ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Sunday, April 27, 2025

ಭಾರತದ ಸ್ಥಿತಿಗೆ ಕಾರಣವೇನು?

[ ಅಜ್ಞಾನಿಗಳೊಳಗೂ ಜ್ಞಾನಿಗಳಿದ್ದಾರೆ.ಹಾಗೆ ವಿದೇಶದೊಳಗೆ ದೇಶವಿದೆ.ಸ್ವಾತಂತ್ರ್ಯ ಕೇವಲ ಮೇಲ್ನೋಟಕ್ಕೆ ಭಾರತಕ್ಕೆ ಬಂದಿದೆ.ಇಲ್ಲಿನ ಶಿಕ್ಷಣ ನೀತಿ ರಾಜಕೀಯ ಸ್ಥಿತಿ ಧಾರ್ಮಿಕ ಪ್ರಗತಿ ಎಲ್ಲವೂ ಹೊರನೋಟಕ್ಕೆ ಸೀಮಿತವಾದಾಗ ಒಳಗೇ ಅಡಗಿರುವ  ಶತ್ರುಗಳು ನಾಟಕದಲ್ಲಿ ಮಿತ್ರರ ಪಾತ್ರ ವಹಿಸಿ ತಮ್ಮ ತಮ್ಮ ಸುಖ ಸ್ವಾರ್ಥ ಕ್ಕೆ ದೇಶವನ್ನು ಬಳಸೋದು ಸಹಜ. ನೆಲಜಲದ ಋಣ ತೀರಿಸುವ ಜ್ಞಾನದ ಶಿಕ್ಷಣ ಕೊಡದೆ ಆಳಿದವರೆ ಇದಕ್ಕೆ ಕಾರಣ. ಇದು ಎಲ್ಲಾ ಕ್ಷೇತ್ರದ ರಾಜಕೀಯವಾಗುತ್ತಿದೆ.
ಜೀವ ಇರೋದು ಒಳಗೆ ಇದನ್ನು ರಕ್ಷಣೆ ಮಾಡೋದು ಸರ್ಕಾರ ಎಂದರೆ ಅಜ್ಞಾನ. ಒಳಗೇ ಇದ್ದು ಜೀವದ ಜೊತೆಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಅವಕಾಶವಿದ್ದವರು  ಎಚ್ಚರವಾಗಬಹುದಷ್ಟೆ. 
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದೇ‌ನಿದ್ದೆ ಮಾಡುತ್ತಿದ್ದ ಮಧ್ಯರಾತ್ರಿಯಲ್ಲಿ ಎಂದಾಗ  ಮಧ್ಯವರ್ತಿಗಳು ಎಚ್ಚರವಿದ್ದರೂ  ನಿದ್ರೆ ಮಾಡೋರನ್ನು ಎಬ್ಬಿಸೋದಿಲ್ಲ. ಕಾರಣ  ಅಸುರರಿಗೆ ಕ್ರಾಂತಿಯಿದ್ದಷ್ಟೂ ಮನರಂಜನೆ ಹೆಚ್ಚು. 
ಹುಚ್ಚು ಹಿಡಿದ ಮನಸ್ಸಿಗೆ ತಲೆಗೆ ಬುದ್ದಿಯಾಗಲಿ ಜ್ಞಾನವಾಗಲಿ ತುಂಬಲಾಗದು.

ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು.ಬಂದವರಂತೆ ನಾಟಕಮಾಡುತ್ತಿರುವವರನ್ನು ಎಚ್ಚರಿಸಲಾಗದು.

No comments:

Post a Comment