ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Sunday, April 27, 2025

ವಿಶ್ವಕೋಶ ದಿಂದ ವಿಶ್ವನಾಥನ ದರ್ಶನ ಸಾಧ್ಯವೆ?

ಇಂದು ವಿಶ್ವ ಪುಸ್ತಕ ದಿನವನ್ನು ಆಚರಿಸುತ್ತಾರೆ. ಪುಸ್ತಕ ಜ್ಞಾನವನ್ನು ಹೆಚ್ಚಿಸುತ್ತದೆ. ಆದರೆ ಇಂದು ಪುಸ್ತಕಗಳಿವೆ ಮಾನವನ ಜ್ಞಾನ‌ಕುಸಿಯುತ್ತಿದೆ. ಕಾರಣವಿಷ್ಟೆ ವಿಶ್ವಕ್ಕೆ ಸಂಬಂಧ ಪಟ್ಟ  ವಿಷಯವನ್ನು ಮೊದಲು ತಿಳಿದು  ಅದರಲ್ಲೇ ಹೆಸರು ಹಣ ಅಧಿಕಾರ ಪಡೆದು ಜನರೊಳಗಿದ್ದ ಸಾಮಾನ್ಯ ಜ್ಞಾನ ಹಿಂದುಳಿಯುತ್ತಿದೆ. ಎಷ್ಟು ಪುಸ್ತಕ ಓದಿದ್ದೇವೆ ಎನ್ನುವ ಬದಲು ಯಾವ ಪುಸ್ತಕ ಓದಿ  ಯಾರ ಜ್ಞಾನವನ್ನು ಪಡೆದೆವು ಎನ್ನುವ ಪ್ರಶ್ನೆ ಮಾಡಿಕೊಂಡರೆ ನಮ್ಮದೇನೂ ಇಲ್ಲಿ ಜ್ಞಾನವಿರದು. ಪುಸ್ತಕದ ವಿಚಾರ ಹೊರಗಿನವರದ್ದು. ಅವರ ಅನುಭವ ಜ್ಞಾನವಾಗಿತ್ತು. ಅದರಲ್ಲಿ ಭೌತವಿಜ್ಞಾನ ಅಧ್ಯಾತ್ಮ ವಿಜ್ಞಾನವೆರಡೂ  ಇದ್ದರೂನಮ್ಮ ಕಣ್ಣಿಗೆ ಕಾಣುವ ಭೌತವಿಜ್ಞಾನ. ತಲೆಗೇರಿತು. ತಲೆಗೇರಿದ ವಿಚಾರವನ್ನು ಹೊರ ಹಾಕುವ ಶಿಕ್ಷಣ ಬೆಳೆಯಿತು. ಹೀಗಾಗಿ ಮಕ್ಕಳ ಪುಸ್ತಕಗಳು ಭೌತವಿಜ್ಞಾನದೆಡೆಗೆ‌ ನಡೆದಂತೆಲ್ಲಾ ಹಿತದೃಷ್ಟಿಯಿಂದ ಸತ್ಯ ಅಳೆದು ಒಳದೃಷ್ಟಿ ಹಿಂದುಳಿಯಿತು. 
ಅಧ್ಯಾತ್ಮ ವಿಜ್ಞಾನ ಹಿಂದುಳಿಯಲು ಕಾರಣವೇ ಅದರೊಳಗೆ ಹೊಕ್ಕಿ ಸತ್ಯ ತಿಳಿಯದೆ ಯಾರೋ ತಿಳಿಸದ್ದಷ್ಟೆ ಸತ್ಯ ಎಂದು ಸಾಮಾನ್ಯರು  ಸಾಮಾನ್ಯಜ್ಞಾನವನ್ನು  ಅರ್ಥ ಮಾಡಿಕೊಳ್ಳದೆ ವಿಶೇಷವಾಗಿ  ಹೊರನಡೆದಿರೋದಾಗಿದೆ.
ಕಲಿಯುಗದ ಕಲಿಕೆ ಪುಸ್ತಕದೊಳಗಿದೆ.ಪುಸ್ತಕದ ವಿಷಯದಲ್ಲಿ ಸತ್ಯ ಸತ್ವ ತತ್ವ ಇತ್ತೆ ಇಲ್ಲವೆ ಎನ್ನುವ ಬಗ್ಗೆ ಚರ್ಚೆ ಮಾಡದೆ  ಸತ್ಯವನ್ನು ಅಸತ್ಯವೆಂದರು.ಅಸತ್ಯವನ್ನು ಸತ್ಯವೆಂದು ನಂಬಿ ನಡೆದರು. ಸತ್ಯವಿರುವ ಕಡೆ  ದೇವರಿರುವರು.ಅಸತ್ಯ ಇರುವ ಕಡೆ ಅಸುರರಿರುವರು.ಇವರಿಬ್ಬರ ನಡುವೆ ಮಾನವನಿರೋದು. ಮಾನವ ಮಧ್ಯವರ್ತಿ ಯಾಗಿ ಪುಸ್ತಕದ ವಿಷಯವನ್ನು ಮಸ್ತಕಕ್ಕೆ ತುಂಬಿಕೊಂಡು  ಹೊರಗೆ ಹೊರಟರೆ ಒಳಗಿಳಿದು ಸತ್ಯ ತಿಳಿಯುವವರಿಲ್ಲದೆ ಅಸತ್ಯ ತನ್ನ ಸ್ಥಾನ ಭದ್ರಪಡಿಸಿಕೊಂಡು ಆಳುತ್ತದೆ.
ಗ್ರಂಥಾಲಯಗಳು  ಸಮಯಕಳೆಯಲು  ಬಳಸುವ ಸ್ಥಳವಲ್ಲ.
ಆದರೆ ಗ್ರಂಥಗಳು  ಇಂದು  ಹಿಂದುಳಿದು ಗ್ರಂಥಾಲಯಗಳಲ್ಲಿ ಹೆಚ್ಚಿನ ಪುಸ್ತಕಗಳು ಕಥೆ ಕಾದಂಬರಿ,ಹಾಸ್ಯನಾಟಕ,ಕವನ ಕವಿತೆಗಳಿಗೆ ಹೆಸರುವಾಸಿಯಾಗಿರೋದು ದುರಂತ.
ಇವುಗಳಿಂದ ಮಾನವನ ಬುದ್ದಿಶಕ್ತಿ ಬೆಳೆದರೂ ಜ್ಞಾನಕ್ಕೆ ಆಳವಾಗಿರುವ ಸತ್ಯ ತಿಳಿಸುವ ಗ್ರಂಥಗಳ ಅಗತ್ಯವಿದೆ.
ಸಾಮಾನ್ಯವಾಗಿ ಹಿಂದಿನ ಗ್ರಂಥಗಳು ತಾಳೆಗರಿಯಲ್ಲಿ ಸಂಸ್ಕೃತ ಭಾಷೆಗಳಲ್ಲಿದ್ದ ಕಾರಣ ಕೆಲವೇ ಕೆಲವು ಜ್ಞಾನಿಗಳು ಅದರೊಳಗೆ ಇದ್ದ ತಿರುಳಿನವರೆಗೆ ಸಂಶೋಧನೆ ನಡೆಸಿ  ಭಾಷಾಂತರ ಮಾಡಿದ್ದರು. ಯಾವಾಗ ಭಾಷೆಗಳ ನಡುವೆ ಪದಗಳಿಗೆ ಸೂಕ್ತ ಅರ್ಥ ಸಿಗಲಿಲ್ಲವೋ  ಆಗ ಬೇರೆ ಬೇರೆ ಭಾಷೆಗಳಲ್ಲಿ ಒಂದೇ ಗ್ರಂಥದ ವಿಚಾರಗಳು‌ಬದಲಾಗುತ್ತಾ ಮುಖ್ಯವಾಗಿರುವ ರಾಮಾಯಣ ಮಹಾಭಾರತ ಭಗವದ್ಗೀತೆ ಇಂದು ಹಲವು ರೂಪ ಪಡೆದಿವೆ.
ಇಷ್ಟಕ್ಕೂ ರಾಮಾಯಣದಲ್ಲಿ ತಿಳಿಯಬೇಕಾಗಿದ್ದ ಧರ್ಮ ಸೂಕ್ಮತೆ ಜನರಿಗೆ ಅರ್ಥ ವಾಗಿದೆಯೆ? ಹಾಗೆ ಮಹಾಭಾರತದೊಳಗಿರುವ ಅಸಂಖ್ಯಾತ ಪಾತ್ರಧಾರಿಗಳ ಧರ್ಮ ಪ್ರಜ್ಞೆ  ಅರ್ಥ ವಾಗಿದೆಯೆ? 
ಮೇಲಿನ ಪಾತ್ರಧಾರಿಗಳಾದರೂ  ರಾಜಮಹಾರಾಜರಾಗಿದ್ದು ಕ್ಷತ್ರಿಯ ಧರ್ಮದನುಸಾರ ಯುದ್ದಕ್ಕೆ ನಿಂತರು. ಸಾಮಾನ್ಯ ಜನರು  ರಾಜನೇ ದೇವರೆಂದರಿತು ಸೈನಿಕರಾಗಿ ಯುದ್ದಕ್ಕೆ ಸಹಕರಿಸಿದರು. ಹೀಗೇ ಅವರವರ ಪಾತ್ರದಲ್ಲಿ ಎಲ್ಲರೂ ಜ್ಞಾನಿಗಳೇ ಆಗಿದ್ದರೆಂದರೆ ಅಂದಿನ ಶಿಕ್ಷಣವಾಗಲಿ  ಜನರಲ್ಲಿದ್ದ ಧರ್ಮ ವಾಗಲಿ  ಪುಸ್ತಕದಿಂದ ಸಿಕ್ಕಿತ್ತೆ?
 
ಈಗ  ಅನಕ್ಷರಸ್ಥ ರಲ್ಲಿರುವ  ಸತ್ಯ ಧರ್ಮ ದ ಜ್ಞಾನ ಅಕ್ಷರಸ್ಥ ರಲ್ಲಿಲ್ಲ.ಕಾರಣ ಅಕ್ಷರದ ವಿಷಯದಲ್ಲಿ ಸತ್ಯ ಧರ್ಮಕ್ಕೆ ಸ್ಥಾನವಿಲ್ಲ.ಕೇವಲ ರಾಜಕೀಯ ದ್ವೇಷ ಸೇಡು ಸ್ವಾರ್ಥ ಅಹಂಕಾರ ಬೆರೆತ  ವಿಚಾರಗಳ ಜೊತೆಗೆ ಹೊರಗಿನ ವಿಜ್ಞಾನ ಮಿತಿಮೀರಿದೆ.
ವಿಜ್ಞಾನ ಅಗತ್ಯವಿದೆ ಅದರ ಮೂಲ ಜ್ಞಾನವಾಗಿದೆ. ಸತ್ಯಜ್ಞಾನದ ನಂತರದ ವಿಜ್ಞಾನ  ಮಾನವನಾಗಲು ಸಹಕಾರಿಯಾಗಿದೆ. ಮಾಮವೀಯ ಮೌಲ್ಯವನರಿಯುವ. ಸಾಮಾನ್ಯಜ್ಞಾನದ ಪುಸ್ತಕ ಇಂದಿಗೂ  ಮಕ್ಕಳಿಗೆ ಇದ್ದರೂ ಅದೊಂದು  ಅಂಕವಿಲ್ಲದ ಗ್ರೇಡ್ ವಿಷಯವಾಗಿ ಶಿಕ್ಷಕರೂ ಸರಿಯಾಗಿ ತಿಳಿಸದೆ ಪೋಷಕರೂ  ಅದರಲ್ಲಿರುವ  ನೀತಿಯನ್ನು ಜ್ಞಾನವನ್ನು  ಮಕ್ಕಳಿಗೆ  ತಿಳಿಸದೆ ಕೇವಲ ಅಂಕಗಳಿಸುವತ್ತ ಉಳಿದ ವಿಷಯಗಳನ್ನು ಒತ್ತಾಯವಾಗಿ ತಲೆಗೆ ತುಂಬುವ ಕೆಲಸವಾಗುತ್ತಿದೆ.
ಒಟ್ಟಿನಲ್ಲಿ ಹೊರಗಿನ ವಿಷಯಕ್ಕೆ ಅಂಕವಿದೆ ಬೆಲೆಯಿದೆ ಪ್ರೋತ್ಸಾಹ ಸಹಕಾರ  ಎಲ್ಲಾ ಇದೆ.ಒಳಗೇ ಅಡಗಿದ್ದ ಮುಖ್ಯ ವಿಚಾರಗಳ ಜ್ಞಾನಕ್ಕೆ ‌ ಬೆಲೆಯೂ ಇಲ್ಲ ಸಹಕಾರವೂ ಇಲ್ಲ.
 ವಿಶ್ವೇಶ್ವರನನ್ನು ತಿಳಿಯದೆ ವಿಶ್ವ ತಿಳಿಯಬಹುದೆ?
ಬ್ರಹ್ಮಾಂಡದ ರಹಸ್ಯವನ್ನು ಹೊರಗಿನ‌ಕಣ್ಣಿನಿಂದ ಕಾಣಬಹುದೆ? 
ಹೀಗೇ ನಾವು ಭಾರತೀಯರೆನ್ನಿಸಿಕೊಳ್ಳಲು  ಹೊರಗಿನ ದೇಶಕ್ಕೆ  ಹೋದರೆ  ಭಾರತೀಯರಾಗಬಹುದೆ? ಇವೆಲ್ಲವೂ ಸಾಮಾನ್ಯಜ್ಞಾನದ ಪುಸ್ತಕದಿಂದ ತಿಳಿಯದೆ ಅರ್ಥ ಮಾಡಿಕೊಳ್ಳಲು  ಸಾಧ್ಯವಾಗುವ ಸಾಮಾನ್ಯ ಜ್ಞಾನ.ಇದು ಪ್ರತಿಯೊಬ್ಬರೊಳಗೂ ಇದ್ದರೂ ಪ್ರತಿಯೊಬ್ಬರೂ ಗಮನಿಸದೆ ಮುಂದೆ ಮುಂದೆ ನಡೆದು ಕೋಶ ಓದು ದೇಶ ಸುತ್ತು ಎಂದರೆ  ಸತ್ಯದ ಅರಿವಾಗದು.
ಇರುವ ಅಲ್ಪ ಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಸಾಮಾನ್ಯರ ಜೊತೆಗೆ ಸಾಮಾನ್ಯರಂತೆ ಬದುಕುವುದಕ್ಕೆ ಪುಸ್ತಕದ ಜ್ಞಾನ ಪೂರಕವಾಗಿರಬೇಕು.
ಇಂದು ಓದಿದವರಲ್ಲಿ ಅಹಂಕಾರ ಸ್ವಾರ್ಥ ಹೆಚ್ಚಾಗುತ್ತಿದೆ.
ಓದಿದ ವಿಷಯದಿಂದ ಧರ್ಮ ವಾಗಲಿ ಸತ್ಯವಾಗಲಿ ಉಳಿಯದೆ ಅಧರ್ಮ ಅಸತ್ಯ ಅನ್ಯಾಯ ಬೆಳೆದರೂ ಕೇಳೋ ಹಾಗಿಲ್ಲ. ತಲೆಗೆ ತುಂಬಿರುವ ವಿಷಯವನ್ನು  ಹೇಗೆ ಬಳಸಿದರೆ ಜೀವನ  ಉತ್ತಮವಾಗಿರುತ್ತದೆನ್ನುವ ಜ್ಞಾನವಿಲ್ಲದವರಿಗೆ  ಹಣವೇ  ಸರ್ವಸ್ವ. ಹೀಗಾಗಿ ತತ್ವ ಬಿಟ್ಟು ತಂತ್ರ ಬೆಳೆದು ಯಂತ್ರಮಾನವನಾಗಿ ಯಾಂತ್ರಿಕ ಜಗತ್ತಿನಲ್ಲಿ ಪುಸ್ತಕವೂ ಇಂದು ಯಂತ್ರದೊಳಗೇ ಸಿಲುಕಿದೆ.
ನೆಟ್ ಮೂಲಕ ಏನು ಬೇಕಾದರೂ  ತಿಳಿಯಬಹುದು.ಆದರೆ ಅದರಲ್ಲಿ ಸತ್ಯ ಧರ್ಮ  ನೆಟ್ಟಗಿದೆಯೋ ಸೊಟ್ಟಗಾಗಿದೆಯೋ ಯಾರು  ತಿಳಿಯದ ಪರಿಸ್ಥಿತಿ ಮನಸ್ಥಿತಿ ಇದ್ದಾಗ  ಪುಸ್ತಕ ಎಷ್ಟರ ಮಟ್ಟಿಗೆ  ಮಾನವನ ಜ್ಞಾನ ಬೆಳೆಸಬಹುದಿತ್ತು.ಈಗ ಬೆಳೆಸಿದೆ ಎನ್ನುವ ಪ್ರಶ್ನೆ ಏಳುತ್ತದೆ.
ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ  ಕ್ಷೇತ್ರಗಳಲ್ಲಿ  ಅಧರ್ಮ ಹೆಚ್ಚಾಗಿದೆ ಅಸತ್ಯ ಬೆಳೆಯುತ್ತಿದೆ ಎಂದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಪುಸ್ತಕದ ವಿಷಯದಲ್ಲಿ ಸತ್ಯಧರ್ಮ ದಾರಿತಪ್ಪಿಸಿದೆ ಎಂದರ್ಥ. ಈಗ ಪೋಷಕರೆ  ಸತ್ಯ ತಿಳಿಯಲು ವಿರೋಧಿಸುವಾಗ ಮಕ್ಕಳ  ಗತಿ?
ಎಲ್ಲಾ ವಿಷಯವನ್ನು  ತಲೆಗೆತುಂಬಬಹುದು. ಆದರೆ  ಮಕ್ಕಳ  ಜ್ಞಾನಕ್ಕೆ ವಿರುದ್ದವಿದ್ದರೆ  ಕಸದ ತೊಟ್ಟಿಯಾಗುತ್ತದೆ.

ದೈವಶಕ್ತಿಯನ್ನು ಬೆಳೆಸುವ ಪುಸ್ತಕಗಳನ್ನು ಬಿಟ್ಟು ಹೊರಗೆ ಎಷ್ಟು  ಓದಿ ತಿಳಿದರೂ  ವ್ಯರ್ಥ. ಅಧ್ಯಾತ್ಮ ಶಿಕ್ಷಣದ ನಂತರವೇ ಭೌತವಿಜ್ಞಾನ ಬೆಳೆದಿರೋದು. ಹಾಗಾಗಿ ಮೊದಲು ಆಂತರಿಕ ಶಕ್ತಿ ಜಾಗೃತಗೊಳಿಸಿಕೊಂಡರೆ  ಭೌತಿಕದ ವಿಷಯ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವೆನ್ನಬಹುದು.
ಕಲಿಗಾಲ ಕಲಿಕೆಯ ಕಾಲವಾಗಿದೆ.ಇದು ಹೊರಮುಖವಾದಷ್ಟೂ ಕಾಲಕೆಡುತ್ತದೆ.
ಒಳಗೇ ಅಡಗಿರುವ ದೈವಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪುಸ್ತಕ ದ ವಿಷಯ ಅಗತ್ಯವಿದೆ. ಆ ವಿಷಯವೇ ಇಲ್ಲದಿದ್ದರೆ ಮಸ್ತಕ ಏನಾಗಬಹುದು? 
ಅರ್ಥ ವಾದವರು  ನಿಮ್ಮವರಿಗೆ ಹಂಚಿಕೊಳ್ಳಬಹುದು.
ಅರ್ಥ ವಾಗದವರು ವಿರೋಧಿಸಿದರೂ ಕಷ್ಟ ನಷ್ಟ ತಪ್ಪಿದ್ದಲ್ಲ.
ಮಕ್ಕಳ ಸುಜ್ಞಾನ  ಬೆಳೆಸುವ ಪುಸ್ತಕವಿರಲಿ.

No comments:

Post a Comment