ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, April 27, 2025

ಭಾರತ ವಿಶ್ವಗುರು

ನಮ್ಮ ಭಾರತ ವಿಶ್ವಗುರು ಆಗಿರೋದು ಮಹಾತ್ಮರಿಂದ ಅಂತಹ ಮಹಾತ್ಮರನ್ನು ಅರ್ಥ ಮಾಡಿಕೊಳ್ಳದೆ ರಾಜಕೀಯ ನಡೆಸಿದವರು ಇಂದು‌ಮಹಾಜನರೆನ್ನಿಸಿಕೊಂಡು ಮೆರೆಯುತ್ತಿರೋದಕ್ಕೆ ಕಾರಣವೇ  ಜನಸಹಕಾರವಾಗಿದೆ. ಇದಕ್ಕೆ ಕಾರಣ ಅಜ್ಞಾನ. ಅಜ್ಞಾನಕ್ಕೆ ಕಾರಣವೇ  ಶಿಕ್ಷಣದ ವಿಚಾರ. 
ದ್ವೇಷದ ವಿಷ ತುಂಬಿದಷ್ಟೂ ಗಾಳಿ ವಿಷವಾಗುತ್ತದೆ. ಸುದ್ದಿ ಮಾಧ್ಯಮಗಳು ಇದಕ್ಕೆ ಸಹಕಾರಕೊಟ್ಟಷ್ಟೂ ವಿಷಜಂತುಗಳು ಬೆಳೆಯುತ್ತಾ ಜೀವಕ್ಕೆ ಅಪಾಯ ತಂದಿಡುತ್ತದೆ.
ಜೀವ ಇದ್ದಾಗಲೇ ಅಮೃತದಂತಹ ವಿಷಯಗಳನ್ನು ಅರ್ಥ ಮಾಡಿಸುವ ಕೆಲಸ ಮಹಾತ್ಮರು ಮಾಡಿದ್ದರು. ಈಗಿದು ವಿರುದ್ದ ದಿಕ್ಕಿನಲ್ಲಿ ಹರಡುತ್ತಿದೆ ಎಂದರೆ ಅಮೃತದಂತಹ ವಿಚಾರವನ್ನು ಹರಡುವವರಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ ಸ್ವಾರ್ಥ ಅಹಂಕಾರ  ಇದ್ದರೆ  ವ್ಯರ್ಥ .
ನಾವೇನು ಕೊಟ್ಟರೂ ಒಳಗಿರುವ ಶಕ್ತಿಯನ್ನು ಮರೆತರೆ  ಯೋಗವಾಗದು. ಯೋಗದಿಂದ ಏನೇ ಮಾಡಿದರೂ ಫಲ ಉತ್ತಮವಾಗಿರುತ್ತದೆ.
ಇದರಲ್ಲಿ ಅಸುರ ಶಕ್ತಿ ದೈವಶಕ್ತಿ ಎರಡಿದೆ. ಯಾವಾಗ ಮಧ್ಯವರ್ತಿ ಮಾನವ ಅಸುರಶಕ್ತಿಯನ್ನು ಕೂಡಿಕೊಂಡು  ದೈವಶಕ್ತಿಯ ವಿರುದ್ದ ನಿಲ್ಲುವನೋ  ಹೊರಗೆ ಭೋಗ ಒಳಗೆ ರೋಗ ಹೆಚ್ಚುವುದು.
ಹೀಗಾಗಿ ಮಹಾತ್ಮರುಗಳು ಒಳಗಿರುವ ಆರೋಗ್ಯರಕ್ಷಣೆಗಾಗಿ ದೈವಶಕ್ತಿಯನರಿತು  ಅಸುರರಿಂದ ದೂರವಿದ್ದರು.
ಕಲಿಕೆಯೇ ಹೊರಗಿನವರ ವಿಷಯವಾದಾಗ ಒಳಗಿನವರು ಕಾಣೋದಿಲ್ಲ. ಕಂಡರೂ  ಕೇವಲ ಸ್ವಾರ್ಥ ಅಹಂಕಾರ ವೇ ಬೆಳೆಯೋದಷ್ಟೆ.
ಅಜ್ಞಾನದಿಂದ  ವಿಜ್ಞಾನ ಬೆಳೆದರೆ  ಆತ್ಮಹತ್ಯೆಯಾಗುತ್ತದೆ.
ಜ್ಞಾನದಿಂದ ವಿಜ್ಞಾನ ಬೆಳೆದರೆ ಆತ್ಮರಕ್ಷಣೆಯಾಗುತ್ತದೆ.
ಆತ್ಮಕ್ಕೆ  ಸಾವಿಲ್ಲವೆಂದಾಗ  ರಕ್ಷಣೆಯಾಗಲಿ ಹತ್ಯೆಯಾಗಲಿ  ಯಾರು ಮಾಡೋದು? ಇದರಲ್ಲಿ ಜೀವಾತ್ಮ ಪರಮಾತ್ಮ  ಬೇರೆ ಬೇರೆ ಎಂದಾಗ  ಜೀವ ಹೋದರೆ‌ಸಾವು.  ಯಾವಾಗ ಪರಮಾತ್ಮನ ಅರಿವಿಲ್ಲದೆ ಜೀವ ಹೋಗುವುದೋ ಆಗ ಜನ್ಮ ಜನ್ಮಗಳೇ ಬೆಳೆಯುತ್ತದೆ. ಹಿಂದಿನ ಧರ್ಮ ಕರ್ಮಕ್ಕೆ ತಕ್ಕಂತೆ ಜನ್ಮಗಳಾಗುತ್ತದೆ. ಸ್ವಧರ್ಮ ಬಿಟ್ಟು ಪರಧರ್ಮ ಕ್ಕೆ ಸಹಕರಿಸಿದ್ದರೆ‌ ಮತ್ತೊಂದು ಜನ್ಮದಲ್ಲಿ ಅದೇ ಕರ್ಮಕ್ಕೆ ತಕ್ಕಂತೆ  ಫಲ.
ಇದನ್ನು ಯಾವ ದೇವರೂ ತಪ್ಪಿಸಲಾಗಿಲ್ಲ.ಸ್ವಯಂ ದೇವತೆಗಳೇ ಅನುಭವಿಸಿರೋದು ಸತ್ಯವಾಗಿದೆ. ಒಟ್ಟಿನಲ್ಲಿ ಅಸುರ ಜನ್ಮದಲ್ಲಿ ಅಹಂಕಾರ ಸ್ವಾರ್ಥ ಮಿತಿಮೀರಿದಾಗ ಸ್ವಯಂ ಭಗವಂತನೇ ಅವತಾರವೆತ್ತಿ ಧರ್ಮ ರಕ್ಷಣೆಯ ಕಾರ್ಯ ನಡೆಯುತ್ತದೆ. ಇದು  ಮಧ್ಯವರ್ತಿ ಮಾನವನಿಂದಲೇ  ನಡೆಯುತ್ತದೆ. ಅದಕ್ಕೆ ಹೇಳಿರೋದು‌ಮೊದಲು ಮಾನವನಾಗು ಎಂದು. ನಮ್ಮನ್ನು ನಾವರಿಯದೆ‌ ಮುಂದೆ ಹೋದವರಿಗೆ ನಾನ್ಯಾರು ಎನ್ನುವ ಒಳಗಿನ ಪ್ರಶ್ನೆ ಏಳೋದಿಲ್ಲ.ಪ್ರಶ್ನೆ ಏಳದಿದ್ದರೆ ಹೊರಗಿನ‌ನಾನೇ ಸತ್ಯವಾಗಿರುತ್ತದೆ.ಆಗಲೇ ಅಸುರ ಶಕ್ತಿ ಬಲವಾಗೋದು. ಹಾಗಾದರೆ ನಾವ್ಯಾರು?

ಮಹಾತ್ಮರೆ,ಪುಣ್ಯವಂತರೆ,ಪಾಪಿಷ್ಟರೆ? 
ಮಹಾತ್ಮರಾಗೋದಕ್ಕೆ  ಸತ್ಯ ಧರ್ಮ ವನರಿತು ನಡೆಯಬೇಕು
ಪುಣ್ಯವಂತರಾಗಲು ಪುಣ್ಯದ ಕಾರ್ಯ ಕ್ಕೆ ತಲೆಬಾಗಬೇಕು.
ಪಾಪಿಷ್ಟರಾಗಿದ್ದರೆ  ದುಷ್ಟ ಭ್ರಷ್ಟರ ವಶದಲ್ಲಿರಬೇಕು.
ಎಲ್ಲಾ ಒಳಗೇ ಇರೋದು. ಹೊರಗೆ ಹುಡುಕಿದರೆ ಸಿಗದು.

No comments:

Post a Comment