ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, April 27, 2025

ದ್ವೇಷ ಬುದ್ದಿ ಬೆಳೆಸಬಹುದು ಜ್ಞಾನವಲ್ಲ

ದ್ವೇಷದಿಂದ  ದೇಶೋದ್ದಾರವಾಗಲಿ ಆತ್ಮೋದ್ದಾರವಾಗಲಿ ಸಾಧ್ಯವಿಲ್ಲ. ಒಳಗೇ ಅಡಗಿರುವ ಅತಿಯಾದ ಸಾಲ ಅಹಂಕಾರ ಸ್ವಾರ್ಥ ವೇ ಇದಕ್ಕೆ ಕಾರಣವಾಗಿದೆ. ಯಾರನ್ನಾದರೂ ಸಾಲ ಬೇಡುವ ಮೊದಲು ಅದನ್ನು ಹೇಗೆ ತೀರಿಸಬೇಕೆಂಬ ಅರಿವಿದ್ದರೆ  ಸಮಸ್ಯೆ ಯಿರದು. ಸಾಲ ಮಾಡೋದಕ್ಕೆ ಕಾರಣವೇ ಆಸೆ,ಆಸೆಯೇ ದು:ಖದ ಮೂಲ.
ದು:ಖಕ್ಕೆ ಕಾರಣವೇ ಸಾಲ. ಸಾಲವೇ ಶೂಲ ಸಾಲ ಮಾಡಿ ಕೆಟ್ಟ ಎನ್ನುವ  ಸತ್ಯದ ಅರಿವಿನ‌ಕೊರತೆಯೇ ಎಲ್ಲಾ  ಹೋರಾಟ ಹಾರಾಟ ಮಾರಾಟಗಳಿಗೆ  ಕಾರಣ.
ಒಟ್ಟಿನಲ್ಲಿ ಮೂಲವನ್ನರಿತು  ನಡೆದವರು  ಸಾಲದಿಂದ ಬಿಡುಗಡೆ ಪಡೆದಿದ್ದಾರೆನ್ನಬಹುದಷ್ಟೆ.ಎಷ್ಟು ಹೊರಗೆ ನಡೆದರೂ  ಕಣ್ಣಿಗೆ ಕಾಣೋದು ಹಣ ಅಧಿಕಾರ ಸ್ಥಾನಮಾನ ಇಷ್ಟೇ ಜೀವನವೆಂದರೆ ಸತ್ಯವಲ್ಲ.
ಇದರಿಂದ ಹೊರಬಂದವರಿಗೆ ಸತ್ಯದ ಅರಿವಾಗಿದೆ ಎಂದರೆ  ಅದನ್ನು ಬಿಟ್ಟು ಇನ್ನೊಂದು  ಇದೆ ಎಂದರ್ಥ. ಇದು ಒಳಗಿನ ಅರಿವಿನ‌ಮೇಲೇ ನಿಂತಿರುವಾಗ ಹೊರಗಿನವರ ಅರಿವಿನ ಶಿಕ್ಷಣ ,ವ್ಯವಹಾರ ಭಾಷೆ ಧರ್ಮದ  ಕಡೆಗೆ ಹೊರಟು ಕೊನೆಗೆ ಅವರನ್ನೇ ದ್ವೇಷ ಮಾಡಿದರೆ ಅಧರ್ಮ ಕ್ಕೆ ತಕ್ಕಂತೆ ಫಲ ಜೀವವೇ ಅನುಭವಿಸೋದನ್ನು  ದೇವರೂ ತಡೆಯಲಾಗದು.
ಇದೀಗ ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಸತ್ಯವಾಗಿದೆ.
ಆತ್ಮನಿರ್ಭರ ಭಾರತ ಅಧ್ಯಾತ್ಮ ಸಂಶೋಧನೆಯಿಂದ ಸಾಧ್ಯ.
ಆತ್ಮಾವಲೋಕನ ದಿಂದ  ಸತ್ಯದರ್ಶನ ಸಾಧ್ಯ.ಸತ್ಯದಿಂದ ಧರ್ಮ ರಕ್ಷಣೆ ಸಾಧ್ಯ.
ಬದಲಾವಣೆ ಒಳಗಾಗದಿದ್ದರೆ ಯಾರದ್ದೋ ದ್ವೇಷಕ್ಕೆ ಯಾರದ್ದೋ ಜೀವಬಲಿ. 
ಎಲ್ಲಿಯವರೆಗೆ  ದ್ವೇಷ ಒಳಗಿರುವುದೋ ದೇಶ ಉದ್ದಾರವಾಗದು.ದೇಶದ ಜನತೆಯಲ್ಲಿಯೇ ದ್ವೇಷದ ವಿಷಬೀಜ ಬಿತ್ತುವುದರ ಮೂಲಕ  ದೇಶವನ್ನು ಒಡೆದು ಆಳೋದರಲ್ಲಿ  ಅಧ್ಯಾತ್ಮ ಸಂಶೋದನೆಯಾಗಲಿ ಭೌತವಿಜ್ಞಾನ ವಾಗಲಿ ಇದೆಯೆ? ಇಲ್ಲವೆಂದರೆ ಇದೊಂದು ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ನಡೆಸಿರುವ ಷಡ್ಯಂತ್ರವಷ್ಟೆ. ಯಂತ್ರ ಮಾನವರನ್ನು ಸೃಷ್ಟಿ ಮಾಡುವಷ್ಟು ಬುದ್ದಿವಂತಿಕೆ ಇರುವ ಮಾನವನಿಗೆ ಯಾಂತ್ರಿಕ ಜೀವನದಿಂದ ಆಗುತ್ತಿರುವ  ಜೀವನಷ್ಟ ಮಾನನಷ್ಟ ಭ್ರಷ್ಟ ದುಷ್ಟರನ್ನು ಸರಿಪಡಿಸಲಾಗದು ಎನ್ನುವುದೂ ಸ್ಪಷ್ಟ.
ಜನಸಹಕಾರವಿಲ್ಲದೆ ಯಾವುದೂ ಮುಂದೆ ನಡೆದಿಲ್ಲ ನಡೆಯದು.ಎಲ್ಲದ್ದಕ್ಕೂ  ಜನಸಹಕಾರವೇ ಕಾರಣ.ಅಜ್ಞಾನವೇ ಕಾರಣ.

ಮಹಾಜ್ಞಾನಿಯಾಗಿದ್ದ ರಾವಣನಾಗಲಿ  ಬುದ್ದಿವಂತನಾಗಿದ್ದ  ದುರ್ಯೋಧನನಾಗಲಿ  ಮಹಾದಾನಿಯಾಗಿದ್ದ ಕರ್ಣ  ಮತ್ತು ಬಲಿಚಕ್ರವರ್ತಿಯಾಗಲಿ  ದ್ವೇಷವನ್ನು       ಅಸ್ತ್ರ ವಾಗಿಸಿಕೊಂಡಿರಲಿಲ್ಲ. ಕಾರಣ ಅವರಿಗೆ  ಅಧಿಕಾರ ಅಧಿಕವಾಗಿತ್ತು. ಯಾವುದೂ ಅತಿಯಾದರೆ ಗತಿಗೇಡು.

ಭಗವತಿ
ಬೆಂಗಳೂರು

No comments:

Post a Comment