ಬ್ರಾಹ್ಮಣರನ್ನು ಹಿಂದೆ ತಳ್ಳುವುದು,ದ್ವೇಷ ಮಾಡೋದು, ಹೀಗೆಳೆಯೋದು, ದೂರ. ಮಾಡಿಕೊಳ್ಳುವುದರಿಂದ ಏನಾದರೂ ಲಾಭವಿದೆಯೆ? ಎಂದರೆ ಭೌತಿಕದಲ್ಲಿ ಲಾಭವಿದೆ ಅಧ್ಯಾತ್ಮದಲ್ಲಿ ಕಷ್ಟ ನಷ್ಟವೇ ಅಡಗಿದೆ. ಹೀಗಾಗಿ ಅಜ್ಞಾನ ಮಾನವನಲ್ಲಿ ಮಿತಿಮೀರಿದೆ.
ಯಾರಲ್ಲಿ ಸತ್ಯ ಧರ್ಮ ದ ಜ್ಞಾನವಿದೆಯೋ ಯಾರಲ್ಲಿ ಬ್ರಹ್ಮತತ್ವದ ಅರಿವಿದೆಯೋ ಯಾರಲ್ಲಿ ದೈವಶಕ್ತಿಯ ಕೃಪೆಯಿದೆಯೋ ಯಾರನ್ನು ಪರಮಾತ್ಮ ಇಷ್ಟಪಡುವನೋ ಅವರು ಬ್ರಾಹ್ಮಣರಾದರು. ಬ್ರಾಹ್ಮಣರ ಜ್ಞಾನದಿಂದ ಲೋಕದ ಸುಭಿಕ್ಷವಾಗಿದ್ದು ಉತ್ತಮ ಸಮಾಜಸೇವಕರು ಧಾರ್ಮಿಕ ಜನರು ಹೆಚ್ಚಾಗುವರೆಂಬುದು ಸತ್ಯವಾಗಿತ್ತು.
ಯಾವಾಗ ಬ್ರಾಹ್ಮಣರನ್ನು ಹಿಂದೆ ತಳ್ಳಿ ರಾಜಕೀಯ ಮುಂದೆ ನಡೆಯಿತೋ ಅಧರ್ಮ ಅನ್ಯಾಯ ಅಸತ್ಯಗಳೂ ಬೆಳೆದವು.ಇದರ ಫಲವೇ ಕಲಿಕೆಯಲ್ಲಿ ಬ್ರಹ್ಮಜ್ಞಾನದ ಕೊರತೆ ಹೆಚ್ಚಾಗುತ್ತಾ ತಂತ್ರದಿಂದ ಜನರನ್ನು ಆಳುವಷ್ಟು ರಾಜಕೀಯವೇ ತುಂಬಿ ಹೋಯಿತು.
ಇತಿಹಾಸ ಪುರಾಣಗಳನ್ನು ಓದಿದಾಕ್ಷಣ ನಾವು ಹಿಂದಿನಂತೆಜೀವನನಡೆಸಬಹುದೆ? ಅಥವಾ ಓದದಿರುವವರು ಹಿಂದಿನವರಂತೆ ಜೀವನ ನಡೆಸಲಿಲ್ಲವೆ?
ಇಲ್ಲಿ ಹೊರಗಿನಿಂದ ತಿಳಿದವಿಚಾರವನ್ನು ಯಾರು ಒಳಗೆ ತಿಳಿದು ಅನುಸರಿಸಿ ಸತ್ಯವನರಿತು ನಡೆದರೋ ಅವರು ಜ್ಞಾನಿಗಳಾಗಿದ್ದಾರೆ. ಹಲವರಿಗೆ ಓದು ಬರಹ ಬರದಿದ್ದರೂ ಉತ್ತಮ ಗುರುಹಿರಿಯರು ಜ್ಞಾನಿಗಳು ತಿಳಿಸಿದಂತೆ ನಡೆದು ಮಹಾಜ್ಞಾನಿಗಳಾಗಿರೋದನ್ನು ಸನಾತನ ಧರ್ಮದಲ್ಲಿ ಕಾಣಬಹುದು. ಆದರೆ ಕೆಲವರಿಗೆ ಇದರಲ್ಲಿನ ಸತ್ಯ ಧರ್ಮ ಅರ್ಥ ವಾಗದೆ ಬ್ರಾಹ್ಮಣರನ್ನು ದ್ವೇಷ ಮಾಡುತ್ತಾ ನಮ್ಮನ್ನು ಬ್ರಾಹ್ಮಣರು ಹಿಂದುಳಿಸಿ ಆಳಿದ್ದಾರೆಂದು ಅಪಪ್ರಚಾರ ಮಾಡಿ ಬೌತಿಕದಲ್ಲಿ ಅಸತ್ಯ ಅನ್ಯಾಯ ಅಧರ್ಮ ವನ್ನು ಬಳಸಿಕೊಂಡು ದೊಡ್ಡ ದೊಡ್ಡ ಸ್ಥಾನ ಪಡೆದು ಜ್ಞಾನಕ್ಕೆ ವಿರುದ್ದ ನಿಂತು ತಾವೂ ಜೀವನದ ಸತ್ಯ ತಿಳಿಯದೆ ತಿಳಿದವರನ್ನೂ ಮುಂದೆ ನಡೆಯಲು ಬಿಡದೆ ಮಾನವ ಮಧ್ಯವರ್ತಿಯಾಗಿ ಇಂದು ಜ್ಞಾನ ಒಳಗಿದ್ದರೂ ಗುರುತಿಸುವ ಗುರುವಿಲ್ಲ. ಗುರಿ ತಲುಪಲು ಸರಿಯಾದ ಅಧಿಕಾರ ಅವಕಾಶವೂ ಇಲ್ಲದ ಹೆಚ್ಚಿನ ಬ್ರಾಹ್ಮಣರಿಗೆ ಹೊರಗಿನವರೆ ದಾರಿತಪ್ಪಿಸುವ ಕೆಲಸ ಮಾಡುತ್ತಾ ತಮ್ಮ ಸೇವಕರನ್ನಾಗಿಸಿಕೊಂಡು ತಲೆಯಲ್ಲಿರುವ ಬುದ್ದಿವಂತಿಕೆ ಹೊರಗಿನವರ ಪಾಲಾಗುತ್ತಿದೆ.ನಮ್ಮವರಿಗೇ ನಾವೇ ಶತ್ರು ಆಗುವಂತಹ ಪರಿಸ್ಥಿತಿ ಮನಸ್ಥಿತಿ ಬೆಳೆದಿದೆ. ಸತ್ಯ ಹೇಳೋದೆ ತಪ್ಪು. ತಪ್ಪು ಮಾಡಿದರೂ ಅಧಿಕಾರ ಸ್ಥಾನವಿದ್ದರೆ ಸರಿ.
ಇಲ್ಲದಿದ್ದರೆ ಸತ್ಯವೇ ಇಲ್ಲ ಎನ್ನುವ ಮಟ್ಟಿಗೆ ಸಮಾಜದಲ್ಲಿ ಅಂತರ ಬೆಳೆದಿದೆ.
ಅಜ್ಞಾನದ ಕಣ್ಣಿಗೆ ಕಾಣೋದೆಲ್ಲಾ ಸತ್ಯವೇ ಆಗಿದ್ದರೂ ಒಳಗಿರುವ ಜ್ಞಾನಕ್ಕೆ ಕಾಣದ ಸತ್ಯದ ಅರಿವಾದರೂ ಹೊರಗೆ ಬರದಂತೆ ತಡೆದಾಗ ಬ್ರಹ್ಮಾಂಡದಲ್ಲಿ ಅಸತ್ಯ ತನ್ನ ಅಧಿಕಾರ ಚಲಾಯಿಸುತ್ತದೆ.
ಎಷ್ಟು ವರ್ಷ ಬದುಕಿದರೂ ಒಮ್ಮೆ ಜೀವ ಹೋಗೋದೆ ಆದಾಗ ನಮ್ಮ ಜೀವ ನಮ್ಮ ಕೈಯಲ್ಲಿ ಇಲ್ಲ. ಜೀವ ಇರೋವಾಗ ಸತ್ಯ ಅರ್ಥ ವಾದರೆ ಅದೇ ನಿಜವಾದ ಜ್ಞಾನ. ಹಾಗಾದರೆ ಸತ್ಯ ಯಾವುದು? ಎಲ್ಲಿದೆ?
ಬ್ರಾಹ್ಮಣರಲ್ಲಿ ಸತ್ಯವಿತ್ತು ಅದಕ್ಕೆ ತಕ್ಕಂತೆ ಧರ್ಮ ವೂ ಇತ್ತು.
ಯಾವಾಗಿದು ದೂರವಾಗುತ್ತಾ ಹೊರಗೆ ನಡೆಯಿತೋ ಆ ಅಂತರದಲ್ಲಿ ಅರ್ಧ ಸತ್ಯ ಬಂದು ನಿಂತು ರಾಜಕೀಯ ಬೆಳೆಯಿತು. ರಾಜಕೀಯದಲ್ಲಿ ಸತ್ಯಕ್ಕೆ ಧರ್ಮಕ್ಕೆ ನೆಲೆಯಿಲ್ಲವಾದಾಗ ಬ್ರಾಹ್ಮಣರು ಅದರಿಂದ ಹಿಂದಕ್ಕೆ ಬಂದರು. ಯಾವಾಗ ಬ್ರಾಹ್ಮಣ ರಾಜಕೀಯ ಬೇರೆ ಧರ್ಮ ಬೇರೆ ಎಂದರೋ ಆಗ ರಾಜಕೀಯ ಜನರನ್ನು ಆಳಲು ಅವಕಾಶವಾಯಿತು. ಜನರ ಒಳಗಿದ್ದ ಸತ್ಯ ಧರ್ಮಕ್ಕೆ ಸರಿಯಾದ ಶಿಕ್ಷಣವೂ ಕೊಡದೆ ರಾಜಕೀಯ ಮುಂದೆ ನಡೆದಂತೆಲ್ಲಾ ಕಲಿಯುಗ ಪ್ರಾರಂಭವಾಯಿತು.
ಕಲಿಕೆಯ ಯುಗ ಕಲಿಯುಗ. ಯಾವುದನ್ನು ಕಲಿತರೆ ಜೀವಕ್ಕೆ ಶಾಂತಿ ತೃಪ್ತಿ ಮುಕ್ತಿ ಸಿಗಬೇಕಿತ್ತೋ ಅದನ್ನು ಬಿಟ್ಟು ಬೇರೆ ವಿಷಯಗಳನ್ನು ತಲೆಗೆ ಹಾಕಿಕೊಂಡರೆ ಅದೇ ಮುಂದೆ ದೇಹವನ್ನು ಆಳುತ್ತಾ ದೇಶವನ್ನು ದೂರುತ್ತಾ ಕೊನೆಗೆ ಹತ್ತಿರವಿದ್ದ ಸತ್ಯ ಮರೆತು ದೂರದ ಅಸತ್ಯವನ್ನು ಬೆಳೆಸುವ ಅಜ್ಞಾನದಲ್ಲಿ ಜೀವ ಹೋಗುವುದು.
ಇದು ವಾಸ್ತವದಲ್ಲಿ ಕಣ್ಣಿಗೆ ಕಾಣುತ್ತಿರುವಕಠು ಸತ್ಯ.
ಸತ್ಯ ಕಠೋರವಾಗಲು ಕಾರಣವೇ ಸೃಷ್ಟಿ ಯನರಿಯದೆ ಲಯವನ್ನು ತಡೆಯಲಾಗದ ಮಾನವನೊಳಗೆ ಇರುವ ಅಜ್ಞಾನ. ಅಜ್ಞಾನ ದಲ್ಲಿ ಜ್ಞಾನವಿದ್ದರೂ ಸತ್ಯವಿಲ್ಲದ ಕಾರಣ ಧರ್ಮ ನಿಲ್ಲದು.
No comments:
Post a Comment