ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Tuesday, May 13, 2025

ಸೇವೆ ನಿಸ್ವಾರ್ಥ ದಲ್ಲಿರಲಿ ಸಾಧ್ಯವೆ?

ಇದನ್ನು ಯಾರಾದರೂ ಈಗ ಅನುಸರಿಸಲು ಸಾಧ್ಯವಾಗಿದೆಯೆ? ಒಂದು ಮತ‌ಹಾಕಿ  ದೇಶವೇ ನನ್ನದು ಎನ್ನುವ  ರಾಜಕೀಯದಲ್ಲಿ  ಪರಮಾತ್ಮನದು ನನ್ನದಲ್ಲ ಎನ್ನುವರೆ? 
ಹೋಗಲಿ ಒಂದು ದೇವಸ್ಥಾನಕ್ಕೆ ‌ಹೋದರೂ ಅಲ್ಲಿಯೂ ನಮ್ಮ ದೇವರು ಎನ್ನುವರೆ ಹೊರತು  ಪರಮಾತ್ಮನ ಸ್ಮರಣೆ ಬರೋದಿಲ್ಲ.
ಇನ್ನು ಶಾಲೆ ಕಾಲೇಜುಗಳಂತೂ ದೇಶವನ್ನೇ ‌ಮರೆತು ಧರ್ಮ ಬಿಟ್ಟು  ಪೋಷಕರ ಜೊತೆಗೆ ಮಕ್ಕಳೂ ನಮ್ಮವರೆ ಎನ್ನುವಂತೆ
ಅಧಿಕಾರ ಚಲಾಯಿಸುವರು.
ಇನ್ನು ಮನೆಯೊಳಗೆ ಬಂದರೆ  ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ  ಮನೆಯೊಡತಿಯೂ  ಇತ್ತೀಚೆಗೆ  ಹೊರಗೆ ಹೋಗಿ ದುಡಿಯೋ ಸ್ಥಿತಿಗೆ  ಬಂದಿದೆ. 
ಅಧ್ಯಾತ್ಮ ದ ವಿಚಾರದಲ್ಲಿ  ಸಾಕಷ್ಟು ವಾದ ವಿವಾದಗಳು ಬೆಳೆಯುತ್ತಲೇ ಬಂದಿವೆ. ಹಾಗೆ  ಮತಗಳೂ‌ಬಂದವು.ಧರ್ಮ  ಬೇರೆ ಬೇರೆ ಆದವು.ದೇವರು ಬೇರೆ ಆದರು. ಇದರಿಂದಾಗಿ ಆದ  ಬದಲಾವಣೆ  ಒಂದೇ  ಅದೇ  ನಾನೇ ದೇವರು.
ಪರಮಾತ್ಮನ ದರ್ಶನ ವಾದವರಲ್ಲಿರದ  ನಾನು  ಈಗ ಎಲ್ಲಿಂದ ಬೆಳೆದಿದೆ ಎಂದರೆ ರಾಜಕೀಯದಿಂದ ಬೆಳೆದಿವೆ.
ಒಗ್ಗಟ್ಟು  ತತ್ವದಿಂದ ಆಗಬೇಕಾಗಿದ್ದು ತಂತ್ರದಿಂದ  ಮಾಡಲು ಹೊರಗೆ  ಹೊರಟಾಗ  ಪರಮಾತ್ಮ ಕಾಣೋದಿಲ್ಲ. ಯೋಗವೂ  ಆಗೋದಿಲ್ಲ. ಅಂತರದಲ್ಲಿ  ಅಂತರಂಗ ಶುದ್ದಿ ಸಾಧ್ಯವಿಲ್ಲ.
ಇದು ಯುಗಯುಗದಿಂದಲೂ ಇದ್ದದ್ದೇ. ಹಾಗಾಗಿ ಯುದ್ದ‌ನಡೆದಿದೆ.ಈಗಲೂ ನಡೆಯುತ್ತಿದೆ. ಮುಂದೆ ನಡೆಯುತ್ತದೆ.
ಯುದ್ದಕ್ಕೆ ಕಾರಣವೇ  ದ್ವೇಷವಾಗಿದೆ ಎಂದರೆ ಯಾರನ್ನು ದ್ವೇಷ ಮಾಡುತ್ತಿರುವುದು? ಜೀವಾತ್ಮ ಪರಮಾತ್ಮನನ್ನು ದ್ವೇಷ ಮಾಡಬಹುದೆ? ಸಾಧ್ಯವಿಲ್ಲ. ಮಾನಸಿಕ ರೋಗಕ್ಕೆ   ಕಾರಣವಾಗಿರುವ  ಅಜ್ಞಾನವೇ ಎಲ್ಲಾ ಸಮಸ್ಯೆ ಯ ಮೂಲ.
ಎಷ್ಟು  ದ್ವೇಷ ಮಾಡಿದರೂ  ದೇಶ ಕಟ್ಟಲಾಗದು.
ಧರ್ಮ ಉಳಿಯದು, ಜಾತಿ ಅಳಿಯದು. ಅಜ್ಞಾನ ಮಾತ್ರ ಬೆಳೆಯುತ್ತದೆ. ಅಜ್ಞಾನ ಹೊರಗಿನಿಂದ ‌ಹೊರಗಿನವರಿಂದ ಬೆಳೆದಿಲ್ಲ ಒಳಗಿನವರಿಂದಲೇ ಬೆಳೆದಿರುವಾಗ ಒಳಗಿನಿಂದ ಜ್ಞಾನದ ಶಿಕ್ಷಣ ಕೊಟ್ಟರೆ ಪರಿಹಾರ.ಇದಕ್ಕೆ ವಿರೋಧವಿದ್ದರೆ  ಆ ನಷ್ಟ ಅನುಭವಿಸೋದು ಜೀವವೇ ಆದಾಗ ಪರಮಾತ್ಮ ತನ್ನ ಕೆಲಸ ತಾನು ಮಾಡಿಯೇ ತೀರಿಸುವನು. 

ಭಗವದ್ಗೀತೆ ಯಲ್ಲಿ ಸ್ವಯಂ ಪರಮಾತ್ಮನೇ ತಿಳಿಸಿದಂತೆ ನಿನ್ನ‌ಕರ್ಮಕ್ಕೆ ತಕ್ಕಂತೆ ಫಲ. ನಿನ್ನ ಕೆಲಸವನ್ನು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದರೆ ನಾನೇ ನಿನ್ನಲ್ಲಿದ್ದು ನಡೆಸುವೆ.  ನೀನು ಧರ್ಮ ರಕ್ಷಣೆ ಮಾಡಿದರೆ ಧರ್ಮ ನಿನ್ನ ರಕ್ಷಣೆ‌ಮಾಡುತ್ತದೆ.
ಇಲ್ಲಿ ಜೀವಾತ್ಮರಿಗೆ  ಹೇಳಿರುವುದಾಗಿದೆ.ಪರಮಾತ್ಮನ ಸೇವೆಯನ್ನು ಧರ್ಮದಿಂದ ಸತ್ಯದಿಂದ ನಡೆಸಿದಾಗಲೇ ಪರಮಸುಖ ಶಾಂತಿ‌ಮುಕ್ಯಿ ಸಾಧ್ಯವೆಂದಾಗ  ನಮ್ಮ ಇಂದಿನ ಸೇವೆಯ ಫಲ ಯಾರಿಗೆ ಹೋಗುತ್ತಿದೆ?
ಪರಮಾತ್ಮ ಇರೋದೆಲ್ಲಿ?

No comments:

Post a Comment