ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Monday, May 12, 2025

ದೇವರನ್ನು ಕಾಣೋದು ಹೇಗೆ?

🌹 *ಸ್ಪೂರ್ತಿ ಕಿರಣ* 🌹
*ದೇವರು ಕಲ್ಲಿನಲ್ಲಿ, ನೀರಿನಲ್ಲಿ, ಎಲ್ಲೆಲ್ಲಿಯೂ ಕಾಣಿಸುತ್ತಾನೆ.ಆದರೆ ನಂಬಿಕೆ ಇಲ್ಲದೆ ಇದ್ದರೆ,ತನ್ನ ಜೊತೆಯಲ್ಲೇ,ದೇವರು ಇದ್ದರೂ,ಅವನಿಗೆ ಕಾಣಿಸುವುದೇ ಇಲ್ಲ.ಇಲ್ಲಿ ಎಲ್ಲದಕ್ಕೂ ನಂಬಿಕೆ ಮಾತ್ರ ಮುಖ್ಯ.ನಾವು ವಸ್ತುಗಳು ಮತ್ತು ಜನರ ಮೇಲೆ ಅತಿಯಾಗಿ ಅವಲಂಬಿತರಾಗುತ್ತೇವೆ, ಆದರೆ ಒಂದು ದಿನ ಇವೆರಡೂ ನಮ್ಮಿಂದ ದೂರವಾದರೂ, ನಮ್ಮಲ್ಲಿ ಆಧ್ಯಾತ್ಮಿಕ ಶಕ್ತಿ ಇದ್ದರೆ, ನಾವು ಕಳೆದುಹೋದ ಆತ್ಮ ವಿಶ್ವಾಸವನ್ನು ಮರಳಿ ಪಡೆಯಬಹುದು.*.
ದೇವರನ್ನು ‌ಮಾನವನಲ್ಲಿ ಕಾಣೋದಕ್ಕೆ ಅವನಿಗೆ ಹಣ ಅಧಿಕಾರ ಹೆಸರು ಸ್ಥಾನವಿರಬೇಕು.  ಆದರೆ  ಅವನೊಳಗೆ ದೈವತ್ವವಿದೆಯೆ ಪರಮಾತ್ಮನಿದ್ದಾನೆಯೆ ಎನ್ನುವ ಜ್ಞಾನವಿದ್ದರೆ   ಮಾತ್ರ ದೇವರನ್ನು ಕಾಣಬಹುದು.
ನಿರಾಕಾರ ಬ್ರಹ್ಮನ  ನೋಡಲಾಗದು ಆದ್ದರಿಂದ ಅವನೊಳಗಿರುವ ಸಾಕಾರದಿಂದ  ತಿಳಿಯುವ ಪ್ರಯತ್ನ ವೇ
 ದೇವತಾರಾಧನೆಯಾಗಿದೆ. ಇದರಲ್ಲಿ ಸುರಾಸುರರ ಗುಣವೆರಡೂ ಅಡಗಿರುತ್ತದೆ. ಒಬ್ಬ ದೇವರನ್ನು ಪೂಜಿಸುವುದು ಬೇರೆ, ಮಾನವನನ್ನು ಪೂಜಿಸುವುದು ಬೇರೆ ಅಸುರರನ್ನು ಪೂಜಿಸುವುದು ಬೇರೆ  ಜೀವ ಜಂತು ಪ್ರಾಣಿ ಪಕ್ಷಿ ಗಿಡ ಮರ ಕಲ್ಲು ಮಣ್ಣು,ನೀರು ಪ್ರಕೃತಿಯಲ್ಲಿರುವ ಎಲ್ಲಾ  ಶಕ್ತಿಯನ್ನು  ಯಾವ ರೂಪದಲ್ಲಿ ಯಾವ ಭಾವನೆಯಲ್ಲಿ ಭಕ್ತಿಯಲ್ಲಿ  ಆರಾಧಿಸುವುದರಿಂದಲೂ  ದೇವರ ಅಸ್ತಿತ್ವ ದ ಅರಿವಾಗಬಹುದು.
ಆದರೆ ಇದರಲ್ಲಿ ನಮ್ಮ ಆತ್ಮಸಾಕ್ಷಾತ್ಕಾರವಾದಾಗಷ್ಟೆ ಪರಮಾತ್ಮನ ದರ್ಶನ ಸಾಧ್ಯ. ಯಾವಾಗಿದು ಸ್ವಾರ್ಥ ಅಹಂಕಾರದೆಡೆಗೆ ನಡೆಸುತ್ತಾ ಭೌತಿಕದಲ್ಲಿಯೇ ಮನಸ್ಸು ಮುಳುಗಿರುವುದೋ  ಆಗ ನಾನೇ ದೇವರು ಎನ್ನುವವರು‌ ಬೆಳೆಯುವರು.
ಇದಕ್ಕೆ ಕಾರಣ ನಮ್ಮ ‌ಮನಸ್ಸು ಭೋಗದೆಡೆಗೆ ನಡೆದಷ್ಟು ಬೇಗ  ಯೋಗದ ಕಡೆಗೆ ನಡೆಯೋದಿಲ್ಲ. ಹೀಗಾಗಿ ನಾವು ಬಯಸಿದಂತೆ ನಡೆದರೆ ದೇವರಿದ್ದಾನೆ. ಇಲ್ಲವಾದಾಗ ದೇವರಿಲ್ಲವಾಗುತ್ತಾರೆ. ಆದರೆ ಸತ್ಯ ಒಂದೇ  ಸತ್ಯವೇ ದೇವರು . ಆತ್ಮವೇ ದೇವರು.
ಇದರಲ್ಲಿ ನಂಬಿಕೆಯಿಟ್ಟು ದೈವತ್ವದೆಡೆಗೆ ನಡೆದವರಿಗಷ್ಟೆ ದೇವರ ದರ್ಶನ ಆಗಿದೆ. ದೇವರು ನಿರಾಕಾರದಲ್ಲಿರುವಾಗ ಆಕಾರದಲ್ಲಿ ಕಾಣೋದಕ್ಕೆ  ಪ್ರತಿಯೊಬ್ಬರೊಳಗಿರುವ  ಒಳ್ಳೆಯ ಗುಣ ಗುರುತಿಸುವ ಗುಣವಿದ್ದರೆ ಸಾಧ್ಯ. ಆದರೆ ಇಂದು ಒಳ್ಳೆಯವರು ಸತ್ಯವಂತರು ಧರ್ಮ ದ ಅರ್ಥ ತಿಳಿದವರು ವಿರಳ. ಕಲ್ಲು ಮಣ್ಣು  ಗಿಡ ಮರ ಗಳಲ್ಲಿ ದೇವರನ್ನು  ಕಾಣುವವರಿಗೆ ಹತ್ತಿರವೇ ಇರುವ ತಂದೆತಾಯಿಯರಲ್ಲಿ,ಬಂಧು ಬಳಗದವರಲ್ಲಿ ಸ್ನೇಹಿತರಲ್ಲಿ ಕಾಣಬೇಕೆಂದರೆ ಅವರಿಂದ ಏನಾದರೂ ಲಾಭವಾಗಿರಬೇಕಿದೆ.
ನಿಜವಾದ ಅರ್ಥದಲ್ಲಿ ದೇವರು ಲಾಭವನ್ನು ಕೊಡಬಹುದು ನಷ್ಟವನ್ನು ಕೊಡಬಹುದು. ಅತಿಯಾದ ಸಂಪಾದನೆಯನ್ನು  ಹಿಂದಿರುಗಿ ಪಡೆದು ಬಡವನಿಗೆ ಕೊಡಬಹುದು. ಶ್ರೀಮಂತ ನಿಗೆ ಅದರ ಬದಲು ಜ್ಞಾನ ಕೊಡಬಹುದು. ಆದರೆ ಇದು ಹೊರಗಿನ‌ಕಣ್ಣಿಗೆ ಕಾಣದ‌ ಕಾರಣ‌  ಹಣದ‌ ನಷ್ಟವಾದಾಗ ದೇವರಿಲ್ಲ ಲಾಭವಾದಾಗ ದೇವರಿದ್ದಾನೆಂದು ನಂಬುವುದು ಮಾನವ ಗುಣ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದಂತೆ ಎಲ್ಲಾ ಕಡೆ ಇರುವ ದೈವಶಕ್ತಿಯನ್ನು  ಹಣದಿಂದ ನೋಡಲಾಗದು.ಆದರೆ ಜನ‌ಮಾತ್ರ ಹಣದಿಂದ ದೇವರನ್ನು ಅಳೆಯುವುದರಲ್ಲಿಯೇ ಕಾಲಹಾಕುತ್ತಾ  ಇದ್ದ ಜ್ಞಾನವನ್ನು ಕಳೆದುಕೊಂಡು ಹೋಗುವುದು  ನಡೆಯುತ್ತಿದೆ. 
ಎಷ್ಟು ಆಸ್ತಿಯಿದ್ದರೂ  ದೇವರನ್ನು ಖರೀಧಿಸಲಾಗದು. ದೇವರ ವಿಗ್ರಹ ಖರೀದಿಸಿ ತಂದರೂ ಅದರೊಳಗೆ ದೈವೀಕ ಶಕ್ತಿ ತುಂಬುವ ಜ್ಞಾನ ಬೇಕು. ಜ್ಞಾನ ಬಂದ ಮೇಲಷ್ಟೆ ನಿರಾಕಾರದೆಡೆಗೆ ನಡೆಯಲು ಸಾಧ್ಯ. ಹೀಗಾಗಿ ಅರಿವಿಲ್ಲದೆ  ಯಾರನ್ನೂ ದೇವರೆನ್ನಲಾಗದು. ಅಸುರ ರನ್ನೂ ದೇವರು ಎಂದರೆ ಬೆಳೆಯೋದು ಅವರೆ ಅವರೆ ಆಳೋದು. ಇದೀಗ ನಡೆಯುತ್ತಿದೆ. ಭ್ರಷ್ಟ ದುಷ್ಟ ರ ಹಿಂದೆ ‌ನಿಂತು ಜನ ಬೇಡಿದರೆ ಹಣಕೊಡುವರು ಆದರೆ ಅದರ ಹಿಂದೆ ಅಜ್ಞಾನವೂ ಇರುತ್ತದೆ. ಪಾಪವೂ ಸುತ್ತಿರುತ್ತದೆ.ಜೊತೆಗೆ ಸಾಲವೂ ಬೆಳೆಯುತ್ತದೆ. 
ಅನಗತ್ಯವಾದ ವಸ್ತು ಒಡವೆ ಆಸ್ತಿ ವಿದ್ಯೆಯನ್ನು ಪಡೆದಷ್ಟೂ
ದೇವರಿಂದ  ಮನಸ್ಸು ದೂರವಾಗಬಹುದು.
ಆತ್ಮಕ್ಕೆ  ಸುಖ ಶಾಂತಿ ನೆಮ್ಮದಿ ಸಿಗೋದೇ ಪರಮಾತ್ಮನ ಸೇವೆಯಿಂದ. ಇದು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ  ನಡೆಸಿದವರು  ಜೀವನ್ಮುಕ್ತರಾಗಿರುವರೆಂದರೆ ಎಲ್ಲಾ ದೇವತೆಗಳೂ ಇರೋದೆ ಪರಮಾತ್ಮನ ಒಳಗೆ.ದೇವನೊಬ್ಬನೆ ‌ನಾಮ ಹಲವು. ಹೊರಗಿನಿಂದ ದೇವರನ್ನು  ಆರಾಧಿಸುತ್ತ ಒಳಗಿನ ದೈವತ್ವದೆಡೆಗೆ ನಡೆಯುವುದೆ  ಅಧ್ಯಾತ್ಮ ಸಾಧನೆ.
ಈಗಿದು ವಿರುದ್ದ ದಿಕ್ಕಿನಲ್ಲಿ ನಡೆಯುತ್ತಿದೆ.ಮನೆ ದೇವರನ್ನು ಮರೆತು ಹೊರಗಿನ ದೇವರನ್ನು ಕಾಣೋದಕ್ಕೆ ಯಾತ್ರೆ ನಡೆದಿದೆ.ಹಿಂದಿರುಗಿ ಬರಲೇಬೇಕು.ಮನೆದೇವರನ್ನು ಗೌರವದಿಂದ ಕಾಣಬೇಕಾದರೆ ಮನೆಸದಸ್ಯರಲ್ಲಿ ದೈವಗುಣ ಇರಬೇಕು.ಹೀಗೇ ಒಳಗಿರುವ‌ಗುಣಜ್ಞಾನವೇ ದೇವರನ್ನು ಹೊರಗೆ ಒಳಗೆ ತೋರಿಸುವ  ಮಧ್ಯವರ್ತಿ. ಒಳಗೆ  ಹುಳುಕು ಹೊರಗೆ ತಳುಕುಬಳುಕಾಗದಂತೆ ಎಚ್ಚರವಿರಬೇಕು.
ಆದರೆ ವಿಪರ್ಯಾಸವೆಂದರೆ  ಕಲಿಪ್ರಭಾವದಿಂದ ಹಲವು ಸಂಬಂಧ ಗಳ ಜೋಡಣೆಯೇ ವಿರುದ್ದವಿರುತ್ತದೆ. ಅದರ ಜೊತೆಗೆ ಹೊಂದಿಕೊಂಡು ಹೋಗುವಾಗ ದೇವರ ಗುಣವಿದ್ದರೂ ಅಸುರಶಕ್ತಿಯೇ ಹೊರಗೆ ಬೆಳೆದಿರುತ್ತದೆ.

ಯಾರನ್ನು ನಾವು ಒಳ್ಳೆಯವರು ಎನ್ನುವೆವೋ ಅವರು ಅಸುರರಾಗಿರಬಹುದು.ನಮ್ಮ ಆತ್ಮವಂಚನೆಯಿಲ್ಲದೆ‌
ನಡೆಸೋರೆ ದೇವರಾಗಿರುವರು.‌ಕಣ್ಣಿಗೆ ಕಾಣುವ ದೇವರು ಕಾಣದ ದೇವರನ್ನು ಆಳಿದರೆ  ಅಸುರರಾಗಬಹುದಷ್ಟೆ.
ಜನಸಾಮಾನ್ಯರೊಳಗಿದ್ದ  ಜ್ಞಾನಕ್ಕೆ ಸರಿಯಾದ ನೈತಿಕ ಶಿಕ್ಷಣ‌ಕೊಡದಿದ್ದರೆ ಅನರ್ಥ.

No comments:

Post a Comment