ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, October 22, 2024

ಆತ್ಮಸಾಕ್ಷಿಗಿಂತ ದೊಡ್ಡದೇನಿದೆ?

ಸಣ್ಣ ವಯಸ್ಸಿನಿಂದಲೇ ಮನಸ್ಸಿನ ಒಂದು ಮೂಲೆಯಲ್ಲಿ  ಏಳುತ್ತಿದ್ದ ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿದರೂ  ಸಿಗದಕಾರಣಪ್ರಶ್ನೆಯೇ ಸರಿಯಿಲ್ಲವೇನೋ ಎನ್ನುವ ಮಟ್ಟಕ್ಕೆ ಬಂದು ಎಲ್ಲರಂತೆ ಬದುಕಲು ಪ್ರಯತ್ನ ಪಟ್ಟರೂ ಎಲ್ಲೋ ಮನಸ್ಸಿಗೆ ಸಮಾಧಾನವಿಲ್ಲ.ಸಂತೋಷ ತಾತ್ಕಾಲಿಕ ಸುಖ ಮರೀಚಿಕೆಯಾಗೇ ಉಳಿದಿತ್ತು. ಒಳಗಿನ ಪ್ರಶ್ನೆ ನಿರಂತರವಾಗಿ  ಎಚ್ಚರವಾಗುವಂತೆ ಮಾಡಿದ್ದರೂ  ಉತ್ತರ ಕ್ಕಾಗಿ  ಎಷ್ಟೋ ಜನರಲ್ಲಿ  ಹುಡುಕಿದರೂ ಸಿಗದೆ  ಮುಂದೆ ನಡೆದಂತೆಲ್ಲಾ ಜಗತ್ತು ನಡೆದಿರೋದೆ ಪ್ರಶ್ನೆಗಳ ಸರಮಾಲೆಯಲ್ಲಿ ಎಂದಾಯಿತು.ಇದಕ್ಕೆ ಸೂಕ್ತವಾದ ಉತ್ತರ ಯಾರಲ್ಲೂ ಇಲ್ಲ ಆದರೂ ಒಬ್ಬೊಬ್ಬರು ಒಂದೊಂದು ನೀಡುತ್ತಿದ್ದರು. ಅದರಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಹುಡುಕಿದರೆ ಸರಿಕಾಣದೆ  ಆತ್ಮಾವಲೋಕನ ಮಾಡಿಕೊಂಡು ನಡೆಯುವುದೇ ಸರಿ ಎಂದು ಸತ್ಯದ ಬೆನ್ನೆತ್ತಿದಾಗ  ಉತ್ತರ ಸಿಕ್ಕಿದ್ದು ಒಳಗೆ ಹೊರತು  ಹೊರಗಲ್ಲ.ಆದರೆ ಹೊರಗಿನವರ  ಜೊತೆಗಿದ್ದೇ ಒಳಗಿನ  ಪ್ರಶ್ನೆ ಗೆ  ಉತ್ತರ ಹುಡುಕುವುದು  ಸಂಸಾರಕ್ಕೆ ಅನಿವಾರ್ಯ ವಾಗುತ್ತದೆ .
 ಬಾಲ್ಯ. ಯೌವನ ಗೃಹಸ್ಥ ವಾನಪ್ರಸ್ಥ  ಸಂನ್ಯಾಸ..ಆಶ್ರಮ ದಲ್ಲಿ ಶ್ರಮ ಇದ್ದೇ ಇದೆ..ಆದರೆ ಅದರಲ್ಲಿ ನಮ್ಮ ಶ್ರಮ ಇದೆಯೋ ಅಥವಾ ಬೇರೆಯವರ ಶ್ರಮ ವೋ ಎನ್ನುವ ಪ್ರಶ್ನೆ ಹಾಕಿಕೊಂಡರೆ ನಮ್ಮ ಶ್ರಮ ಅಲ್ಪ  ಪರರ ಶ್ರಮ ಹೆಚ್ಚು.
ಆ ಹೆಚ್ಚಾದ ಶ್ರಮದಿಂದ  ದೂರವಿದ್ದು ನಮ್ಮ ಶ್ರಮ ಹೆಚ್ಚಿಸಿಕೊಳ್ಳಲು  ಆತ್ಮಬಲ ಆತ್ಮವಿಶ್ವಾಸ ಅಗತ್ಯವಿದೆ.
ಈಗಲೂ ನಮ್ಮ ದೇಶ ನಡೆದಿರೋದೆ ಶ್ರಮಿಕರಿಂದ .ಜನರು ಅಜ್ಞಾನದಲ್ಲಿದ್ದು ಶ್ರಮವಹಿಸಿ ದುಡಿದು ಸಂಪಾದಿಸಿದ ಹಣ ಸದ್ಬಳಕೆ  ಆಗದೆ ದುರ್ಭಳಕೆ ಆದರೆ  ಎಲ್ಲಾ ವ್ಯರ್ಥ.
ವೈಜ್ಞಾನಿಕ ಚಿಂತನೆಗಳಿಗೆ ಹೆಚ್ಚಿನ ಬೆಲೆ ವೈಚಾರಿಕತೆಗೆ ಬೆಲೆ ಕಡಿಮೆ. ಕಾರಣ ವೈಜ್ಞಾನಿಕ ಸುಖದ ಮುಂದೆ ವೈಚಾರಿಕತೆಯ ಕಷ್ಟ  ಯಾರೂ ಇಷ್ಟಪಡರು.ಆತ್ಮಜ್ಞಾನಕ್ಕೆ  ಅಧ್ಯಾತ್ಮಿಕ ವಿಜ್ಞಾನವೇ ಮೂಲಾಧಾರವಾದಾಗ ಇದನ್ನು ಬಿಟ್ಟು ಹೊರ ಬಂದಷ್ಟೂ ಕಷ್ಟ ನಷ್ಟ ತಪ್ಪಿದ್ದಲ್ಲ. ಅದನ್ನು  ತಡೆಯಲು ಅಸತ್ಯ ಅನ್ಯಾಯದ ಭ್ರಷ್ಟಾಚಾರ ಬೆಳೆದಿದೆ ಇದು ಧಾರ್ಮಿಕ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸದ್ದು ಮಾಡಿದರೆ ಮುಗಿಯಿತು ಕಥೆ. ಒಟ್ಟಿನಲ್ಲಿ  ಅಧ್ಯಾತ್ಮವಿಜ್ಞಾನಕ್ಕೆ ಸತ್ಯ ಅಗತ್ಯವಿದೆ. ಸತ್ಯವೇ ದೇವರೆನ್ನುವವರೂ ಸತ್ಯ ತಿಳಿಸಬಾರದೆಂದರೆ ದೇವರು ಕಾಣೋದಿಲ್ಲ. ಹೀಗಾಗಿ ಶಿವಶರಣರು  ದಾಸ ಸಂತರು ಮಹಾತ್ಮರುಗಳು  ಆಳವಾಗಿದ್ದ ಸತ್ಯದೆಡೆಗೆ ಹೊರಟು ಜಗತ್ತಿನ ಸತ್ಯಾಸತ್ಯತೆಯನ್ನು ಅನುಭವದ  ವಚನ ಸಾಹಿತ್ಯದಮೂಲಕ ಹೊರಹಾಕಿದರು
ಸಾಹಿತ್ಯ ಕ್ಷೇತ್ರ  ಹಣ ಮಾಡುವ ಕ್ಷೇತ್ರವಲ್ಲ.ಸತ್ಯವನ್ನು ಬಿಚ್ಚಿಡುವ ಕ್ಷೇತ್ರ..ಅದರಲ್ಲಿ ಕೇವಲ ಹೊರಗಿನ ಸತ್ಯವೇ ತುಂಬಿದರೆ ಒಳಗಿನ ಸತ್ಯಹಿಂದುಳಿದು  ಸಮಾಜ ದಾರಿತಪ್ಪಿ ನಡೆಯುತ್ತದೆ.
ಸಾಹಿತ್ಯ ಸಾಮಾಜಿಕ‌ಹಿತಕ್ಕಾಗಿ ಸತ್ಯವನ್ನು ಹೊರಹಾಕುವ ಒಂದು ಪ್ರಾಕಾರವಾಗಿದ್ದರೂ ಇತ್ತೀಚೆಗೆ ಇದರ ದುರ್ಭಳಕೆ ಹೆಚ್ಚಾಗಿರೋದನ್ನು ಕಾಣುತ್ತಿದ್ದೇವೆಂದರೆ ಇದಕ್ಕೆ ಕಾರಣ ಜನರ ಸಹಕಾರವಷ್ಟೆ.
ಯಾರೋ ಹೆಸರು‌ಮಾಡಿದವರು ಒಂದು ಲೇಖನಬರೆದರೆ ಹಣಕೊಟ್ಟು ಖರೀದಿಸುವ ಜನ ತಮ್ಮ ಒಳಗೇ ಇರುವ ಸತ್ಯದಜೊತೆಗೆ ನಡೆಯುತ್ತಿದ್ದೇವೆಯೆ ಅಥವಾ ಯಾರದ್ದೋ ಸತ್ಯ ನಂಬಿ ಬದುಕಿದ್ದೇವೆಯೇ ಎಂದು ಪ್ರಶ್ನೆ ಮಾಡಿಕೊಂಡರೆ ನಮ್ಮ ಒಳಗಿರುವ ಪ್ರಶ್ನೆಗೆ ಉತ್ತರ ಒಳಗೇ ಸಿಗುತ್ತದೆ.ಆದರೆ ನಾವು  ಶುದ್ದವಾಗೋದಕ್ಕೆ‌ಕಷ್ಟಪಡಲೇಬೇಕು. ಜನ್ಮಜನ್ಮಗಳ ಪಾಪ ಪುಣ್ಯಗಳ ಸಂಗ್ರಹ ಒಳಗಿರುವಾಗ ಹೊರಗಿನ ಸಂಗ್ರಹಗಳನ್ನು ನೋಡಿಕೊಂಡು ಕೇಳಿಕೊಂಡು ಕಾಲಕಳೆಯಲು ಹಣಬೇಕು.ಹಣಸಂಪಾದನೆಗೆ ಜ್ಞಾನ ಬೇಕು.
ಜ್ಞಾನದಲ್ಲಿ ಸತ್ಯವಿರಬೇಕು.ಆತ್ಮಸಾಕ್ಷಿಗಿಂತದೊಡ್ಡಸತ್ಯವಿದೆಯೆ?
ಇದರಲ್ಲಿ ಮೂರು  ಪಂಗಡವಿದೆ ದೈವ ಸಾಕ್ಷಿ, ಮನುಷ್ಯ ಸಾಕ್ಷಿ ಅಸುರ ಸಾಕ್ಷಿ.
ನ್ಯಾಯಾಲಯಗಳಿಗೇನೂ ಕೊರತೆಯಿಲ್ಲ.ನ್ಯಾಯಾಧೀಶರೂ ಬೆಳೆಯುವರು ಆದರೆ  ನ್ಯಾಯ ಬೆಳೆಯದಿರೋದಕ್ಕೆ ಕಾರಣ ಮನುಷ್ಯ ಸಾಕ್ಷಿ ಅಸುರರಿಗೆ ವರವಾಗಿದೆ.ಹಣಕೊಟ್ಟರೆ ಜೀವ ಬರುವುದಿಲ್ಲವೆಂದುತಿಳಿದೂ ಹಣಕ್ಕಾಗಿ ಜೀವಹತ್ಯೆ ಮಾಡಿದರೆ  ಇದರ ಫಲ ಕಠೋರವೆ. 
ಕಲಿಗಾಲದಲ್ಲಿ ಹೇಗಿರುವುದೆಂದು ಶ್ರೀ ಕೃಷ್ಣ ಪರಮಾತ್ಮಮೊದಲೇ  ತಿಳಿಸಿದಂಂತೆ ಬೇಲಿಯೇಎದ್ದುಹೊಲಮೇಯ್ದರೆ ಕಾಯೋರಿಲ್ಲ.ಆದರಿದು ತಾತ್ಕಾಲಿಕ. ಎಷ್ಟೋ ಯುಗಯುಗದಿಂದಲೂ ಭೂಮಿಯಿದೆ. ಭೂಮಿಯ ಋಣ ತೀರಿಸೋರು ಇಂದು ಕಡಿಮೆಯಾಗಿ ಜನಸಂಖ್ಯೆ ಬೆಳೆದಿದೆಯಷ್ಟೆ.
ಜನ್ಮವೇ ಇಲ್ಲದೆ ಜೀವನವಿಲ್ಲ. ಜೀವನದಲ್ಲಿಯೇ ಜೀವಿಗಳ ವನ ವಿದೆ. ಆ ವನವನ್ನೇ ನಾಶ ಮಾಡಿ ಬದುಕುವುದು ಅಧರ್ಮ. ಅಧರ್ಮಕ್ಕೆ ಕಾರಣ ಅಜ್ಞಾನ.ಅಜ್ಞಾನಕ್ಕೆ ಕಾರಣ ಶಿಕ್ಷಣದ ವಿಷಯ. ವಿಷಯದಲ್ಲೇ  ಸತ್ಯವಿಲ್ಲದಿದ್ದರೆ ದೈವತ್ವ ಇರುವುದೆ?
ಆಕಾಶದೆತ್ತರ ಹಾರುವ ಮಾನವ ಬುದ್ದಿವಂತಿಕೆಗೂ ಆಕಾಶದಲ್ಲೇ ನೆಲೆಸಿರುವ ಗ್ರಹನಕ್ಷತ್ರ ದೇವತೆಗಳಿಗೂ  ಎಷ್ಟೋ ಅಂತರವಿದೆಯಲ್ಲವೆ?
ಹಾಗಾದರೆ ನಾನ್ಯಾರು? ನಾವ್ಯಾರು? ಪ್ರಶ್ನೆಗೆ ಉತ್ತರ ಹೊರಗೆ ಸಿಗುವುದೆ? ಒಳಗೋ? 
ಎಲ್ಲರಲ್ಲಿಯೂ ಅಡಗಿರುವ‌ಪರಾಶಕ್ತಿ ಪರಮಾತ್ಮನ ಅರ್ಥ ಮಾಡಿಕೊಳ್ಳಲು  ಇಂದಿನ ಶಿಕ್ಷಣದಿಂದ ಸಾಧ್ಯವೆ?
ಇಲ್ಲವಾದರೆ ಶಿಕ್ಷಣವೇ ಎಲ್ಲದ್ದಕ್ಕೂ ಕಾರಣವೆಂದಾಯಿತು. ಇದನ್ನು ಎಷ್ಟು ಧಾರ್ಮಿಕ ವರ್ಗ ಸಂಘಗಳು  ಬೆಳೆಸಲಾಗಿದೆ?
ಮಕ್ಕಳ ನ್ನು ದೇವರೆಂದರು. ದೇವರಿಗೆ ಕೊಡುವ ಶಿಕ್ಷಣದ ವಿಚಾರ ಹೇಗಿದೆ?
ಇದರ ಬಗ್ಗೆ ತಿಳಿದ‌ಮೇಲೆ ಮಾಡಿದ ಪ್ರಯತ್ನ ದಲ್ಲಿ  ಸಾಕಷ್ಟು ಅನುಭವವಾದರೂ  ಯಾವ ಉಪಯೋಗವಾಗಿಲ್ಲ.ಕಾರಣ ಸತ್ಯ ತಿಳಿಸಿದರೆ ಸತ್ಯ ಹೇಳಬಾರದೆನ್ನುವವರೆ ಹೆಚ್ಚು. ಅಧಿಕಾರ ಹಣವಿದ್ದರೆ ಸತ್ಯ ಹೇಳಬಹುದು ಎಂದರೆಅಷ್ಟು ಹಣಗಳಿಸಲು ಸತ್ಯದಿಂದ ಕಷ್ಟ. ಹೀಗಾಗಿ ಇಂದಿಗೂ ಭಾರತ ವಿಶ್ವ ಗುರು  ಆಗಿದ್ದರೂ ವಿಶ್ವೇಶ್ವರ ನ ಜೊತೆಗಿರುವ ಜಗದೀಶ್ವರಿಯನ್ನು  ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ನಡೆದಿದೆ. ಇಲ್ಲಿ ಸ್ತ್ರೀ ಶಕ್ತಿಯನ್ನು ಹೊರಗೆಳೆದು ದುಡಿಸಿಕೊಂಡು  ರಾಜಕೀಯ‌ ನಡೆಸೋದರಿಂದ ಒಳಗಿರುವ ಪ್ರಶ್ನೆಗೆ ಉತ್ತರ ಸಿಗೋದಿಲ್ಲ.
ಅದ್ವೈತ ದೊಳಗೇ ಅಡಗಿರುವ ದೈತ ಕಣ್ಣಿಗೆ ಕಂಡರೂ ಎರಡೂ ಬೇರೆ ಎಂದು ರಾಜಕೀಯ ನಡೆಸಬಹುದು.ಇದಕ್ಕೆ ಸಹಕಾರವೂ ಇರುತ್ತದೆ.ಆದರೆ ಎರಡರ ಸಮಾನತೆಯನ್ನು ಎತ್ತಿ ಹಿಡಿಯುವ ಸತ್ಯಕ್ಕೆ ಬೆಲೆಯಿರದು.ಎಲ್ಲಿ ಸತ್ಯವಿರದೋ ಅಲ್ಲಿ ದೇವರಿರೋದಿಲ್ಲ.ಎಲ್ಲಿ ದೇವರಿರುವುದಿಲ್ಲವೋ ಅಲ್ಲಿ ಶಾಂತಿಯಿರದು ಅಸುರ ಶಕ್ತಿ ಜಾಗೃತವಾಗಿರುತ್ತದೆ.ಹೀಗಾಗಿ ಮನೆ ಮನೆಯೊಳಗೆ ರಾಮಾಯಣ ಮಹಾಭಾರತ ಪ್ರಚಾರ ನಡೆದರೂ ಯುದ್ದ ಕಲಹ ಜಗಳ ದ್ವಂದ್ವ ಭಿನ್ನಾಭಿಪ್ರಾಯ ದ ರಾಜಕೀಯವಿದೆ.. ರಾಜಯೋಗ ಯೋಗದಿಂದಷ್ಟೆ ಸಾಧ್ಯ.
ಬದಲಾವಣೆ ಒಳಗೇ ಆಗಬೇಕು. ನಮ್ಮ ಕರ್ಮ ಧರ್ಮದ ಪ್ರಕಾರ ಇರಬೇಕು.ಹಾಗಾದರೆ ಶಿಕ್ಷಣ ಧರ್ಮದಲ್ಲಿದೆಯೆ? ದೇಶದ ಪ್ರಜೆಗಳಿಗೆ ವಿದೇಶದ ಅನ್ಯರ ಶಿಕ್ಷಣ  ಮೂಲವಾದರೆ ಜ್ಞಾನವೂ  ಹೊರಗಿನವರದ್ದೇ ಆಗಿರುತ್ತದೆ ಇದು ಸಹಜ. 
ಎಲ್ಲಾ ಆಗಿಹೋಗಿದೆ ಆಗಬೇಕಿತ್ತು ತಡೆಯಲಿಲ್ಲ ತಡೆಯಲಾಗಲಿಲ್ಲ ಎಂದರೆ ನಮ್ಮ ಕೈಯಲ್ಲಿ ಏನೂ ಇಲ್ಲ. ಆದರೆ ನಮ್ಮ ತಲೆಯಲ್ಲಿ ಬುದ್ದಿಯಿದೆ ಜ್ಞಾನವಿದೆ ಅದನ್ನು ನಮ್ಮ ಆತ್ಮಕ್ಕೆ ತೃಪ್ತಿ ಶಾಂತಿ  ನೀಡುವತ್ತ ಬಳಸಿದರೆ ಆತ್ಮನಿರ್ಭರ ಭಾರತ.ಇಲ್ಲವಾದರೆ ಆತ್ಮದುರ್ಭಲವೆ.
 ಜ್ಞಾನ ಬಂದಾಗಿನಿಂದ ಒಂದೇ ವಿಷಯದ ಬಗ್ಗೆ ಚಿಂತನೆ ನಡೆಸಿ ಪರೀಕ್ಷಿಸಿದರೂ ಸತ್ಯ ಒಂದೇ .ಅದು ಒಳಗೇ ಇದೆ ಅದನ್ನು ಬಿಟ್ಟು ಎಲ್ಲಾ ಅಸತ್ಯವೂ ಹೊರಗೆ ಹೋರಾಟ ಹಾರಾಟ ಮಾರಾಟದೆಡೆಗೆ  ಹೊರಟಾಗ  ಇದು ಅಸುರ ಶಕ್ತಿ ಬೆಳೆದು ನಿಲ್ಲುತ್ತದೆ.

ಎಲ್ಲಿಯವರೆಗೆ ಸತ್ಯ ಧರ್ಮ ಒಂದಾಗುವುದಿಲ್ಲವೋ ಅಲ್ಲಿಯವರೆಗೆ ಅಧ್ವೈತವಾಗದು. ದೇಶದ ಪ್ರಶ್ನೆ ಬಂದಾಗ ದೇಶ ಒಂದೇ ಇದ್ದರೂ ಇದರೊಳಗಿನ ಪ್ರಜೆಗಳಲ್ಲಿ ಒಗ್ಗಟ್ಟಿನ ಸಮಸ್ಯೆ ಯಿದೆ.ಇದಕ್ಕೆ ಮಧ್ಯವರ್ತಿಗಳ ಅರ್ಧ ಸತ್ಯದ ಅಜ್ಞಾನದ ರಾಜಕೀಯವೇ ಕಾರಣ. ಸ್ವಾರ್ಥ ಪೂರ್ಣ ವಾದ ಜೀವನದಲ್ಲಿ  ಪರಮಾತ್ಮನಿರುವನೆ? ಪರಮಸತ್ಯವಿರುವುದೆ?
ಭಗವದ್ಗೀತೆ ಓದಿ ಎಷ್ಟೋ ಮಹಾತ್ಮರು ಯೋಗಿಗಳಾದರು
ಈಗ ಎಷ್ಟೋ ಜನರು ಭೋಗದೆಡೆಗೆ ನಡೆದಿರುವರುಎಂದರೆ ಹಣಕ್ಕಾಗಿ ಗೀತೆಯಲ್ಲ. ಜ್ಞಾನಕ್ಕಾಗಿ ಗೀತೆ. 
ಅನುಭವರಹಿತ ಪ್ರಚಾರದಿಂದ ಅಧರ್ಮ ವೂ ಬೆಳೆಯುತ್ತದೆ.
ಮಠ ಮಂದಿರ ಮಸೀದಿ ಚರ್ಚ್... ಧಾರ್ಮಿಕ ಸಂಸ್ಥೆಗಳು ಒಂದೇ ಭೂಮಿಯಲ್ಲಿ ಒಂದೇ ದೇಶದೊಳಗೆ ಬೆಳೆದಿದ್ದರೂ ಒಳಗಿರುವ ದೈವೀಕ ಗುಣಜ್ಞಾನವನ್ನು ಬೆಳೆಸದಿದ್ದರೆ  ನೀರಿನಲ್ಲಿ ಹೋಮಮಾಡಿದಂತಾಗುತ್ತದೆ.
ಭೂಮಿ ಆಕಾಶ ಪಾತಾಳದ ಮಧ್ಯವರ್ತಿ. ಮಧ್ಯವರ್ತಿಗೆ ಸರಿಯಾದ ಜ್ಞಾನವಿದ್ದರೆ ಸರಿ. ಸ್ತ್ರೀ ಶಕ್ತಿಯನ್ನು  ಹೇಗೆ ಬಳಸಬೇಕು ಬೆಳೆಸಬೇಕೆಂಬ ಜ್ಞಾನವಿಲ್ಲದವರೆ ಭೂಮಿ ಆಳಿದರೆ  ಆಳೋರೂ ಆಳೇ ಆಗುವರು. ಕರ್ಮಕ್ಕೆ ತಕ್ಕಂತೆ ಜನ್ಮ. ಒಟ್ಟಿನಲ್ಲಿ ಭೂ ವಶದಲ್ಲಿರುವ ಮಾನವನಿಗೆ  ಮಾಯೆ ಆವರಿಸಿ ಮಾಯಾಮೃಗಗಳು  ಬೆಳೆದಿರೋದಕ್ಕೆ ಕಾರಣ ಅಜ್ಞಾನ.ಅಜ್ಞಾನವೆಂದರೆ ಜ್ಞಾನವಿಲ್ಲವೆಂದಲ್ಲ ಸತ್ಯಜ್ಞಾನ ಇಲ್ಲ ಎಂದರ್ಥ. ಇದು ನಮ್ಮೆಲ್ಲರ ಸಮಸ್ಯೆ. ನಮ್ಮದೇ ಸಹಕಾರದ ಸಮಸ್ಯೆ. ಒಳಗೇ  ಅಸಹಕಾರವಿದ್ದರೆ  ಹೊರಗೆ ಬರೋದು ಕಷ್ಟವಿದೆ. ನಮಗೆನಾವೇ ಶತ್ರುವಾದರೆ ಮಿತ್ರರು ಕಾಣರು.
ಹಾಗೆ ಅತಿಯಾದ ಆಸೆ ಅಹಂಕಾರ ಸ್ವಾರ್ಥ ದ ಜೀವನದಲ್ಲಿ ಗೆದ್ದವರು ಯಾರು? ಸೋತವರು ಎಲ್ಲಿ? 
ಹಿಂದೆ ಇಂದು  ಮುಂದೆ ಇರುವ ಆತ್ಮಕ್ಕೆ ಸಾವಿಲ್ಲ.ಸತ್ಯಕ್ಕೂ ಸಾವಿಲ್ಲ. ಎರಡೂ ಒಳಗೇ ಅಡಗಿರುವಾಗ ಅದರಹಿಂದೆನಡೆದರೆ ಹಿಂದೂ ಬಿಟ್ಟು ಮುಂದೆ ನಡೆದರೆ ಮುಸ್ಲಿಂ. ಮುಸ್ಲಿಂ  ಜನಾಂಗ ಎಷ್ಟೋ  ವಿಚಾರದಲ್ಲಿ ಒಗ್ಗಟ್ಟು ತೋರಿಸಿದರೂ ಅವರ ಯಾಂತ್ರಿಕ ಜೀವನದಲ್ಲಿ ಸತ್ಯವಿರದು.
ಹಾಗಾಗಿ‌ಇಡೀ ಜಗತ್ತು ಜನಸಂಖ್ಯೆಯಿಂದ ತುಂಬಿದೆ.ಅಷ್ಟೇ ಸಾವು ನೋವು ಹೆಚ್ಚಾಗಿದೆ. ಜೀವನ್ಮುಕ್ತಿ  ಕೊಡುವ ಶಿವನನ್ನು ಎಲ್ಲಾ ಒಪ್ಪಬಹುದು.ಆದರೆ ಲಯವನ್ನು ಒಪ್ಪುವುದು ಕಷ್ಟ.
ಸಾವು  ನಿಶ್ಚಿತ ಎಂದು ತಿಳಿದರೂ  ಸತ್ತ ನಂತರ ಇದಕ್ಕೆ ಕಾರಣಕರ್ತ  ಶಿವ ಎಂದು ತಿಳಿಯದೆ ಮಾನವರು ಅಪಾರ್ಥ ಮಾಡಿಕೊಂಡು  ಹೋರಾಟ ಹಾರಾಟ ಮಾರಾಟ ಕಾದಾಟಕ್ಕೆ ಸಹಕರಿಸಿದರೆ  ಎಲ್ಲಿ ಆತ್ಮಕ್ಕೆ ಶಾಂತಿ?
ಯುದ್ದದಲ್ಲಿ ಮರಣಹೊಂದಿದರೆ ಸದ್ಗತಿ. ಯುದ್ದಕ್ಕೆ ಪ್ರೇರಣೆ ಕೊಟ್ಟು ಬದುಕಿದರೆ ದುರ್ಗತಿ. ಹೀಗೆ ಕರ್ಮ ಫಲ ಬೇರೆಯೇ ಆದಾಗ  ಎರಡೂ ಸತ್ಯವನರಿತು ಜೀವನ ಮಾಡೋದು   ಮನುಕುಲಕ್ಕೆ  ಸಮ್ಮತಿಯಾಗಬೇಕಷ್ಟೆ.ಒಪ್ಪಲಿ ಬಿಡಲಿ ಆಗೋದನ್ನು ತಡೆಯಲಾಗಿಲ್ಲ ತಡೆದವರೂ ಇಲ್ಲ.

ಪುರಾಣ ಓದುತ್ತಾ  ವಾಸ್ತವ ಸತ್ಯ ತಿಳಿಯದೆ  ಭವಿಷ್ಯ. ಹೇಳಿ ಕೇಳಿ ಉಪಯೋಗವಿಲ್ಲ. ಹಾಗಾಗಿ  ವಾಸ್ತವದಲ್ಲಿ ನಾವು ದೇಶದ ಒಂದು  ಜವಾಬ್ದಾರಿಯುತ ಪ್ರಜೆಯಾದರೂ  ಹಿಂದೆ ರಾಜರು  ಆಳಿದಂತೆ  ಜನರನ್ನು  ಆಳಲು ಸಾಧ್ಯವೆ? 
ಧರ್ಮದ  ಮಾರ್ಗ ಒಳಗಿಲ್ಲದೆ  ಹೊರಗೆ  ತಿರುಗಿದರೆ ಧರ್ಮ ಉಳಿಯುವುದೆ? ಸತ್ಯ  ಅರ್ಥ ವಾಗಲು ಅದರ ಹಿಂದೆ  ನಡೆಯಬೇಕು ಎಂದರೆ  ಅದಕ್ಕೆ ವಿರುದ್ದವಿರುವವರ ಸಂಗವಿದ್ದರೆ  ಅಸಾಧ್ಯ. 
ಒಬ್ಬಂಟಿಯಾಗಿ  ನಿಂತ ಸತ್ಯದ   ವಿರುದ್ದ  ನಡೆದಷ್ಟೂ  ಅಸುರ ಶಕ್ತಿ ಜೊತೆಗಿರುತ್ತದೆ. ಹಾಗಂತ ಭೂಮಿ  ದೇವಾಸುರರ  ನಡುವಿರುವ  ಮಾನವನಿಲ್ಲದೆ  ನಡೆದಿಲ್ಲ. ಎಚ್ಚರವಾಗಬೇಕಿರೋದು ಮಾನವ. ತಾನೇ  ಸಹಕಾರ ಕೊಟ್ಟು ಬೆಳೆಸಿದ  ಶಕ್ತಿಯೇ  ತನ್ನ ಸಮಸ್ಯೆಗೆ ಕಾರಣವೆಂದರೆ ಆ ಶಕ್ತಿಯಿಂದ ದೂರವಾಗುವ ಶಕ್ತಿಯೂ ಒಳಗೇ ಇದೆ ಎಂದರ್ಥ. ಅದನ್ನು ಬಳಸಿಕೊಳ್ಳುವ  ಅವಕಾಶ ಸ್ವಾತಂತ್ರ್ಯ ವಿದ್ದರೂ  ಬೆಳೆಸಿದ ಶಕ್ತಿ ಬಿಡದು. ಹೀಗಾಗಿ ಮಕ್ಕಳಿರುವಾಗಲೇ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುವುದೇ ಪರಿಹಾರ ಎನ್ನುವರು ಮಹಾತ್ಮರು. ಇದು ಪೋಷಕರ ಧರ್ಮ. ದೇಶದ ಪೋಷಣೆಯೂ ಪ್ರಜಾಪ್ರಭುತ್ವ ದ ಪ್ರಜಾಧರ್ಮ. ಕಲಿಕೆಯ ಪ್ರಭಾವ ಕಲಿಗಾಲವಾಗಿದೆ.

ವೇದಕಾಲದ ಸ್ತ್ರೀ ಜ್ಞಾನ ಇಂದು ಇದೆಯೆ?

ಸ್ತ್ರೀ ಯರಿಗೆ ವೇದಕಲಿಯಲು ನಿಷೇಧ ವಿದೆ ಆದರೂ ಕೆಲವರು ಕಲಿಸುತ್ತಿದ್ದಾರೆ  ಎಂದರೆ  ಬೆಳವಣಿಗೆಯ ಲಕ್ಷಣವೆ?

ನಿಷೇಧದ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ .ಸ್ತ್ರೀ ಭೂಮಿಯ ಮಹಾಶಕ್ತಿ. ಭೂಮಿ ನಡೆದಿರೋದು ಮನುಕುಲದ ಸಂತಾನದಿಂದ  ಸಂತಾನದಲ್ಲಿ ಗಂಡುಹೆಣ್ಣಿಗೆ ತನ್ನದೇ ಆದ ವಿಶೇಷ ಶಕ್ತಿಯಿದೆ.. ವೇದಕಾಲದಲ್ಲಿದ್ದ ಸತ್ವ ತತ್ವ ಸತ್ಯಜ್ಞಾನ ಇಂದಿಲ್ಲ.  ಪರಮಾತ್ಮನೆಡೆಗೆ  ಹೋಗಲು  ಆತ್ಮಶುದ್ದಿಚಿತ್ತಶುದ್ದಿ ಮನಸ್ಸಿನ ಶುದ್ದಿ..ಮಂತ್ರಶುದ್ದಿಯಿಂದ ಮಾಡಲಾಗಿದೆ. ಇದನ್ನು  ಯಾರೇ ಆಗಲಿ ತಪ್ಪಾಗಿ ಹೇಳಿದರೂ ವಿರುದ್ದ  ಪ್ರತಿಫಲ ಅನುಭವಿಸೋದು ಜೀವವೇ.ಜೀವಾತ್ಮರಾಗಿರುವ  ಮಾನವರಿಗೆ ಉತ್ತಮವಾದ ಗುರು ಶಿಕ್ಷಣ  ಸಿಗುವುದೇ ಅಪರೂಪವಾಗಿರುವ ಇಂದು ವೇದಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ಬೇಧವಿದೆಯೋ  ಇಲ್ಲವೋ ಒಟ್ಟಿನಲ್ಲಿ ನಾವುಕಲಿತಿರುವ ಶಿಕ್ಷಣದಲ್ಲೇ ಬೇಧವಿದೆ. ಇದರಿಂದಾಗಿ ಹಿಂದಿನ ಜ್ಞಾನಶಕ್ತಿ ನಮಗಿಲ್ಲ. ಜ್ಞಾನಿಎನಿಸಿಕೊಂಡ ಸ್ತ್ರೀ ಯನ್ನೇ ಶಿಕ್ಷಣದಿಂದ ದೂರವಿಟ್ಟು ಏನೋ ಸಾಧನೆ ಮಾಡಿದಂತೆ  ವಾದ ಮಾಡುವುದರಿಂದ  ಸಂಸಾರ ನಡೆಯೋದಿಲ್ಲ.  ಉಭಯಭಾರತಿ ದೇವಿಯೊಂದಿಗೆ ಶ್ರೀ ಶಂಕರಭಗವದ್ಪಾದರು ವಾದ ಮಾಡಿ ಗೆಲ್ಲಲು ಪರಕಾಯ ಪ್ರವೇಶ ಮಾಡಿದ್ದರಂತೆ.
ಅಂದರೆ ಸ್ತ್ರೀ ಜ್ಞಾನವನ್ನು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು  ಅಸಾಧ್ಯ. ಅನುಭವದಲ್ಲಿ ಬೇರೆಯೇ ಇರುತ್ತದೆ ಎನ್ನುವ ಕಾರಣಕ್ಕಾಗಿ ಕೆಲವೊಂದು ಸೂಕ್ಷ್ಮ ವಿಚಾರಕ್ಕೆ ನಿಷೇಧಿಸಿ  ಸಂಸಾರ ಸುಸೂತ್ರವಾಗಿ ನಡೆಯಲು ಮಾಡಿದ್ದಾರೆನ್ನಬಹುದು. ಈಗ ಬಿಡಿ ಎಲ್ಲಾ ಓದಿದರೂ  ನಮ್ಮ ಭೌತವಿಜ್ಞಾನವೇ ಶ್ರೇಷ್ಠ ಎನ್ನುವ ಮಟ್ಟಿಗೆ ಹೊರಗೆ ನಡೆದಿದೆ ಜೀವನ. ವೇದಕಾಲಕ್ಕೂ ವಾಸ್ತವ ಕ್ಕೂ ಅಂತರ ಬೆಳೆದು ಅರ್ಧ ಸತ್ಯವೇ ಅತಂತ್ರಸ್ಥಿತಿಗೆ ತಂದಿಟ್ಟಿದೆ. 
ಹಿಂದಿನಂತೆ  ಗುರುಮುಖೇನ ಕಲಿಯುವ ಶಿಕ್ಷಣವೂ ದೂರವಾಗುತ್ತಿದೆ. ಆನ್ಲೈನ್ ನಲ್ಲಿ  ಏನು ಬೇಕಾದರೂ ಓದಿ ತಿಳಿಯಬಹುದು. ಆದರೆ ತಿಳಿದಮೇಲೆ ಅದಕ್ಕೆ ಪೂರಕವಾದ ಸಹಕಾರವಿಲ್ಲವಾದರೆ  ಸ್ತ್ರೀ ಎಲ್ಲಿಗೆ ಹೋಗಬೇಕು?
ಮನೆಯೊಳಗೆ  ಇದ್ದಂತೆಹೊರಗೆ ಸುರಕ್ಷೆ ಇದೆಯೆ?ಸಂನ್ಯಾಸಿಯಾದವರೆ  ರಾಜಕೀಯ ನಡೆಸಿರುವಾಗ ಸಂಸಾರಿಗಳ ಪಾಡೇನು? ಎಲ್ಲಾ ಸಂನ್ಯಾಸಿ ವೇಷಧರಿಸಿದಾಕ್ಷಣ ಸಂನ್ಯಾಸವಾಗದು.ಹಾಗೆ ಸಂಸಾರಕ್ಕೆ ಬಂದವರೆಲ್ಲರೂ  ಅಜ್ಞಾನಿಗಳಾಗರು. ಬಾಲ್ಯ ಯೌವನ  ಗೃಹಸ್ಥ  ವಾನಪ್ರಸ್ಥ ಸಂನ್ಯಾಸವೆನ್ನುವ  ಆಶ್ರಮ ದಾರಿಯಲ್ಲಿ    ಕಷ್ಟ ಪಟ್ಟು    ನಡೆದ ಎಷ್ಟೋ ವೇದ ಪುರುಷ ಸ್ತ್ರೀ ಯರು  ಇಂದಿಗೂ  ಅಮರರು. ಆದರೆ  ಅವರಂತೆ  ವಾದಕ್ಕೆ ನಿಂತರೆ  ಸೋಲುವುದು  ಶತಸಿದ್ದ ಕಾರಣ ಅವರ ಅನುಭವ ಜ್ಞಾನವಿಲ್ಲದ ಮೊಂಡುವಾದದಿಂದ  ಸತ್ಯ ತಿಳಿಯದು ಧರ್ಮ ಉಳಿಯದು.ಪ್ರಚಾರಕ್ಕೆ ಅಡ್ಡಿಯಿಲ್ಲ.ಆಚಾರ ವಿಚಾರಕ್ಕೆ ಅಡೆತಡೆಯಿದೆ. 
ಲಿಂಗಕ್ಕೆ ಬೇಧವಿರಲಿಲ್ಲ ಆದರೆ ಅಧಿಕಾರಕ್ಕೆ  ಇಂದೂ ಬೇಧವಿದೆ .ಭೂಮಿ ಆಳೋದಕ್ಕೆ ಭೂಮಿಯನ್ನೇ ಅಜ್ಞಾನಕ್ಕೆ ಎಳೆದರಾಯಿತು. ಜನರನ್ನು ಆಳೋದಕ್ಕೆ ಉತ್ತಮ ಶಿಕ್ಷಣ ಕೊಡದೆ ಹೋದರಲ್ಲಹಾಗೆ ಸ್ತ್ರೀ ಗೆ ಸತ್ಯ ತಿಳಿದರೆ ಕಷ್ಟವಿದೆ.

ಈಗ ಗಂಡುಮಕ್ಕಳಿಗೇ ವೇದ ಶಾಸ್ತ್ರ ಪುರಾಣ ಸರಿಯಾಗಿ ತಿಳಿಯದೆ ವ್ಯವಹಾರನಡೆಸಿರುವಾಗ ಮೊದಲು ಅವರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ. ಮನೆಯಜಮಾನನೇ ಅಜ್ಞಾನಿಯಾದರೆ ಯಜಮಾನಿಯ ಜ್ಞಾನ ಅರ್ಥ ವಾಗದು.
ಕಲಿಕೆಗೆ ನಿಷೇಧವಿಲ್ಲ ಆದರೆ ಮೂಲಸಂಸ್ಕಾರ ಗಟ್ಟಿಯಿರಬೇಕು. ಇದೊಂದು ಅಭಿಪ್ರಾಯವಷ್ಟೆ.

Saturday, October 5, 2024

ಬ್ರಹ್ಮಚಾರಣಿ ದೇವಿ

ಬ್ರಹ್ಮ ಪುರಾಣ ವಿಷ್ಣುಪುರಾಣ ಶಿವಪುರಾಣ ಹೀಗೇ ಅನೇಕ ದೇವತೆಗಳ ಪುರಾಣಗಳಿವೆ ದೇವೀ ಪುರಾಣ ಮಾತ್ರ ನವರಾತ್ರಿ ಸಮಯದಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ.ಅಂದರೆ ದೇವಿ ಶಕ್ತಿಯಿಲ್ಲದೆ ಜೀವನವಿಲ್ಲ. ಹರಿಹರ ಬ್ರಹ್ಮಾದಿ ದೇವಾನುದೇವತೆಗಳೂ ದೇವಿಯ ಉಪಾಸಕರಾಗಿರುವುದನ್ನು ಪುರಾಣಗಳು ತಿಳಿಸಿವೆ.ಇಲ್ಲಿ  ಪರಮಾತ್ಮನೆಡೆಗೆ ಸಾಗಲು ಜ್ಞಾನಶಕ್ತಿ ಅಗತ್ಯವಿದೆ.ಜ್ಞಾನ ದೇವತೆಯ ಸಹಕಾರವಿಲ್ಲದೆ ಸೃಷ್ಟಿ ಯ ರಹಸ್ಯವರಿಯಲು ಅಸಾಧ್ಯ. ಇದನ್ನರಿಯದ ಹುಲುಮಾನವ ಸ್ತ್ರೀ ಶಕ್ತಿಯನ್ನು  ತಿರಸ್ಕರಿಸಿ ಅಥವಾ ದುರ್ಭಳಕೆ ಮಾಡಿಕೊಂಡು ಎಷ್ಟು ಹೊರಗೆ  ದೇವರಿಗೆ ಮಾಡಿದರೂ ಜ್ಞಾನ ಬರದು.

ನವಶಕ್ತಿಯರನ್ನು ಆರಾಧಿಸುವ‌ ನವರಾತ್ರಿಯ ವಿಶೇಷತೆಯನ್ನು  ಎಷ್ಟು ವರ್ಣಿಸಿದರೂ ಕಡಿಮೆಯೆ.ವರ್ಷ ವಿಡೀ ಕಾಯುವ ದೇವಿಗೆ ಎಷ್ಟು ಶಕ್ತಿಯಿರಬಹುದು? ಬಹಳ ಎತ್ತರಕ್ಕೆ ಹೋದವರ ವ್ಯವಹಾರದಲ್ಲಿ  ಲಕ್ಮಿ ಕೃಪೆ ಇರುತ್ತದೆ. ಅದರ ಮೂಲವೇ ಜ್ಞಾನ. ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು  ದಾನಧರ್ಮದೆಡೆಗೆ  ಮಾನವಹೋದರೆ ದಾನವಕುಲ ಹೆಚ್ಚುವುದಿಲ್ಲ.ಮಾನವನಿಗೆ  ಭೂಮಿಯಲ್ಲಿ ಎಲ್ಲಾ ಉಚಿತವೆ ಆದರೆ ವ್ಯವಹಾರಕ್ಕೆ ಇಳಿದಾಗ ಪಂಚಭೂತಗಳ ಬೆಲೆ ಅರ್ಥ ಆಗೋದಿಲ್ಲ. ಭೂಮಿ ಆಕಾಶ ,ವಾಯು,ಅಗ್ನಿ ನೀರು  ಸ್ವಚ್ಚಗೊಳಿಸುವುದಕ್ಕೆ  ಸಾಧ್ಯವೆ?
ಹೀಗಿರುವಾಗ  ಕಲ್ಮಶವಾಗಿಸುವ ಅಧಿಕಾರವೂ ಇರಲಿಲ್ಲ.
ಹಾಗೆ ತಾಯಿಯಿಲ್ಲದೆ ಜನ್ಮವಿಲ್ಲವಾದಾಗ ತಾಯಿಯನ್ನು ಹೇಗೆ ನೋಡಬೇಕೆಂಬ ಅರಿವೇ ಇಲ್ಲದಿದ್ದರೆ ಜೀವನವೇ ಅಲ್ಲ.

ಅಲ್ಲದರ ಹಿಂದೆ  ಹೋದವರಿಗೆ ಅಲ್ಲಾನೇ‌ ಕಾಣೋದು. ಅಂದರೆ ನಾನಲ್ಲ  ನೀನು ಎಂದ ಹಿಂದೂ ಧರ್ಮದ ಹಿಂದೆ ಶಕ್ತಿಯಿದೆ. ಅದನ್ನು ಹೊರಗೆ ಹುಡುಕಿದರೆ ಸಿಗದು.ಒಳಗೆ ಹುಡುಕಿಕೊಳ್ಳಲು ನಾನು ಹೋಗಬೇಕು. ಹೀಗಾಗಿ ಇನ್ನೂ ಹುಡುಕಾಟ ನಡೆದೇ ಇದೆ.
ಹುಡುಕಾಟವೇ ಜೀವನ. ಎಲ್ಲಿಯವರೆಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ  ಹೋರಾಟ ಹಾರಾಟ ಮಾರಾಟಕ್ಕೆ ಕೊನೆಯಿಲ್ಲ. 
ನವರಾತ್ರಿ ವಿಶೇಷ

2.. ದಿನದ ನವರಾತ್ರಿ ಆರಾಧನೆ  👏ಬ್ರಹ್ಮಚಾರಿಣೀ ದೇವಿ*👏

*ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ*
*ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ|*
*ನಮಸ್ತೇ ಜಗದ್ವಂದ್ಯ ಪಾದಾರವಿಂದೇ*
*ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ||*

ಹೇ ಶರಣಾಗತ ವತ್ಸಲೇ, ಕರುಣಾಮಯೀ, ಕಾರುಣ್ಯನಿಧಿ, ಈ ವಿಶ್ವದ ತುಂಬೆಲ್ಲಾ ವ್ಯಾಪಿಸಿರುವ ವಿಶ್ವರೂಪಿಣಿಯೇ, ನಿನಗೆ ನಮಸ್ಕರಿಸುತ್ತೇನೆ. ಜಗದ್ವಂದ್ಯಳಾದ ನೀನು ಶ್ರೇಷ್ಠಳಾಗಿರುವೆ. ಎಲ್ಲರಿಂದಲೂ ನಮಸ್ಕರಿಸಲ್ಪಡುವ ಪರಮಪವಿತ್ರವಾದ ಪಾದಕಮಲಗಳನ್ನು ಹೊಂದಿದವಳು. ಜಗತ್ತಿನ ರಕ್ಷಕಳು. ಬರುವ ಎಲ್ಲಾ ದುರಂತಗಳನ್ನು ದೂರಮಾಡಿ ರಕ್ಷಿಸು ಮಹಾತಾಯೇ.

ಸೃಷ್ಟಿ -ಸ್ಥಿತಿ -ಲಯಗಳನ್ನು ಮಾಡಬಲ್ಲ ಶಕ್ತಿ ಸ್ವರೂಪಳು, ಸನಾತಳು, ತ್ರಿಗುಣಗಳಿಗೆ ಆಶ್ರಯದಾತಳು, ತ್ರಿಗುಣಾಮಯಳು, ನಾರಾಯಿಣೀ ಮಾತೆಯೆ ನಿನಗೆ ನಮಸ್ಕರಿಸುವೆನು.

*ಸೃಷ್ಟಿ ಸ್ಥಿತಿ ವಿನಾಶಾನಾಂ ಶಕ್ತಿ ಭೂತೇ ಸನಾತಿನಿ|*
*ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋಸ್ತುತೇ||*

ನವದುರ್ಗೆಯ *ಎರಡನೇ ದಿನದ ರೂಪವೇ ‘ಬ್ರಹ್ಮಚಾರಿಣೀ ದೇವಿ’.* ದೈವಿಕ ಅಂಶವನ್ನು ಮೈಗೂಡಿಸಿಕೊಂಡು, ಶಕ್ತಿ ಸ್ವರೂಪಿಣಿಯಾಗಿ, ಶುದ್ಧಳಾಗಿ, ಶ್ವೇತವಸ್ತ್ರಧಾರಿಣಿಯಾಗಿ, ಗುಲಾಬಿ ಹೂವು, ಜಪಮಾಲೆ ಮತ್ತು ನೀರಿನಿಂದ ತುಂಬಿದ ಕಮಂಡಲವನ್ನು ಕರಗಳಲ್ಲಿ ಹಿಡಿದು ಶೋಭಿಸುತ್ತಿರುವಳು. ಶಾಂತಿ, ಸಮೃದ್ಧಿಯ ಅಧಿದೇವತೆಯಾಗಿ ಭಕುತವೃಂದವ ಸಲಹುವ ಮಾತೆ. ತನ್ನನ್ನೇ ನಂಬಿ ಬಂದವರಿಗೆ ಅಭಯವನ್ನು ನೀಡಿ ಹರಸುವಳು. ನಮ್ಮಲ್ಲಿ ಜ್ಞಾನವನ್ನು, ಆತ್ಮವಿಶ್ವಾಸವನ್ನು ಮೂಡಿಸಿ, ಮನಸ್ಸಿನ ಪ್ರಶಾಂತತೆಗೆ ದಾರಿಯನ್ನು ತೋರಿಸುವಳು ಮಾತೆ.

ಹಿಮವಂತನ ಪುತ್ರಿ ಕಠಿಣ ತಪಸ್ಸನ್ನು ಮಾಡಿದ ಕಾರಣ ‘ತಪಶ್ಚಾರಿಣೀ’- ಅರ್ಥಾತ್ ‘ಬ್ರಹ್ಮಚಾರಿಣೀ’ ಎಂದು ಕರೆಯಲ್ಪಟ್ಟಳು. *ಕೇವಲ ಪರ್ಣ ಎಲೆಗಳನ್ನು ಆಹಾರವಾಗಿ ಸ್ವೀಕರಿಸಿ ‘ಅಪರ್ಣಾ’ ,ಅಪರ್ಣೆ ಎಂದೂ ನಾಮಾಂಕಿತಗೊಂಡಳಂತೆ.*

ಕಾಠಿಣ್ಯತೆಯಪ್ರತಿರೂಪ ಈಕೆ.ಯಾವುದೇ ಕ್ಲಿಷ್ಟ ಕರವಾದ ಸಮಸ್ಯೆಗಳಿಗೆ ಮೋಕ್ಷವನ್ನು ಕಾಣಿಸುವ ತಾಯಿ.ತನ್ನ ಭಕ್ತ ಸಂಕುಲಕ್ಕೆ ಸಂತಸವನ್ನು ನೀಡುವವಳು ಮಹಾಮಾತೆ. ನೆಮ್ಮದಿ, ಶಾಂತಿ, ಕರುಣಿಸುವ ತಾಯಿ. ಜ್ಯೋತಿರ್ಮಯವಾದ ಮತ್ತು ಭವ್ಯವಾದ ರೂಪಗುಣ ಸಂಪನ್ನಳೀಕೆ. ತಾಯಿಯ ಕಠಿಣ, ಏಕಾಗ್ರತೆ, ವೈರಾಗ್ಯ, ಪಡೆದೇ ತೀರಬೇಕೆಂಬ ಹಠ, ಹಂಬಲ ಎಲ್ದಕ್ಕೂ ಒಲಿದವ ಆ ಪರಮೇಶ್ವರನಂತೆ. ಬ್ರಹ್ಮ ಜ್ಞಾನ ಸಿದ್ಧಿಸಲು ಕಾಠಿಣ್ಯತೆ ಬೇಕು. ಯೋಗಿಗಳು, ಋಷಿಮುನಿಗಳು ಬ್ರಹ್ಮಚಾರಿಣೀ ದೇವಿಯನ್ನು ಪೂಜಿಸುವಾಗ *ಸ್ವಾಧಿಷ್ಠಾನ ಚಕ್ರದಲ್ಲಿ ಮನಸ್ಸನ್ನು ಕೇಂದ್ರೀಕರಿಸುತ್ತಾರಂತೆ.*

ಈ ದಿನದ ಪೂಜೆ, ನಿಷ್ಠೆಗಳು ತಪಸ್ಸಿಗೆ ಸಮ. ಮಾಂಗಲ್ಯ ಭಾಗ್ಯವನ್ನು ಕರುಣಿಸುವ ಮಾತೆ. ನಮಗಿರುವ ಎಲ್ಲಾ ಎಡರುತೊಡರುಗಳನ್ನು ದೂರೀಕರಿಸಿ ನೆಮ್ಮದಿ ನೀಡಲೆಂದು ಪ್ರಾರ್ಥಿಸೋಣ. ಲೋಕಕ್ಕೆ ಆವರಿಸಿದ ಎಲ್ಲಾ ಕಷ್ಟಗಳು ತೊಲಗಿ ಕ್ಷೇಮವುಂಟಾಗಲಿ.👏

*(ಆಕರಗ್ರಂಥ:ಪುರಾಣ ಮಾಲಾ ಗ್ರಂಥ))

      
*ಶಕ್ತಿ ದೇವತೆ ದುರ್ಗಾ ಮಾತೆಯ ೨ ನೇ ಅವತಾರ ಬ್ರಹ್ಮಚಾರಿಣೀ, ತಪಶ್ಚಾರಿಣೀ ದೇವಿ. ಕಠಿಣತೆ ಹಾಗೂ ಸೌಮ್ಯತೆ ಎರಡನ್ನೂ ಸಹಿಸುವ ಶಕ್ತಿ ದಯಪಾಲಿಸುವ ಮಾತೆ. ಬ್ರಹ್ಮಚಾರಿಣಿ ಎಂದರೆ ಸುಲಭದ ಮಾತಲ್ಲ, ಕಠಿಣ ತಪಸ್ಸಿನಂತೆ ಅದು. ತಪಸ್ಸಿನ ಹಿಂದೆ ಒಂದು ಯೋಚನೆಯಿರುತ್ತದೆ. ಯಾವುದನ್ನೋ ಸಾಧಿಸಲು ತಪಸ್ಸು ಮಾಡುವುದನ್ನು ನಾವು ಪುರಾಣಗಳಲ್ಲಿ ಓದಿದ್ದೇವೆ. ಹಾಗೆಯೇ ಶಕ್ತಿಸ್ವರೂಪಿಣಿ ತಾಯಿ ಇಲ್ಲಿ ಶಿವನನ್ನು ಒಲಿಸಿಕೊಳ್ಳಲು, ಲೋಕಕ್ಷೇಮಕ್ಕಾಗಿ ಮಹಾತಪಸ್ಸನ್ನು ಕೈಗೊಂಡಳಂತೆ. ಎದುರಾದ ಎಲ್ಲಾ ಅಡೆತಡೆಗಳನ್ನು ದಾಟಿ ಜಯ ಸಾಧಿಸಿದಳೆಂದು ಉಲ್ಲೇಖವಿದೆ. ಆಕೆ ಯುವತಿಯಾಗಿ, ಶ್ವೇತವಸ್ತ್ರಧಾರಿಣಿಯಾಗಿ ನಾರದರ ಉಪದೇಶದಂತೆ ತಪಸ್ಸು ಮಾಡಿದ ಕಾರಣ ತಪಶ್ಚಾರಿಣೀ ದೇವಿಯಾಗಿ, ಹೂವು ಎಲೆ ಮಾತ್ರ ಸೇವಿಸಿದ ಕಾರಣ ಅಪರ್ಣಾ ಎಂದೂ ಕರೆಯಲ್ಪಟ್ಟಳು. ದೇವಿಯ ಶಾಂತತೆ, ಅಪಾರ ಜ್ಞಾನ, ಅಖಂಡತೆ ಶಿವನನ್ನು ಒಲಿಯುವಂತೆ ಮಾಡಿತು. ನಮಗೂ ಸಹ ಬದುಕಿನ ಹಾದಿಯಲ್ಲಿ ಎದುರಾಗುವ ಕಾಠಿಣ್ಯವನ್ನು ಎದುರಿಸುವ ಶಕ್ತಿ ಮತ್ತು ಯುಕ್ತಿಯನ್ನು, ತಾಳ್ಮೆ, ಸಂಯಮವನ್ನು ಆ ಮಹಾಮಾತೆ ನೀಡಿ ಅನುಗ್ರಹಿಸಲಿ*.🤝🙏