ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, December 17, 2024

ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು.
ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿಯ ಮೇಲೇ ಎಲ್ಲಾ ನಿಂತಿದೆ.
ಹಿಂದೂ ದೇವರು ಕ್ರಿಶ್ಚಿಯನ್ ದೇವರು ಮುಸ್ಲಿಂ ದೇವರು ಎಂದು  ದೇವರಲ್ಲಿಯೇ‌ಮೂರು ಭಾಗ. ಅದರೊಳಗೆ ಸಾಕಷ್ಟು ಪಂಗಡ,ಪಂಥ,ವರ್ಗ  ಜಾತಿ....ಹೀಗೇ ಹೊರಗೆ ಬಂದಂತೆಲ್ಲಾ ಭೂಮಿಯಲ್ಲಿ ದೇವರಿಗೇ ಸ್ಥಾನ ಇಲ್ಲದೆ ಮಾನವ ಬೆಳೆದು  ಅನ್ಯರ ಸ್ವಾರ್ಥ ಕ್ಕೆ  ದೈವತ್ವವೇ ಬಲಿ.

ಪರಮಾತ್ಮನೊಳಗಿರುವ ಈ ಮೂರೂ ಶಕ್ತಿಯಿಂದಲೇ ಜಗತ್ತು ನಡೆದಿದೆ. ಯಾವಶಕ್ತಿ ಬೆಳೆಯುವುದೋ ಅದರ ಬಲ ಹೆಚ್ಚಾಗಿ ತಾಳತಪ್ಪುತ್ತದೆ.

ವಿದ್ಯಾಭ್ಯಾಸದಲ್ಲಿ ಮಕ್ಕಳು ಎಲ್ಲಾ ವಿಷಯದಲ್ಲಿಯೂ ಹೆಚ್ಚಿನ ಅಂಕ ಗಳಿಸಿದರೆ ಬುದ್ದಿವಂತರು. ಒಂದು ವಿಷಯದಲ್ಲಿ ಕಡಿಮೆಯಾದರೂ  ಅದರಲ್ಲಿ ದಡ್ಡರೆಂದಲ್ಲ  ಆದರೂ ಅದರಲ್ಲಿ ಆಸಕ್ತಿಯಿಲ್ಲವೆನ್ನಬಹುದು. ಹೀಗಾಗಿ ಪ್ರತಿಯೊಂದು ವಿಷಯವೂ  ಅದರದೇ ಆದ  ಶಕ್ತಿಯನ್ನು ಹೊಂದಿದ್ದು‌ಜೀವನ ನಡೆಸಲು ಸಹಕಾರಿಯಾಗಿರುತ್ತದೆ.
ಸತ್ವ ರಜಸ್ಸು ತಮಸ್ಸಿನ  ಗುಣಗಳು ಹೇಗೇ ಬೇರೆ ಬೇರೆ ಪ್ರಭಾವ ಬೀರುವುದೋ ಹಾಗೆಯೇ ದೇವರು,ಮಾನವರು,ಅಸುರರು ತಮ್ಮ ಶಕ್ತಿಯನ್ನು ಬಳಸಿಕೊಳ್ಳುವುದು ಬೇರೆ ಆಗಿರುತ್ತದೆ. ಭೂಮಿಯಲ್ಲಿ ಮನುಕುಲವಿದೆ ಆದರೆ ಆ ಮನುಕುಲದ ಒಳಗಿರುವ  ದೈವೀ ಶಕ್ತಿ ಅಸುರಿ ಶಕ್ತಿಯ  ನಡುವೆ ಮಾನವ ತನ್ನ ಶಕ್ತಿಯನ್ನು ಪ್ರದರ್ಶನ ಮಾಡುವುದೇ‌ಒಂದು ನಾಟಕವಾಗಿದೆ. ಇದರಲ್ಲಿ ದೈವೀ ಶಕ್ತಿಯಪಾತ್ರ  ಹೆಚ್ಚಾಗಿದ್ದರೆ‌  ಸಾತ್ವಿಕತೆ ಬೆಳೆಯಬಹುದು. ಅಸುರರ ಪಾತ್ರ ಹೆಚ್ಚಾದರೆ ಕಷ್ಟ ನಷ್ಟ.
ಪಾತ್ರಧಾರಿಗಳ ‌ ಉದ್ದೇಶ  ಸಮಾಜದಲ್ಲಿ  ಶಾಂತಿ ಸಮಾಧಾನ  ಸಮಾನತೆ ತರುವುದಾಗಿರದೆ‌ಕೇವಲ ಹಣ ಹೆಸರು ಸ್ಥಾನ ಪಡೆಯೋದಾದಾಗ  ಎಂತಹ ಪಾತ್ರ ಮಾಡಿದರೂ ಕ್ರಾಂತಿಯೆ.

ದೇವತೆಗಳ ಪುರಾಣ ಕಥೆ ಓದಿ ಮಹಾತ್ಮರಾಗಿದ್ದ ಹಿಂದೂಗಳು ಈಗ  ವ್ಯಕ್ತಿ ಪುರಾಣಕ್ಕೆ ಹೆಚ್ಚು ಬೆಲೆಕೊಡುವ ಕಾರಣ ಅದೇ ಸುದ್ದಿಯಾಗಿ ಪ್ರಸಿದ್ದರಾಗುವರು. ಇದರಿಂದಾಗಿ  ದೈವಶಕ್ತಿ ಹೆಚ್ಚುವುದೆ‌ಮಾನವ ಶಕ್ತಿಯೆ?
ಮಾನವ ಸಂಘ ಜೀವಿ. ಸಂಘಟನೆಯಿಂದ  ಒಗ್ಗಟ್ಟು ಏಕತೆ ಐಕ್ಯತೆಯ ಕಡೆಗೆ ನಡೆಯುವುದೇ ಜೀವನದ ಗುರಿ. ತತ್ವದಿಂದ  ಬೆರೆತರೆ ಶಾಂತಿ ತಂತ್ರದಿಂದ  ಬೆರೆತರೆ  ಅತಂತ್ರ ಸ್ಥಿತಿ.
ಇಲ್ಲಿ ತಂತ್ರದ ಹಿಂದೆ ಸ್ವತಂತ್ರ ಜ್ಞಾನವಿದ್ದರೆ ಸರಿ ಇಲ್ಲವಾದರೆ ಅತಂತ್ರವೇ.ಕಾರಣ ಯಾವಾಗ ನಾನು ಬೇರೆ ನೀನು ಬೇರೆ ಎನ್ನುವ ಭಿನ್ನಾಭಿಪ್ರಾಯ ಹೆಚ್ಚುವುದೋ ತಿಳಿಯದು.
ಒಟ್ಟಿನಲ್ಲಿ  ಮಾನವನಿಗೆ ಒಳಗೆ ಅಡಗಿರುವ ಸ್ವಾರ್ಥ ದ ಅಹಂಕಾರ  ಮಿತಿಮೀರಿದರೆ  ಅಸುರಶಕ್ತಿಯ ವಶದಲ್ಲಿ ಜೀವವಿದೆ ಎಂದರ್ಥ. ಇದರಿಂದ ಜೀವನ್ಮುಕ್ತಿ ಸಿಗದು.

No comments:

Post a Comment