ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, April 27, 2025

ಉಗ್ರರು ಬೇರೆ ಭಯೋತ್ಪಾದಕರು ಬೇರೆಯೇ?

ಉಗ್ರರಿಗೂ ಭಯೋತ್ಪಾದಕರಿಗೂ ಏನಾದರೂ ವ್ಯತ್ಯಾಸವಿದೆಯೆ?  ಅತಿಯಾದ  ಸಿಟ್ಟು ಬಂದವರು ಉಗ್ರರಾಗುತ್ತಾರೆ. ಅತಿಯಾಗಿ ಹೆಸರಿಸುವವರು ಭಯೋತ್ಪಾದಕರಾಗುತ್ತಾರೆ. ಹಾಗಾದರೆ ಭಯೋತ್ಪಾದಕರು  ಎಲ್ಲಾ ಕಡೆ ಇರುವರು.ಮಕ್ಕಳಿಗೆ ಮಹಿಳೆಯರಿಗೆ ಭಯ ಹೆಚ್ಚಿಸಿ ಆಳೋದೂ ಇದರ ಒಂದು ಭಾಗವಷ್ಟೆ. ಯಾವುದಕ್ಕೆ ಭಯವಿರಬೇಕೆಂದರೆ ತಪ್ಪು ಮಾಡದಂತೆ ಅಸತ್ಯ ಅನ್ಯಾಯ ಅಧರ್ಮದೆಡೆಗೆ ಹೋಗದಂತಹ ಭಯವಿದ್ದರೆ  ಉಗ್ರರು  ಬೆಳೆಯೋದಿಲ್ಲ.
ಬೇಡದ ವಿಷಯ ತಿಳಿಸುತ್ತಾ ಮಾಡದ ಕಾರ್ಯ ಮಾಡುತ್ತಾ ನೋಡಬಾರದ ಆಡಬಾರದ,ಕೇಳಬಾರದ ವಿಚಾರದಲ್ಲಿ ಭಯವಿಲ್ಲದೆ  ಮುಂದೆ ನಡೆದಂತೆಲ್ಲಾ  ಉಗ್ರ ರ ಮೂಲಕ ಭಗವಂತನೇ  ಉಗ್ರ ನರಸಿಂಹನಾಗಿ ಕಾಣಬಹುದು.
ಆದರೆ  ನಮ್ಮ ಪುರಾಣ ಕಥೆಗಳನ್ನು ಓದುವಾಗ ನಮಗೆ ಭಯ ಭಕ್ತಿ ಬರೋದಿಲ್ಲ. ಕಾರಣ. ನಾವದನ್ನು  ಪುಣ್ಯ ಬರುತ್ತದೆ ಎಂದು ಓದುತ್ತೇವೆ. ನಮ್ಮಲ್ಲಿ ಜ್ಞಾನ ಬರಲು ಓದಿ ಅದರಲ್ಲಿರುವ ಸತ್ಯವರಿತರೆ  ನಮ್ಮ ಕೋಪದಿಂದ  ಉಗ್ರತನದಿಂದ  ಎಷ್ಟು  ಜ್ಞಾನ ನಷ್ಟವಾಗುತ್ತಿದೆ ಎನ್ನುವ ಸತ್ಯದ ಅರಿವಾಗುತ್ತದೆ.
ಕೋಪದಲ್ಲಿ ಕೊಯ್ದು ಕೊಂಡ ಮೂಗು ಮತ್ತೆ ಬರೋದಿಲ್ಲ ಎನ್ನುವಂತೆ  ಕೋಪವದ್ದರೂ ಅದರಲ್ಲಿ ಸತ್ವ ತತ್ವಸತ್ಯವಿದ್ದರೆ  ಧರ್ಮ ಉಳಿಯುತ್ತದೆ.
ಯಾರೋ ಹೊರಗಿನವರು ಬಂದು ನಮ್ಮ ಧರ್ಮ ವನ್ನು  ನಾಶ ಮಾಡುತ್ತಿದ್ದರೂ ಕೋಪಿಸಿಕೊಳ್ಳದೆ ಭಯಪಟ್ಟುಕೊಂಡು ಹಿಂದುಳಿದಷ್ಟೂ ಉಗ್ರವಾದಿಗಳು ಹೆಚ್ಚಾಗುವರು.
ಹಿಂದಿನ ಕಾಲದಂತೆ ಯಾವುದೂ ರಾಜರಿಲ್ಲ. ರಾಜಕೀಯವಿದೆ ಅದರಲ್ಲಿ  ಭಯೋತ್ಪಾದನೆ  ಸೇರಿಸಿಕೊಂಡು ಜನರನ್ನು ಆಳುವುದರಲ್ಲಿ ಧರ್ಮ ವೂ ಇರದು ಸತ್ಯವೇ ಇರದು. ಹೀಗಾದರೆ ಮೇಲಿರುವ ಪರಮಾತ್ಮನೆ  ಯಾವ ರೂಪ ತಾಳುವನೋ ಯಾರಿಗೂ ತಿಳಿಯದು. 
ಎಷ್ಟೋ ಪುರಾಣ ಕಥೆಗಳಲ್ಲಿ ಪರಮಾತ್ಮನ ಅವತಾರದಲ್ಲಿ  ಧರ್ಮ ರಕ್ಷಣೆಗಾಗಿ  ಯುದ್ದಗಳಾಗಿವೆ. ಆದರೆ ಅದರಲ್ಲೂ  ಪರಮಾತ್ಮ ಶಾಂತಿಯಿಂದಲೇ  ಅಧರ್ಮಿಗಳಿಗೆ  ತಿಳಿಸುವ ಪ್ರಯತ್ನವೂ ಆಗಿತ್ತು.ಯಾವಾಗ ಅಹಂಕಾರ ಮಿತಿಮೀರಿ ಅಜ್ಞಾನದ ಅಮಲಿನಲ್ಲಿ  ಲೋಕಕಂಠಕರು ಬೆಳೆದು ನಿಂತರೋ ಆಗ  ಉಗ್ರರೂಪತಾಳಲೇಬೇಕಾಯಿತು. ಅಂದರೆ ಭೂಮಿಯನ್ನು  ದುರ್ಭಳಕೆ ಮಾಡಿಕೊಂಡರೆ  ಭೂ ಕಂಪ ವಾಗುತ್ತದೆ. ಭೂಮಿಯ ಮೇಲೇ ನಿಂತು ನಾನೇ ರಾಜ ಎಂದರೆ ಭೂ ತಾಯಿ ಸಹಿಸುವಳೆ? ರಾಜನಾದವನಿಗೆ ಧರ್ಮ ಜ್ಞಾನ ಅಗತ್ಯವಿದೆ.
ಮನೆಗೆ ಮಾರಿ ಊರಿಗೆ ಉಪಕಾರಿ ಎಂದರೆ ಸರಿಯಲ್ಲ.
ಮೊದಲು ಒಳಗಿನ ಶಾಂತಿ  ನಂತರವೇ ಹೊರಗೆ ಶಾಂತಿ ಬೆಳೆಸಬಹುದು.
ಒಳಗೇ ಕ್ರಾಂತಿಕಾರಕ ರಾಜಕೀಯ ವಿದ್ದು ಭಯದ ವಾತಾವರಣವಿದ್ದರೆ  ಜನರು ಹೊರಗೆ ಹೋಗಲು ಧೈರ್ಯ ಬರುವುದೆ? ಭಯವಿರಬೇಕು ಅದು ಧರ್ಮ ಯುಕ್ತವಿರಬೇಕು.
ಗುರುಹಿರಿಯರಲ್ಲಿ ದೇವರಲ್ಲಿ  ಧರ್ಮದಲ್ಲಿ ಸತ್ಯದಲ್ಲಿ  ಯಾರಿಗೆ ನಂಬಿಕೆಯಿರುವುದೋ ಅವರಿಗೆ ಭಯವಿರದು.ಕೋಪವೂ ಇರೋದಿಲ್ಲ. 
ಹಾಗಾದರೆ  ಈಗ ನಮ್ಮೊಳಗೆ ಭಯ ಕೋಪ ಇಲ್ಲವೆ?
ಸೃಷ್ಟಿ ಸರಿಯಿಲ್ಲದ ಸ್ಥಿತಿಯನ್ನು  ಕೋಪದಿಂದಲೇ  ಲಯವಾಗಿಸೋದು  ಪರಮಾತ್ಮನ ಕೆಲಸವಾಗಿದೆ.
ಇದನ್ನರಿತು ನಡೆದರೆ  ಮಾನವನಿಗೆ ಮಹಾತ್ಮರ ನಡೆ ನುಡಿ ಅರ್ಥ ವಾಗುತ್ತದೆ. ಆತ್ಮಕ್ಕೆ ಕೋಪಬರುವುದೆ ಮನಸ್ಸಿಗೋ?
ಅತೃಪ್ತ ಆತ್ಮಗಳ  ನಡುವೆ ಜಗತ್ತು ನಡೆಯುತ್ತಿದೆ..
ಆತ್ಮಕ್ಕೆ ತೃಪ್ತಿ ಸಿಗುವ  ಧರ್ಮ ಕರ್ಮ ಶಿಕ್ಷಣದ ಕೊರತೆಯಿದೆ.

ಒಮ್ಮೆ ನಾರದರು ಭೂಲೋಕ ಸಂಚಾರ ಮಾಡುತ್ತಾ ಹೋಗುವಾಗ ಭೂಮಿಯ ಜನ  ರಾವಣನ ಜನ್ಮವಾಗಿದೆ ಎಂದು  ಹೇಳಿಕೊಂಡು ತಿರುಗುತ್ತಿದ್ದರಂತೆ ಹಾಗೆ ಮುಂದೆ ಹೋಗಿ ತಿರುಗಿ ಬರೋವಾಗ ಅದೇ ಜನ ರಾಮ ರಾವಣನನ್ನು ಕೊಂದನಂತೆ ಎಂದು ತಿರುಗುತ್ತಿದ್ದರಂತೆ.ಅಂದರೆ ಭೂಮಿ ಎನ್ನುವ ಮಾಧ್ಯಮದಲ್ಲಿ  ರಾಮರಾವಣರಿದ್ದರೂ  ಜನರನ್ನು  ನಡೆಸೋ ಶಕ್ತಿ ಒಳಗಿದೆ. ಆ ಒಳಗಿರುವ ಶಕ್ತಿಯನ್ನೇ ಮರೆತು ಹೋದರೆ ವ್ಯರ್ಥ ಎನ್ನುವರು.
ಸತ್ಯ ಧರ್ಮ ದೇವರು ಎನ್ನುವ ಅರಿವಿಲ್ಲದೆ ಭಯದಿಂದ  ಅಸತ್ಯ ಅನ್ಯಾಯ ಅಧರ್ಮ ಕ್ಕೆ ಸಹಕರಿಸುತ್ತಾ ಹಣಗಳಿಸಿ ಆಸ್ತಿ ಮಾಡಿಟ್ಟು ಮಕ್ಕಳಿಗೂ  ಸರಿಯಾದ ಜ್ಞಾನ ಕೊಡದೆ  ಬೆಳೆಸಿದರೆ  ಭವಿಷ್ಯದಲ್ಲಿ  ಸುಖವಿರದು. ಯಾರೋ ಹೊರಗಿನವರ ಪಾಲಾಗುವ ಆಸ್ತಿಗೆ ಬದಲಾಗಿ ನಮ್ಮ ಸುಜ್ಞಾನವನ್ನು ಬೆಳೆಸಿಕೊಂಡರೆ   ಭಯಭಕ್ತಿ ಹಿಂದೆ  ಯಾರಲ್ಲಿತ್ತು. ಯಾಕಿತ್ತು  ಎನ್ನುವ ಸತ್ಯ ತಿಳಿಯುತ್ತದೆ.
ಇಷ್ಟಕ್ಕೂ ನಾವೀಗ  ಭಯ ಹುಟ್ಟಿಸಿ ಆಳೋದು ಯಾರನ್ನು?
ನಾರಿ ಮಾರಿಯಾಗೋದಕ್ಕೆ ಕಾರಣವೇನು?
ಭೂಕಂಪನವಾಗಲು ಕಾರಣವೇನು?ಪ್ರಕೃತಿವಿಕೋಪಕ್ಕೆ ಕಾರಣವೇನು? ,ಕೊಲೆ ಸುಲಿಗೆ ಭಯೋತ್ಪಾದನೆ ಕಳ್ಳತನ ದರೋಡೆ ಗಳು  ಅಜ್ಞಾನದ ಸಂಕೇತವೆಂದರೆ   ಜ್ಞಾನದಿಂದ ಇದನ್ನು ತಡೆಯಬಹುದೆ? ಜ್ಞಾನಿಗಳೇ ಹೆದರಿಕುಳಿತರೆ ಗತಿ?
ಸತ್ಯವೇ ದೇವರೆನ್ನುವವರೆ ಅಸತ್ಯದ ದಾಸರಾದರೆ ಪರಮಾತ್ಮನ ಸತ್ಯ ಅರ್ಥ ವಾಗದು.
ಇಂದು ಸ್ತ್ರೀ ಯರೆ ಭಯವಿಲ್ಲದೆ  ಹೊರಗೆ ಬಂದು ದುಡಿದು ಜೀವನ ನಡೆಸುತ್ತಿದ್ದಾರೆ. ಆದರೆ ಹಲವು ಯುವಕರಿಗೆ  ಕೆಲಸವೇ ಇಲ್ಲದೆ  ಭಯೋತ್ಪಾದಕ ರಾಗಿ ತಿರುಗುತ್ತಿದ್ದಾರೆ ಇದಕ್ಕೆ ಕಾರಣವೇ  ಅರ್ಥ ವಿಲ್ಲದ  ಅನರ್ಥ ಕರ ವಿಷಯವನ್ನು ತುಂಬಿದ ಶಿಕ್ಷಣ. ಕೆಲವರಿಗೆ ಉತ್ತಮ ಶಿಕ್ಷಣವಿದ್ದರೂ  ಸತ್ಯ ತಿಳಿಸೋದಕ್ಕೆ ಭಯವಿದೆ.  ಇದಕ್ಕೆ ಸಹಕರಿಸುವ  ಮನುಷ್ಯರ ಕೊರತೆಯಿದೆ. ಮನುಷ್ಯ ತನ್ನ ಜೀವರಕ್ಷಣೆಗಾಗಿ  ದಾರಿತಪ್ಪಿ ನಡೆದರೂ ಆತ್ಮರಕ್ಷಣೆಗಾಗಿ ಹಿಂದಿರುಗಲೇಬೇಕು. ಹೀಗಾಗಿ ಅಧ್ಯಾತ್ಮ ಸಾಧಕರು ಸತ್ಯ ಧರ್ಮದ ಕಡೆಗೆ ಭಯವಿಲ್ಲದೆ ನಡೆದರು. ಈಗಿನವರು ಅಸತ್ಯ ಅನ್ಯಾಯ ಅಧರ್ಮದ ಕಡೆಗೆ  ಭಯಹುಟ್ಟಿಸಿ ನಡೆಸುತ್ತಿರುವುದು ಕಲಿಕೆಯೇ?
ಸಂನ್ಯಾಸಿಗಳು, ಮಕ್ಕಳಿಲ್ಲದವರು  ಹೊರಗಿನ ಆಸ್ತಿಯ ಹಿಂದೆ ನಡೆದರೆ  ಏನೂ ಅರಿಯದವರು  ಅಮಾಯಕರು ಅಸಹಾಯಕರು  ಭಯಪಟ್ಟು  ಅವರ ಹಿಂದೆ ನಡೆಯುವರಲ್ಲವೆ?

ಆಸ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನದ ಶಿಕ್ಷಣ  ಪಡೆಯಲು ಭಯವೆ? ಎತ್ತ ಸಾಗಿದೆ ಸನಾತನಧರ್ಮ? 
ಬದಲಾವಣೆ ಒಳಗೇ ಆಗಬೇಕಿದೆ. ಭಯ ಕೋಪದಿಂದ  ಬಿಡುಗಡೆ ಪಡೆಯಲು ಯೋಗವಿರಬೇಕು.ಯೋಗ್ಯ ಶಿಕ್ಷಣ ಗುರು ಬೇಕು. ಯೋಗಿಗಳ ದೇಶವನ್ನು ಭೋಗಕ್ಕೆ ಬಳಸಿದರೆ ಉಗ್ರರಾಗುವರು. ಎಷ್ಟು ಇದ್ದರೂ ಸಾಲದು.ಸಾಲವೇ ಅದು.
ಸಾಲ ಮಾಡುವಾಗ ಇಲ್ಲದ ಭಯ ತೀರಿಸುವಾಗ ಯಾಕೆ?
ಕಾರಣ ಇದು ಹೊರಗಿನವರ ಹಣ.ಹಾಗೆ ಜ್ಞಾನವೂ ಹೊರಗಿನಿಂದ ಪಡೆಯುವಾಗ ಭಯವಿರದು  ಅವರ ಋಣ ತೀರಿಸುವಾಗ ಬರುತ್ತದೆ. ಒಟ್ಟಿನಲ್ಲಿ ಋಣತೀರಿಸಲೇ ಬೇಕು.ತೀರಿಸದಿದ್ದರೆ   ಜೀವಿಸಲು ಬಿಡೋದಿಲ್ಲ.
ಸರ್ಕಾರಗಳೇನೂ ಸಾಲ ತಂದು ದೇಶ ನಡೆಸಬಹುದು. ಅದನ್ನು ಜನಸಾಮಾನ್ಯರಿಗೆ ಹಂಚಿ ಅಧಿಕಾರ ಪಡೆದರೂ ಜನರು ಅದನ್ನು ಸದ್ಬಳಕೆ ಮಾಡಿಕೊಂಡು ಸಾಲದ ಬಡ್ಡಿ ತೀರಿಸದಿದ್ದರೆ ಕೋಪಬರೋದಿಲ್ಲವೆ?

No comments:

Post a Comment