ಬ್ರಾಹ್ಮಣ,ಕ್ಷತ್ರಿಯ ವೈಶ್ಯ ಶೂದ್ರ ಎನ್ನುವ ವರ್ಣವನ್ನು ಅಪಾರ್ಥ ಮಾಡಿಕೊಂಡು ಮಿಶ್ರವರ್ಣ ವಾಗಿಸಿ ಜಾತಿ ಸೃಷ್ಟಿ ಮಾಡಿಕೊಂಡು ಮಾನವ ಇಂದು ಸ್ವಜಾತಿ ವಿಜಾತಿ ಸ್ವಧರ್ಮ ವಿಧರ್ಮ ಎನ್ನುವ ರಾಜಕೀಯದಲ್ಲಿ ತನ್ನ ತಾನರಿಯದೆ ಒಳಗಿದ್ದ ಪರಮಾತ್ಮನ ಸತ್ಯ ಬಿಟ್ಟು ಹೊರಗಿನ ಧರ್ಮ ಕ್ಕೆ ಜೋತುಬಿದ್ದು ಅತಂತ್ರಸ್ಥಿತಿಗೆ ತಲುಪಿದ್ದಾನೆಂದರೆ ಇದಕ್ಕೆ ಕಾರಣ ಸರ್ಕಾರ ಎನ್ನುವ ಉತ್ತರ ಬಹುಜನರಲ್ಲಿ ಬರುತ್ತದೆ.
ನಿಜವಾಗಿಯೂ ಸರ್ಕಾರ ಕಾರಣವೆ? ಎಂದರೆ ನಮ್ಮ ಸಹಕಾರ ಕಾರಣವಾಗುತ್ತದೆ. ಪ್ರಜಾಪ್ರಭುತ್ವ ನಡೆದಿರೋದೆ ಪ್ರಜೆಗಳ ಸಹಕಾರದಿಂದ. ಮತದಾನ ದೇಶದ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ ಎಂದಾಗ ಎಷ್ಟೋ ಧಾರ್ಮಿಕ ಜನರು ಮತದಾನ ಮಾಡೋದಿಲ್ಲ.ಕಾರಣವಿಷ್ಟೆ ಧರ್ಮ ಬೇರೆ ರಾಜಕೀಯ ಬೇರೆ. ಹಾಗಾದರೆ ದೇಶದ ಶಿಕ್ಷಣವನ್ನು ಧರ್ಮದ ಪ್ರಕಾರ ಕೊಡುವ ಜವಾಬ್ದಾರಿಯ ವಿಚಾರದಲ್ಲಿ ಈ ಜ್ಞಾನವಿಲ್ಲ. ಜನರಲ್ಲಿ ಅಜ್ಞಾನ ಮಿತಿಮೀರಲು ಕಾರಣವೇ ಈ ಜಾತಿರಾಜಕೀಯವಾಗಿದೆ.ಎಷ್ಟೋ ವರ್ಷ ದಿಂದಲೂ ಪ್ರತಿ ಪಕ್ಷವೂ ಇದರ ಪರವಾಗಿಯೇ ಆಡಳಿತ ನಡೆಸಿಕೊಂಡು ಜನರನ್ನು ತಮ್ಮೆಡೆ ಸೆಳೆಯುವ ತಂತ್ರದಲ್ಲಿವೆ. ಈಗಲೂ ರಾಜಾರೋಷವಾಗಿ ಬುದ್ದಿವಂತ ಜ್ಞಾನವಂತರನ್ನು ದೂರ ಮಾಡಿ ಜಾತಿಯ ಮೇಲೇ ಮಕ್ಕಳನ್ನು ಅಳೆದು ಮೇಲಕ್ಕೆ ಏರಿಸುವ ಹರಸಾಹಸನಡೆಸಿವೆ. ಇದರಿಂದಾಗಿ ದೇಶ ಉದ್ದಾರ ಆಗಿದೆಯೆ? ಧರ್ಮ ಉಳಿಯಿತೆ? ಜ್ಞಾನ ಬೆಳೆಯಿತೆ? ಸತ್ಯದ ಅರಿವಾಗಿದೆಯೆ? ದೇವರು ಕಂಡನೆ? ....
ಯಾವುದೂ ಆಗಿಲ್ಲವೆಂದರೆ ಇದಕ್ಕೆ ಸಹಕಾರ ಕೊಟ್ಟವರು ಯಾರು? ದೇಶದೊಳಗಿರುವ ಪ್ರಜೆಗಳೇ ಎಂದಾಗ ಸರ್ಕಾರ ಕಾರಣ ಎನ್ನುವ ಒಳಗಿನ ಅರ್ಥ ನಮ್ಮ ಸಹಕಾರ ಸರಿಯಿಲ್ಲ ಎನ್ನುವುದು ಸತ್ಯ.
ಇಲ್ಲಿ ಪ್ರತಿಯೊಂದು ಜಾತಿಯಿಂದ ಅಳೆದಾಗ ಜಾತಿ ಸೃಷ್ಟಿ ಹೆಚ್ಚಾಗುತ್ತದೆ. ಜಾತಿ ಮಾನವನ ಸೃಷ್ಟಿ ಯಷ್ಟೆ. ದೈವಸೃಷ್ಟಿಯ ಪ್ರಕಾರ ಭೂಮಿಯಲ್ಲಿ ಧರ್ಮ ನೆಲೆಸಬೇಕಾದರೆ ಅವರವರ ಜನ್ಮದ ಮೂಲ ಧರ್ಮ ಕರ್ಮ ವನರಿತು ಸ್ವತಂತ್ರ ಬುದ್ದಿ ಜ್ಞಾನದಿಂದ. ತನ್ನ ಆತ್ಮರಕ್ಷಣೆಗಾಗಿ ದುಡಿದು ಜೀವನ ನಡೆಸೋದಾಗಿತ್ತು.
ಹಿಂದೆ ಬಡಬ್ರಾಹ್ಮಣ, ಬಡಸೈನಿಕ,ಬಡ ರೈತ,ಬಡ ಶಿಕ್ಷಕ...
ಇದರಲ್ಲಿ ಬಡತನವನ್ನು ಅವರ ಹಣದ ಸಂಪಾದನೆಯ ಮೇಲೆ ಅಳೆಯಲಾಗಿದೆಯೇ ಹೊರತು ಜ್ಞಾನವನ್ನು ನಿರ್ಲಕ್ಷ್ಯ ಮಾಡಲಾಗಿದೆ. ನಿರ್ಲಕ್ಷ್ಯ ಕ್ಕೆ ಒಳಗಾದವರು ಬದುಕುವುದಕ್ಕಾಗಿ ಮೂಲ ಧರ್ಮ ಕರ್ಮ ಬಿಟ್ಟು ಹೊರಗೆ ಬಂದರು. ಇದೇ ಇಂದಿನವರೆಗೂ ಅಂತರ್ಜಾತಿ ವಿವಾಹ ದಿಂದ ಜನಿಸಿದ ಮಕ್ಕಳಿಗೆ ಯಾವುದೇ ಒಂದು ಜಾತಿಯಿಂದ ಗುರುತಿಸಿಕೊಳ್ಳಲು ಸರ್ಕಾರದ ಉಚಿತ ಸಾಲ ಸೌಲಭ್ಯಗಳನ್ನು ಪಡೆಯಲು ಜನರು ದಾರಿತಪ್ಪಿದ್ದಾರೆ. ಆದರೆ ಇದರಿಂದ ಧರ್ಮ ರಕ್ಷಣೆ ಆಗಿಲ್ಲ ಜ್ಞಾನ ಬಂದಿಲ್ಲ ಎಂದರೆ ಶಿಕ್ಷಣದಲ್ಲಿ ಇವುಗಳ ಕೊರತೆಯಿದೆ. ಇದನ್ನು ಜ್ಞಾನಿಗಳಾದವರು ತಿಳಿದರೂ ನಮಗೂ ಇದಕ್ಕೂ ಸಂಬಂಧ ವಿಲ್ಲವೆನ್ನುವಂತೆ ದೇವರನ್ನು ಧರ್ಮ ವನ್ನು ಜಾತಿ ಪಂಗಡ ಪಕ್ಷವನ್ನು ಹೊರಗೆ ಬೆಳೆಸಿದಷ್ಟೂ ಗೊಂದಲ ಜಗಳ ದ್ವೇಷ ಭಿನ್ನಾಭಿಪ್ರಾಯದ ಅಂತರ ಸೃಷ್ಟಿ ಯಾಗುತ್ತದೆ. ಈ ಅಂತರದಲ್ಲಿ ಮಧ್ಯವರ್ತಿಗಳು ನಿಂತರೆ ಈ ಕಡೆ ದೇವರು ಇನ್ನೊಂದು ಕಡೆ ಅಸುರರು ಮಧ್ಯವರ್ತಿ ಮಾನವ ಮಾತ್ರ ಅತಂತ್ರಸ್ಥಿತಿಗೆ ತಲುಪುವನು.
ಮೊದಲು ಮಾನವನಾಗಿ ಎಂದರು.ಕಾರಣ ನಮ್ಮ ಮನಸ್ಸನ್ನು ನಾವು ಹಿಡಿತದಲ್ಲಿಟ್ಟುಕೊಳ್ಳುವ ಯೋಗವಿದ್ದರೆ ನಾವು ಮನುಷ್ಯರು. ಯಾರದ್ದೋ ಮಾತು ಯಾರದ್ದೋ ಮಂತ್ರ,ತಂತ್ರ ಯಂತ್ರಕ್ಕೆಜೀವನ ಸೇರಿದಾಗ ಅದರಲ್ಲಿ ನಮ್ಮವರನ್ನೇ ನಾವು ಗುರುತಿಸದ ಪರಿಸ್ಥಿತಿ ಬಂದರಂತೂ ಮುಗಿಯಿತು ಕಥೆ. ಒಳಗಿರುವ ಜಾತಿ ಹೊರಗಿನಜಾತಿ ಒಂದೇ ಇದ್ದರೆ ಸಮಸ್ಯೆ ಯಿಲ್ಲ. ಎರಡೂ ಬೇರೆಯಾಗಿ ವ್ಯವಹಾರಕ್ಕೆ ಮಾತ್ರ ಒಂದಾದರೆ ಅಲ್ಲಿ ಸಮಸ್ಯೆ. ಕಾರಣವಿಷ್ಟೆ ಪರಮಾತ್ಮನಿಗೆ ಜಾತಿಯಿಲ್ಲ ,ಆತ್ಮ ಶುದ್ದಿಯಾಗೋದಕ್ಕೆ ಪರಮಸತ್ಯದ ಅರಿವಿರಬೇಕು. ಆ ಅರಿವಿನ ಶಿಕ್ಷಣವಿರಬೇಕು.
ಶಿಕ್ಷಕರು ಗುರುಗಳು ಬೇರೆ ಎನ್ನುವ ಕಾಲದಲ್ಲಿರುವ ನಮಗೆ
ಯಾರು ಗುರು ಯಾರು ಶಿಕ್ಷಕರು ಎನ್ನುವ ಗೊಂದಲವೇ ಹೆಚ್ಚು.
ಭೌತವಿಜ್ಞಾನ ಅಧ್ಯಾತ್ಮ ವಿಜ್ಞಾನದ ನಡುವಿರುವ ಸಾಮಾನ್ಯ ಮಾನವರಿಗೆ ಸಾಮಾನ್ಯ ಜ್ಞಾನವಿದೆ.ಅದನ್ನು ಯಾರೂ ಜಾತಿಯಿಂದ ಅಳೆಯಲು ಸಾಧ್ಯವಿಲ್ಲ. ಮಾನವನ ಆಹಾರ ವಿಹಾರದಲ್ಲಿ ಬೇರೆ ಬೇರೆ ಜಾತಿಗಳಿವೆ, ಆಚಾರ ವಿಚಾರ ಪ್ರಚಾರದಲ್ಲಿ ಬೇರೆ ಯಿದೆ, ಹಾಗೆ ಸಸ್ಯ ಪ್ರಾಣಿ ಪಕ್ಷಿ,ಮರ,ಮಣ್ಣು,ಹಣ್ಣು ತರಕಾರಿ.....ಹೀಗೇ ಅಸಂಖ್ಯಾತ ಜಾತಿ ಬೆಳೆಸಿಕೊಂಡಿರುವ ಮಾನವನೊಳಗೆ ಜಾತಿಯ ವಿಷಬೀಜ ಸೃಷ್ಟಿ ಮಾಡಿದವರು ಯಾರು?
ಯುಗಯುಗದಿಂದಲೂ ಮನುಕುಲವಿದೆ. ಆದರೆ ಅದರೊಳಗೆ ಇದ್ದ ಗುಣಜ್ಞಾನ ಬದಲಾಗಿದೆ. ಸತ್ಯಯುಗದಲ್ಲಿದ್ದ ದೈವತ್ವಕ್ಕೂ ಕಲಿಯುಗದ ಅಸುರತ್ವಕ್ಕೂ ಅಂತರ ಬೆಳೆದು ಕಣ್ಣಿಗೆ ಕಾಣದ ಸತ್ಯವನ್ನು ಅಲ್ಲಗೆಳೆಯುತ್ತಾ ಕಾಣುವ ಸತ್ಯವನ್ನು ಒಪ್ಪಿಕೊಂಡು ಹೊರಗಿನವರೊಂದಿಗೆ ಒಪ್ಪಂದದ ಮೂಲಕ ವ್ಯವಹಾರ ನಡೆಸಿದರೆ ಹಣಗಳಿಸಬಹುದು.ಜ್ಞಾನಸಂಪಾದನೆ ಕಷ್ಟವಿದೆ.
ಜ್ಞಾನಕ್ಕೆ ಯಾವ ಜಾತಿ ನಿರ್ಭಂಧವಿರಲಿಲ್ಲ.ಆದರೆ ಜಾತಿಯ ಹೆಸರಿನಲ್ಲಿ ಜ್ಞಾನವನ್ನು ಹಿಂದೆ ತಳ್ಳಿದ ಪರಿಣಾಮ ಇಂದು ಮಾನವ ಅನುಭವಿಸಬೇಕಿದೆ.
ಕಾಲದ ಪ್ರಭಾವ ಕಲಿಕೆಯ ಪ್ರಭಾವ ದಲ್ಲಿ ಮಾನವನಿಗೆ ಜಾತಿಯಿಂದ ಜೀವನ ನಡೆಸೋದೇ ಸಾಧನೆಯಾಗಿದೆ.ಆದರೆ ಪರಮಾತ್ಮನಿಗೆ ಯಾವುದೇ ಜಾತಿಯಿಂದ ಏನೂ ಮಾಡಲಾಗದು. ನಮ್ಮ ಆಸೆಗೆ ತಕ್ಕಂತೆ ಜೀವನ ನಡೆದಿದೆ.
ಆತ್ಮಕ್ಕೆ ಶಾಂತಿ ಸಿಗದೆಜೀವ ಹೋಗುತ್ತಿದೆ. ಪ್ರಾಣಿಪಕ್ಷಿ ಗಿಡಮರಗಳನ್ನು ತಮ್ಮ ಸ್ವಾರ್ಥ ಕ್ಕೆಬಳಸುವ ಮಾನವನಿಗೆ ಸ್ವಾರ್ಥ ಮಿತಿಮೀರಿದೆ. ಅದೇ ತಿರುಗಿ ಹೊಡೆಯುತ್ತಿದೆ. ಇದಕ್ಕೆ ಪರಿಹಾರ ಹಣದಿಂದ ಕೊಟ್ಟಷ್ಟೂ ಅಜ್ಞಾನ ಬೆಳೆಯುತ್ತದೆ.
ಭೂಮಿಗೆ ಬಂದ ಉದ್ದೇಶ ತಿಳಿಯದೆ ಜಾತಿ ಸೃಷ್ಟಿ ಮಾಡಿ ರಾಜಕೀಯ ನಡೆಸಿದರೆ ಹೆಸರಿಗೆ ತಕ್ಕಂತೆ ರಾ ರಾವಣ,ಜ ಜರಾಸಂಧ,ಕೀ, ಕೀಚಕ, ಯ ಯಮರ ದರ್ಶನ ವಾಗುತ್ತದೆ.
ಮಾಡಿದ್ದುಣ್ಣೋ ಮಹಾರಾಯ ಎಂದಂತೆ ಒಂದೊಂದು ಜನ್ಮದಲ್ಲಿ ಒಂದೊಂದು ಜಾತಿಯಲ್ಲಿಜನ್ಮ ಪಡೆಯುವ ಮಾನವನಿಗೆ ತನ್ನ ಹಿಂದಿನ ಜನ್ಮದ ಜಾತಿಯ ಪರಿಚಯವಿಲ್ಲ ಆದರೂ ಹಿಂದಿನ ಋಣ ಕರ್ಮ ವಿದೆ. ಮುಂದಿನ ಜನ್ಮದ ಅರಿವಿಲ್ಲವಾದರೂ ಈ ಜನ್ಮದ ಕರ್ಮ ಫಲವೇ ಮುಂದಿನಜನ್ಮದ ಪ್ರಾರಂಭವಾಗಿರುತ್ತದೆ ಎನ್ನುವ ಸನಾತನ ಧರ್ಮದ ಸತ್ಯವನ್ನು ಅಲ್ಲಗೆಳೆದುಜನ್ಮವೇ ಇಲ್ಲ ಎನ್ನುವ ಅನ್ಯರು ಈ ಜಾತಿಯ ವಿಷಬೀಜ ಹೆಚ್ಚಿಸಿ ತಿನ್ನಿಸಿದರೆ ಅದರ ಪ್ರಭಾವದಿಂದಾಗಿ ಮನುಕುಲ ಸಮಸ್ಯೆಯ ಸುಳಿಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿದರೆ ಪರಮಾತ್ಮ ಬರೋದಿಲ್ಲ. ಅವರವರ ಕರ್ಮಕ್ಕೆ ತಕ್ಕಂತೆ ಜಾತಿ ಜೀವನ.
ಅದರಲ್ಲಿ ಧರ್ಮ ಕರ್ಮ ವೇ ಮೂಲಾಧಾರ.
ಬ್ರಾಹ್ಮಣನ ಸತ್ಯಜ್ಞಾನದಿಂದ ಧರ್ಮ ರ ಕ್ಷಣೆಯಾಗಬೇಕು.
ಕ್ಷತ್ರಿಯನ ಬಾಹುಬಲದಿಂದ ಧರ್ಮ ರಕ್ಷಣೆಯಾಗಬೇಕು.ವೈಶ್ಯನ ವ್ಯವಹಾರಿಕ ಪ್ರಜ್ಞೆ ಧರ್ಮ ಯುತವಾಗಿರಬೇಕು.ಶೂದ್ರನ ಸೇವಾಗುಣದಿಂದ ಪರಮಾತ್ಮನ ಸೇವೆಯಾಗಬೇಕಿತ್ತು.
ಈಗ ಸೇವೆ ಎತ್ತ ಸಾಗಿದೆ? ದೇವರಿರೋದೆಲ್ಲಿ? ಪರಮಾತ್ಮನಿಗೆ ಸೇವೆ ತಲುಪುತ್ತಿದೆಯೆ? ಒಟ್ಟಿನಲ್ಲಿ ನಮ್ಮ ಹೊರಗಿನ ಜಾತಿಗೂ ಒಳಗಿನ ವರ್ಣ ಕ್ಕೂ ಅಂತರವಿದೆ. ಇದರ ಬಗ್ಗೆ ಚರ್ಚೆ ನಡೆಸುವುದಿಲ್ಲ.ಸಾಮಾನ್ಯವಾಗಿ ಈ ಸತ್ಯದ ಅರಿವು ಎಲ್ಲರಿಗೂ ಇದೆ.ಆದರೆ ಹೊರಗಿನ ಜಗತ್ತಿನಲ್ಲಿ ಬದುಕಲು ಒಪ್ಪಂದ ಗಳಾಗಿವೆ.ಒಪ್ಪಂದ ವು ಹೆಚ್ಚಾಗಿ ಅಧರ್ಮ ದೆಡೆಗೆ ಸಾಗಿದೆ. ಅದಕ್ಕೆ ಸಹಕಾರನೀಡಿದವರೂ ತಿಳಿದವರೆ ಆಗಿದ್ದಾರೆ. ಹೀಗಿರುವಾಗ ನಮ್ಮ ನಡೆ ನುಡಿ ಅಧ್ಯಾತ್ಮ ದ ಕಡೆಗೆ ನಡೆಸಿದಾಗ ಶಿಕ್ಷಣ ಅಡ್ಡ ಬರುತ್ತದೆ. ಶಿಕ್ಷಣವನ್ನು ಸರಿದಾರಿಗೆ ತರುವುದೇ ಇದಕ್ಕಿರುವ ಮಾರ್ಗ. ಮನೆಮನೆಯೊಳಗೆ ಬದಲಾವಣೆ ಮಾಡೋದಕ್ಕೆ ಸರ್ಕಾರದಿಂದ ಕಷ್ಟ. ಸರ್ಕಾರ ಹೇಳಿದಂತೆ ಕೇಳೋದಕ್ಕೂ ಮನೆಮನೆಯೊಳಗೆ ಕಷ್ಟ. ನಿಮ್ಮ ನಿಮ್ಮ ಮನೆ ಮನವನ್ನು ನೀವೇ ಸಂತೈಸಿಕೊಳ್ಳಿ ಎನ್ನುವ ಮಹಾತ್ಮರ ಸಂದೇಶ ಈಗಲೂ ಪ್ರಚಾರದಲ್ಲಿದೆ. ಒಳಹೊಕ್ಕಿ ಶುದ್ದಿಗೊಳಿಸಲು ಉತ್ತಮ ಗುರುಹಿರಿಯರು ಬದಲಾಗಬೇಕು.ಕೆಲವರಿಗೆ ಅವಕಾಶವಿಲ್ಲ ಅಧಿಕಾರವಿಲ್ಲ.ಹಲವರಿಗೆ ಜ್ಞಾನವೇ ಇಲ್ಲ.
ಪುರಾಣದೆಡೆಗೆ ಹೋಗಲಾಗದು ವಾಸ್ತವದಲ್ಲಿ ಬದುಕಬಹುದು ಭವಿಷ್ಯ ನಮ್ಮ ಕೈಯಲ್ಲಿಲ್ಲ.ನಮ್ಮ ಮೂಲ ಜಾತಿ ಧರ್ಮ ಕರ್ಮ ವನ್ನು ನಮ್ಮ ಜನ್ಮನಿರ್ಧಾರ ಮಾಡಿರುವಾಗ ಅದನ್ನರಿತು ಒಗ್ಗಟ್ಟಿನಿಂದ ಬಾಳೋದಕ್ಕೆ ಹೊರಗಿನವರು ಅನ್ಯರು ಬರಬೇಕೆ?
ಒಗ್ಗಟ್ಟಿನ ಕೊರತೆ ತತ್ವದಿಂದ ದೂರ ಮಾಡಿ ತಂತ್ರದೆಡೆಗೆ ಎಳೆದುಜಾತಿ ಸೃಷ್ಟಿ ಮಾಡಿದೆ. ಇದೀಗ ಅತಂತ್ರಸ್ಥಿತಿಗೆ ಜನಜೀವನ ತಲುಪಿದೆ. ಕಾಲಾಯ ತಸ್ಮೈ ನಮ:
ಕಾಲವನ್ನು ತಡೆಯೋರು ಯಾರೂ ಇಲ್ಲ ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ.. ಕಾಲ ಎಲ್ಲವನ್ನೂ ಕಲಿಸುತ್ತದೆ ಮರೆಸುತ್ತದೆ. ಮೆರೆಸುತ್ತದೆ ಮೆರೆದ ಮೇಲೆ ಅಳಿಸುತ್ತದೆ. ಹೀಗೇ ಮಾನವನ ಮನಸ್ಸು ಹಿಡಿದಿಟ್ಟುಕೊಳ್ಳುವ ಸಾಧನವೇ ಯೋಗಸಾಧನ. ಯೋಗವೆಂದರೆ ಸೇರೋದು ಕೂಡುವುದು.
ಸತ್ಯಸತ್ಯ ಸೇರುವುದು ಧರ್ಮ ಧರ್ಮ ಕೂಡುವುದು. ಯಾವಾಗಿದು ಸತ್ಯಕ್ಕೆ ಅಸತ್ಯ ಬರೆಸಲಾಗುವುದೋ ಸಮಸ್ಯೆ ಸೃಷ್ಟಿ ಯಾಗುತ್ತದೆ. ಒಳಗಿನ ಸಮಸ್ಯೆಗೆ ಹೊರಗಿನ ಪರಿಹಾರ ಕೂಡಿದರೆ ಸಾಲದ ಸಮಸ್ಯೆ ಯಾಗುತ್ತದೆ. ಸಕಾರಾತ್ಮಕ ಶಕ್ತಿ ನಕಾರಾತ್ಮಕ ಶಕ್ತಿಯ ವಿರುದ್ದ ನಿಂತರೂ ನಕಾರಾತ್ಮಕ ಶಕ್ತಿ ಗೆ ಬಲ ಬರುತ್ತದೆ. ಕಾರಣ ಕಣ್ಣಿಗೆ ಕಾಣೋದು ನಕಾರಾತ್ಮಕ ಶಕ್ತಿಯೆ. ಹೀಗಾಗಿ ಮೌನದಿಂದ ಮುಂದೆ ನಡೆದರು. ವಾದ ವಿವಾದಗಳಾದರೂ ಸತ್ಯ ಅರ್ಥ ವಾಗಲಿಲ್ಲ. ಎಲ್ಲಾ ನಮ್ಮ ಅನುಭವದ ಮೇಲೆ ನಿಂತಿದೆ. ಅನುಭವಿಸದೆ ಸತ್ಯದರ್ಶನ ಕಷ್ಟ. ಕಷ್ಟಪಟ್ಟು ಒಪ್ಪಿದರೂ ಕೊನೆಯಲ್ಲಿ ಇಷ್ಟವಾಗದೆ ಇರಬಹುದು.
No comments:
Post a Comment