ಪ್ರೀತಿ ಪ್ರೇಮಗಳ ಬಲೆಯಲ್ಲಿ ಮಾನವ ಸಿಲುಕಿದಷ್ಟೂ ನೋವು ಅಸಮಾಧಾನ ಆತ್ಮಹತ್ಯೆಗಳಾದರೆ ಇದಕ್ಕೆ ಕಾರಣರು ಯಾರು?
ಎಷ್ಟೋ ಯುವ ಪೀಳಿಗೆ ಇದರಿಂದ ಹೊರಬರಲಾಗದೆ ದಾರಿತಪ್ಪಿದ್ದರೂ ಅದನ್ನು ಇನ್ನಷ್ಟು ಮತ್ತಷ್ಟು ಮಾಧ್ಯಮಗಳು ಎತ್ತಿಹಿಡಿಯುತ್ತಾ ಮಕ್ಕಳ ವರೆಗೂ ತಲುಪಿಸಿ ಸಣ್ಣ ವಯಸ್ಸಿನಲ್ಲಿಯೇ ಪ್ರೀತಿಯ ಕೊರತೆಯಾಗಿ ಮಕ್ಕಳು ಹೊರಗೆ ಬರುತ್ತಿದ್ದಾರೆಂದರೆ ಪ್ರೇಮ ಕುರುಡು ಎನ್ನಬಹುದು.
ಕುರುಡು ಜಗತ್ತಿನಲ್ಲಿ ಪ್ರೇಮವನ್ನು ಅಪಾರ್ಥ ಮಾಡಿಕೊಂಡು ಜೀವನ ಹಾಳು ಮಾಡಿಕೊಳ್ಳುವ ಯುವಪೀಳಿಗೆಗೆ ಸರಿಯಾದ ಜ್ಞಾನದ ಶಿಕ್ಷಣ ಕೊಡದಿರೋದೆ ಇದಕ್ಕೆ ಕಾರಣ.
ಮದುವೆಗಳು ವೈಭೋಗದಲ್ಲಿ ನಡೆಸುವರು ಅಷ್ಟೇ ವೇಗವಾಗಿ ವಿಚ್ಚೇಧನಗಳೂ ಸಿಗುತ್ತವೆಂದರೆ ಪ್ರೇಮಕ್ಕೆ ಅರ್ಥ ವಿಲ್ಲ.ಕಾಮಕ್ಕೆ ಮಿತಿಯಿಲ್ಲವೆಂದರ್ಥ.
ಶ್ರೀ ಕೃಷ್ಣ ಪ್ರೇಮದಲ್ಲಿ ಜಗತ್ತನ್ನು ನೋಡುವ ದೃಷ್ಟಿ ಮಾನವನಿಗಿಲ್ಲ. ಸಂಸಾರವನ್ನು ನಡೆಸುತ್ತಿರುವ ಆ ಮಹಾಶಕ್ತಿಯ ಅರಿವಿಲ್ಲದೆ ನಾನೇ ಎನ್ನುವ ಅಹಂಕಾರವೇ ಶತ್ರುವಾಗಿರುವಾಗ ಹೊರಗಿನ ಪ್ರೀತಿ ಪ್ರೇಮ ವ್ಯವಹಾರಕ್ಕೆ ಇಳಿದಾಗ ಹೆಚ್ಚು ಕಡಿಮೆ ಹಣವೇ ಸರ್ವಸ್ವ ವಾಗುತ್ತದೆ.
ಭೂಮಿಯ ಮೇಲೆ ಬರಲು ತಾಯಿ ತಂದೆಯರು ಕಾರಣ.ಅವರ ಪ್ರೀತಿಯ ಲಾಲನೆ ಪೋಷಣೆಯಿಂದ ಬೆಳೆದ ದೇಹಕ್ಕೆ ಉತ್ತಮ ಸಂಸ್ಕಾರದ ಶಿಕ್ಷಣ ಕೊಟ್ಟರೆ ಆಗ ಜೀವನಕ್ಕೆ ಅರ್ಥ ವಿರುತ್ತದೆ. ಸಂಸ್ಕಾರವಿಲ್ಲದೆ ಹಣ ಕೊಟ್ಟು ಬೆಳೆಸಿ ಪ್ರೇಮ ಪ್ರೀತಿಯಬಲೆಯೊಳಗೆಬಿಟ್ಟರೆ ಮುಗಿಯಿತು ಕಥೆ.
ಹೀಗಾಗಿ ಎಷ್ಟೋ ಯುವಪೀಳಿಗೆ ದಾರಿತಪ್ಪಿ ಮುಂದೆ ನಡೆದು ಸಮಾಜವನ್ನು ಹಾಳು ಮಾಡುತ್ತಿರುವುದನ್ನು ಈಗ ಕಂಡರೂ ಕಾಲವೇ ಕಾರಣವೆಂದರೆ ತಪ್ಪು . ಕಾಲಮಾನಕ್ಕೆ ತಕ್ಕಂತೆ ಮನಸ್ಸು ಬದಲಾಗುತ್ತದೆ.ಮನಸ್ಸು ಒಳಗಿರುವಾಗ ಅದರ ಬದಲಾವಣೆ ಯಾರಿಗೂ ಕಾಣದು. ಆದರೆ ಇದಕ್ಕೆ ಪೂರಕವಾದ ವಿಷಯಗಳನ್ನು ಹೊರಗಿನ ಶಿಕ್ಷಣ ನೀಡಿ ಬೆಳೆಸಿರುವುದನ್ನು ಒಪ್ಪಲೇಬೇಕಷ್ಟೆ. ಎಲ್ಲಿಯವರೆಗೆ ಯುವ ಜನತೆಗೆ ಯೋಗದ ಯೋಗ್ಯತೆಗೆ ತಕ್ಕಂತಹ ನೈತಿಕ ಶಿಕ್ಷಣ ಸಿಗುವುದಿಲ್ಲವೋ ಅಲ್ಲಿಯವರೆಗೆ ಹೀಗೇ ಅನಾವಶ್ಯಕ ಅಗತ್ಯಕ್ಕೆ ಮೀರಿದ ವಿಚಾರಗಳನ್ನು ಒಳಗೆಳೆದು ಕೊಂಡು ಅಸುರಿ ಶಕ್ತಿಯ ಗುಲಾಮರಾಗುತ್ತಾ ಆತ್ಮಹತ್ಯೆಯ ಕಡೆಗೆ ನಡೆಯುವರು.
ನಾಟಕದ ಜಗತ್ತಿನಲ್ಲಿ ನಿಜವಾದ ಪ್ರೀತಿ ಪ್ರೇಮವಿರದು. ಎಲ್ಲಾ ವ್ಯವಹಾರಕ್ಕೆ ಇಳಿದಾಗ ಸತ್ಯ ಧರ್ಮ ವಿರದು.ಸತ್ಯಧರ್ಮ ವೇ ಇಲ್ಲದ ಜೀವನ ಜೀವನವಾಗದು.
ಕಲಿಕೆಯ ವಿಷಯವೇ ಸರಿಯಿಲ್ಲವಾದರೆ ಜ್ಞಾನಕ್ಕೆ ಬೆಲೆಯಿರದು. ಎಷ್ಟೋ ಗಂಡು ಮಕ್ಕಳಿಗೆ ಹೆಣ್ಣು ಸಿಗದ ಕಾರಣ ಹೆಚ್ಚು ಹಣಸಂಪಾದನೆಗಾಗಿ ಅಧರ್ಮ ಅನ್ಯಾಯ ಅಸತ್ಯಕ್ಕೆ ಶರಣಾಗುತ್ತಿದ್ದಾರೆಂದರೆ ಹೆಣ್ಣು ಹಣ ನೋಡಿ ಒಪ್ಪುತ್ತಿದ್ದಾಳೆಯೆ? ಹಾಗಾದರೆ ಜ್ಞಾನದೇವತೆಯಾಗಬೇಕಿದ್ದ ಸ್ತ್ರೀ ಗೆ ಅಜ್ಞಾನಮಿತಿಮೀರಿದೆ ಎಂದಾಗುತ್ತದೆ.
ಎಲ್ಲರೂ ಹಾಗಿರೋದಿಲ್ಲ.ಕೆಲವೆಡೆ ಸ್ತ್ರೀ ಶೋಷಣೆಗಳಿಗೆ ಕಾರಣವೇ ಬಡತನವಾಗುತ್ತಿದೆ. ಇಲ್ಲಿ ಹಣದಿಂದ ಪ್ರೀತಿ ಪ್ರೇಮ ಹೆಚ್ಚಾಗುತ್ತದೆ ಎಂದರೂ ಅಸತ್ಯ ಅಜ್ಞಾನವೆ.
ಮನುಷ್ಯ ಜನ್ಮ ಪಡೆಯಲು ಪುಣ್ಯ ಮಾಡಿರಬೇಕೆನ್ನುವರು.
ಮನುಷ್ಯನಿಗೆ ಜ್ಞಾನವಿಲ್ಲವಾದರೆ ವ್ಯರ್ಥ ಜೀವನ. ಈಗಲೂ ಎಷ್ಟೋ ಮಹಾತ್ಮರುಗಳಿದ್ದಾರೆ ಆದರೆ ಮದುವೆಯಾಗದೆ ಉಳಿದಿರುವರು. ಸಂಸಾರಕ್ಕೆ ಬಂದರೆ ಕಷ್ಟ ಎನ್ನುವ ಹಂತಕ್ಕೆ ಜ್ಞಾನಿಗಳಾದವರು ಹಿಂದುಳಿದಷ್ಟೂ ಅಜ್ಞಾನಿಗಳ ಸಂಖ್ಯೆ ಬೆಳೆಯುತ್ತದೆ.ಹೊರಗೆ ಪ್ರೀತಿಸುವನಾಟಕದಲ್ಲಿ ಸಾಮಾನ್ಯರ ಪಾಡು ಹೇಳೋಹಾಗಿಲ್ಲ. ದುಷ್ಟ ಭ್ರಷ್ಟರ ಹಣದಲ್ಲಿ ಹೆಣ್ಣು ಹೊನ್ನು ಮಣ್ಣು ಮುಳುಗಿದರೆ ಭೂಮಿಯಲ್ಲಿ ಧರ್ಮ/ ಇರುವುದೆ?
ಎಲ್ಲರೂ ಹಾಗಿರೋದಿಲ್ಲ.ಹಾಗಾಗಿ ಹಿಂದೂ ಧರ್ಮ ದ ಶಾಸ್ತ್ರ ಸಂಪ್ರದಾಯ ಹಲವರಿಗೆ ಮೂಡನಂಬಿಕೆಯಾಗಿ ಕಾಣುತ್ತದೆ.
ಎಷ್ಟೋ ಸನಾತನ ಶಾಸ್ತ್ರ ಪದ್ದತಿ ಸಂಪ್ರದಾಯಗಳ ಹಿಂದೆ ವಿಜ್ಞಾನವಿದ್ದರೂ ಅರ್ಥ ಮಾಡಿಸುವವರ ಸಂಖ್ಯೆ ಕುಸಿದು
ಮಕ್ಕಳು ಪ್ರಭುದ್ದರಾಗಿ ಹೊರಗೆ ಬೆಳೆದರೂ ಒಳಗೇ ಇರುವ ಅಜ್ಞಾನಕ್ಕೆ ಯಾವುದು ನಿಜವಾದಪ್ರೇಮ ಪ್ರೀತಿ ಎನ್ನುವ ಸತ್ಯದ ಅರಿವಿರದು.
ಆತ್ಮಹತ್ಯೆ ಮಹಾಪಾಪ ಎನ್ನುವರು. ಆದರೂ ಪಾಪ ಕಾರ್ಯ ಮಾಡುವರೆಂದರೆ ಅತೃಪ್ತ ಆತ್ಮಗಳು ಹೆಚ್ಚು ಹರಡುತ್ತಿವೆ.
ಜಾತಿ, ಧರ್ಮ, ದೇಶ, ಲಿಂಗ ತಾರತಮ್ಯದಲ್ಲಿ ಗೆದ್ದವರು ಯಾರು? ಸೋತವರು ಯಾರು?
ಅಂತರ ಬೆಳೆಸುತ್ತಾ ಹೋಗಿ ಅವಾಂತರಗಳೇ ಬೆಳೆದರೂ ಸರಿ ನಾನು ಬದಲಾಗೋದಿಲ್ಲವೆಂದರೆ ನಾನು ಯಾರು? ನಾನೆಂಬುದಿಲ್ಲವೆಂದರೆ ಒಪ್ಪಬಹುದೆ?
ಒಟ್ಟಿನಲ್ಲಿ ಜೀವನದಲ್ಲಿ ಪ್ರೀತಿ ವಿಶ್ವಾಸ ಸಂತೋಷ ಸುಖವನ್ನು ಹೊರಗಿನಿಂದ ಬಯಸಿದಷ್ಟೂ ಅತೃಪ್ತಿಯೇ ಹೆಚ್ಚುವುದು. ಒಳಗೇ ಕಂಡುಕೊಂಡರೆ ತೃಪ್ತಿ . ಇದಕ್ಕೆ ಅಧ್ಯಾತ್ಮ ಅಗತ್ಯವಿದೆ.ತನ್ನ ತಾನರಿತು ಪರರನ್ನು ಪರಮಾತ್ಮನನ್ನು ತಿಳಿಯುವುದೇ ಯೋಗಮಾರ್ಗ. ಯೋಗ್ಯ ಮಾರ್ಗ. ಇದಕ್ಕೆ ಸರಿಯಾದ ಗುರು ಶಿಕ್ಷಣ ಪೋಷಕರು ಬೆಳೆದಾಗ ಬದಲಾವಣೆ ಸಾಧ್ಯ.
ಮದುವೆ ಆಗದೆ ಸಂಸಾರದ ಬಗ್ಗೆ ಉಪದೇಶ ಮಾಡೋದು ಸುಲಭ. ಮದುವೆ ಆಗಿ ಮಕ್ಕಳಾಗಿ ಧರ್ಮ ಮಾರ್ಗದಲ್ಲಿ ಮುಂದೆ ನಡೆದವರೆ ನಿಜವಾದ ಜ್ಞಾನಿಗಳಾಗಿರುವರು.
ಹೊರಗಿನ ಮಂತ್ರ ತಂತ್ರ ಯಂತ್ರವನ್ನು ಪ್ರೀತಿಸುವ ಮನಸ್ಸು ಒಳಗಿದ್ದ ಸತ್ಯ ಸತ್ವ ತತ್ವವನರಿಯದೆ ಹೋದರೆ ಮೋಸ ಹೋಗುತ್ತದೆ.
ಬಾಲ್ಯ ಯೌವನ,ಗೃಹಸ್ಥ ವಾನಪ್ರಸ್ಥ ಸಂನ್ಯಾಸವನ್ನು ದಾಟಿ ಸಂಸಾರ ಬಂಧನದಿಂದ ಮುಕ್ತಿಗಳಿಸಿದವರು ಮಹಾತ್ಮರು.
ಈಗ ಹಣ ಅಧಿಕಾರ ಇದ್ದರೆ ಸಂನ್ಯಾಸ ದೀಕ್ಷೆ ಕೊಡುವ ಕಾಲ ಬಂದಿದೆ.ಜ್ಞಾನದ ಕೊರತೆಯಿದ್ದರೆ ಯಾರಿಗೆ ಕಷ್ಟ ನಷ್ಟ?
ಒಳಗಿನ ಶಕ್ತಿ ಬಳಸಿ ಸ್ವತಂತ್ರ ಜೀವನ ನಡೆಸಲು ಗುರು ವಾದವರು ಸಹಕರಿಸಬೇಕು.ಹೊರಗಿನ ಸರ್ಕಾರದ ಹಿಂದೆ ಜನರನ್ನು ನಡೆಸಿ ಇನ್ನಷ್ಟು ಸಾಲದ ಸುಳಿಗೆ ಸಿಲುಕಿಸಿದರೆ ಪ್ರೀತಿ ವಿಶ್ವಾಸ ವಿರದು.ಹೆಣವಾದರೂ ಹಣಕ್ಕೆ ಜೀವಬಾಯಿ ಬಿಡುವಂತಾಗುತ್ತದೆನ್ನುವರು ತಿಳಿದವರು.. ಅತೃಪ್ತ ಆತ್ಮಗಳಾಗಿ ಪರರನ್ನು ಕಾಡುತ್ತದೆ. ಕಾಣದ ಆತ್ಮಗಳ ಸಾಮ್ರಾಜ್ಯವನ್ನು ಕಾಣೋದು ಕಷ್ಟವಿದೆ..
ಸತ್ಯ ಧರ್ಮ ದೆಡೆಗೆ ನಡೆಯುವುದೇ ಇದಕ್ಕೆ ಇರುವ ಏಕೈಕ ಮಾರ್ಗ.
ಇದು ಒಳಗಿದೆ ಹೊರಗಿಲ್ಲವೆನ್ನುವುದೂ ಸತ್ಯ. ಆತ್ಮಸಾಕ್ಷಿಗೆ ಮೀರಿದ ಸತ್ಯವಿಲ್ಲ..ಆತ್ಮಹತ್ಯೆ ಮಹಾಪಾಪ ಎನ್ನುವರು.
ಹಲವು ಕಡೆ ಸಮಾಜದ ರೀತಿ ನೀತಿ ಸಂಸಾರದ ಕಟ್ಟುನಿಟ್ಟಿಗೆ ಜೀವ ಬಲಿಯಾಗುತ್ತವೆ. ಇದಕ್ಕೆ ಹೊಣೆ ಯಾರು? ಹಣೆಬರಹ ಬದಲಾಯಿಸಿಕೊಳ್ಳಲು ಸಾಧ್ಯವೆ?
ಕಾವಿಧರಿಸಿದಾಕ್ಷಣ ವೈರಾಗ್ಯ ಬರುವುದಾದರೆ ನಾಟಕದಲ್ಲಿ ಪಾತ್ರ ಮಾಡೋರಿಗೂ ಬರುತ್ತದೆಯೆ?
ಯಾರದ್ದೋ ಸಂತೋಷಕ್ಕಾಗಿ ಯಾರನ್ನೂ ಬಲಿಕೊಡುವುದರಲ್ಲಿ ಅರ್ಥ ವಿರದು.ಆದರೂ ಎಲ್ಲಾ ಕಾಲದಮಹಿಮೆ ಎನ್ನುವರು. ಕಲಿಕೆಯ ಮಹಿಮೆ ಎಂದರೆ ಸರಿಯಾಗಬಹುದು.
No comments:
Post a Comment