ಕೊಟ್ಟಷ್ಟೂ ಅಕ್ಷಯವಾಗೋದು ಜ್ಞಾನ ಒಂದೇ. ಅದರಲ್ಲಿ ಎರಡಿದೆ ಸುಜ್ಞಾನ ಅಜ್ಞಾನ. ಇಲ್ಲಿ ಅಜ್ಞಾನ ಹರಡಿದಷ್ಟೂ ಬೆಳೆದರೆ ಮಾನವನ ಜೀವಗುಣಕ್ಷೀಣವಾಗಿಯೇ ಹೋಗುತ್ತದೆ. ಸುಜ್ಞಾನ ಹೆಚ್ಚಾದಂತೆ ಲೋಕಕಲ್ಯಾಣವಾಗುತ್ತದೆ.ಯಾವುದನ್ನು ಪಡೆದರೆ ಆತ್ಮಕ್ಕೆ ತೃಪ್ತಿ ಶಾಂತಿಮುಕ್ಯಿ ಸಿಗುವುದೆನ್ನುವುದನ್ನು ನಮ್ಮ ಮಹಾತ್ಮರು ತಿಳಿಸಿ ನಡೆದು ಹೋಗಿದ್ದಾರೆ. ಆದರೆ ಇಂದು ಅತೃಪ್ತ ಆತ್ಮಗಳೇ ಹೆಚ್ಚಾಗಿರಲು ಕಾರಣವೇ ಅಜ್ಞಾನದ ವಿಷಯವಾಗಿದೆ.
ಭೂಮಿ ತಿರುಗುತ್ತಲೇ ಇರುತ್ತದೆ. ಅದರ ಮೇಲಿರುವಮನುಕುಲವೂ ತಿರುಗುತ್ತಲೇ ಇರೋದು. ಯಾವ ಕಡೆ ತಿರುಗಿದರೆ ಒಳ್ಳೆಯದೆನ್ನುವ ಜ್ಞಾನ ಮಾತ್ರ ನ ಮಾನವನೊಳಗಿದೆ.ಇತರ ಪ್ರಾಣಿಪಕ್ಷಿ ಜೀವ ಜಂತುಗಳಿಗೆ ಇದರ ಅಗತ್ಯವಿಲ್ಲ ಕಾರಣ ಇವು ಪ್ರಕೃತಿಗೆ ಹೊಂದಿಕೊಂಡು ಬಾಳುತ್ತವೆ.
ಹೊಂದಾಣಿಕೆಯೇನಿಜವಾದ ಜೀವನವಾಗಿತ್ತು.ಈಗಿದುಮಾನವನಿಗಿಲ್ಲದೆ ದೊಡ್ಡ ದೊಡ್ಡ ದಾನ ಮಾಡಿದರೂ ತೃಪ್ತಿ ಸಿಗುತ್ತಿಲ್ಲವೆಂದರೆ ದಾನ ಯಾರಿಗೆ ಯಾವಾಗ ಎಷ್ಟು ಯಾಕೆ ಮಾಡಬೇಕೆನ್ನುವ ಸುಜ್ಞಾನದ ಕೊರತೆಯಿದೆ.
ಯುದ್ದ ಮಾಡೋದಕ್ಕೆ ಹಣ ಬೇಕು. ಶಾಂತಿ ನೆಲೆಸಬೇಕೆಂದರೆ ಹಣವನ್ನು ಸದ್ಬಳಕೆ ಮಾಡಿಕೊಂಡು ಹೊಂದಿಕೊಂಡು ಬಾಳಬೇಕು.
ಯಾವುದನ್ನು ಬೆಳೆಸಿದರೆ ಉತ್ತಮ ಜೀವನವಾಗುವುದೆನ್ನುವುದೆಂದು ಹೊರಗಿನವರಿಂದ ತಿಳಿಯೋ ಮೊದಲು ನಮ್ಮವರಿಂದ ತಿಳಿದು ನಡೆದಾಗಲೇ ಸಮಾಧಾನಕರ ಜೀವನ.
ಆದರೆ ನಮ್ಮವರು ಯಾರು? ಪರರು ಯಾರು?
ಯಾರಲ್ಲಿ ಹಣ ಅಧಿಕಾರ ಸ್ಥಾನಮಾನ ಹೆಸರು ಹೆಚ್ಚಾಗಿದೆಯೋ ಅವರು ನಮ್ಮವರು ಎಂದುಕೊಂಡರೆ ಅಜ್ಞಾನ. ಪ್ರಜಾಪ್ರಭುತ್ವದಲ್ಲಿ ಯಾರ ಹಣ ಯಾರಿಗೆ ಸೇರುತ್ತಿದೆ.ಯಾರು ಯಾರನ್ನು ಆಳುತ್ತಿರುವುದು ಯಾರ ಶಿಕ್ಷಣ ಯಾರು ಓದಿ ಮುಂದೆ ನಡೆದರು...ಹೀಗೇ ತಿಳಿಯುತ್ತಾ ಹೋದರೆ ನಮ್ಮವರೆ ಇಲ್ಲಿಲ್ಲ. ಎಲ್ಲಾ ಪರಕೀಯರ ವಶದಲ್ಲಿ ಇರುವವರೆ. ಯಾರಾದರೂ ಒಬ್ಬರಾದರು ನಾನು ಸ್ವತಂತ್ರ ಎನ್ನುವವರಿದ್ದರೆ ರ ತಿಳಿಸಿ.
ಒಟ್ಟಿನಲ್ಲಿ ಭೂಮಿಯನ್ನು ಆಳೋದಕ್ಕೆ ಸ್ವತಂತ್ರ ಜ್ಞಾನ ಅಗತ್ಯವಿದೆ. ಭೂ ಋಣ ತೀರಿಸಲು ನಿಸ್ವಾರ್ಥ ಸೇವಕರಿಂದ ಸಾಧ್ಯವಿದೆ. ಜೀವನ್ ಮುಕ್ತಿ ಪಡೆಯಲು ಜೀವಾತ್ಮನಿಗೆ ಪರಮಾತ್ಮನ ಸತ್ಯದ ಅಗತ್ಯವಿದೆ.
ಪರಮಾತ್ಮನಲ್ಲಿ ಮಿಥ್ಯವೂ ಇದ್ದರೂ ಅದರಿಂದ ಋಣ ತೀರದು ಎನ್ನುವ ಸತ್ಯ ಮಾತ್ರ ಒಂದೇ.
ಹೀಗಾಗಿ ಅಕ್ಷಯವಾಗದ್ದು ಜ್ಞಾನ ಮಾತ್ರ. ಅದರಿಂದ ಸಂಪಾದಿಸಿದ ಹಣವನ್ನು ದಾನ ಧರ್ಮ ಕ್ಕೆ ಬಳಸಿದರೆ ಮಾನವನಿಗೆ ಶಾಂತಿ. ಶಾಂತಿಯಿಂದ ತಿಳಿಯಬೇಕಾದ ವಿಷಯವನ್ನು ಕ್ರಾಂತಿಯಿಂದ ಅರ್ಥ ಮಾಡಿಸಲಾಗದು.
ಜೀವ ಹೋದರೆ ಮತ್ತೆ ಬರಬಹುದು.ಜ್ಞಾನ ಕಳೆದರೆ ಪಡೆಯೋದು ಕಷ್ಟವಿದೆ.
ಹಾಗಾಗಿ ಅಕ್ಷಯ ತೃತೀಯ ದಂದು ಜ್ಞಾನಿಗಳಾದವರು ಜ್ಞಾನಕ್ಕೆ ಸಂಭಂಧಿಸಿದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವರು.ಪ್ರತಿದಿನವೂ ಕಾರ್ಯಕ್ರಮ ಇದ್ದರೂ ಈ ದಿನ ವಿಶೇಷವಾಗಿ ಫಲ ಸಿಗುವುದರಿಂದ ವಿದ್ಯೆ ಕಲಿಯುವುದಾಗಲಿ ಹೇಳಿಕೊಡುವುದಾಗಲಿ ದಾನ ಮಾಡೋದಾಗಲಿ ಹಾಗೆ ಪುಣ್ಯಕಾರ್ಯದಲ್ಲಿ ತೊಡಗುವುದಾಗಲಿ ಮಾಡಿದರೆ ಮಾನವನೊಳಗೂ ಹೊರಗೂ ದೈವೀಕ ಶಕ್ತಿ ಜಾಗೃತವಾಗುತ್ತದೆನ್ನುವುದು ಸತ್ಯ.
ಇಂದಿನ ದಿನವೃ ಶುಭದಿನವೂ ಎಂದಂತೆ ಇಂದುಬಸವಜಯಂತಿಯ ಆಚರಣೆಯೂ ಇದೆ. ಬಸವಣ್ಣನವರು ರಾಜಕೀಯ ಬಿಟ್ಟು ಮಹಾತ್ಮರಾಗಿರುವವರು. ಆದರೆ ಅವರನ್ನು ರಾಜಕಾರಣಿಗಳು ತಿಳಿದಿರೋದೆ ಬೇರೆ.ಸಂಘಟನೆಯೊಳಗೇ ರಾಜಕೀಯ ವಿದ್ದರೆ ಅವರ ತತ್ವಕ್ಕೆ ಬೆಲೆಯಿರದು.ಧರ್ಮ ಕ್ಕೆ ನೆಲೆಯಿರದು.
ಕಲಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರಹಳಿಯಲು ಬೇಡ ಇದೇ ಅಂತರಂಗಶುದ್ದಿ ಬಹಿರಂಗ ಶುದ್ದಿ ಎಂದರು. ಇದನ್ನು ಎಷ್ಟು ಮಂದಿ ಅರ್ಥ ಮಾಡಿಕೊಂಡಿರುವರು ? ಹಣಕ್ಕಾಗಿ ಸತ್ಯಧರ್ಮ ಬಿಟ್ಡರೆ ಅಜ್ಞಾನ ವಷ್ಟೆ. ಹೀಗಾಗಿ ನಾವೆಲ್ಲರೂ ಯಾವ ದಿಕ್ಕಿನಲ್ಲಿ ಧರ್ಮ ಉಳಿಸಬೇಕು? ಈ ಪ್ರಶ್ನೆಗೆ ಉತ್ತರ ಒಳಗಿನ ಅಂತರಂಗ ಶುದ್ದಿಯಿಂದ ಸಿಗಬಹುದು.ಇದನ್ನು ಮಹಾತ್ಮರೆ ಅನುಭವದಿಂದ ತಿಳಿಸಿರುವಾಗ ಅನುಭವಿಸದೆ ತಾನೇ ಮಹಾತ್ಮನೆಂದರೆ ಸತ್ಯವಲ್ಲ.
ಜನಮರುಳೋ ಜಾತ್ರೆಯೋ ಎಂದಂತೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಯಾಗಿ ಜನರು ತಮ್ಮ ಹಣವನ್ನು ದುರ್ಭಳಕೆ ಮಾಡಿಕೊಂಡು ಆಳೋರಿಗೆ ಸಹಕಾರ ಕೊಟ್ಟು ಮತದಾನ ಮಾಡಿದರೆ ಅಕ್ಷಯವಾಗೋದು ಅಸುರಸಂತಾನವಲ್ಲವೆ?
ಸಾಮಾನ್ಯ ಜ್ಞಾನವಿಲ್ಲದೆ ವಿಜ್ಞಾನ ತಿಳಿದಷ್ಟೂ ಅಜ್ಞಾನವೇ.
No comments:
Post a Comment