ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, December 16, 2024

ಶ್ರೀ ಕೃಷ್ಣ ಪರಮಾತ್ಮನೇ ದೇವರೆ?

ಗಾಂಧಾರಿಯ ಶಾಪಕ್ಕೆ ಗುರಿಯಾದ ಶ್ರೀ ಕೃಷ್ಣನನ್ನು ಪರಮಾತ್ಮನೆನ್ನಬಹುದೆ? ಪರಮಾತ್ಮನಿಗೆ ಯಾವುದೂ ಅಂಟೋದಿಲ್ಲವೆಂದರೆ ಇದು ಹೇಗೆ ಸಾಧ್ಯ? ಎನ್ನುವ ಪ್ರಜಾಪಿತ ಬ್ರಹ್ಮಕುಮಾರಿ ಯ ಪೋಸ್ಟ್ ನೋಡಿದೆ ನಿಮ್ಮ  ಅಭಿಪ್ರಾಯ  ಅವರಿಗೆ ತಿಳಿಸಿ

ಇವರ ಪ್ರಕಾರ ಪರಮಾತ್ಮನಿಗೆ ಜನನ ಮರಣವಿಲ್ಲ ಎನ್ನುವುದಷ್ಟೆ ಸತ್ಯ. ಆದರೆ ಇವರು ಅವತಾರಗಳನ್ನು ನಂಬೋದಿಲ್ಲವೆಂದಾಗ  ಹಿಂದಿನ ಪುರಾಣಗಳನ್ನೂ ನಂಬೋದಿಲ್ಲ.ಅಲ್ಲಿನ ದೇವಾನುದೇವತೆಗಳೆಲ್ಲರೂ  ಪರಮಾತ್ಮರಲ್ಲವೆನ್ನುತ್ತಾರೆ.ಕಾರಣ ಅವರುಗಳಿಗೂ ಜನನ ಮರಣವಿತ್ತು ಎಂದು. ನೇರವಾಗಿ ಓದಿದವರಿಗೆ ಇದರಲ್ಲಿ ಸತ್ಯ ಕಾಣಬಹುದಷ್ಟೆ.ಆದರೆ ಆಳವಾದ ಅಧ್ಯಯನ ಮಾಡಿ ಅನುಭವಿಸಿ ತಿಳಿದ ಜ್ಞಾನಿಗಳು ಒಪ್ಪಲಾಗದು.ಕಾರಣ ಭೂಮಿ ಇರೋದೆ ಆ ಒಬ್ಬ ಭಗವಂತನ ಸೊಂಟದ ಭಾಗದಲ್ಲಿ ಎಂದಾಗ ಭೂಮಿಯಲ್ಲಿ ಅವತರಿಸೋದು  ಬೇರೆ ಜನಿಸೋದು ಬೇರೆ. ಜನನ ತಾಯಿ ಗರ್ಭದಿಂದಾದಾಗ ಅದನ್ನು  ಸ್ವಾಭಾವಿಕವಾಗಿರುತ್ತದೆ. ಹಾಗೆ ಎಷ್ಟೋಮಹಾ ಸ್ತ್ರೀ ‌ಪುರುಷರ ಜನನ ವಿಶೇಷವಾಗಿದೆ. ಈಗಿನ‌ಕಲಬೆರಕೆಯ ವಿಚಾರದಲ್ಲಿ ಇದು ಅರ್ಥ ವಾಗದೆ ಯಾರೋ ಹೊರಗಿನವರು  ಹೇಳಿದ್ದನ್ನು ಕೇಳಿಕೊಂಡು ಒಳಗೇ ಇದ್ದ ಪರಮಾತ್ಮನ‌ಮರೆತು ದೂರಹೋದವರ ಪಾಡು ಹೇಳಲು ಕಷ್ಟ. ಹೀಗಿರುವಾಗ  ಪರಮಾತ್ಮನ ವಿಚಾರ ಉಪದೇಶ ಮಾಡುವಷ್ಟು ಶಕ್ತಿ‌ ಇಂದು ಹೊರಗಿನವರಿಗಿಲ್ಲ.
ಈ ವಿಚಾರಕ್ಕೆ ಸಾಕಷ್ಟು  ಪ್ರತಿಕ್ರಿಯೆ ಉತ್ತರ ಬಂದವು. ಇಲ್ಲಿ ಪ್ರಜಾಪಿತ ಬ್ರಹ್ಮನೇ ಮಹಾವಿಷ್ಣುವಿನ  ಹೊಕ್ಕಳಿನಿಂದ ಹೊರಬಂದು ಮನುಕುಲದ ಸೃಷ್ಟಿ ಯಾಗಿದೆ ಎಂದು ಬ್ರಹ್ಮಜ್ಞಾನಿಗಳೇ ತಿಳಿಸಿರುವುದನ್ನು ಪುರಾಣ ತಿಳಿಸಿವೆ ಎಂದರೆ ಮಹರ್ಷಿಗಳಿಗಿಂತ  ಮಾನವರು ಬುದ್ದಿವಂತರೆ? ಜ್ಞಾನಿಗಳೆ? ಎನ್ನುವ ‌ಪ್ರಶ್ನೆ ಏಳುತ್ತದೆ. 
ಒಟ್ಟಿನಲ್ಲಿ ಕೇಳೋರಿದ್ದರೆ ಹೇಳೋರಿಗೇನೂ ಕೊರತೆಯಿಲ್ಲ.
ಕೇಳೋರು ಮೊದಲು ಆತ್ಮಾವಲೋಕನ ಮಾಡಿಕೊಂಡರೆ ಹೇಳೋರು  ಸುಮ್ಮನಿರಬಹುದು.
ಎಷ್ಟೋ ದೇವರಿದ್ದರೂ ದೈವತ್ವವಿಲ್ಲದೆ ಪರಮಾತ್ಮನ ಅರ್ಥ ತಿಳಿಯಲಾಗದು. ಜನನ ಮರಣದ‌ನಡುವೆ ಜೀವನವಿದೆ.
ಜೀವಿಗಳ ವನವಿದೆ. ಅದರ ಅರಿವಿನಲ್ಲಿ ಬದುಕಿದರೆ  ಭೂಮಿಯ  ಸತ್ಯ ಸತ್ವ ತತ್ವ ಒಳಗೇ ಕಾಣಬಹುದು. ಸಂಸಾರ ಬಿಟ್ಟು ನಡೆಯುವುದು ಸುಲಭ. ಅದರಲ್ಲೂ ಜನಬಲ ಹಣಬಲ ಅಧಿಕಾರಬಲ ಇದ್ದರೆ  ಯಾರೂ ಹೇಳೋರಿಲ್ಲ ಕೇಳೋದಿಲ್ಲವೆನ್ನುವ ಪರಿಸ್ಥಿತಿಯಲ್ಲಿ ಅವರವರ ಮನೆಯೊಳಗೆ ದೇವರನ್ನು ಪರಮಾತ್ಮನನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಡೆಯುವ ಜ್ಞಾನ ಅಗತ್ಯವಿತ್ತು.
ಪುರಾಣಗಳಿಂದ ಜ್ಞಾನ ಬರುತ್ತದೆ.ಅದನ್ನು  ಬಿಟ್ಟು ಅಥವಾ ಅದನ್ನು ಅಪಾರ್ಥ ಮಾಡಿಕೊಂಡು  ಹೊರಗೆ ಹರಡಿದರೆ ಇದೇ ರೀತಿಯಲ್ಲಿ  ಪ್ರಚಾರವಿರುತ್ತದೆ. 
ಏನೇ ಹೇಳಿದರೂ ಪರಮಾತ್ಮನೊಳಗಿರುವ ಜೀವಾತ್ಮರಿಗೆ  ಪರಮಸತ್ಯ ಪರಮಸುಖ,ಶಾಂತಿ ಸಿಗಲು ಆಂತರಿಕ ಶುದ್ದಿ ಅಗತ್ಯವೆಂದಿದ್ದಾರೆ ಮಹಾತ್ಮರು.
ಕಲಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ....ಬಸವಣ್ಣನವರಂತೆ ಇದನ್ನು ತತ್ವಜ್ಞಾನಿಗಳು  ಅನುಭವಿಸಿ ತಿಳಿಸಿರುವಾಗ. ಈಗ ನಮ್ಮಲ್ಲಿ ಅಡಗಿರುವ ಲೋಪದೋಷಗಳನ್ನು  ಹೊರಗಿನವರು ಸರಿಪಡಿಸಲಾಗದು. ನಮ್ಮ  ಸತ್ಯವೇ ನಮಗೆ ದೇವರು. ಪರಮಾತ್ಮನಲ್ಲಿ ಸತ್ಯವೂ ಇದೆ ಮಿಥ್ಯವೂ ಇದೆ. ನಾವ್ಯಾರು ಎನ್ನುವುದು  ನಮಗೆ ತಿಳಿದರೆ ಸಾಕು. ಸತ್ಯದಿಂದ  ದೈವತ್ವ.ದೈವತ್ವದಿಂದ ಮುಕ್ತಿ ಮೋಕ್ಷ ಸಾಧನೆ ..ಕಣ್ಣಿಗೆ ಕಾಣದ ಬ್ರಹ್ಮನ ಕಾಣುವ ಬ್ರಹ್ಮಕುಮಾರ,ಬ್ರಹ್ಮಕುಮಾರಿಯರು ತೋರಿಸುವುದಾದರೆ  ಬಹಳ ಸಂತೋಷ.
 ಆದರೆ   ಇವರಲ್ಲಿ ಹಲವರು ಕಂಡ ಸತ್ಯ ಬೇರೆ ಇದೆ .ಕೆಲವೆಡೆ ಉತ್ತಮವಿರಬಹುದು. ಎಲ್ಲಾ ಪರಮಾತ್ಮನ ಇಚ್ಚೆಯೇ ಆಗಿದೆಯೆ? ಅಥವಾ ಮಾನವ ಇಚ್ಚೆಯೆ? 

ಇಲ್ಲಿ  ಅವತಾರಗಳ ಹಿಂದೆ ಪರಮಾತ್ಮನಿದ್ದರೂ ಕಾಣೋದಿಲ್ಲ
ನಾಟಕದಲ್ಲಿ  ಪಾತ್ರ ಮಾಡುವವರನ್ನು ದೇವರೆಂದರೆ  ನಂತರ ಅವರು  ಮಾನವರೆ . ಹಾಗೆ ಎಷ್ಟೋ ದೇವತೆಗಳ ಅವತಾರಗಳನ್ನು   ಜ್ಞಾನದಿಂದ ನೋಡದ ಕಣ್ಣುಗಳಿಗೆ  ಅವರು  ಮಾನವರಂತೆ ಕಾಣುವರು. ಹೋದ ಮೇಲೆ ದೇವರಾಗುವರೆಂದರೆ  ಮಾನವ ಇದ್ದಾಗ  ದೇವರಲ್ಲವೆಂದರ್ಥ ವೆ?
ದೈವತ್ವದ ಗುಣಜ್ಞಾನ ಹೊಂದಿದ್ದರೆ ಸ್ವಯಂ  ದೇವತೆಗಳೇ ನಡೆಸುವರು ಅದ್ವೈತ ದ ಪ್ರಕಾರ ಅವರಲ್ಲಿ ನಾನೇ ಎನ್ನುವ ಅಹಂಕಾರ ವಿರದು. ನಾನೆಂಬುದಿಲ್ಲವೆಂದರೆ  ಪರಮಾತ್ಮನೇ ನಾನು ಎಂದರ್ಥ ವಲ್ಲ  ನನ್ನ ನಡೆಸಿರುವುದೇ ಪರಮಶಕ್ತಿ ಎಂದಾಗುತ್ತದೆ.
ಒಟ್ಟಿನಲ್ಲಿ ಭೂಮಿಯಲ್ಲಿ ಜನ್ಮ ಪಡೆಯಲು  ಹಿಂದಿನ ಜನ್ಮದ ಋಣ ಕರ್ಮ ವೇ ಕಾರಣವೆನ್ನಲಾಗಿದೆ. ಇದು ಪರಮಾತ್ಮನಿಗೆ ಅನ್ವಯಿಸುವುದಿಲ್ಲವೆನ್ನುವುದೂ ಸತ್ಯ.
ಕಾರಣ ಎಲ್ಲರನ್ನೂ ಒಳಗಿಟ್ಟುಕೊಂಡು ನಡೆಸೋ ಪರಮಾತ್ಮನಿಗೇನೂ  ಜನನ ಮರಣವಿರದು. 
ಇದನ್ನು  ನಾವು ಸಾಮಾನ್ಯ ಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಸಾಮಾನ್ಯರಲ್ಲಿ ಸಾಮಾನ್ಯರಂತಿರಬೇಕಷ್ಟೆ
ಯಾವಾಗ ನಮ್ಮಲ್ಲಿ ಅಹಂಕಾರ ಸ್ವಾರ್ಥ ಹೆಚ್ಚುವುದೋ  ಬೇರೆಯವರೊಳಗಿರುವ ಪರಮಾತ್ಮನ ಶಕ್ತಿ ಕಾಣದು. ಇದು ವ್ಯವಹಾರಕ್ಕೆ ಇಳಿದಾಗ ಹೆಚ್ಚಾಗುತ್ತದೆ.
ಕಲಿಕೆಯಲ್ಲಿ ವ್ಯವಹಾರವೇ ಮುಖ್ಯವಾದಾಗ ಇದು ಸಹಜ.
ಕಲಿಕೆ ಧರ್ಮ ಯುಕ್ತವಾಗಿದ್ದರೆ  ದೈವತ್ವ ವಾಗುತ್ತದೆ.ಎಲ್ಲದ್ದಕ್ಕೂ ಮೂಲವೇ ಶಿಕ್ಷಣ ಎನ್ನಬಹುದು. ‌

ವಾಸ್ತವದಲ್ಲಿ,

ಬ್ರಹ್ಮಕುಮಾರಿ ಇವರ ಉಪದೇಶ ಕೇಳಲು ಹೋದವರು ಸಂಸಾರ ಬಿಟ್ಟು ಹೊರಬಂದಿದ್ದಾರೆ.ಕೆಲವರಂತೂ ಸಂಸಾರದಲ್ಲಿದ್ದೇ ಕಲಹ ಸೃಷ್ಟಿ ಮಾಡಿಕೊಂಡಿರುವರು. ಹೋದವರು ಹಣ ನೀಡದೆ ಹೊರಗೆ ಬರುತ್ತಿಲ್ಲ. ಇದು ಸಣ್ಣ ಪುಟ್ಟ ಊರಲ್ಲಿ ನಡೆಯುತ್ತಿರುವ ಸತ್ಯ. ಆದರೆ ಯಾವ‌ ಮಠಾಧೀಶರೂ ಧಾರ್ಮಿಕ ಮುಖಂಡರೂ ಪ್ರಶ್ನೆ ಮಾಡಿಲ್ಲ ವೆಂದರೆ ಇವರನ್ನು ಪರಮಾತ್ಮ ನಡೆಸಿರುವುದೆ ?
 
ಭಗವದ್ಗೀತೆ ಯಲ್ಲಿ  ಪರಮಾತ್ಮ ತಿಳಿಸಿರುವಂತೆ  ಎಲ್ಲಾ ನನ್ನೊಳಗೇ ಇದ್ದರೂ ಎಲ್ಲಾ ನನ್ನ ಅರಿತಿಲ್ಲ . ಇದರರ್ಥ ನಾನೇ ಬೇರೆ ನೀನೇ ಬೇರೆ ಎಂದರೆ ಒಂದೇ ಎನ್ನುವ ಸತ್ಯದ ಅರಿವಾಗದು. 
ಉದಾಹರಣೆಗೆ ಭಾರತದೊಳಗೆ ಪ್ರಜಾಪ್ರಭುತ್ವ ವಿದೆ. ಪ್ರಜೆಗಳಿಲ್ಲದೆ  ಪ್ರಜಾಪ್ರಭುತ್ವ ವಿರದು.ಪ್ರಜೆಗಳಲ್ಲಿ ಜ್ಞಾನವಿಲ್ಲವಾದಾಗಲೇ  ಪ್ರಜಾಪ್ರಭುತ್ವ ಹದಗೆಡೋದು. ಇದಕ್ಕೆ  ಭಾರತಮಾತೆ ಕಾರಣವೆಂದರೆ ತಪ್ಪು. ಅವಳಿಗೇನೂ ಅಂಟದು.  ಅಂಟೋದು ಅಜ್ಞಾನವನ್ನು ಬೆಳೆಸಿರುವ ಪ್ರಜೆಗಳಿಗೇ ಎನ್ನಬಹುದು. ಹೀಗೇ  ಸಂಸಾರ ಸರಿಯಿಲ್ಲ ಎನ್ನುವ ಮೊದಲು ನಾನೆಷ್ಟು ಸರಿ ಎಂದು ತಿಳಿದರೆ ಉತ್ತಮ.
ಸರ್ಕಾರ ಸರಿಯಿಲ್ಲ ಎನ್ನುವ ಬದಲು ನನ್ನ ಸಹಕಾರ ಹೇಗಿದೆ ಯಾರಿಗಿದೆ ಎಂದು ತಿಳಿಯಬೇಕು.
ಮಕ್ಕಳು ಸರಿಯಿಲ್ಲ ಎನ್ನುವ ಬದಲು ಅವರಿಗೆ ಯಾವ ಜ್ಞಾನದ ಶಿಕ್ಷಣ ತಲೆಗೆ ತುಂಬಲಾಗಿದೆ ಎನ್ನುವ ವಿಚಾರ ಅಗತ್ಯ.
ಎಲ್ಲಾ ಸರಿಯಿದ್ದರೂ ತಪ್ಪು ಎಲ್ಲಿದೆ? ಎನ್ನುವಂತೆ ಎಲ್ಲಾ ದೇವತೆಗಳಿದ್ದರೂ ದೈವತ್ವದ ಕೊರತೆಯಿದೆ ಎಂದರೆ ದೈವೀಕ ಗುಣಜ್ಞಾನ ನಮ್ಮಲ್ಲಿ ಕುಸಿದಿದೆ. ..ಹಾಗಾಗಿ ದೇವರನ್ನು ಹೊರಗೆ ನೋಡುವಷ್ಟು ಒಳಗೆ ನೋಡಲಾಗದೆ ಪರಮಾತ್ಮನ ವಿಚಾರದಲ್ಲಿ  ಭಿನ್ನಾಭಿಪ್ರಾಯ ಬೆಳೆದುನಿಂತಿದೆ.ಇದರಿಂದ ಪರಮಾತ್ಮನಿಗೆ ಸಮಸ್ಯೆಯಿಲ್ಲ ಜೀವಾತ್ಮನಿಗೇ ಸಮಸ್ಯೆ.
ಜ್ಞಾನಕ್ಕೆ ಕೊರತೆಯಿಲ್ಲ ಆದರೆ ಗುರುತಿಸಿ ಬೆಳೆಸುವ ಗುರುವಿನ ಕೊರತೆಯಿದೆ. ಗುರುವಿನಿಂದ ದೇವರನ್ನು ಕಾಣಬಹುದು.‌ದೇವರಿಂದ ಪರಮಾತ್ಮನ ತಲುಪಬಹುದು...

ಸ್ತ್ರೀ ಗೆ ವೈರಾಗ್ಯ ಬಂದರೆ ಸಂಸಾರ ನಡೆಯದು. ಇದೀಗ ಎತ್ತ ಸಾಗಿದೆ.. 
ಬ್ರಹ್ಮಜ್ಞಾನಕ್ಕೆ ಸೃಷ್ಟಿ ಯ ರಹಸ್ಯ ಅರ್ಥ ವಾಗಬೇಕು.‌ನಂತರ ಸ್ಥಿತಿಗೆ ಕಾರಣ ತಿಳಿದು ಲಯಕಾರಕ ಶಿವನ ಮುಕ್ತಿಯ ಮಾರ್ಗ ಹಿಡಿಯುವ ಕರ್ಮ ಮಾಡಬಹುದು.
ಏನೂ ಕೆಲಸ ಮಾಡದೆ  ಉಪದೇಶ ಮಾಡಿದರೆ ಅರ್ಥ ವಿರದು.‌ಭೂಮಿ ನಡೆದಿರೋದೆ ಕರ್ಮ ಯೋಗಿಗಳಿಂದ.ಇದಕ್ಕೆ ಜ್ಞಾನವೇ ಮುಖ್ಯ.ಶಿಕ್ಷಣವೇ ದಾರಿತಪ್ಪಿರುವಾಗ ಎಲ್ಲಿಯ ಬ್ರಹ್ಮಜ್ಞಾನ?

 ಅವತಾರ  ಲೋಕಕಲ್ಯಾಣಕ್ಕಾಗಿ ನಡೆಯುವುದು. ಭೂಮಿಯ ಮಾಯೆ ಯಾರನ್ನು ಬಿಡದು. ಮಾಯೆಯ ವಶದಲ್ಲಿದ್ದರೂ ಸ್ಥಿತಪ್ರಜ್ಞಾವಂತನಾಗಿರೋದು  ಅವತಾರಿಗಳ ವಿಶೇಷ ಶಕ್ತಿ. 
ವಿಷ್ಣುವಿನ  ಅವತಾರಗಳಲ್ಲಿ  ಬದಲಾವಣೆ ಕಂಡರೂ  ಶಕ್ತಿ ಒಂದೇ ರೂಪ ಹಲವು. 

No comments:

Post a Comment