ಉಪಾದಾನಕಾರಣ ನಿಮಿತ್ತ ಕಾರಣ
ಪರಮಾತ್ಮ ಉಪಾದಾನಕಾರಣ ಜೀವಾತ್ಮ ನಿಮಿತ್ತ ಕಾರಣ
ಉಪಾದಾನ ಕಾರಣ ಹತ್ತಿಯಿಂದ ಬಟ್ಟೆಯಾಗಬೇಕಾದರೆ ಯಂತ್ರ ಸೇರಬೇಕು.ಹತ್ತಿ ಉಪಾದಾನ ಕಾರಣ ಯಂತ್ರ ನಿಮಿತ್ತ ಕಾರಣ. ಇವೆರಡೂ ಸೇರಬೇಕು.
ಆಭರಣ ನಿಮಿತ್ತ ಚಿನ್ನಉಪಾದಾನ ಕಾರಣ
ಮೂಲ ಶಕ್ತಿ ಯ ಜೊತೆಗೆ ವ್ಯಕ್ತಿತ್ವ ಸೇರಿದಾಗ ಯೋಗ.
ಮನುಷ್ಯನಲ್ಲಿ ತಾಯಿ ಉಪಾದಾನ ತಂದೆ ನಿಮಿತ್ತ ಕಾರಣ.
ಸೃಷ್ಟಿಯಲ್ಲಿ ಮೂಲ ಶಕ್ತಿಮೂಲದ್ರವ್ಯ ವಿದೆ. ಮೂಲ ಸೃಷ್ಟಿ ಮಾತ್ರ ಪರಮಾತ್ಮನದ್ದು. ಇದರ ನಿರ್ಮಾಣಕ್ಕೆ ನಾನೇಮೂಲ ದ್ರವ್ಯ ಮತ್ತು ಮೂಲ ಶಕ್ತಿಯಾಗಿದ್ದೇನೆ.
ತಾನೇ ತನ್ನ ಶಕ್ತಿಯಿಂದ ತಯಾರಿಸಿದ ವಸ್ತುವಿಗೆ ತಾನೇ ಕಾರಣ. ಆದರೆ ಅದರ ಹಿಂದಿನ ಶಕ್ತಿಯ ಅರಿವಿಲ್ಲದೆ ಹೋದರೆ ಪರಮಾತ್ಮ ಕಾರಣನಲ್ಲ.
ಎಲ್ಲರಲ್ಲಿಯೂ ನಾನಿಲ್ಲ. ಎಲ್ಲರೂ ನನ್ನ ಒಳಗಿದ್ದಾರೆ.
ತನ್ನ ಸೃಷ್ಟಿ ಯನ್ನು ಮಾಯೆಯ ಸರಸ ವಿರಸದಲಿ ಕೊಟ್ಟು ತಾನು ಯಾವುದಕ್ಕೂ ಅಂಟಿಕೊಳ್ಳದಿರೋದೆ ಪರಮಾತ್ಮ.
ನಿರ್ಲಿಪ್ತರಾಗಿರೋದರಿಂದ ಲಾಭವಿದೆ. ಇಲ್ಲಿ ಒಬ್ಬ ಅಧಿಕಾರಿ ಎಲ್ಲಾ ಕೆಲಸವನ್ನು ತಾನೇ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡರೆ ಯಾವ ಕೆಲಸವನ್ನೂ ಸರಿಯಾಗಿ ನಡೆಸಲಾಗದು.
ಕೆಲಸ ಹಂಚಿಕೊಂಡು ಬಾಳಿದಾಗಲೇ ಸುಗಮ ಜೀವನ.
ಯಾವ ಕೆಲಸ ಮಾಡಿದರೂ ಅಧಿಕಾರಿಯ ಕಣ್ಣಿಗೆ ತಪ್ಪು ಕಂಡರೆ ಕೆಲಸವಾಗದು. ಅವರವರ ಕೆಲಸ ಅವರವರಿಗೇ ಬಿಟ್ಟು ಮುಂದೆ ನಡೆಯುವುದೇ ಉತ್ತಮ.
ಈಗಿನ ಸರ್ಕಾರಗಳು ಜನಸೇವಕರೆಂದು ಜನರ ಕೆಲಸವನ್ನು ಮಾಡಿಕೊಡುವ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬರುವರು.
ಜನರ ಸಂಸಾರದ ಸಮಸ್ಯೆ ಯನ್ನೂ ಸರ್ಕಾರವೇ ಹೋರಲು ಸಾಲ ಮಾಡಿದರೆ ಜನರ ಸಮಸ್ಯೆ ತೀರುವುದೆ? ಎಲ್ಲಾ ಉಚಿತವಾಗಿ ಕೊಟ್ಟರೆ ಸಾಲ ಖಚಿತ. ಸಾಲ ತೀರಿಸಲು ಕೆಲಸ ಬೇಕು. ಕೆಲಸ ಮಾಡಲು ಜ್ಞಾನ ಬೇಕು. ಜ್ಞಾನ ಬೆಳೆಯುವ ಶಿಕ್ಷಣ ಕೊಡಬೇಕು. ಜ್ಞಾನದ ಶಿಕ್ಷಣವೇ ಕೊಡದೆ ಜನರನ್ನು ಆಳಲು ಹೊರಟರೆ ಮುಗಿಯಿತು ಕಥೆ.
ಸೋಮಾರಿಗಳ ಸಂತೆಯಲ್ಲಿ ಹೋರಾಟ ಹಾರಾಟ ಮಾರಾಟದ ವ್ಯವಹಾರವಷ್ಟೆ. ಬೆಳೆ ಬೆಳೆಯೋರಿಲ್ಲ ಭೂಮಿ ಉಳೋರಿಲ್ಲ ಕುಳಿತು ತಿನ್ನೋರೆ ಎಲ್ಲಾ. ಮಧ್ಯವರ್ತಿಗಳು ಸಾಲ ಮಾಡಿ ಊಟ ವಸತಿ ವಸ್ತ್ರ ಎಲ್ಲಾ ಕೊಟ್ಟರೆ ಕೇಳೋರೆ ಬೇಡೋರೆ ಎಲ್ಲಾ.
ರೋಗ ಬಂದಾಗಷ್ಟೆ ಜೀವ ಕಷ್ಟ ಅನುಭವಿಸೋದು. ಅದಕ್ಕೆ ಪೂರಕವಾದ ಔಷಧ ಕೊಟ್ಟು ಗುಣಮುಖನಾದ ಮೇಲೆ ಜ್ಞಾನಬಂದರೆ ಉತ್ತಮ. ಆ ಔಷಧವೇ ಸದ್ಗುಣದ ಶಿಕ್ಷಣವಾಗಿದೆ.
ಆಟವಾಡೋರನ್ನು ಪಾಠ ಮಾಡಿ ಎಂದರೆ ಆಟವನ್ನು ಕಲಿಸಬಹುದಷ್ಟೆ. ಹೆಸರು ಮಾಡಿದವರೆಂದಾಗಲಿ ಹಣವಿದೆ ಎಂದಾಗಲಿ ದೊಡ್ಡ ದೊಡ್ಡ ಹುದ್ದೆ ಕೊಟ್ಟು ಕೂರಿಸಿದರೆ ಅವರಿಗೆ ಅದರಲ್ಲಿ ಯಾವುದೇ ಅನುಭವಜ್ಞಾನವಿಲ್ಲದಿದ್ದರೆ ಭ್ರಷ್ಟಾಚಾರ ಕೆಳಮಟ್ಟದವರೆಗೂ ಹರಡುತ್ತದೆ.
ಭಾರತದಲ್ಲಿರುವಷ್ಟು ಸುಜ್ಞಾನ ಬೇರೆಡೆ ಇರಲಿಲ್ಲ. ಅದನ್ನು ಬಳಸದೆ ವಿಜ್ಞಾನ ವನ್ನು ಎತ್ತಿ ಏಣಿಗೇರಿಸಿದರೆ ಕೆಳಗೆ ಒಳಗೆ ಅಡಗಿದ್ದ ಜ್ಞಾನ ಕುಸಿಯುತ್ತದೆ. ಹಾಗೆ ಒಳಗೇ ಅಡಗಿದ್ದ ಸಣ್ಣ ಬಿಂದುಗಾತ್ರದ ಜೀವವನ್ನು ಸಾಕಲಾರದವ ಹೊರಗಿನ ಎಲ್ಲಾ ಜೀವರನ್ನು ಆಳುತ್ತೇನೆಂದರೆ ಅಜ್ಞಾನ ವಷ್ಟೆ.
ಯಾರನ್ನು ಯಾರು ಆಳಬೇಕಿತ್ತು ಅದನ್ನ ಅರಿಯದೆ ಆಳಾಗಿ ದುಡಿಯುವುದನ್ನು ತಪ್ಪಿಸಲಾಗದು.
ಪ್ರಜಾಸೇವಕರೆಂದರೆ ಪ್ರಜೆಗಳ ಸೇವೆಯಲ್ಲಿರೋರು.
ಪ್ರಜಾಪ್ರಭುತ್ವ ಎಂದರೆ ಪ್ರಜೆಗಳೇ ದೇಶವನ್ನು ಆಳೋದು.
ಅದರೊಳಗಿದ್ದು ಅದನ್ನು ಆಳುವಾಗ ಸತ್ಯ ಧರ್ಮ ದ ಜ್ಞಾನ ಇಲ್ಲವಾದರೆ ವ್ಯರ್ಥ.
No comments:
Post a Comment