ಸರ್ಕಾರ= ಸಹಕಾರ
"ಪಠ್ಯ ಪುಸ್ತಕದ ಧರ ಏರಿಸಿದ ಪಠ್ಯಪುಸ್ತಕ ಸಮಿತಿ" ವರ್ತ ಮಾನ ಪತ್ರಿಕೆಯ ಸುದ್ದಿಗೆ ಬಂದ ಒಂದು ಪ್ರತಿಕ್ರಿಯೆ
ಇದಕ್ಕೆ ಕಾರಣ ಸರ್ಕಾರ ಎನ್ನುವ ಪೋಸ್ಟ್ ನೋಡಿದರೆ ಜನರಿಗೆ ಯಾವಾಗ ಬುದ್ದಿಬರುವುದೆನ್ನುವುದು ತಿಳಿಯುತ್ತಿಲ್ಲ. ಬುದ್ದಿವಂತಿಕೆ ಬೆಳೆಸಿದ ಪಠ್ಯ ಪುಸ್ತಕ ಜ್ಞಾನವನ್ನು ಬೆಳೆಸಿಲ್ಲ. ಇದಕ್ಕೆ ಜನರಿಗೆ ಎಲ್ಲಾ ಸರ್ಕಾರದ ಮೇಲೇ ತಪ್ಪು ಹೋರಿಸಿ ತಾನು ಸರಿ ಎಂದು ವಾದ ಮಾಡೋದರಲ್ಲಿಯೇ ಕಾಲಹಾಕುವಂತಾಗಿದೆ.
ನಿಜವಾಗಿಯೂ ಇದರಲ್ಲಿ ಸರ್ಕಾರದ ಪಾತ್ರ ಎಷ್ಟಿದೆ? ಜನಸಹಕಾರದ ಪಾತ್ರ ಎಷ್ಟಿದೆ? ಜ್ಞಾನಿಗಳ ಸಹಕಾರ ವಿದೆಯೋ ಅಜ್ಞಾನಿಗಳ ಸಹಕಾರವಿದೆಯೆ?
ಪ್ರಜಾಪ್ರಭುತ್ವದಲ್ಲಿ ಜನಸಹಕಾರವಿಲ್ಲದೆ ಯಾವುದೇ ಕ್ಷೇತ್ತ ಸಂಘ,ಪಕ್ಷ,ಧರ್ಮ ಬೆಳೆದಿಲ್ಲ. ಇದರ ಮೂಲ ಒಳಗಿನ ಜ್ಞಾನ. ಜ್ಞಾನದ ಮೂಲ ಶಿಕ್ಷಣ.ಶಿಕ್ಷಣ ಪುಸ್ತಕದಿಂದ ಮಸ್ತಕಕ್ಕೆ ಏರಿಸುತ್ತದೆ. ಆದರೆ ಒಳಗೇ ಇದ್ದ ಸಾಮಾನ್ಯ ಜ್ಞಾನಕ್ಕೆ ಸರಿಯಾದ ಪುಸ್ತಕ ಇಂದು ಕಡಿಮೆಯಾಗಿ ವಿಜ್ಞಾನವನ್ನು ನೇರವಾಗಿ ತಲೆಗೇರಿಸಿದರೆ ಆಳವಾಗಿದ್ದ ಸತ್ಯದ ಅರಿವಿಲ್ಲದ ಜನರಿಗೆ ಕಾಣೋದು ಹೊರಗಿನ ಸರ್ಕಾರ ಮಾತ್ರ.
ಸರ್ಕಾರಗಳು ಜನಬಲವಿಲ್ಲದೆ ನಡೆಯದು.ಎಲ್ಲಾ ಸರ್ಕಾರಗಳೂ ಈವರೆಗೆ ಶಿಕ್ಷಣಕ್ಷೇತ್ರವನ್ನು ಬೆಳೆಸಿದೆ.ಪಠ್ಯಪುಸ್ತಕದ ವಿಷಯವನ್ನು ಯಾರೋ ಕೈಗೆ ಕೊಟ್ಟು ಬದಲಾಯಿಸುತ್ತಾ ಹೋಗಿದೆ. ಮಕ್ಕಳು ಮಾತ್ರ ಜನಸಾಮಾನ್ಯರ ದುಡಿದ ಹಣವನ್ನು ಶಿಕ್ಷಣಕ್ಕೆ ಕೊಟ್ಟು ನಮ್ಮದಲ್ಲದ ಇಷ್ಟವಾಗದ ವಿಚಾರವನ್ನು ಕಲಿಯುತ್ತಾ ಮೇಲಕ್ಕೆ ಹೋದರೂ ಸರಿಯಾದ ಜೀವನ ಪದಕ್ಕೆ ಅರ್ಥ ತಿಳಿಯದೆ ಯಾರದ್ದೋ ಕೈಕೆಳಗಿದ್ದು ಅಥವಾ ಸ್ವತಂತ್ರ ವಾಗಿ ವ್ಯವಹಾರಕ್ಕೆ ಇಳಿದು ಹಣ ಮಾಡಿದರೂ ಅದನ್ನು ಹೇಗೆ ಬಳಸಿದರೆ ಸುಖ ಶಾಂತಿ ನೆಮ್ಮದಿಯಿಂದ ಬದುಕಬೇಕೆಂಬ ಅರಿವಿನ ಕೊರತೆಯಲ್ಲಿರೋದನ್ನು ಅಜ್ಞಾನ ಎಂದರೆ ತಪ್ಪು ಎನ್ನುವವರೂ ಇದ್ದಾರೆ . ಈವರೆಗೆ ದೇಶವನ್ನು ಉದ್ದಾರ ಮಾಡಿದ ಮಹಾತ್ಮರ ಶಿಕ್ಷಣವನ್ನು ಅಲ್ಲಗೆಳೆದು ಹೊರಗಿನವರ ಶಿಕ್ಷಣಕ್ಕೆ ಹಣಸುರಿದವರ ಕಥೆಯ ಅಂತ್ಯ ಅರ್ಥ ವಾಗದೆ ಇರೋದೆ ದುರಂತ.
ವೃದ್ದಾಶ್ರಮ,ಅನಾಥಾಶ್ರಮ,ಅಬಲಾಶ್ರಮ,ಬಿಕ್ಷುಕಾಶ್ರಮ...ಹೀಗೇ ಹೊರಗೆ ಆಶ್ರಮ ನಡೆಸಿದಷ್ಟೂ ಹಿಂದೆ ಇದ್ದ ಗುರುಕುಲದ ಆಶ್ರಮದ ಜ್ಞಾನಬರೋದಿಲ್ಲ.
ಹೊರಗಿನ ಆಶ್ರಮ ಗಳಿಗೆ ಶ್ರೀಮಂತ ಜನ ಸಹಕರಿಸುವರು.ಅದೇ ಹಣವನ್ನು ಶಿಕ್ಷಣದಲ್ಲಿ ಬದಲಾವಣೆ ತರಲು ಬಳಸಿದ್ದರೆ ಜನರ ಪರಿಶ್ರಮಕ್ಕೆ ತಕ್ಕಂತೆ ಫಲವಿತ್ತು.
ಈಗಲೂ ಕಾಲಮಿಂಚಿಲ್ಲ. ಇಂತಹ ವಿಚಾರಗಳನ್ನು ಎಲ್ಲಾ ಮಠಗಳು,ಮಂದಿರಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಾದರೆ ದೈವತ್ವದೆಡೆಗೆ ಸಾಗುವ ಪಠ್ಯಪುಸ್ತಕಗಳನ್ನು ಶಿಕ್ಷಣದಲ್ಲಿ ಅಳವಡಿಸಿ ತಾವೂ ಶಿಕ್ಷಕರಾಗಿ ಸ್ವಯಂ ಪ್ರಕಾಶಕರಾಗಬಹುದಿತ್ತು.
20 ವರ್ಷದ ಲೇಖನಗಳು ಇದೇ ವಿಚಾರವನ್ನು ಹೊತ್ತು ನಿಂತಿದೆ. ಈಗಲೂ ಯಾರು ಸರಪಡಿಸಬೇಕಿತ್ತೋ ಯಾರಿಗೆ ಅಧಿಕಾರ ಸ್ಥಾನವಿತ್ತೋ ಯಾರು ಶಿಕ್ಷಕರಾಗಿ ಗುರುವಾಗಿ ಜನರನ್ನು ತಿದ್ದಲು ಸಾಧ್ಯವಾಗಿತ್ತೋ ಅವರೆ ರಾಜಕಾರಣಿಗಳ ಹಿಂದೆ ಹಣದ ಹಿಂದೆ ವ್ಯವಹಾರದ ಹಿಂದೆ ನಡೆದು ಸಾಲದ ಹೊಳೆ ಹರಿಸಿದ್ದಾರೆಂದರೆ ಕಲಿಯುಗದಲ್ಲಿ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು?
ಎಲ್ಲರನ್ನೂ ಕಾಯುವ ಪರಮಾತ್ಮನ ಸತ್ಯ ಒಳಗಿತ್ತು. ಅದನ್ನು ಬಿಟ್ಟು ಹೊರಗಿನ ಸರ್ಕಾರದ ಹಿಂದೆ ಬಂದವರು ದಾರಿತಪ್ಪಿದರು. ಸರ್ಕಾರವೂ ಜನರನ್ನು ಮೇಲೆತ್ತುವತ್ತ ನಡೆದು ಒಳಗೆ ಹುಳುಕು ಹೊರಗೆ ತಳುಕುಬಳುಕು.
ಒಟ್ಟಿನಲ್ಲಿ ಓದಿದವರೆಲ್ಲ ಜ್ಞಾನಿಗಳಾಗಿಲ್ಲ. ಜ್ಞಾನಿಗಳಾದವರೆಲ್ಲರೂ ಓದಿ ತಿಳಿದವರಿರಲಿಲ್ಲ. ಪುಸ್ತಕದ ಬೆಲೆ ಅದರೊಳಗಿರುವ ಸದ್ವಿಚಾರದ ಮೇಲಿರಬೇಕಿತ್ತು.
ಕೆಳಮಟ್ಟದ ವಿಚಾರಕ್ಕೆ ಸಾಲ ಮಾಡುವ ಅಗತ್ಯವಿದೆಯೆ?
ಇದರ ಬಗ್ಗೆ ಚರ್ಚೆ ಮಾಡದೆ ಹೊರಗೆ ಬಂದಿರುವ ಮಾನವನಿಗೆ ಎಲ್ಲದ್ದಕ್ಕೂ ಸರ್ಕಾರ ಕಾರಣವೆನ್ನುವುದೇ ಸತ್ಯ ಎನಿಸುತ್ತದೆ. ಸರ್ಕಾರ ಎಂದರೆ ಸಹಕಾರವಾಗಿರೋದೆ ಸತ್ಯ.
ಎಲ್ಲದ್ದಕ್ಕೂ ಕಾರಣವೇ ಸರ್ಕಾರ ಎಂದು ಇಷ್ಟು ವರ್ಷ ಮುಂದೆ ಬಂದಿರುವ ನಮಗೆ ಶಿಕ್ಷಣ ಹದಗೆಟ್ಟು ದುಬಾರಿ ಯಾಗಿರೋದು ಅರ್ಥ ವಾಗಿದ್ದರೆ ಮಕ್ಕಳಾದರೂ ನಮ್ಮನ್ನರಿತು ಜೊತೆಗಿರುತ್ತಿದ್ದರು. ನಿಜವಾಗಿಯೂ ಪೋಷಕರ ಸಹಕಾರವೇ ಎಲ್ಲಾ ಸಮಸ್ಯೆಯ ಮೂಲ. ಪುಸ್ತಕಗಳಿಗೆ ಬೆಲೆಕೊಡುವ ಮೊದಲು ಅದರ ವಿಚಾರಗಳು ಮಕ್ಕಳ ಮಸ್ತಕವನ್ನು ಹಾಳು ಮಾಡಿ ಆಳುತ್ತಿದೆಯೆ ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ವರ್ಷ ವರ್ಷ ಸಾಲ ಮಾಡಿ ಕೊಡುತ್ತಿರುವ ಶಿಕ್ಷಣವೇ ನಮ್ಮದಲ್ಲ. ಹೊರಗಿನವರ ಶಿಕ್ಷಣ ಮಕ್ಕಳನ್ನು ಹೊರಗೆ ಕಳಿಸುತ್ತಾ ದೇಶವನ್ನೇ ವಿದೇಶ ಮಾಡುವತ್ತ ನಡೆದಿರೋದು ದುರಂತ.
ವಿದ್ಯೆ ಅವಿದ್ಯೆಯಾಗಬಾರದಿತ್ತು. ಅವಿದ್ಯೆ ಎಂದರೆ ಕಲಿಕೆಯಲ್ಲಿ ಸತ್ಯ ಧರ್ಮ ಇರದಿರೋದು ಎಂದರೆ ಸರಿಯಾಗಬಹುದು. ಸುಮ್ಮನೆ ಸರ್ಕಾರ ಸರಿಯಿಲ್ಲ ಎಂದು ಸುಮ್ಮನಿದ್ದರೆ ನಮ್ಮ ಸಹಕಾರ ಸರಿಯಿಲ್ಲವೆಂದರ್ಥ ವಾಗಿರುತ್ತದೆ. ಎರಡೂ ಸತ್ಯವೇ ಯಥಾ ಪ್ರಜೆ ತಥಾ ರಾಜಕೀಯ. ಯಥಾಗುರು ತಥಾ ಶಿಷ್ಯ, ಯಥಾ ಶಿಕ್ಷಣ ತಥಾ ಜ್ಞಾನ. ಯಥಾ ಜ್ಞಾನ ತಥಾ ವಿಜ್ಞಾನ.
ವಿಜ್ಞಾನದಲ್ಲಿ ಎರಡು ವಿಧವಿದೆ.ಒಂದು ಅಧ್ಯಾತ್ಮ ವಿಜ್ಞಾನ. ಇನ್ನೊಂದು ಭೌತವಿಜ್ಞಾನ. ಎಷ್ಟು ಹೊರಗಿನ ವಿಚಾರಕ್ಕೆ ಸಹಕಾರವಿರುವುದೋ ಅಷ್ಟೇ ಹಣಬಳಕೆಯಾಗುತ್ತದೆ.
ಹಾಗೆ ಎಷ್ಟು ಒಳಗಿನ ವಿಚಾರಕ್ಕೆ ಸಹಕಾರವಿರುವುದೋ ಅಷ್ಟೇ ಒಳಗಿನ ವಿದ್ಯೆ ಜ್ಞಾನ ಹಣದ ಸದ್ಬಳಕೆಯಾಗಿರುತ್ತದೆ.
ಈಗ ಎತ್ತ ಸಾಗಿದೆ ಭಾರತ? ಹೊರಗಿನವರು ಬಂದು ಒಳಗಿರುವವರನ್ನು ಕೊಂದು ಹೋದರೂ ಸರ್ಕಾರ ಕಾರಣವೆನ್ನುವವರೆ ಹೆಚ್ಚಾದರೆ ಸರ್ಕಾರ ನಡೆಸಿರೋದು ಯಾರು? ಪ್ರಜಾಪ್ರಭುತ್ವದಲ್ಲಿ ನಿಜವಾಗಿಯೂ ರಾಜರು ಯಾರು? ಸೇವಕರು ಯಾರು? ಹೊರಗೆ ಕಾಣೋದೆಲ್ಲಾ ಸತ್ಯವಲ್ಲ. ಒಳಗೆ ನಡೆದಿರೋದು ಕಾಣೋದಿಲ್ಲ. ಒಟ್ಟಿನಲ್ಲಿ ಮಾಯಾ ಜಗತ್ತಿನಲ್ಲಿ ಎಲ್ಲಾ ಮಾಯವಾಗೋರೆ. ಪುಸ್ತಕದ ವಿಷಯವೇ ಸರಿಯಿಲ್ಲವಾದರೆ ಎಷ್ಟು ಹಣಕೊಟ್ಟು ಖರೀದಿಸಿ ತಲೆಗೆ ತುಂಬಿದರೂ ವ್ಯರ್ಥ. ಸಾಲ ಮಾಡಿ ಶಿಕ್ಷಣ ಕೊಡಿಸುವಾಗ ಎಚ್ಚರವಿರಲಿ.ಮಕ್ಕಳು ಸಾಲ ತೀರಿಸುವ ಜ್ಞಾನದ ಶಿಕ್ಷಣ ಪಡೆದಿದ್ದರೆ ಸರಿ. ಇಲ್ಲವೆಂದರೆ ಅಡ್ಡದಾರಿಹಿಡಿದು ಕೈಗೆ ಸಿಗದೆ ಹೋಗಬಹುದು. ಇದು ಸತ್ಯ. ಭಾರತೀಯ ಶಿಕ್ಷಣದ ಸತ್ಯ ಸತ್ವ ತತ್ವಕ್ಕೆ ವಿರುದ್ದವಿರುವ ಅನೇಕ ವಿಷಯಗಳನ್ನು ಮಕ್ಕಳ ತಲೆಗೆ ತುಂಬಿದಷ್ಟೂ ಸಾಲ ಮಿತಿಮೀರುತ್ತದೆ.ಅಜ್ಞಾನ ಬೆಳೆದು ಅಹಂಕಾರ ಸ್ವಾರ್ಥ ಕ್ಕೆ ಜೀವನಬಲಿಯಾದರೆ ಇದಕ್ಕೆ ಸರ್ಕಾರ ಕಾರಣ ಅಂದರೆ ಪೋಷಕರ ಸಹಕಾರವೇ ಕಾರಣವೆನ್ನುವುದು ಸತ್ಯ.
ಈಗ ನಡೆಯುತ್ತಿರುವ ಪ್ರತಿಯೊಂದು ದೊಡ್ಡ ಮತ್ತು ಸಣ್ಣ ಸಮಸ್ಯೆಗೆ ಕಾರಣ ಅಜ್ಞಾನ ವಾಗುತ್ತಿದೆ. ದೇವರನ್ನು ಹೊರಗೆ ಬೆಳೆಸಿ ಒಳಗಿನ ದೈವತ್ವಕ್ಕೆ ಶಿಕ್ಷಣ ನೀಡದಿರೋದು ಸಮಸ್ಯೆ.
ಅಸುರರೊಂದಿಗೆ ಸುರರೂ ವ್ಯವಹಾರಕ್ಕೆ ಇಳಿದು ಹಣ ಮಾಡಿಕೊಂಡು ಜನರನ್ನು ಆಳಲು ಹೊರಟಿದ್ದು ಸಮಸ್ಯೆ.
ವಿದೇಶದೊಂದಿಗೆ ಅತಿಯಾದ ಸ್ನೇಹ ಬೆಳೆಸಿಕೊಂಡು ಒಪ್ಪಂದ ಮಾಡಿಕೊಂಡು ಅವರ ಶಿಕ್ಷಣ,ಧರ್ಮ ವ್ಯವಹಾರ ಬಂಡವಾಳ ಸಾಲವನ್ನು ದೇಶದೊಳಗೆ ತಂದರೆ ಆಳೋದು ಯಾರು?
ಭಯೋತ್ಪಾದನೆ ಎಂದರೆ ಭಯವನ್ನು ಸೃಷ್ಟಿ ಮಾಡೋದು. ಯಾರ ಮೇಲೆ ಭಯ ಭಕ್ತಿ ಇರಬೇಕಿತ್ತೋ ಅದನ್ನರಿಯದ ಜನ ಹೊರಗಿನವರನ್ನು ಬೆಳೆಸಿಕೊಂಡು ಶ್ರೀಮಂತ ರಾದರೂ ಒಳಗಿದ್ದ ಶ್ರೀಮಂತ ಜ್ಞಾನವಿಲ್ಲದಿದ್ದರೆ ಜೀವಭಯ ಇದ್ದೇ ಇರುತ್ತದೆ. ಇದನ್ನು ಹುಟ್ಟಿಸಿದವರು ಒಳಗಿರುವವರೆ ಎನ್ನುವುದೂ ಸತ್ಯವಾಗುತ್ತದೆ.ಹಿಂದಿನ ರಾಜರಿಗೆ ಜೀವಭಯವಿರಲಿಲ್ಲ ಕಾರಣ ಆತ್ಮಜ್ಞಾನವಿತ್ತು.ಈಗ ದೊಡ್ಡ ದೊಡ್ಡ ಸ್ಥಾನದಲ್ಲಿದ್ದವರ ಜೀವಕ್ಕೆ ಭಯ ಹೆಚ್ಚು.ಕಾರಣವಿಷ್ಟೆ ಅವರ ನಡಿಗೆ ಧರ್ಮದೆಡೆಗೆ ನಡೆದಿಲ್ಲ.ಸತ್ಯದ ಅರಿವಿಲ್ಲದವರನ್ನು ದೇವರೆಂದರೆ ಸರಿಯಾಗಬಹುದೆ?
ರಾಜರನ್ನು ದೇವರೆನ್ನುತ್ತಿದ್ದ ಕಾಲವಿತ್ತು.ಈಗಿದು ಶಿಕ್ಷಣದ ಪ್ರಭಾವದಿಂದಾಗಿ ಬದಲಾಗಿದೆ.ಗುರುವನ್ನು ದೇವರೆಂದು ತಿಳಿಸುವ ಶಿಕ್ಷಣವಿತ್ತು ಈಗಿಲ್ಲ. ಗುರುಗಳು ಸ್ವತಂತ್ರ ವಾಗಿ ಜೀವಿಸಿ ಜೀವನಸತ್ಯವನ್ನು ಲೋಕಕ್ಕೆ ತಿಳಿಸುವ ಅಧಿಕಾರ ಹಿಂದೆ ಇತ್ತು. ಈಗ ಬದಲಾಗಿದೆ.ಪ್ರತಿಯೊಂದು ರಾಜಕೀಯದ ವಶವಾದರೆ ಸತ್ಯವಿರದು ಧರ್ಮ ನಿಲ್ಲದು.
ಒಟ್ಟಿನಲ್ಲಿ ಸರ್ಕಾರ ಹೊರಗಿದೆ ಸಹಕಾರ ಒಳಗಿದೆ.
ಜನರ ಜೀವನ ಒಳಗಿದೆ ಜನ ಸಹಕಾರ ಹೊರಗೇ ಬೆಳೆದಿದೆ. ಸತ್ಯಜ್ಞಾನ ಒಳಗಿದೆ ಹಣ ಹೊರಗಿದೆ. ಯಾವಾಗಿದು ಯೋಗದಿಂದ ಅರ್ಥ ವಾಗುವುದಿಲ್ಲವೋ ಅಜ್ಞಾನ ಬೆಳೆದು ನಾನೇ ಸರಿ ನಾನೇ ದೇವರು,ನಾನೇ ಎಲ್ಲಾ ನನ್ನಿಂದಲೇ ಎಲ್ಲಾ ಎನ್ನುವ ಅಹಂಕಾರ ಸ್ವಾರ್ಥ ಜೀವಾತ್ಮನನ್ನು ಸುತ್ತುವರಿದು ನಿಜವಾದ ಸತ್ಯದ ,ಪರಮಾತ್ಮನ ಅರಿವಿಲ್ಲದೆ ಜೀವ ಹೋಗುತ್ತದೆ.
ಅದಕ್ಕೆ ಹೇಳಿದ್ದು ಎಲ್ಲಾ ನಿನ್ನೊಳಗೇ ಇದೆ.ಹುಡುಕಿಕೋ ಅಂತ.ಹೊರಗಿನವರು ಸಹಾಯ ಮಾಡಬಹುದಷ್ಟೆ. ಆದರೆ ಆ ಸಹಾಯದ ಋಣ ತೀರಿಸಲು ನಾವು ಕಷ್ಟಪಡಲೇಬೇಕು.
ಋಣ ತೀರಿಸಲು ಒಂದು ಜನ್ಮ ಸಾಲದು. ಜನ್ಮ ಜನ್ಮಗಳಿಂದ ತಿಳಿದುಬಂದ ಎಷ್ಟೋ ಸದ್ವಿಚಾರದಿಂದ ಮಾನವ
ಮಹಾತ್ಮನಾಗಬಹುದಷ್ಟೆ. ಅದನ್ನು ಪುಸ್ತಕದಿಂದ ತಿಳಿಯದಿದ್ದರೆ ಇದಕ್ಕೆ ಕಾರಣವೂ ನಮ್ಮ ಸಹಕಾರವಾಗುತ್ತದೆ. ಹೊರಗಿನ ವಿಷಯ ತಿಳಿಯೋ ಮೊದಲು ಒಳಗಿರುವ ಉತ್ತಮ ವಿಷಯಗಳನ್ನು ಮಕ್ಕಳಿಗೆ ತಿಳಿಸಿದ್ದರೆ ಮನೆಯೇ ಗುರುಕುಲವಾಗಿರುತ್ತಿತ್ತು.
ಇನ್ನೂ ಎಷ್ಟು ಅಜ್ಞಾನ ಹೊರಗಿನಿಂದ ತುಂಬಿಸಬೇಕೋ?
ಹಣವಿದ್ದವರಿಗೆ ಜ್ಞಾನವಿಲ್ಲ.ಜ್ಞಾನವಿದ್ದವರಿಗೆ ಹಣವಿಲ್ಲ.
ಎರಡೂ ಇದ್ದರೂ ಹೇಳುವ ಅಧಿಕಾರವಿಲ್ಲ.ಇದು ನಮ್ಮ ಪರಿಸ್ಥಿತಿಯನ್ನು ಹದಗೆಡಿಸುತ್ತಿದೆ. ಎಚ್ಚರವಾದರೆ ಉತ್ತಮ.
ಮಲಗಿದವರನ್ನು ಏಳಿಸಬಹುದು ಮಲಗಿದಂತೆ ನಟಿಸುವವರನ್ನು ಏಳಿಸಲಾಗದು. ಇವರೆ ಮಧ್ಯವರ್ತಿಗಳು.
ನಾಟಕದ ಸಂತೆಯಲ್ಲಿ ವ್ಯವಹಾರಕ್ಕೆ ಇಳಿದು ಹಣಮಾಡಿಕೊಂಡರೆ ಹೆಣವಾಗೋದನ್ನು ತಪ್ಪಿಸಲಾಗದು. ಒಟ್ಟಿನಲ್ಲಿ ಹೆಣದಿಂದಲೂ ಹೇಗೆ ಹಣ ಮಾಡಿಕೊಳ್ಳಬಹುದೆನ್ನುವ ಪುಸ್ತಕಗಳಿಗೆ ಹಣಕೊಟ್ಟು ಜನ ಬೇಡಿಕೆಯಿದೆ. ಬೇಡೋದನ್ನು ನೀಡೋದು ಮೇಲಿರುವವರೆ. ಆದರೆ ಏನು ಬೇಡಿದರೆ ಆತ್ಮರಕ್ಷಣೆ ಆಗೋದೆನ್ನುವ ಜ್ಞಾನ ನೀಡಬೇಕಾಗಿರೋದು ಗುರುಗಳು. ಗುರುವೇ ಜ್ಞಾನವನ್ನು ಗುರುತಿಸದಿದ್ದರೆ ದೇವರು ಕಾಣುವನೆ?
ಮನೆಯಿಳಗಿರುವ ಜ್ಞಾನದೇವತೆಯಾದ ಸ್ತ್ರೀ ಗುರುವಾಗಿ ಮಕ್ಕಳಿಗೆ ತಿಳಿಸಬೇಕಾದ ಸಂಸ್ಕಾರದ ಶಿಕ್ಷಣ ನೀಡಲು ಸೋತರೆ ಅದಕ್ಕೆ ಕಾರಣ ಅವಳಿಗೇ ಕೊಡದ ಸಂಸ್ಕಾರದ ಶಿಕ್ಷಣವಾಗಿದೆ. ಹಣಕೊಟ್ಟು ಮಕ್ಕಳನ್ನು ಬೆಳೆಸುವುದು ಸುಲಭ. ಜ್ಞಾನಕೊಟ್ಟು ಬೆಳೆಸುವುದೇ ಕಷ್ಟ. ಅದಕ್ಕೆ ಕಷ್ಟಪಡದೆ ಸುಖವಾಗಿ ಓದಿ ಬೆಳೆದವರಲ್ಲಿ ಅಜ್ಞಾನ ವಿದೆ.
ಅಜ್ಞಾನ ವೆಂದರೆ ತಿಳುವಳಿಕೆಯಿಲ್ಲ ಎಂದರ್ಥ ವಲ್ಲ.ಸತ್ಯ ಧರ್ಮದ ತಿಳುವಳಿಕೆಯಿಲ್ಲ ಎಂದಾಗುತ್ತದೆ.
ಸತ್ಯ ಧರ್ಮ ಜ್ಞಾನವಿಲ್ಲದ ಪುಸ್ತಕಗಳಿಂದ ಮಾನವನಿಗೆ ಜೀವನ್ ಮುಕ್ತಿ ಸಿಗಬಹುದೆ?
ಇದೊಂದು ಸಾಮಾನ್ಯ ರಿಗೆ ಅರ್ಥ ವಾಗುವ ಸತ್ಯವಾಗಿದೆ.ಸಾಮಾನ್ಯರ ಸಹಕಾರ ವಿಲ್ಲದೆ ಅಸಮಾನ್ಯರು ಬೆಳೆಯುವುದಿಲ್ಲ. ಇದರಲ್ಲಿ ದೇವರಾಗಬಹುದು ಅಸುರರೂ ಇರಬಹುದಷ್ಟೆ. ಮಧ್ಯವರ್ತಿ ಮಾನವನಿಗೆ ಮಾನವನೇ ಶತ್ರುವಾದರೆ ಅಧೋಗತಿ. ಎಳೆದಾಟ ಎರಡೂ ಕಡೆಗಿದೆ. ನಮ್ಮ ಹುಡುಕಾಟ ಒಳಗಿದ್ದರೆ ಶಾಂತಿಪಾಠ ಕಲಿಯಬಹುದು.
ಏನಂತೀರ?
ಮಾಡಿದ್ದುಣ್ಣೋ ಮಹಾರಾಯ ಎಂದಂತಾಗಿದೆ ಪ್ರಜೆಗಳ ಪರಿಸ್ಥಿತಿ.
ಭಗವತಿ
No comments:
Post a Comment