ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, April 27, 2025

ಕಾಲು ನಿಂತರೂ ಕಾಲಚಕ್ರ ನಿಲ್ಲದು

ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಒಮ್ಮೆ ಮೇಲಿದ್ದವರು ಇನ್ನೊಮ್ಮೆ ಕೆಳಗಿಳಿಯಲೇಬೇಕು. ಕೆಳಗಿಳಿಯಬಾರದೆಂದು ಕೆಳಗಿದ್ದವರನ್ನು ತುಳಿದಷ್ಟೂ ಪಾತಾಳಕ್ಕೆ ಬೀಳೋದನ್ನು ಯಾರೂ ತಡೆಯಲಾಗದು.ಕಾರಣ ಕಾಲವನ್ನು ತಡೆದವರು ಯಾರೂ ಇಲ್ಲ.ಇದೇ ಸತ್ಯ. ಹಣದಿಂದ ಮೇಲೇರಬೇಕೋ ಜ್ಞಾನದಿಂದಲೋ ಇದು  ಮಾನವನಿಗೆ ಬಿಟ್ಟ ವಿಚಾರವಷ್ಟೆ.

ಕೆಳಮಟ್ಟದ ಬ್ರಾಹ್ಮಣರನ್ನು ಮೇಲಕ್ಕೆ ತರಬೇಕಂತೆ ಕೆಳಮಟ್ಟದ  ಶೂದ್ರರನ್ನು ಮೇಲಕ್ಕೆ  ಎತ್ತಬೇಕಂತೆ.
ಇವೆರಡರ ನಡುವಿರುವವರು ಯಾರು? ಮಧ್ಯವರ್ತಿ ಗಳಷ್ಟೆ.
ಕ್ಷತ್ರಿಯರ ರಾಜಕೀಯ  ವೈಶ್ಯರ‌ವ್ಯವಹಾರ ಕೇವಲ ಅಧಿಕಾರ  ಹಣದಿಂದ   ನಡೆದಿದೆ.ಇದನ್ನು ಕೊಟ್ಟವರು ಬಡವರೆ ಎನ್ನುವ ಸತ್ಯವರಿತರೆ  ಯಾರು ಯಾರನ್ನು  ಮೇಲಕ್ಕೆ ತಂದರು ಎನ್ನುವುದು ಸ್ಪಷ್ಟವಾಗಿ  ಅರ್ಥ ವಾಗುತ್ತದೆ.

ಅದರಲ್ಲೂ ಇಂದಿನ ಪ್ರಜಾಪ್ರಭುತ್ವದಲ್ಲಿ  ಬಡವರನ್ನು  ಕೆಳಗೆ ತಳ್ಳುವ ಪ್ರಯತ್ನ ಮಧ್ಯವರ್ತಿಗಳು ನಿರಂತರವಾಗಿ ಮಾಡಿ ಸಾಲದ ಹೊಳೆ ಹರಿಸಿದ್ದಾರೆಂದರೆ ಶ್ರೀಮಂತ ರು ಯಾರು?
ಅಧ್ಯಾತ್ಮ ದ ಪ್ರಕಾರ ಮಾನವನ ಜ್ಞಾನಶಕ್ತಿಯೇ ಆಸ್ತಿ.
ಜ್ಞಾನದ ಮೂಲಕ ಸತ್ಕರ್ಮ ಸ್ವಧರ್ಮ ರಕ್ಷಣೆ ಮಾಡಿದಾಗಲೆ ಭೂಮಿಯ  ಸಾಲ ಅಥವ ಋಣ ತೀರೋದು. ಹಾಗಾಗಿ ಹಿಂದಿನ ಸಾದು, ಸಂತ ,ದಾಸ, ಶರಣರು  ಜ್ಞಾನದಿಂದ ಪರಮಾತ್ಮನ ಸೇವೆ ಮಾಡಿ ಜೀವಮ್ಮುಕ್ತರಾದರು.

ಈಗ ನಾವೆತ್ತ ಸಾಗಿದ್ದೇವೆ? ಸಾಕಷ್ಟು ಆಸ್ತಿ ಹಣ,ಅಧಿಕಾರ ಜನಬಲವಿದ್ದರೂ  ಪರಮಸತ್ಯ ಧರ್ಮವನರಿಯದೆ  ಹೊರಗೆ ದೇವರನ್ನು ಹುಡುಕುತ್ತಿದ್ದೇವೆ. ದೈವತ್ವದ ಶಿಕ್ಷಣ ನೀಡದೆ  ಬಡವರನ್ನು ಹಣದಿಂದ ಮೇಲೆತ್ತುವ  ರಾಜಕೀಯ ದಿಂದ ದೇಶದಲ್ಲಿ ಹಿಂದುಳಿದವರು ಬಡವರು  ಇನ್ನಷ್ಟು  ಬಡತನ ಬೆಳೆದಿದೆ. ನಿಜವಾದ ಸೇವಕರನ್ನು ಹೀನಾಯವಾಗಿ ಕಂಡು ಅವರನ್ನು ಮೇಲೆತ್ತುವ ಹೆಸರಿನಲ್ಲಿ  ನಾವೇ ತೋಡಿಕೊಂಡ ಹೊಂಡದಲ್ಲಿ ಬಿದ್ದರೆ ಅಜ್ಞಾನವಷ್ಟೆ.ಇಲ್ಲಿ ಅಜ್ಞಾನವೆಂದರೆ ತಿಳುವಳಿಕೆಯಿಲ್ಲ ಎಂದರ್ಥ ವಲ್ಲ.ಸತ್ಯದ ತಿಳುವಳಿಕೆಯಿಲ್ಲ ಎಂದರ್ಥ.

ಕಾಣದ ಸತ್ಯವೇ ದೇವರು. ಅದನ್ನು  ಆತ್ಮಾವಲೋಕನ ಆತ್ಮಸಾಕ್ಷಿಯ ಕಡೆಗೆ  ತಿಳಿದವರು ನಡೆದು ಕಂಡರು. ಈಗ ನಾವು ಯಾರೋ ಹೊರಗಿನವರು  ದೇವರನ್ನು ತೋರಿಸುತ್ತಾರೆಂದು  ಒಳಗಿದ್ದ ಸತ್ಯ ಧರ್ಮ ಬಿಟ್ಟು  ಹೊರಗೆ ಬಂದು ಹಣಪಡೆದರೆ ಶ್ರೀಮಂತ ವ್ಯಕ್ತಿ ಆದರೂ  ಜ್ಞಾನ ಸಿಗದೆ  ಹೋದರೆ ಬಡವನೆ ಎಂದು  ನಮ್ಮ ಗುರುಹಿರಿಯರು ಹಿಂದೆಯೇ ತಿಳಿಸಿರುವರು.

ಸತ್ಯ ಹಣವಿಲ್ಲದೆ ಜೀವನವಿಲ್ಲ. ಅಗತ್ಯಕ್ಕಿಂತ ಹೆಚ್ಚಿನ‌ಹಣ ಸಾಲವಾಗಿರುತ್ತದೆ. ಇದನ್ನು ದಾನಧರ್ಮಕ್ಕೆ  ಬಳಸಿಕೊಂಡು ಸಮಾಜದಲ್ಲಿ ಸಮಾನತೆಯನ್ನು ತರುವುದೇ ಮಾನವನ ಗುರಿ.ತುಂಬಿದಕೊಡ ತುಳುಕುವುದಿಲ್ಲ ಹಾಗೆ ಖಾಲಿ ಕೊಡ ಸದ್ದು ಮಾಡೋದಿಲ್ಲ.ಅರ್ಧ ತುಂಬಿದ ಕೊಡವೇ ಸದ್ದು ಮಾಡೋದು. 
ಮಧ್ಯವರ್ತಿ ಮಾನವನು ಮಹಿಳೆ ಮಕ್ಕಳು ಮಾಧ್ಯಮದ ಮೂಲಕ  ಮೇಲಿದ್ದವರನ್ನು ಇಳಿಸಿ ಕೆಳಗಿದ್ದವರನ್ನು ಅಟ್ಟಕ್ಕೆ ಏರಿಸಿದರೆ ಮೇಲಿದ್ದ ದೇವತೆಗಳು  ಕೆಳಗೇ ಬರಬೇಕು ಮೇಲಿನ ಲೋಕದಲ್ಲಿ ಅಸುರರು ಆಕ್ರಮಣ ಮಾಡಿದರೂ ಏನೂ ಮಾಡಲಾಗದು.
ಪುರಾಣಕಥೆಗಳಲ್ಲಿ ತಿಳಿಸಿದಂತೆ  ದೇವೇಂದ್ರನು  ಸ್ವರ್ಗ ಸುಖದಲ್ಲಿ ತೇಲುತ್ತಿರುವಾಗ ಅಸುರರು  ಯುದ್ದ ಮಾಡಿ ದೇವಲೋಕವನ್ನೇ ವಶಪಡಿಸಿಕೊಂಡರು. ನಂತರ ದೇವತೆಗಳೆಲ್ಲರೂ ಒಂದಾಗಿ ತ್ರಿಮೂರ್ತಿಗಳ ಮೊರೆಹೋದರು. ಭೂಲೋಕದ ರಕ್ಷಣೆಗಾಗಿ ಸ್ವಯಂ  ಭಗವಂತನೇ ಅವತಾರವೆತ್ತಿ ಧರೆಗಿಳಿದನು...ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
ಇಲ್ಲಿ ದೇವರು ಅಸುರರು ಯಾರು? ಎಲ್ಲವೂ ನಮ್ಮೊಳಗೇ ಅಡಗಿರುವ  ಶಕ್ತಿಯಾಗಿದೆ. ಯಾವುದು ಹೆಚ್ಚಾಗುವುದೋ ಅದೇ ನಮ್ಮನ್ನು ಆಳುವುದಷ್ಟೆ. ಮಾಯೆಯ ವಶದಲ್ಲಿರುವ ಜೀವಕ್ಕೆ  ಯಾವ ಅರಿವಿಲ್ಲದೆ ಎಲ್ಲಾ ನಾನೇ ಮಾಡುತ್ತಿರುವುದೆಂದು ತಿಳಿದು ನಡೆದಿದೆ ಮಾನವನ ಜೀವನ.
ಮಾಯೆ ಯಾರನ್ನು ಬಿಟ್ಟಿಲ್ಲ ಬಿಡೋದಿಲ್ಲ.ಎಲ್ಲಾ ಮಾಯೆ
ಎಲ್ಲಾ ಒಮ್ಮೆ ಮಾಯವಾಗೋರೆ.

No comments:

Post a Comment