ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Tuesday, April 29, 2025

ಅಕ್ಷಯವಾಗಬೇಕಾಗಿರೋದೇನು? ಎಲ್ಲಿದೆ?

ಅಕ್ಷಯ ತೃತೀಯದಂದೆ ಬಸವಜಯಂತಿ ಬರುತ್ತದೆ.
ಹಾಗೆ ಶ್ರೀ ಶಂಕರಾಚಾರ್ಯರ ಜಯಂತಿಯಂದೇ ಶ್ರೀ ರಾಮಾನುಜಾಚಾರ್ಯರ ಜಯಂತಿಯಿದೆ. ಆದರೆ,
ಜಯಂತಿಯನ್ನು ಆಚರಣೆ ಮಾಡುವವರಲ್ಲಿ ಮಾತ್ರ ಒಗ್ಗಟ್ಟಿನ ಅಭಾವವಿದೆ. 

ಅಕ್ಷಯವಾಗಬೇಕಿದ್ದು ಒಗ್ಗಟ್ಟಿನಲ್ಲಿ. ಇದು ಸತ್ಯ ಧರ್ಮ ದ ಮೂಲಕವೇ  ಆಗಬೇಕಾದರೆ ಅಂತರಂಗ ಶುದ್ದಿಯಿರಬೇಕು.
ಕಲಬೇಡ ಕೊಲಬೇಡ  ಹುಸಿಯನುಡಿಯಲು‌ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ  ಇದಿರ ಹಳಿಯಲು‌ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿಯಾಗಿದೆ
ಬಸವಣ್ಣ
ಯಾವುದನ್ನು ಬೇಡವೆಂದರೋ ಅದನ್ನು  ಮಾಡುತ್ತಾ ಬಂದು  ಮಹಾತ್ಮರ ಜಯಂತಿ ವೈಭೋಗದಿಂದ ನಡೆಸಿದರೆ  ಬೇಡದ್ದು ಬೆಳೆದು ಬೇಡೋರೆ ಹೆಚ್ಚಾಗಿ   ಬೆಳೆಯುವರಷ್ಟೆ.
  ಅದಕ್ಕೆ ಹೇಳಿರೋದು ನಿನ್ನ ನೀ ಅರಿತು ನಡೆ ಎಂದು.
ಆದರೆ ಇದು  ಕಷ್ಟ ವಿದೆ.ಕಾರಣವಿಷ್ಟೆ  ನಮ್ಮ ಜ್ಞಾನಕ್ಕೆ ಸರಿಯಾದ ಗುರುವಾಗಲಿ ‌ ಶಿಕ್ಷಣವಾಗಲಿ ಸಿಗದೆ ಬೆಳೆದಾಗ  ಹೊರಗಿನ ವ್ಯಕ್ತಿ ಕಾಣಬಹುದು.ಒಳಗಿದ್ದ ಶಕ್ತಿ ಹಿಂದುಳಿಯಬಹುದು.
 
ಅಕ್ಷಯ ಎಂದರೆ ಕ್ಷಯವಾಗದ್ದು.ನಾಶವಾಗದ್ದು ಎಂದಾಗ ನಮ್ಮ ಮನೆ ಯೊಳಗೆ  ಕ್ಷಯವಾಗದ್ದು ಯಾವುದಿದೆ?
ಜ್ಞಾನದಿಂದ ತಿಳಿಯಬೇಕಾದ ಸತ್ಯವನ್ನು ವಿಜ್ಞಾನದಿಂದ ಅರ್ಥ ಮಾಡಿಸುವ ಪ್ರಯತ್ನ ಗಳು ಸಾಕಷ್ಟು ನಡೆದಿವೆ. ಜ್ಞಾನವಿಲ್ಲದೆ ವಿಜ್ಞಾನ ಬೆಳೆಯಿತೆ?
 
ಅಕ್ಷಯ ತೃತೀಯ ದಂದು ಹೆಚ್ಚು  ಪುಣ್ಯಕಾರ್ಯ  ನಡೆಸುವರು. ಆ ಪುಣ್ಯಕಾರ್ಯದಿಂದ  ಪಾಪ ಅಳಿಸುವುದು.
ಒಂದು ದಿನ‌ ಮಾಡಿದರೆ ಸಾಕೆ? ಪ್ರತಿದಿನವೂ ಮಾಡಬೇಕಾದರೆ ನಮ್ಮ ದೇಹವೇ ಪುಣ್ಯಕ್ಷೇತ್ರವಾಗಬೇಕು.
ಇಂತಹ ಪುಣ್ಯಕ್ಷೇತ್ರವನ್ನು  ಅಧ್ಯಾತ್ಮ ಸಾಧನೆಯಿಂದಷ್ಟೇ ಕಾಣಬಹುದು.
ಮಹಾತ್ಮರುಗಳು ಈ ಸಾಲಿನಲ್ಲಿರುವರು. ಅವರ ನಡೆ ನುಡಿಯಲ್ಲಿದ್ದ ಸತ್ಯ ಧರ್ಮ ವನರಿತು  ನಡೆಯೋದೆ ಉತ್ತಮ.
ಇವರ ಹೆಸರಿನಲ್ಲಿ ರಾಜಕೀಯ ನಡೆಸದಿದ್ದರೆ ಇನ್ನೂ ಉತ್ತಮ ಬದಲಾವಣೆ ಒಳಗೆ ಆಗುವುದು.

ಹೆಚ್ಚು ಭೌತಿಕಾಸಕ್ತಿ ಬೆಳೆಸುವ. ಊಟ ಉಪಚಾರ  ಉತ್ಸವ ಗಳು  ಒಂದು ದಿನದ ಮಟ್ಟಿಗೆ  ಉಪಯೋಗವಾದರೂ ಅದರ ಹಿಂದೆ ರಾಜಕೀಯ ಶಕ್ತಿಗಳಿದ್ದರೆ  ಎಲ್ಲಾ ನೀರಿನಲ್ಲಿ ಹೋಮಮಾಡಿದಂತೆಯೆ ಸರಿ.

ಭಗವಂತನಿಗೆ  ಇದ್ಯಾವುದರ  ಚಿಂತೆಯಿಲ್ಲ. ಮಾನವನಿಗೇ ಚಿಂತೆ. ಚಿಂತೆಯ ಹಿಂದಿನ ಚಿಂತನೆಯೇ ಕಾರಣ. 
ಚಿಂತನೆ  ಸನ್ಮಾರ್ಗದಲ್ಲಿದ್ದರೆ  ಸತ್ಸಂಗದಲ್ಲಿದ್ದರೆ ಧರ್ಮದಲ್ಲಿ ಸತ್ಯದಲ್ಲಿ ಇದ್ದರೆ  ಸಮಸ್ಯೆಯಿರದು.‌ ಇದರ ಬಗ್ಗೆ ಅರಿವಿಲ್ಲದಿರೋದೆ ಸಮಸ್ಯೆ.

ಸಾಮಾಜಿಕ ಕ್ಷೇತ್ರದಲ್ಲಿ ನಡೆಸುವ ಕಾರ್ಯಕ್ರಮ  ಧಾರ್ಮಿಕ ಕಾರ್ಯ ಕ್ರಮಕ್ಕೆ ವಿರುದ್ದವಿದೆಯೇ ಪರವಿದೆಯೆ? ಎಂದರೆ  ಮಹಾತ್ಮರುಗಳ ಜಯಂತಿಯಂದು ಅವರ ತತ್ವದ ಪ್ರಚಾರವಿರುತ್ತದೆ. ತತ್ವದ ಹಿಂದಿನ ವಿಜ್ಞಾನವನ್ನು ಅರ್ಥ ಮಾಡಿಸುವ ಗುರು ಹಿರಿಯರಿರಬಹುದು.  ಆದರೆ ಆ ತತ್ವಜ್ಞಾನದ ಶಿಕ್ಷಣ ಕೊಡದೆ ಜನರಿಗೆ ಸತ್ಯ ತಿಳಿಸಿದರೂ ಅರ್ಥ ಆಗದಿದ್ದರೆ ಊಟ ಉಪಚಾರ ಉತ್ಸವಕ್ಕೆ ಸುರಿಯುವ ಹಣವೂ ನಮ್ಮದಾಗಿರುತ್ತದೆ.  ಜ್ಞಾನ‌ಮಾತ್ರ ನಮಗಿರದು. ಜ್ಞಾನವಿದ್ದವರನ್ನು ನಡೆಯಲು ಬಿಡದೆ ಹಿಂದೆ ತಳ್ಳಿದರೆ ಮಹಾತ್ಮರನ್ನು  ಕಾಣಲಾಗದು. 
ಅದ್ವೈತ  ಸಂಸ್ಥಾಪಕರಾದ  ಜಗದ್ಗುರು ಶ್ರೀ ಶಂಕರಭಗವತ್ಪಾದರಂತೆ ಯಾರೂ ಇರೋದಿಲ್ಲ. ಹಾಗೆ ವಿಶಿಷ್ಟಾದ್ವೈತ ಸಂಸ್ಥಾಪಕರಾಗಿದ್ದ  ಜಗದ್ಗುರು  ಶ್ರೀ ರಾಮಾನುಜಾಚಾರ್ಯರೂ ಜಗತ್ತಿಗೇ ಗೊತ್ತಿರುವವರು.
ಇಬ್ಬರ ತತ್ವದ ಉದ್ದೇಶ ಒಂದೇ.  ಸರಳವಾಗಿರುವ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆಯೇ  ಆಗಿತ್ತು ಎಂದರೆ ನಂಬೋದಿಲ್ಲ.

ಹೀಗಾಗಿ ಹಿಂದೂ ಒಂದಾಗೋಕೆ ಬೇಕಾಗಿರುವ ತತ್ವದರ್ಶನ
ಇಂದು ಅಗತ್ಯವಿದೆ. ಓದಿ ತಿಳಿಯೋದೆ ಬೇರೆ ಮಾಡಿ ಕಲಿತು ನಡೆಯೋದೇ ಬೇರೆ. ಓದಿದವರಿಗೆ  ಜ್ಞಾನದ ಕೊರತೆ. ಜ್ಞಾನವಿದ್ದವರಿಗೆ  ಓದೋದೇ ಸಮಸ್ಯೆ. ಅಂದಿನ ಕಾಲಕ್ಕೂ ಈಗಿನ  ಕಾಲಕ್ಕೂ ಅಂತರವಿದೆ . ಆ ಅಂತರದಲ್ಲಿ ನಿಂತು ಬೇಡೋರೆ ಹೆಚ್ಚು.
ಸಾಲ ಮಾಡಿದರೂ ತೀರಿಸೋದು ನೀನೇ ಎನ್ನುವ ಸತ್ಯದ ಅರಿವಿಲ್ಲದೆ ದೇವರನ್ನು  ರಾಜಕಾರಣಿಗಳನ್ನು ಶ್ರೀಮಂತ ರನ್ನು  ಬೇಡಿದಷ್ಟೂ  ಕಾಲಕಸವಾಗಿ ಹೋಗುವುದು ಜೀವನ.
ಅದರ ಬದಲಾಗಿ ನೀಡೋದಾದರೆ ಉತ್ತಮ ಜ್ಞಾನದ ಶಿಕ್ಷಣ ನೀಡಿದ್ದರೆ  ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.
ಈಗಲೂ ತತ್ವಜ್ಞಾನವಿದೆ ಅದರೊಂದಿಗೆ ತಂತ್ರಜ್ಞಾನವೂ ಇದೆ.ಯಾವಾಗ ತತ್ವ ತಂತ್ರದೊಂದಿಗೆ ಬೆರೆಯುವುದೋ ಆಗಲೇ ಅತಂತ್ರ ಜೀವನವಾಗುತ್ತದೆ.
ತಂತ್ರ ಯಾವತ್ತೂ ಒಂದು ಮಾಡೋದಿಲ್ಲ. ಒಂದು ಮಾಡಿದರೂ  ಸುಮ್ಮನಿರಲು ಬಿಡೋದಿಲ್ಲ. ಹೀಗಾಗಿ ನಮ್ಮ ಮಹಾತ್ಮರು ಸ್ವತಂತ್ರ ವಾಗಿ ತತ್ವದೆಡೆಗೆ ಸಾಗಿದ್ದರು.

ವಾದ ವಿವಾದಕ್ಕೆ ಬದಲಾಗಿ ಚರ್ಚೆ ಮಾಡುವುದು ಉತ್ತಮ.
ವಾದ ವಿವಾದದಿಂದ  ಮನಸ್ಸು  ಒಂದಾಗಿರದು. ಆದರೆ ಅರ್ಥ ವಾಗುವವರೊಂದಿಗೆ ಚರ್ಚೆ ನಡೆದರೆ ಕೆಲವು ವಿಷಯ ಸ್ಪಷ್ಟವಾಗಿ  ತಿಳಿಯಬಹುದು.
ಈಗಿನ ಪರಿಸ್ಥಿತಿಯಲ್ಲಿ  ವಾದವಿವಾದಗಳಿಗೆ ಹೆಚ್ಚಿನ ಬೆಲೆ.
ಗೆದ್ದವರು ಇನ್ನೊಮ್ಮೆ ಸೋಲಬಹುದು. ಆದರೆ ಅಧಿಕಾರ ಕೊಟ್ಟು ಮೇಲೇರಿಸಿದರೆ ಮತ್ತೊಮ್ಮೆ ಕೆಳಗಿಳಿದು ವಾದಕ್ಕೆ ಬರೋದಿಲ್ಲ. ಹೀಗಾಗಿ ಸತ್ಯ ಅರ್ಥ ವಾಗದು.

ಅದ್ವೈತ ವಿಶಿಷ್ಟಾದ್ವೈತ ಎರಡರಲ್ಲೂ ಅದ್ವೈತ ವಿದೆ.ಹಾಗೆ ಅದ್ವೈತ ದೊಳಗೇ ದ್ವೈತ ವೂ ಅಡಗಿದೆ. ಹಾಗಾದರೆ ಮೂರಲ್ಲಿ  ಬೇರೆ ಯಾವುದಿದೆ?
ಸೃಷ್ಟಿ ಸ್ಥಿತಿ ಲಯವನ್ನು ಯಾರೂ ತಡೆಯಲಾಗದು. ಹಾಗೆ ಈ ಮೂರೂ ಮತಗಳು  ಬೆಳೆದಿವೆ ಬೆಳೆಯುತ್ತಿವೆ ಬೆಳೆಯುತ್ತಲೇ ಇರುತ್ತದೆ.
ಇದರೊಂದಿಗೆ  ನಡೆದವರಿಗಷ್ಟೆ  ಗೊಂದಲ. ಪರಮಾತ್ಮ ಜೀವಾತ್ಮ ಒಂದಾದರೆ ಯೋಗ. ಬೇರೆಯಾದರೆ ವಿಯೋಗ
 ಇಂದು ಯೋಗವಿಲ್ಲದ ಭೋಗಕ್ಕೆ  ಮಾನವ ಶರಣಾಗಿ ರೋಗ ಬೆಳೆದಿದೆ. ರೋಗಕ್ಕೆ  ಕಾರಣವಾಗಿರುವ ಅಜ್ಞಾನವನ್ನು ಸರಿಪಡಿಸುವುದೇ  ಧರ್ಮ ಕಾರ್ಯ ವಾಗಿದೆ.
ಅಕ್ಷಯತೃತೀಯದಂದು ಹೊರಗಿನ ವಸ್ತು ಒಡವೆ ವಸ್ತ್ರ ಮನೆ ಯನ್ನು ಖರೀದಿಸುವರು.  ಇದು ಹೆಚ್ಚಾದಷ್ಟೂ ಮಾನವನ ಸಾಲ ಬೆಳೆಯುತ್ತದೆ.ಸಾಲ ತೀರಿಸಲಾಗದೆ ರಾಜಕೀಯ ಭ್ರಷ್ಟಾಚಾರ  ಬೆಳೆದರೆ ಮಹಾತ್ಮರು ಕಾಣುವರೆ?

No comments:

Post a Comment