ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Wednesday, May 7, 2025

ಭಜ ಗೋವಿಂದಂ ಭಜ ಗೋವಿಂದಂ

ಜೀವಾತ್ಮ ಪರಮಾತ್ಮರ ಹೆಸರಿನಲ್ಲಿ  ಜೀವಾಣು ಪರಮಾಣುಗಳ ಸಂಘರ್ಷಣೆ.ಒಂದು ಅಧ್ಯಾತ್ಮ ಇನ್ನೊಂದು ಭೌತಿಕ. ಅಣು ರೇಣು ತೃಣ ಕಾಷ್ಟ ಪರಿಪೂರ್ಣ ಗೋವಿಂದ.
ಭಜ ಗೋವಿಂದಂ ಭಜ  ಗೋವಿಂದಂ ಗೋವಿಂದಂ ಭಜ ಮೂಢಮತೆ....
ಯಾವಾಗ ಹೇಗೆ ಯಾರಿಂದ ಯಾಕೆ  ಜೀವ ಹೋಗುವುದೋ ಗೊತ್ತಿರದ ಈ ನಶ್ವರ ಜಗತ್ತಿನಲ್ಲಿ  ಸಾಕಷ್ಟು ಆಸ್ತಿ ಅಂತಸ್ತು ಹಣ ಅಧಿಕಾರ ಸ್ಥಾನವಿದ್ದರೂ  ಕಷ್ಟ.ಇಲ್ಲದಿದ್ದರೂ ಕಷ್ಟ.
ಒಟ್ಟಿನಲ್ಲಿ ಕಷ್ಟ ತಪ್ಪಿದ್ದಲ್ಲ ಎಂದಾಗ ಅದಕ್ಕೆ ಕಾರಣ ಮತ್ತು ಪರಿಹಾರ ತಿಳಿದು ನಡೆಯೋದೇ  ಸರಿಯಾದ ಮಾರ್ಗ.
ಮಾಯೆಯ ವಶದಲ್ಲಿ  ಜೀವ ಸಿಲುಕಿದಾಗ ಮೇಲಿರುವ ಪರಮಾತ್ಮನೂ ಕಾಣೋದಿಲ್ಲ.ಒಳಗಿರುವ ಜೀವಾತ್ಮನೂ ಉಳಿಯೋದಿಲ್ಲ. 
ಜನನ ಮರಣಗಳ ನಡುವಿರುವ ಈ ಜೀವನದಲ್ಲಿ  ಸಾಧನೆ  ಮಾಡೋದೆಂದರೆ ಏನು?  
ಸೃಷ್ಟಿ ಸ್ಥಿತಿ ಲಯವನ್ನು ಈವರೆಗೆ ಯಾರೂ ತಡೆಯಲಾಗಿಲ್ಲ.ಆಗೋದೂ ಇಲ್ಲ. ಉತ್ತಮ ಸೃಷ್ಟಿ ಯಿದ್ದರೆ   ಉತ್ತಮ ಜೀವನವಾಗಿರುತ್ತದೆ. ಸೃಷ್ಟಿ ಯೇ ಸರಿಯಿಲ್ಲದೆ  ಸ್ಥಿತಿ ಲಯ ಸರಿಯಾಗಿರದು. ಎಲ್ಲಾ  ನಾವೇ ಸೃಷ್ಟಿ ಮಾಡಿಕೊಂಡಿರುವ  ಮಾಯವಾಗುವ  ನಶ್ವರದೊಳಗಿದ್ದು  ನಾನು ಶಾಶ್ವತವೆನ್ನುವ ಭ್ರಮೆಯಲ್ಲಿರುವ ಜೀವಾತ್ಮರೆ.

No comments:

Post a Comment