ಜೀವನದಲ್ಲಿ ನಮಗೆ ಎರಡು ಆಯ್ಕೆ ಗಳಿವೆ.ಒಪ್ಪಿಗೆ ಮತ್ತು ಬದಲಾವಣೆ.
ಇದರಲ್ಲಿ ಸತ್ಯವನ್ನು ಒಪ್ಪಿಕೊಂಡು ನಮ್ಮನ್ನು ನಾವುಬದಲಾಯಿಸಿಕೊಳ್ಳುವುದು ಸರಿಯಾದಮಾರ್ಗ ಎಂದಿರುವರು ಮಹಾತ್ಮರುಗಳು.ಅದರ ವಿರುದ್ದ ದಿಕ್ಕಿನಲ್ಲಿ ನಡೆದಷ್ಟೂ ಸತ್ಯವೂ ಕಾಣೋದಿಲ್ಲ ನಾವೂ ಬದಲಾಗೋದಿಲ್ಲ.
ದೇಶದ ಸ್ಥಿತಿಗೆ ಕಾರಣವೇ ದೇಶದೊಳಗೆ ಇರುವಪ್ರಜೆಗಳ ಮನಸ್ಥಿತಿ. ಹದಹೆಟ್ಟಿರುವ ಮನಸ್ಸನ್ನು ಬದಲಾಯಿಸೋದು ಬಹಳ ಕಷ್ಟ ಅದರ ಹಿಂದೆ ಇರುವ ಅಜ್ಞಾನವನ್ನು ಒಪ್ಪಿಕೊಂಡು ನಮ್ಮ ಜ್ಞಾನವನ್ನು ಸರಿಯಾದ ದಾರಿಯಲ್ಲಿ ಬಳಸಿಕೊಂಡರೆ ಬದಲಾವಣೆ ಒಳಗೇ ಆಗುತ್ತದೆ.
ಇದನ್ನು ಹೊರಗಿನವರಿಂದ ಹೊರಗಿನಿಂದ ಮಾಡುತ್ತೇವೆಂದು ಹೊರಗೆ ಹೊರಡುವಾಗ ನಮ್ಮಲ್ಲಿ ಬದಲಾವಣೆ ಆಗಿದೆಯೆ ಎನ್ನುವ ಬಗ್ಗೆ ಜ್ಞಾನವಿದ್ದರೆ ಉತ್ತಮ.
ನಾನೇಬದಲಾಗದೆ ಬೇರೆಯವರನ್ನು ಬದಲಾಯಿಸಲಾಗದು ಎನ್ನುವರು ಜ್ಞಾನಿಗಳು.
ಯುದ್ದದಿಂದ ಏನಾದರೂ ಬದಲಾವಣೆ ಆಗೋದಾದರೆ ಜೀವ ಹೋಗಬಹುದು. ಆದರೆ ಒಳಗೇ ಇರುವ ಶತ್ರು ವಿನ ನಾಶವಾಗದು.ಹೀಗಾಗಿ ಅರಿತವರು ಯುದ್ದಕ್ಕೆ ಮೊದಲು ಕೆಲವು ಸಂಧಾನಕ್ಕೆ ಒಪ್ಪಿಗೆ ಕೊಡುವರು. ಕಾರಣ ಆ ಸಮಯದಲ್ಲಿಯಾದರೂ ಶತ್ರುಗಳು ಆತ್ಮಾವಲೋಕನ ಮಾಡಿಕೊಂಡರೆ ಜೀವನದಲ್ಲಿ ಬದಲಾಗಬಹುದೆನ್ನುವುದು.ಇದನ್ನು ರಾಮಾಯಣ ಮಹಾಭಾರತದಲ್ಲಿಯೇ ಕಾಣಬಹುದು. ಆದರೂ ಅಜ್ಞಾನ ಮಿತಿಮೀರಿ ಅಧರ್ಮ ಬೆಳೆದಾಗ ಭೂಮಿಯ ಭಾರ ತಗ್ಗಿಸಲು ಸ್ವಯಂ ಭಗವಂತನೇ ಯುದ್ದದಮೂಲಕ ಲಯದಕಾರ್ಯ ನಡೆಸೋದನ್ನು ಯಾರೂ ತಡೆಯಲಾಗದು.ತಡೆಯಲಾಗಿಲ್ಲ.
ಇದರ ಅರಿವಿನಲ್ಲಿ ಜ್ಞಾನಿಗಳಾದವರು ಒಪ್ಪಿಗೆ ಕೊಡಬೇಕು.ಜೊತೆಗೆ ತಮಗೆ ತಿಳಿದೋ ತಿಳಿಯದೆಯೋ ಅಧರ್ಮಕ್ಕೆ ಕೊಟ್ಟಿರುವ ಸಹಕಾರದಿಂದ ಹಿಂದೆ ಸರಿದರೆ ಬದಲಾವಣೆ ನಮ್ಮೊಳಗೇ ಆಗುತ್ತದೆ.
ಯಾರಿಗೆ ಸಹಕಾರ ಕೊಟ್ಟಿರುವೆವೋ ಅವರೆ ನಮ್ಮ ಆಳುವರು. ಆಳುವವರಿಗೆ ಜ್ಞಾನವಿದ್ದರೆ ಧರ್ಮ. ಇಲ್ಲ ಎಂದರೆ ಅಧರ್ಮಕ್ಕೆ ನಮ್ಮ ಸಹಕಾರವಿತ್ತು.ಹೀಗಾಗಿ ಪರಮಾತ್ಮನ ಇಚ್ಚೆ ಎಂದರಿತು ನಡೆಯೋದೆ ನಮ್ಮ ಕರ್ಮ.
ಯುದ್ದಕ್ಕಾಗಿ ಕಾಯುತ್ತಾ ಕೂರುವ ಸೈನಿಕರಿಗೆ ಇದೊಂದು ಸದವಕಾಶ.ಅವರ ಪ್ರಾಣ ದೇಶಕ್ಕೆ ಆಸ್ತಿ.ಆದರೆ ಸಾಮಾನ್ಯರ ಪ್ರಾಣ ಹಿಡಿದು ದೇಶದ್ರೋಹದ ಕೆಲಸಕ್ಕೆ ಒಪ್ಪಿಗೆ ಕೊಡುವ ಅನೇಕರಿಗೆ ಇದರ ಅರಿವಿಲ್ಲದೆ ಸುಮ್ಮನೆ ಕುಳಿತು ಕೂಗಿದರೆ
ಇದರಿಂದ ಯಾವ ಬದಲಾವಣೆ ಆಗಬಹುದು? ಇದನ್ನು ಸತ್ಯವೆಂದು ಜೊತೆಗೆ ಸೇರುವವರ ಅವನತಿ ಹೇಗಿರಬಹುದು?
ಒಟ್ಟಿನಲ್ಲಿ ನಮ್ಮ ಪುರಾಣ ಇತಿಹಾಸದ ಯುದ್ದ ರಾಜರಾಜರ ನಡುವೆ ಧರ್ಮ ದ ಪ್ರಕಾರ ನಡೆದಿತ್ತು.ಈಗ ಇಡೀ ದೇಶ ಆಳೋರ ನಡುವಿರುವ ಭಿನ್ನಾಭಿಪ್ರಾಯ ದಲ್ಲಿ ಮಧ್ಯೆ ಮೂಗು ತೂರಿಸಿಕೊಂಡು ಇಲಿ ಹೋದರೆ ಹುಲಿ ಹೋಯಿತು ಎನ್ನುವ ಪ್ರಚಾರಕರ ಅರ್ಧ ಸತ್ಯವನ್ನು ನಂಬಿಕೊಂಡು ಮನೆಮನೆಯೊಳಗೆ ಕಲಹ ಕ್ರಾಂತಿ ದ್ವೇಷ ಹರಡಿದರೆ ಇದನ್ನು ಸರ್ಕಾರ ಒಪ್ಪಿಕೊಂಡು ಇರೋದೇ ದುರಂತ ಕ್ಕೆ ಕಾರಣ.
ಮಧ್ಯವರ್ತಿಗಳು ಮಾಧ್ಯಮಗಳು ದೇಶದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗುವ ವಿಷಯವನ್ನು ಜನರಿಗೆ ತಲುಪಿಸಿದ್ದರೆ ಭಾರತ ವಿಶ್ವಗುರು ಆಗಿರುತ್ತಿತ್ತು.
ಹೇಳಿಕೊಳ್ಳಲು ಭಾರತೀಯರು.ನಡೆ ನುಡಿಯೇ ಪರದೇಶದ ಪರವಿದ್ದರೆ ಇದನ್ನು ಒಪ್ಪಬಹುದೆ? ಬದಲಾವಣೆ ಸಾಧ್ಯವೆ?
ಇದು ಯಾರಿಗೂ ನೇರವಾಗಿ ತಿಳಿಸಲಾಗದು.ಕಾರಣವಿಷ್ಟೆ ಇಲ್ಲಿ ಪ್ರಜೆಗಳಿಗೆ ಸತ್ಯದ ಅರಿವಿದೆ ಆದರೆ ಸತ್ಯ ಒಪ್ಪಲು ಕಷ್ಟ.ಆದರೆ ಸತ್ಯವೇ ಇಲ್ಲದ ಜೀವನ ಜೀವನವಲ್ಲ ಎಂದಾಗ ಯಾರಿಗೆ ನಷ್ಟ?
ಭೂಮಿಯ ಋಣ ತೀರಿಸಲು ಸತ್ಯ ಧರ್ಮದ ಕರ್ಮ ಬೇಕು.
ಅದು ರಾಜಕೀಯ ವಾದಷ್ಟೂ ಅಧರ್ಮ ಅಸತ್ಯವಾಗುತ್ತದೆ.ಇದನ್ನು ಒಪ್ಪಿ ನಡೆದಷ್ಟೂ ಸಂಕಷ್ಟ ತಪ್ಪಿದ್ದಲ್ಲ. ಹಾಗಾದರೆ ಬದಲಾವಣೆ ಹೇಗೆ ಸಾಧ್ಯ?
ಎಲ್ಲಿಯವರೆಗೆ ಪರಮಾತ್ಮನ ಸತ್ಯ ಅರ್ಥ ಆಗದೋ ಅಲ್ಲಿಯವರೆಗೆ ಜೀವಾತ್ಮನಿಗೆ ಹೋರಾಟ ಹಾರಾಟ ಮಾರಾಟದಿಂದ ಕಷ್ಟ ನಷ್ಟ ತಪ್ಪಿದ್ದಲ್ಲ.
ನಮ್ಮ ಮನಸ್ಸಿಗೆ ಬಂದಂತೆ ಸರ್ಕಾರವನ್ನು ಬದಲಾಯಿಸಬಹುದು.ಆದರೆ ನಮ್ಮ ಮನಸ್ಸು ಸರಿಯಿದೆಯೆ ಎನ್ನುವ ಬಗ್ಗೆ ನಾವೇ ತಿಳಿದು ನಡೆಯಬೇಕು.ಇದಕ್ಕೆ ಸತ್ಯ ಅಗತ್ಯವಿದೆ. ಎಷ್ಟು ಹೊರಗಿನ ಯುದ್ದವಾದರೂ ಆಂತರಿಕ ಕಲಹ ಇದ್ದೇ ಇರುತ್ತದೆಂದರೆ ಇದನ್ನು ಸರಿಪಡಿಸಲು ಜ್ಞಾನಿಗಳಾದವರು ಸ್ವಯಂ ಪ್ರಕಾಶಕರಾಗಿ ಸ್ವತಂತ್ರ ವಾಗಿರುವ ಸತ್ಯದೆಡೆಗೆ ನಡೆದು ಗುರುವಾಗಿ ಸೇವೆ ಸಲ್ಲಿಸಬೇಕಷ್ಟೆ. ಶಿಕ್ಷಣವೇ ದಾರಿತಪ್ಪಿ ನಡೆದಿರುವಾಗ ಮಕ್ಕಳ ಅಜ್ಞಾನವನ್ನು ಒಪ್ಪಲೇಬೇಕು.ಇಲ್ಲ ಎಂದರೆ ನಾವು ಜ್ಞಾನದೆಡೆಗೆ ಸಾಗಬೇಕಿದೆ. ಹಣದಿಂದ ಜ್ಞಾನ ಬೆಳೆಸಲಾಗದು.ಇದಕ್ಕೆ ಸತ್ಯ ಹಾಗು ಧರ್ಮ ಜೊತೆಗೆ ಇರಲೇಬೇಕು.ಎಲ್ಲಿದೆ ಸತ್ಯ? ಎಲ್ಲಿದೆ ಧರ್ಮ?
ಇದಕ್ಕೆ ಉತ್ತರ ಒಳಗಿತ್ತು. ಒಳಗೆ ಸಂಶೋಧನೆ ಆಗಿಲ್ಲ. ಮಾಡಿಕೊಂಡವರಿಗೆ ಸಿಕ್ಕಿದೆ. ಅದನ್ನು ತೋರಿಸಲಾಗದೆ ಮುಂದೆ ಹೋಗಿದ್ದಾರೆನ್ನಬಹುದಷ್ಟೆ.
ಅರ್ಧ ಸತ್ಯವು ಅತಂತ್ರಸ್ಥಿತಿಗೆ ತಲುಪಿಸುತ್ತದೆ. ತಲುಪಿಸುತ್ತಿದೆ
ಇದರ ಹಿಂದೆ ನಡೆದರೆ ಅತೃಪ್ತ ಆತ್ಮಗಳೇ ಭೂಮಿ ಆಳೋದು. ಎಲ್ಲಿವೆ ಅತೃಪ್ತ ಆತ್ಮಗಳು?
ಎಷ್ಟು ಹಣ ಅಧಿಕಾರ ಆಸ್ತಿ ಅಂತಸ್ತು ಹೆಸರು ಮಾಡಿದರೂ ತೃಪ್ತಿ ಸಿಗುತ್ತಿಲ್ಲ ಎಂದರೆ ಅವರಲ್ಲಿ ಅತೃಪ್ತ ಆತ್ಮಗಳೇ ಸೇರಿವೆ ಎಂದರ್ಥ.
ಇದನ್ನು ಬಿಟ್ಟು ಹೊರಬರಲು ಸರಿಯಾದ ಧಾರ್ಮಿಕ ದಾನ ಧರ್ಮದ ಕಾರ್ಯ ವಾಗಬೇಕು.ಅದೂ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸಿದಾಗಲೇ ಪರಮಾತ್ಮ ಸಿಗೋದಲ್ಲವೆ?
ದೇಶದಲ್ಲಿ ಸಾಕಷ್ಟು ದೇವರಿದ್ದರೆ ದೇವಸ್ಥಾನ ವೂ ಇದೆ.ಆದರೆ ಅದರಲ್ಲಿ ದೈವತ್ವದ ಜನರಿರುವರೆ? ಅಥವಾ ದೇಶದ ಸಾಲ ತೀರಿಸುವ ಮಹಾತ್ಮರಿರುವರೆ? ಇಲ್ಲ ಎಂದರೆ ದೇಶಕ್ಕೆ ಅಪಾಯ. ದೇವರು ನಮ್ಮನ್ನು ಆಳಬಹುದು.ನಾವೇ ದೇವರನ್ನು ಆಳುವುದಕ್ಕೆ ಜ್ಞಾನವಿರಬೇಕಿದೆ. ಅಂದರೆ ಪರಮಾತ್ಮನ ಸೇರೋದಕ್ಕೆ ದೇವತೆಗಳಿಗೂ ಕಷ್ಟವಾಗಿದೆ ಎಂದರೆ ಸಾಮಾನ್ಯ ರ ಗತಿ ?
ಎಲ್ಲವನ್ನೂ ಒಪ್ಪಿಕೊಂಡು ಅಪ್ಪಿಕೊಂಡು ಹೊರಗೆ ನಡೆದರೆ ಒಳಗಿರೋರನ್ನು ಒಪ್ಪೋದು ಕಷ್ಟವಿದೆ.
ತಪ್ಪು ಒಳಗೇ ಇದ್ದಾಗ ಸರಿಯಾಗಿರೋದು ಕಾಣದು.
ಹಾಗೆ ಅಸತ್ಯವನ್ನು ಸತ್ಯವೆಂದರಿತು ನಡೆದವರಿಗೆ ಸತ್ಯ ಒಪ್ಪಲು ಕಷ್ಟ. ಇದಕ್ಕೆ ಬದಲಾವಣೆ ಒಳಗೇ ಆಗಬೇಕಿದೆ.
ಇದಕ್ಕೆ ಸರಿಯಾದ ಗುರು ಹಿರಿಯರ ಆಶೀರ್ವಾದ ಸಹಾಯ ಸಹಕಾರವಿಲ್ಲವಾದರೆ ಮಾಡಿದ್ದುಣ್ಣೋ ಮಹಾರಾಯ ಎಂದಂತಾಗುತ್ತದೆ.
ಪ್ರತಿಯೊಂದು ಸಮಸ್ಯೆಗಳೂ ಒಪ್ಪಿಗೆ ಇಲ್ಲದೆ ಬೆಳೆದಿರದು.ಇದಕ್ಕೆ ಕಾರಣ ಅಜ್ಞಾನ ವಾಗಿದೆ. ಸತ್ಯದ ತಿಳುವಳಿಕೆ ಇಲ್ಲದವರು ಅಸತ್ಯವನ್ನು ಒಪ್ಪಿ ನಡೆಯುತ್ತಾರೆ.ಅದೇ ಮುಂದೆ ಅಧರ್ಮಕ್ಕೆ ಸಹಕಾರ ಕೊಟ್ಟು ಬೆಳೆಸುತ್ತದೆ.ಅಧರ್ಮ ವೇ ಯುದ್ದಕ್ಕೆ ಕಾರಣವಾಗುತ್ತದೆ. ಇದು ಯುಗಯುಗದ ಕಥೆಯಾಗಿದೆ.ಕಥೆಯೊಳಗಿನ ಸೂಕ್ಮ ಸತ್ಯವನರಿತರೆ ದೇವರು ಯಾರು ಅಸುರರು ಯಾರು ಎನ್ನುವ ಸತ್ಯದರ್ಶನ.
ಹೆಣ್ಣು ಹೊನ್ನು ಮಣ್ಣಿಗಾಗಿಯೇ ಜೀವನ ನಡೆಸೋರಲ್ಲಿ ಅಜ್ಞಾನ ವಿರುತ್ತದೆ. ಅದು ಅತಿಯಾದಷ್ಟು ಗತಿಗೇಡು.
ಇಷ್ಟೇ ಜೀವನ.
ಸಂಸಾರ ತೊರೆದರೆ ಸಂನ್ಯಾಸಿಯಲ್ಲ.ಸಂಸಾರದೊಳಗಿದ್ದೂ ಮೋಹಮಾಯೆಯಿಂದ ದೂರವಿದ್ದವರೆ ನಿಜವಾದ ಸಂನ್ಯಾಸಿಗಳು. ಮಹರ್ಷಿಗಳು ತಪಸ್ವಿಗಳು ಯೋಗಿಗಳು ನಿಜವಾದ ಸಂನ್ಯಾಸಿ ಗಳಾಗಿ ಪರಮಾತ್ಮನ ದರ್ಶನ ಮಾಡಿಕೊಂಡರು ಎಂದರೆ ಅವರಿಗೂ ಕುಟುಂಬ ವಿತ್ತು.
ಆದರೆ ಅಂಟಿಕಿಂಡಿರಲಿಲ್ಲ. ಈಗ?
ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆ ಮೈ ತುಂಬಾ ಸಾಲ ಮಾಡಿಕೊಂಡು ವೈಭೋಗದಲ್ಲಿ ಮೈ ಮರೆತು ಸ್ತ್ರೀ ಯನ್ನು ಆಳಲು ಹೊರಟಿರೋದೆ ದುರಂತ ವಷ್ಟೆ.
ಹಿಂದೆ ಸ್ತ್ರೀ ಯಾರನ್ನು ಜ್ಞಾನಿ ಎಂದು ಒಪ್ಪಿಕೊಂಡು ವರಿಸಿದ್ದಳೋ ಈಗ ಹಣಕ್ಕಾಗಿ ಅಜ್ಞಾನಿಗಳಿಗೆ ಸಹಕರಿಸಿರುವಳು.
ಭೂಮಿಯ ಸಾಲ ತೀರುವುದೆ?
ಹಣದಿಂದ ಸಾಲ ತೀರುವುದಾಗಿದ್ದರೆ ಹಣವಿದ್ದವರು ಸಾಲದಿಂದ ಮುಕ್ತಿ ಪಡೆಯಬಹುದಲ್ಲವೆ?
ಯಾಕೆ ಆಸ್ತಿ ವಂತರಿಗೂ ಕಷ್ಟ ನಷ್ಟ? ಕಾರಣವಿಷ್ಟೆ ಅದು ಧರ್ಮ ಹಾಗು ಸತ್ಯದ ಸಂಪಾದನೆಯಾಗಿರದು.ಭ್ರಷ್ಟ ಆಚಾರ ವಿಚಾರ ಪ್ರಚಾರದಿಂದ ಹಣಗಳಿಸಿದರೆ ಅದರಿಂದ ನಷ್ಟ ಕಷ್ಟವೇ ಬೆಳೆದಿರುತ್ತದೆ.
ಬೇಕಾದರೆ ಪರೀಕ್ಷೆ ಮಾಡಿಕೊಳ್ಳಬಹುದು. ನಮ್ಮೊಳಗೇ ಇರಬಹುದು ಹತ್ತಿರದವಲ್ಲಿರಬಹುದು.ದೂರದವರಲ್ಲಿರಬಹುದು...ಒಟ್ಟಿನಲ್ಲಿ ಎಲ್ಲಾ ಕಡೆ ಇದೇ ನಡೆದಿದ್ದರೂ ಅದನ್ನು ಒಪ್ಪಿ ಅದೇ ದಾರಿ ಹಿಡಿದಾಗ ಅದೇ ಗತಿ ಮುಂದಿನ ಪೀಳಿಗೆಗೆ ಆಗುತ್ತದೆ.
ಎಲ್ಲಾ ಭ್ರಷ್ಡರೆ ಎಲ್ಲಾ ಅಸತ್ಯವೆ ಎಲ್ಲಾ ಅಧರ್ಮ ವೇ ಆದಾಗ ಪರಮಾತ್ಮ ದೂರವೇ ಇರೋದು.
ಬದಲಾವಣೆ ನಮ್ಮೊಳಗೇ ಆದರೆ ಹೊರಗಿನ ಸರ್ಕಾರ ಬದಲಾಗುತ್ತದೆ. ತಮ್ಮ ಸ್ವಾರ್ಥ ಸುಖಕ್ಕಾಗಿ ಸರ್ಕಾರದ ದಾರಿತಪ್ಪಿಸಿದಷ್ಟೂ ಅಜ್ಞಾನದ ಅಂಧಕಾರ .ಇದು ಜನರ ಜ್ಞಾನದ ಮೇಲೇ ನಿಂತಿದೆ.ಶಿಕ್ಷಣವೇ ಹೊರಗಿನದ್ದಾಗಿ ಜ್ಞಾನವೂ ಹೊರಮುಖ ಆದಾಗ ಬದಲಾವಣೆ ಹೊರಗಿನವರೆ ಬಂದು ಮಾಡಬೇಕಿದೆ.ಇದು ಯುದ್ದವೋ ಶಾಂತಿ ಒಪ್ಪಂದವೋ ಕಾದು ನೋಡಬೇಕಷ್ಟೆ.
ಆಗೋದನ್ನು ತಡೆಯಲಾಗದು. ಎಲ್ಲಾ ಒಳ್ಳೆಯದಕ್ಕೆ ಆಗುತ್ತದೆ. ಒಪ್ಪಿ ನಡೆಯೋದೇ ಬದಲಾವಣೆಗೆ ದಾರಿ.
ಜೀವನದ ಗುರಿಯೇ ಆತ್ಮಸಾಕ್ಷಾತ್ಕಾರವೆನ್ನುತ್ತದೆ ಅಧ್ಯಾತ್ಮ. ಆದರೆ ಭೌತಿಕದಲ್ಲಿ ಸತ್ಯ ಧರ್ಮ ಬಿಟ್ಟು ಹೊರಗೇ ತಿರುಗುತ್ತಿದ್ದರೆ ಆತ್ಮಕ್ಕೆ ಶಾಂತಿ ಸಿಗುವುದೆ? ಜೀವ ಇರೋವಾಗಲೇ ಇದನ್ನರಿತು ನಡೆಯೋದಕ್ಕೆ ಉತ್ತಮ ಶಿಕ್ಷಣದ ಜೊತೆಗೆ ಅಧ್ಯಾತ್ಮ ದ ಗುರು ಅಗತ್ಯವಿದೆ.
ಅಧ್ಯಾತ್ಮ ಗುರುವೇ ರಾಜಕೀಯದ ವಶವಿದ್ದರೆ ದಾರಿ ತೋರಿಸುವವರು ಯಾರು?
ಹಲವರಿಗೆ ಧರ್ಮದ ಅರ್ಥ ತಿಳಿಯದೆ ಗುರುಪದವಿ ಸ್ಥಾನ ಮಾನ ಪಡೆದು ಜನರನ್ನು ಹೊರಗೆಳೆಯುತ್ತಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿದೆಯೆ? ಆತ್ಮಜ್ಞಾನಕ್ಕಿಂತ ದೊಡ್ಡ ವಿಜ್ಞಾನವಿದೆಯೆ? ಇವೆರಡೂ ಒಳಗಿನಿಂದ ಬೆಳೆಸುವ ಶಿಕ್ಷಣ ಅಗತ್ಯವಿದೆ.ಪುರಾಣ ಇತಿಹಾಸದ ಕಥೆ ರಾಜಕೀಯ ಕ್ಕೆ ಬಳಸಿದರೆ ರಾಜಯೋಗದ ಶಿಕ್ಷಣವಾಗದು. ಒಟ್ಟಿನಲ್ಲಿ ಪ್ರಚಾರವೇ ಸರಿಯಿಲ್ಲದೆ ಆಚಾರ ಸರಿಯಾಗದು.
ಜ್ಞಾನ ವಿಜ್ಞಾನವನ್ನು ಸಮಾನವಾಗಿಸಲು ಸಾಮಾನ್ಯ ಜ್ಞಾನ ಮಾನವನಿಗೆ ಅಗತ್ಯವಿದೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ವಿಜ್ಞಾನದ ಶಿಕ್ಷಣವಿದೆ.ಸಾಮಾನ್ಯ ಜ್ಞಾನ ಹಿಂದುಳಿದಿದೆ. ಅದಕ್ಕೆ ವಿಜ್ಞಾನಿಗಳು ಏನು ಹೇಳಿದರೂ ಒಪ್ಪಿಕೊಂಡು ಇಂದು ಈ ಸ್ಥಿತಿಗೆ ದೇಶ ತಲುಪಿದೆ.ಇದರಲ್ಲಿ ಧಾರ್ಮಿಕ ಕ್ಷೇತ್ರ ಶಿಕ್ಷಣ ಕ್ಷೇತ್ರವೇ ಪ್ರಮುಖ ವಾಗಿದೆ. ಯಾವಾಗ ತಲೆಗೆ ತುಂಬಬೇಕಾದ ವಿಷಯ ದಾರಿತಪ್ಪಿತೋ ಆಗಲೇ ಕಾಲಿನ ನಡಿಗೆಯೂ ಅಡ್ಡದಾರಿ ಹಿಡಿಯಿತು.
ಇದರಲ್ಲಿ ತಪ್ಪು ಯಾರದ್ದು? ಹೇಳಿದವರದ್ದೆ ನಡೆದವರದ್ದೆ?
ನಡೆಸೋನದ್ದೆ?
ನಡೆಸೋನು ಒಳಗೇ ಕುಳಿತು ನೋಡೋದೇ ಆಯಿತು.ಕಾರಣ ಅವನತ್ರ ಯಾರೂ ಹೋಗಿ ಕೇಳಲಿಲ್ಲ. ಕೇಳಿದವರು ಜೀವನ್ಮುಕ್ತರಾಗಿ ಆರಾಮಿದ್ದಾರೆ.ಏನಂತೀರ?
ಅರ್ಥ ಮಾಡಿಕೊಳ್ಳಲು ಒಳಗಿಳಿಯಬೇಕಷ್ಟೆ. ಹೊರಗೆ ನಡೆದಷ್ಟೂ ಅರ್ಥ ಆಗದು.ಇದೇ ಅದ್ವೈತ ದರ್ಶನ.
ವಾಸ್ತವ ಸತ್ಯ ಅರ್ಥ ವಾದರೆ ಪುರಾಣ ಭವಿಷ್ಯವೂ ಅರ್ಥ ಆಗುತ್ತದೆ. ಆದರೆ ದಾರಿ ಸರಿಯಿರಬೇಕಿದೆ.
ಇದೊಂದು ಅಧ್ಯಾತ್ಮ ಸಂಶೋದನೆಗೆ ಅಗತ್ಯವಿರುವ ವಾಸ್ತವದಲ್ಲಿ ನಾವಿದ್ದು ಅರಿಯಬೇಕಾದ ಸತ್ಯದ ಲೇಖನ.ಇದರ ಬಗ್ಗೆ ಚರ್ಚೆ ಮಾಡಬಹುದಷ್ಟೆ.ವಾದ ಮಾಡಿದರೆ ವಿವಾದವೂ ಬೆಳೆಯುತ್ತದೆ. ಇದರಲ್ಲಿ ಸತ್ಯ ಮಿಥ್ಯ ಎರಡೂ ಇದ್ದೇ ಇರುತ್ತದೆ. ದೇವರೂ ಅಸುರರು ಇಬ್ಬರೂ ಸತ್ಯವಂತರೆ ಆದರೆ ಸತ್ಯ ಒಂದೇ ಇರದು.
ಗ್ರೂಪ್ ನಲ್ಲಿ ಹಂಚಿಕೊಂಡರೆ ಬದಲಾವಣೆ ಸಾಧ್ಯವಿದೆ. ಯಾವುದೋ ಬೇಡವಾದ ವಿಚಾರ ಹಂಚಿಕೊಳ್ಳುವ ಮನಸ್ಸು ನಮಗಿರುತ್ತದೆ.ಸತ್ಯ ಹಂಚಿಕೊಳ್ಳದಿದ್ದರೆ ಬದಲಾವಣೆ ಹೇಗೆ ಸಾಧ್ಯ? ಎಲ್ಲಾ ಸ್ವಾರ್ಥ ಕ್ಕೆ ಬೆಲೆಕೊಟ್ಟರೆ ನಿಸ್ವಾರ್ಥ ಸೇವೆಗೆ ಬೆಲೆಯಿರದು .ಇದು ಪರಮಾತ್ಮನವರೆಗೆ ತಲುಪೋದಿಲ್ಲ.
No comments:
Post a Comment