ಪ್ರಜಾಪ್ರಭುತ್ವದ ಸಮಾನತೆ ಆಧ್ಯಾತ್ಮವಾಗಬೇಕಿತ್ತು

ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಬಡವರಿಗೆ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ...

Sunday, April 27, 2025

ನುಡಿದಂತೆ ನಡೆದವರೆ ಯೋಗ್ಯರು- ಗಳಗನಾಥ

ಹೇಳುವವರಿಗಿಂತ ಹೇಳಿದಂತೆ‌ನಡೆದವರ ಯೋಗ್ಯತೆ ದೊಡ್ಡದು ಗಳಗನಾಥ

ಇದನ್ನು ರಾಜಕೀಯವಾಗಿ ಬಳಸುವಾಗ ಧರ್ಮ ಹಾಗು ಸತ್ಯದ ಅರಿವಿರೋದು ಇನ್ನೂ ದೊಡ್ಡದು. ಶ್ರೀ ರಾಮನ ಕಾಲಕ್ಕೂ ಶ್ರೀ ಕೃಷ್ಣನ ಕಾಲಕ್ಕೂ  ಅಂತರವಿದ್ದರೂ ಸತ್ಯ ಹಾಗು ಧರ್ಮದ ವಿಚಾರದಲ್ಲಿ ಒಂದೇ ತತ್ವವಿತ್ತು. 
ಅಂದಿನ ರಾಜಮಹಾರಾಜರುಗಳಿಗೆ ಅಂತಹ ಸತ್ವ ತತ್ವ  ಸತ್ಯ ಧರ್ಮದ ಶಿಕ್ಷಣವನ್ನು  ಋಷಿಮುನಿಗಳೆ ಆಶ್ರಮ ದಲ್ಲಿ ಕೊಡುತ್ತಿದ್ದರು. 
ಈಗಿನ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ವಿರುದ್ದ‌ನಡೆದಿರೋದು ದುರಂತ. ರಾಜಕಾರಣಿಗಳಿಗೆ‌ಕೊಡಬೇಕಾದ ಧಾರ್ಮಿಕ ಶಿಕ್ಷಣ ಕೊಡದೆ ದೇಶ ಆಳೋದಕ್ಕೆ  ಆಶೀರ್ವಾದ ಮಾಡಿದರೆ ಗೆದ್ದು ತಮ್ಮ ಮನಸ್ಸಿಗೆ ಬಂದಂತೆ ಜನರಿಗೆ ಆಶ್ವಾಸನೆ ಭರವಸೆ ಆಸೆಯನ್ನು  ತೋರಿಸಿ ಅದರಂತೆ ನಡೆದುಕೊಳ್ಳಲು ದೇಶವನ್ನು ಸಾಲಕ್ಕೆ ತಳ್ಳಿ ಸಾಲ ತೀರಿಸಲು  ಇನ್ನಷ್ಟು ಭ್ರಷ್ಟಾಚಾರ  ಬೆಳೆಸಿದರೆ  ಹೇಳಿದಂತೆ ನಡೆದಿದ್ದೇವೆಂದರೆ  ಇದು ಯೋಗ್ಯವಲ್ಲ.ಯೋಗವಿಲ್ಲದ ಭೋಗಕ್ಕೆ  ರೋಗ ಬಂದರೆ  ಅದನ್ನು ಅನುಭವಿಸಬೇಕೆನ್ನುವುದು ಅಧ್ಯಾತ್ಮ ಸತ್ಯ.
ಅದನ್ನು ತಡೆಯಲು ಹೊರಗಿನವರ ಕೈ ಜೋಡಿಸಿದರೆ ಅವರ ರೋಗವೂ ಒಳಗೆ ಬೆಳೆಯುತ್ತದೆ.
ಒಟ್ಟಿನಲ್ಲಿ ಯೋಗಿಗಳಾದವರು ನುಡಿದಂತೆ ನಡೆಯುವರು.

No comments:

Post a Comment