಸಿಗದ ಎಷ್ಟೋ ಜೀವ‌ಮರಣ ಹೊಂದಿದ್ದರೂ‌  ಅತೃಪ್ತ ಆತ್ಮಕ್ಕೆ  ಇನ್ನೊಂದು  ಜನ್ಮ ಸಿಗದೆ  ಇದ್ದವರೊಳಗೇ ಸೇರಿಕೊಂಡು ಸೇಡು ತೀರಿಸಿಕೊಂಡರೂ ತಿಳಿಯೋದಿಲ್ಲ.
ಎಲ್ಲದ್ದಕ್ಕೂ ಸಾಕ್ಷಿಭೂತಳಾಗಿರುವ ಜಗನ್ಮಾತೆ  ಈ ಕೆಲಸ ಮಾಡಿಸುತ್ತಿರುವಾಗ ಆ ಜಗನ್ಮಾತೆಯನ್ನು ಆರಾಧಿಸುವ‌ ಬೇಡುವವರಿಗೆ ಈ ಸತ್ಯದ ದ ಅರಿವಿಲ್ಲವಾದರೆ  ಪೂಜೆ ಮಾಡೋದರ ಉದ್ದೇಶ. ಆ ಜಗನ್ಮಾತೆಗೇ ಗೊತ್ತು.ಇದಕ್ಕೆ ತಕ್ಕಂತೆ ಫಲವನ್ನು ಅವಳೇ ನೀಡುವುದು ಪ್ರಕೃತಿ ಧರ್ಮ.
ಪ್ರಕೃತಿಗೆ  ವಿರುದ್ದ ವಿಕೃತ ಮನಸ್ಸಿನವರ ಜೊತೆಗಿರುವ ಹೆಣ್ಣು  ಬಯಸೋದು  ಮುಕ್ತಿ ಅಥವಾ ಬಿಡುಗಡೆ.
ಆದರೆ ಪುರುಷನ‌ವಿಕೃತ ಗುಣಕ್ಕೆ ಸಹಕಾರ ನೀಡಿದ‌ಹೆಣ್ಣಿನ ಕರ್ಮಕ್ಕೆ  ಫಲ  ನೀಡೋದು ಯಾರು?
ಪುರುಷನೆ? ಇಲ್ಲಿ ಪುರುಷನೊಬ್ಬನೇ ಇರೋದು ಅವನೇ ಪರಮಾತ್ಮನಾಗಿರೋದು ಎನ್ನುವ ಸತ್ಯ ಒಂದೇ ಆಗಿದೆ. ಗಂಡು ಹೆಣ್ಣುಗಳ  ಅಜ್ಞಾನದಿಂದ. ಸೃಷ್ಟಿ ಹಾಳಾಗುತ್ತದೆ. ಸೃಷ್ಟಿ ಕರ್ತ ಬ್ರಹ್ಮನಿಂದ ಜನ್ಮ ಪಡೆದರೂ ಅದಕ್ಕೆ ಸರಿಯಾದ ಜ್ಞಾನ ನೀಡೋದೆ ಸರಸ್ವತಿ ಮಾತೆ.‌ ಸ್ತ್ರೀ ಗೆ ಜ್ಞಾನದ ಶಿಕ್ಷಣ ಕೊಡದೆ ಆಳಿದವರನ್ನು ಏನೆನ್ಮಬೇಕು? 
ಸನಾತನಿಗಳು ಇರೋದೆಲ್ಲಿ? ಸತ್ಯದಲ್ಲೋ‌ ಮಿಥ್ಯದಲ್ಲೋ?
ಸಂಸಾರದಲ್ಲಿ ಸಾರವಡಗಿದೆ.ಆದರೆ ಅದನ್ನು ಸರಿಯಾಗಿ ಬಳಸದಿದ್ದರೆ‌ ಸಾವಿದೆ. ಸಾವು ಎಲ್ಲರಿಗೂ ಸಮಾನವಾಗಿದೆ.
ಆತ್ಮತೃಪ್ತಿಯಿಂದ ಹೋಗೋದಕ್ಕೂ ಅತೃಪ್ತಿಯಿಂದ ಹೋಗೋದಕ್ಕೂ ಅಂತರವಿದೆ.ಅಂತರದಲ್ಲಿ  ಭ್ರಷ್ಟ ದುಷ್ಟ ರಾಜಕೀಯ ವಿದೆ.ಭ್ರಷ್ಟ ದುಷ್ಟರಿಗೆ ಸ್ತ್ರೀ ಸಹಕಾರ ಸಿಕ್ಕರೆ  ಮುಗಿಯಿತು ಕಥೆ.ಎಲ್ಲದ್ದಕ್ಕೂ ಸ್ತ್ರೀ ಕಾರಣಳಾಗೇ ಇರುತ್ತಾಳೆ.

No comments:

Post a Comment