ದೇಶದಲ್ಲಿ ಸಾಕಷ್ಟು ಶ್ರೀಮಂತ ರಿದ್ದಾರೆ ಜ್ಞಾನಿಗಳಿದ್ದಾರೆ ಆಸ್ತಿ ಅಂತಸ್ತು ಹಣ ಅಧಿಕಾರವೆಲ್ಲವೂ ಇದ್ದರೂ ಮಾನವನಿಗೆ ತೃಪ್ತಿ ಯಿಲ್ಲದೆ ಭ್ರಷ್ಟಾಚಾರ ಬೆಳೆದಿದೆ.ಕಾರಣ ಹಣದ ಮೂಲವೇ ಅಸತ್ಯ ಅನ್ಯಾಯ ಅಧರ್ಮವಾಗಿದ್ದು ಅಸುರಿಶಕ್ತಿ ಒಳಗೇ ಬೆಳೆದಿದೆ. ಅಸುರಿಶಕ್ತಿಗೆ ಯಾವತ್ತೂ ತೃಪ್ತಿ ಇರದು.
ಯಾರನ್ನಾದರೂ ಮುಗಿಸಿಯೇ ತನ್ನ ಸುಖ ಸಂತೋಷಕಾಣುವ ಮನಸ್ಸಿನಲ್ಲಿ ಹೊರಗಿನ ಸಂಪತ್ತನ್ನು ಕೂಡಿಹಾಕಿಕೊಂಡು ಜನರನ್ನು ಹಿಂದೆ ತಳ್ಳುವುದೇ ಉದ್ದೇಶ.
ನಾನು ಬೆಳೆಯಬೇಕು ಎನ್ನುವುದು ಅಜ್ಞಾನ. ಆತ್ಮರಕ್ಷಣೆಗಾಗಿ ನಾನು ಬೆಳೆದಾಗಲೇ ಜ್ಞಾನೋದಯ.
ಒಳಗಿರುವ ಸುಜ್ಞಾನ ಹೊರಗಿನ ವಿಜ್ಞಾನ ವನ್ನು ಸದ್ಬಳಕೆ ಮಾಡಿಕೊಳ್ಳಲು ಹಣವನ್ನು ಸದ್ಬಳಕೆ ಮಾಡಿಕೊಂಡು ಜೀವನ ನಡೆಸುವುದಕ್ಕಾಗಿ ನಮ್ಮ ಗುರುಹಿರಿಯರು ಧಾರ್ಮಿಕ ಕಾರ್ಯಕ್ರಮಗಳಿಗೆ ಒತ್ತು ಕೊಟ್ಟರು. ಇಂದು ಧಾರ್ಮಿಕ ಕಾರ್ಯಕ್ರಮ ಹೊರಗೆ ವೈಭೋಗದಲ್ಲಿ ನಡೆದಿದೆ. ಮನೆಯೊಳಗೆ ವೈಚಾರಿಕತೆಯ ಬಗ್ಗೆ ಅರಿವುಮೂಡಿಸುವ ಗುರುಹಿರಿಯರ ಕೊರತೆಯಿದೆ. ವೈಚಾರಿಕತೆಯ ಹೆಸರಿನಲ್ಲಿ ಅಪಾರ್ಥ ಮಾಡಿಕೊಂಡು ಹಣವನ್ನು ಭ್ರಷ್ಟಾಚಾರ ದಿಂದ ಗಳಿಸಿದರೂ ಕೇಳೋರಿಲ್ಲವಾದರೆ ಹಣವುಳ್ಳವರೆ ಶ್ರೀಮಂತ ಜ್ಞಾನಿ ಎನಿಸಿಕೊಂಡು ಹೊರಗೆ ತಳುಕುಬಳುಕು ಒಳಗೇ ಹುಳುಕು.
ಹಿಂದಿನ ಕಾಲದಲ್ಲಿದ್ದಂತೆ ಹೆಚ್ಚಿನ ಮಕ್ಕಳೂ ಇಲ್ಲ.ಇರುವ ಒಂದು ಎರಡು ಮಕ್ಕಳಿಗೆ ಜ್ಞಾನದ ಶಿಕ್ಷಣವೂ ಇಲ್ಲ. ಆಸ್ತಿ ಮಾತ್ರ ಹಿರಿಯರಿಂದ ಉಚಿತವಾಗಿ ಬಂದಿದೆ.ಅದನ್ನು ಸದ್ಬಳಕೆ ಮಾಡಿಕೊಳ್ಳಲು ಜ್ಞಾನದ ಕೊರತೆಯಿದೆ. ಇದನ್ನು ಕೊಡದೆ ಹೊರಗೆ ರಾಜಕೀಯ ನಡೆಸುವವರ ಹಿಂದೆ ಹಿಂದೂಗಳು ಹೊರಟರೆ ಒಳಗಿದ್ದ ಜ್ಞಾನ ಬೆಳೆಯದು.
ಹೀಗೇ ಕೂಡಿಟ್ಟ ಹಣ ಕಳೆಯಬಹುದಷ್ಟೆ. ದಾನ ದಾನವರಿಗೆ ಮಾಡಬಾರದೆನ್ನುವುದು ಸತ್ಯ.ದಾನವರು ಬೆಳೆಯಲು ಮಾನವರೆ ಕಾರಣ. ಎಲ್ಲಿಯವರೆಗೆ ಮಾನವನಮನಸ್ಸು ಹೊರಗಿನ ಸಂಪತ್ತಿನಲ್ಲಿಯೇ ಕುಳಿತಿರುವುದೋ ಅಲ್ಲಿಯವರೆಗೆ ಒಳಗಿನ ಜ್ಞಾನದ ಸಂಪತ್ತಿನ ಅರಿವಾಗದು.
ಸಂಪತ್ತು ಹೆಚ್ಚಾದಷ್ಟೂ ಆಪತ್ತು ಕಟ್ಟಿಟ್ಟ ಬುತ್ತಿ.
ಜ್ಞಾನಸಂಪತ್ತನ್ನು ಕದಿಯಲಾಗದು. ಆದರೆ ಇದನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಆಪತ್ತು ಖಚಿತ.
ಧರ್ಮ ಯಾವುದು ಸತ್ಯ ಯಾವುದು ಎನ್ನುವ ಬಗ್ಗೆ ವಾದ ಮಾಡುತ್ತಾ ವಿವಾದ ಸೃಷ್ಟಿ ಮಾಡಿ ಕೊನೆಯಲ್ಲಿ ದಾನವರ ವಶವಾದರೂ ಗೊತ್ತಾಗೋದಿಲ್ಲ. ಭ್ರಷ್ಟಾಚಾರ ವನ್ನು ಭ್ರಷ್ಟರೆ ತಡೆಯಲಾಗದು.
ಧರ್ಮ ವನ್ನು ರಾಜಕೀಯದಿಂದ ರಕ್ಷಣೆ ಮಾಡಬಹುದೆ?
ಸತ್ಯವನ್ನು ಅಸತ್ಯದಿಂದ ತಿಳಿಯಬಹುದೆ? ಯಾವುದು ನಮ್ಮನ್ನು ನಡೆಸಿದೆಯೋ ಅದೇ ನಾವಾಗಿರುವುದಾಗಿದೆ.
ಮುಳ್ಳನ್ನು ಮುಳ್ಳಿನಿಂದಲೇ ಕೀಳಬೇಕು. ಇದು ಭಗವಂತನ ಕೆಲಸ. ದುಷ್ಟರನ್ನು ಶಿಷ್ಟರು ಸರಿಪಡಿಸಲು ದುಷ್ಟರಾಗಬೇಕು.
ಆದರೆ ದುಷ್ಟರ ಸಂಖ್ಯೆ ಬೆಳೆಯುತ್ತದೆ.
ಅದರ ಬದಲು ಶಿಷ್ಟಚಾರದ ಶಿಕ್ಷಣವನ್ನು ಎಲ್ಲರಿಗೂ ಕೊಡುವ ಬಗ್ಗೆ ಚಿಂತನೆ ನಡೆಸಿ ಒಗ್ಗಟ್ಟಿನಿಂದ ಮುಂದೆ ನಡೆದರೆ ಉತ್ತಮವಲ್ಲವೆ?
ಶಿಕ್ಷಣ ದಾರಿತಪ್ಪಿದ್ದರೆ ಸರಿಪಡಿಸಲು ಮೊದಲು ನಾವು ಶಿಕ್ಷಿತರಾಗಬೇಕು. ಈಗಿದು ಶಿಕ್ಷೆ ನೀಡುವ ಹಂತಕ್ಕೆ ತಲುಪಿದೆ.
ಅಪರಾಧಗಳು ಮುಗಿಲುಮುಟ್ಟಿದೆ. ಜೈಲು ಸಾಲದಾಗಿದೆ. ಪೋಲಿಸ್ ಆದವರೆ ಕಳ್ಳರಿಗೆ ಶರಣಾಗುವ ಕಾಲ ಬಂದಿದೆ ಎಂದರೆ ದೇಶವನ್ನು ಭ್ರಷ್ಟ ದುಷ್ಟರಿಗೆ ಬಿಟ್ಟು ನಮಗೂ ದೇಶಕ್ಕೂ ಸಂಬಂಧ ವಿಲ್ಲವೆಂದು ಅನೇಕ ಶ್ರೀಮಂತ ರು ಹಣ ಆಸ್ತಿ ಅಂತಸ್ತು ಮಾಡೋದರಲ್ಲಿಯೇ ಕಾಲಕಳೆದರೆ ಬಡತನ ಯಾವುದು? ನಿಜವಾಗಿಯೂ ಬಡವ ಯಾರು?
ಮತದಾನವೇ ದಾನವರಿಗಾದರೆ ದಾನವರೆ ಬೆಳೆಯೋದು.
ಹಾಗೆಯೇ ದಾನ ನೀಡುವವರೆ ಭ್ರಷ್ಟ ರಾಗಿದ್ದರೆ ಭ್ರಷ್ಟರಿಗೆ ಆಶೀರ್ವಾದ ಮಾಡಿದಂತಾಯಿತು. ನಾವು ಮಾಡುವ ಎಲ್ಲಾ ಧಾರ್ಮಿಕ ಆಚಾರ ವಿಚಾರ ಪ್ರಚಾರದಿಂದ ಹಣ ಗಳಿಸಬಹುದು.ಅದರಂತೆ ಜ್ಞಾನ ಎಷ್ಟು ಜನರಿಗೆ ಲಭಿಸಿದೆ?
ಓದಿ ತಿಳಿಯೋದೇ ಬೇರೆ ಮಾಡಿ ಕಲಿಯೋದೆ ಬೇರೆ. ನಡೆದು ನುಡಿಯೋದೇ ಬೇರೆ.ನುಡಿದು ನಡೆಯೋದೇ ಬೇರೆ.
ಸಾಹಿತ್ಯದಲ್ಲಿ ಸತ್ಯವೇ ಇಲ್ಲದಿದ್ದರೆ ಸಮಾಜ ಉದ್ದಾರವಾಗದು. ಹಾಗೆ ಇಂದಿನ ಶಿಕ್ಷಣದಲ್ಲಿ ಸತ್ಯಕ್ಕೆ ಸ್ಥಳವಿಲ್ಲ ಧರ್ಮ ವೂ ಬೆಳೆದಿಲ್ಲ.ಇದಕ್ಕೆ ಪೋಷಕರು ಮಕ್ಕಳ ಮೇಲೆ ಸಾಲ ಮಾಡಿ ಕಲಿಸೋದು ತಪ್ಪೋದಿಲ್ಲ. ಸಾಲದ ಹೊರೆ ಹೆಚ್ಚಾದಷ್ಟೂ ಮನಸ್ಸಿಗೆ ನೆಮ್ಮದಿ ತೃಪ್ತಿ ಶಾಂತಿ ಸಿಗೋದಿಲ್ಲ.
ವಾಸಮಾಡಲು ಒಂದು ಸೂರಿದ್ದರೆ ಸಾಕು.ಹಲವಾರು ಮನೆ ಕಟ್ಟಿ ಸಾಲ ಮಾಡಿಕೊಂಡು ತೀರಿಸುವುದರಲ್ಲಿಯೇ ಜೀವನದ ಕಥೆ ಮುಗಿದರೆ ಏನರ್ಥ?
ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಮಕ್ಕಳೇ ಬೇಡ ಎಂದು ಮುಂದೆ ಹೋಗಿ ವಿದೇಶದವರೆಗೆ ಹೋದರೂ ಪೋಷಕರು ಅವರಿಗಾಗಿ ಮಾಡಿರುವ ಆಸ್ತಿಯನ್ನು ದಾನ ಮಾಡೋದಿಲ್ಲ. ಇದರರ್ಥ ಅಜ್ಞಾನ ಬೆಳೆದಿದೆ. ಮಕ್ಕಳನ್ನು ಯೋಗ್ಯ ಪ್ರಜೆಯಾಗಿಸುವತ್ತ ಪ್ರಜಾಪ್ರಭುತ್ವದ ಪ್ರಜೆಗಳು ಚಿಂತನೆ ಮಾಡದಿರೋದು ದುರಂತ ವಾಗಿದೆ.
ಇದಕ್ಕೆ ಇರುವ ಒಂದೇ ಉಪಾಯ ಉತ್ತಮ ಶಿಕ್ಷಣ ಕೊಡುವುದು. ಹಣವನ್ನು ಸದ್ಬಳಕೆ ಮಾಡಿಕೊಂಡು ದಾನಧರ್ಮ ಕಾರ್ಯ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸೋದು. ಪರಮಸತ್ಯ ಒಳಗೇ ಇರೋವಾಗ ಒಳಗೆ ಶುದ್ದಿಯಾದರೆ ಹೊರಗಿನ ಸತ್ಯದ ಅರಿವಾಗಬಹುದು. ಒಟ್ಟಿನಲ್ಲಿ ವ್ಯಕ್ತಿಯ ಹಿಂದೆ ನಡೆಯೋದಕ್ಕೆ ಕಾರಣವೇ ಅವನ ಹೆಸರು,ಹಣ,ಅಧಿಕಾರ. ಇದು ವ್ಯಕ್ತಿ ಹೋದನಂತರ ಮತ್ತೊಬ್ಬರ ಆಸ್ತಿ. ಆದರೆ ಹಿಂದೆ ನಡೆದವರಿಗೆ ಏನು ಸಿಕ್ಕಿತು? ಇದರ ಬದಲು ಉತ್ತಮ ಜ್ಞಾನದ ಕಡೆಗೆ ನಡೆದರೆ ಒಳಗಿರುವ ಜ್ಞಾನ ಇನ್ನಷ್ಟು ಬೆಳೆದು ಹಣದ ಹಿಂದಿನ ಋಣ ತೀರಿಸಲು ಸಹಾಯಕವಾಗುತ್ತದೆ.
ಅದಕ್ಕೆ ಹಿಂದಿನ ಮಹಾತ್ಮರು ಎಲ್ಲಾ ಆಸ್ತಿ ಸಮಾಜಕ್ಕೆ ಹಿತವಾಗುವಂತೆ ಬಳಸುತ್ತಾ ಸ್ವತಂತ್ರ ಜೀವನ ನಡೆಸಿ ಮುಕ್ತಿ ಪಡೆದರು.
ಆ ಪರಮಾತ್ಮನ ಕಾಣೋದಕ್ಕೆ ಹೊರಗಿನ ಆಸ್ತಿಯಿಂದ ಸಾಧ್ಯವೆ?
ಆಸ್ತಿ ಇರಬೇಕು ಇತಿಮಿತಿ ಬೇಕು. ಮಕ್ಕಳು ಮೊಮ್ಮಕ್ಕಳವರೆಗೆ ಮಾಡಿರುವ ಆಸ್ತಿ ಅಸುರರ ಪಾಲಾಗುವುದು ನಿಶ್ಚಿತ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬೆಳೆಸಿದರೆ ಅವರೆ ಮುಂದೆ ದೇಶದ ಆಸ್ತಿಯಾಗಬಹುದು.ಇಲ್ಲವಾದರೆ ದೇಶದ್ರೋಹಿಗಳು,ದೇಶ ಬಿಟ್ಟು ಹೊರಹೋಗುವವರೆ ಹೆಚ್ಚಾಗುವರು. ಈಗಿನ ಭಾರತವೇ ಇದಕ್ಕೆ ಸಾಕ್ಷಿಯಾಗಿದೆ. ಒಂದು ಸಣ್ಣ ಜೀವ ಕಾಪಾಡಿಕೊಳ್ಳಲು ಹೊರಗಿನ ಆಸ್ತಿ ಎಷ್ಟು ಮುಖ್ಯ? ಜೀವ ಶಾಶ್ವತವೆ? ಜೀವಆಸ್ತಿ ಹೊತ್ತು ಹೋಗುವುದೆ ? ಕೇವಲ ಋಣ ಹೊತ್ತು ಹೋಗುತ್ತದೆ. ಋಣ ತೀರಿಸಲು ಜನ್ಮ ಪಡೆಯುತ್ತಲೇ ಇರುತ್ತದೆ. ಜೀವನ ಚಕ್ರದ ಸುಳಿಯಲ್ಲಿ ಆಸ್ತಿ ಹರಿದಾಡುತ್ತಲೇ ಇರುತ್ತದೆ.
ಸಮಾನತೆ ಜ್ಞಾನದಲ್ಲಿತ್ತು.ಅಸಮಾನತೆಯು ಅಜ್ಞಾನದಿಂದ ಬೆಳೆದಿದೆ.
ಇದಕ್ಕೆ ಕಾರಣ ಶಿಕ್ಷಣದ ವಿಷಯವಾಗಿದೆ. ಭೂಮಿಯನ್ನರಿಯದೆ ಮಕ್ಕಳಿಗೆ ಆಕಾಶ ತೋರಿಸಿ ನಡೆಸಿದರೆ ಎಡವಿಬೀಳೋದು ಸತ್ಯ.ಬಿದ್ದರೂಮೀಸೆ ಮಣ್ಣಾಗಿಲ್ಲವೆಂದರೆ ಅಜ್ಞಾನ ವಷ್ಟೆ. ಅಜ್ಞಾನಕ್ಕೆ ತಕ್ಕಂತೆ ಜೀವನ.
ಹಿಂದೂಗಳ ಸಂಖ್ಯೆ ಇಳಿಮುಖವಾಗಿಲ್ಲ ಹೊರಮುಖವಾಗಿದೆಯಷ್ಟೆ. ಇದಕ್ಕೆ ಕಾರಣವೇ ಹೊರಗಿನವರ ಜ್ಞಾನದ ಶಿಕ್ಷಣ,ಭಾಷೆ,ವ್ಯವಹಾರ,ಬಂಡವಾಳ ಜೊತೆಗೆ ಸಾಲ. ಸಾಲ ತೀರಿಸಲು ಸತ್ಕರ್ಮ ಸ್ವಧರ್ಮ ದೆಡೆಗೆ ನಡೆದಾಗಲೇ ಸುಜ್ಞಾನದಿಂದ ತೃಪ್ತಿ ಮುಕ್ತಿ ಸಿಗುವುದು. ಎಷ್ಟು ಹೊರಗೆ ಆಸ್ತಿ ಸಾಲ ಮಾಡಿದರೂಮನಸ್ಸು ಒಳಗಿರದು ಹೊರಗೇ ಅಲೆದಾಡಿದಷ್ಟೂ ಸುಸ್ತು. ಇದಕ್ಕೆ ಯಾವ ಪುರಾಣ ಇತಿಹಾಸ ಕಥೆ ಓದುವ ಅಗತ್ಯವಿಲ್ಲ. ಸಾಮಾನ್ಯ ಜ್ಞಾನವಿದ್ದರೆ ಸಾಕು.
No comments:
Post a Comment