ಪ್ರಜಾಪ್ರಭುತ್ವದ ಸಮಾನತೆ ಆಧ್ಯಾತ್ಮವಾಗಬೇಕಿತ್ತು

ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಬಡವರಿಗೆ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ...

Sunday, April 27, 2025

ಪುರಾಣ ಭವಿಷ್ಯದ ನಡುವಿರುವ ವಾಸ್ತವತೆ

🌼 *ಸ್ಪೂರ್ತಿ ಕಿರಣ* 🌼
*"ನಿನ್ನೆ" ಏಕಿದೆಯೆಂದರೆ ನೆನಪುಗಳು ಜೀವಂತವಾಗಿರುವುದಕ್ಕೆ.* 
*"ನಾಳೆ"  ಏಕಿದೆಯೆಂದರೆ ಭರವಸೆಗಳು  ಜೀವಂತವಾಗಿರುವುದಕ್ಕೆ.ಚುಚ್ಚುವುದು ಸೂಜಿಯ ಗುಣ. ಆದರೆ, ದಾರದ ಜೊತೆ ಗೆಳೆತನ ಮಾಡಿದ ಮೇಲೆ, ಸೂಜಿಯು ಬದಲಾಗಿ ಎಲ್ಲವನ್ನೂ ಜೋಡಿಸಲು ಮುಂದಾಗುತ್ತದೆ*.*ಅದಕ್ಕೆ ಹೇಳೋದು “ಒಳ್ಳೆಯವರ ಜೊತೆ ಇದ್ದರೆ ಒಳ್ಳೆಯದೇ ಆಗುತ್ತೆ ಅಂತ”* 

ಜೀವವಿರುವುದನ್ನು ನೆನಪಿನಲ್ಲಿ  ಹೆಚ್ಚಾಗಿರದು. ಜೀವವಿಲ್ಲದ್ದು  ಹೆಚ್ಚಾಗಿ ನೆನಪಿನಲ್ಲಿಟ್ಟುಕೊಳ್ಳಲು ಜನರು ನಿನ್ನೆಯ ಸತ್ಯ ಗೊತ್ತಿಲ್ಲ ನಾಳೆಯ ಸತ್ಯದ ಅರಿವಿಲ್ಲದೆ  ಅತಿಯಾದ ಭವಿಷ್ಯದ ಚಿಂತನೆಯಲ್ಲಿ  ಇಂದಿನ ದಿನ‌ಮರೆತಷ್ಟೂ  ಸಮಸ್ಯೆ ಬೆಳೆಯುತ್ತದೆ. ಜನನ  ಮರಣಗಳ ನಡುವಿರುವ ಜೀವನದ ರಹಸ್ಯ ತಿಳಿಯಲು  ಎಲ್ಲರೊಳಗೊಂದಾಗಿರಬೇಕೆಂದರು. ನಾನೇ ಬೇರೆ ನೀನೇ ಬೇರೆ ಎಂದಾಗಲೇ ಮಧ್ಯವರ್ತಿ  ತನ್ನ ಸ್ಥಾನ ಪಡೆದು ಆಳೋದು. ಸೂಜಿಯ ತುದಿಭಾಗದ ಕಿಂಡಿಯೊಳಗೆ ದಾರ  ಹೋಗದಿದ್ದರೆ ಸೂಜಿಗೆ  ಕೆಲಸವಿಲ್ಲ. ಚುಚ್ಚಿಕೊಂಡು  ಮುಂದೆ  ಮುಂದೆ ಒಬ್ಬೊಬ್ಬರೆ ಒಳಗೆ ಹೋದಾಗ  ಒಗ್ಗಟ್ಟಿದ್ದರೆ  ನೆಮ್ಮದಿ ಹಾಗಾಗಿ ದಾರದಿಂದ ಹೊರಗೆ ಬರದಂತೆ ಕೊನೆಯಲ್ಲಿ ಗಂಟಾಕಿ ಇಡೋದು. ಯಾವಾಗ ಗಂಟಿಲ್ಲದ ದಾರದೊಳಗೆ  ಹೋಗುವುದೋ   ನುಣಿಚಿಕೊಂಡು ಹೊರಗೆ ಬರುತ್ತದೆ. ಇದು ಸಂಬಂಧ ವನ್ನು ಒಡೆಯುವುದೋ ಕಟ್ಟುವುದೋ  ಅದರ ಗುಣದ ಮೇಲೇ ನಿಂತಿದೆ.ಹಾಗೆ ಮಾನವನ ಸತ್ಯದ ಸೂಜಿಯಂತಹ  ಮಾತನ್ನು ಕೇಳಿಸಿಕೊಂಡು ಯಾರು ಒಳಗಿಳಿದು  ಒಗ್ಗಟ್ಟಿನಿಂದ ಬಾಳುವರೋ  ಅವರ ಬಾಳು ಬೆಳಕಾಗಿರುತ್ತದೆ. ಹೋಗದೆ ಹೊರಗೆ ಉಳಿದರೆ ಸತ್ಯವರ್ಥ ವಾಗದು.
ಇನ್ನು ಒಳಗೆ ಸೇರಿಕೊಂಡು  ಒಗ್ಗಟ್ಟಿನಿಂದ ಹೊರಬಂದರೆ  ಮತ್ತೆ ಸೇರಿಕೊಳ್ಳುವುದಕ್ಕೆ  ಸೂಜಿ ಅಗತ್ಯವಿದೆ.

ಹಿಂದಿನ ಕಾಲದ ಶಿಕ್ಷಣವು  ಸೂಜಿಯ ಸೂಕ್ಮವಾಗಿರುವ ರಂದ್ರದೊಳಗಿನಿಂದ  ಒಳ ನಡೆದು  ಬೆರೆತು ಕಲಿಯುವುದಾಗಿತ್ತು. ಅದಕ್ಕೆ ಕೊನೆಯಲ್ಲಿ  ಗಂಟು ಹಾಕಿ ಗುರುಆಧೇಶವಿಲ್ಲದೆ ಹೊರಗೆ ಹೋಗದಂತೆ ಶಿಷ್ಯನ  ಶಿಕ್ಷಣಾಭ್ಯಾಸವಿತ್ತು. ಸಂಪೂರ್ಣ  ಕಲಿತ ಮೇಲೇ ಹೊರಗೆ ಬಿಡುಗಡೆ.  ನಂತರದ ಜೀವನದಲ್ಲಿ ಒಳಗಿನ ಒಗ್ಗಟ್ಟಿನ ಶಕ್ತಿ ಹೊರಗೂ  ಬೆಳೆದಿತ್ತು.
ಆದರೆ ಇಂದು ಶಿಕ್ಷಣದ ದಾರಿ ತಪ್ಪಿದೆ. 
ಹೊರಗೆಲ್ಲಾ ತಿರುಗಿ ತಿಳಿದವರೆ ಶಿಕ್ಷಕರು. ಒಳಗಿನ ವಿಷಯ ತಿಳಿಯದೆ ಒಳಗಿಳಿಯಲಾಗದು. ಹೀಗಾಗಿ ನಿಜವಾದ ಸತ್ಯ  ಹೊರಬರದೆ  ಹೊರಗಿನ ಸತ್ಯದಲ್ಲಿಯೇ  ಮಕ್ಕಳನ್ನು ಹೊಡೆದು ಬಡಿದಾದರೂ ಪಾಠ ಕಲಿಸಿ ಅದರಿಂದ ಬಿಡುಗಡೆ ಸಿಕ್ಕ ನಂತರ  ಮಕ್ಕಳೇ ಶಿಕ್ಷಕರಿಗೆ ಪೋಷಕರಿಗೆ ಪಾಠ ಕಲಿಸುವ ಬುದ್ದಿ ಹೆಚ್ಚಾಗಿದೆ. ದೊಡ್ಡವರಾದ ಮೇಲೆ ಕಲಿಸುವ ಪಾಠ ಸಣ್ಣವರಿರುವಾಗ ಕಲಿಸಲೇಬೇಕಾದ ಪಾಠಕ್ಕೂ ಅಂತರ ಹೆಚ್ಚಾಗಿ  ಆ ಅಂತರದಲ್ಲಿ ಮಧ್ಯವರ್ತಿಗಳು ಕಾಟ ಸಹಿಸಿಕೊಂಡು  ಬಾಳೋದೆ  ಕಷ್ಟ. ಯಾವಾಗ ಯಾರು ಬದಲಾಗುವರೆನ್ನಲಾಗದು.ಹೀಗಿರುವಾಗ  ಚುಚ್ಚು ಮಾತುಗಳ ಹಿಂದೆ ಸತ್ಯವಿದೆಯೋ ಅಸತ್ಯವಿದೆಯೋ? ರಾಜಯೋಗವಿದೆಯೋ ರಾಜಕೀಯವೋ ಈ ಬಗ್ಗೆ ಜ್ಞಾನವಿದ್ದರೆ  ಚುಚ್ಚಿ ದರೆ ‌ನೋವಾದರೂ ಮೇಲಿರುವ  ದೈವ ಮೆಚ್ಚುವನೆನ್ನುವ  ನಂಬಿಕೆಯಲ್ಲಿ ಒಳಗೆ ಸೇರಬಹುದು.

No comments:

Post a Comment