ಎಲ್ಲಾ ಸಮಸ್ಯೆಗಳ ಮೂಲವೇ ಆ ಋಣ. ಇದರಲ್ಲಿ ಮೂಲ ಶಕ್ತಿಯ ಜೊತೆಗೆ ಹೊರಗಿನ ಶಕ್ತಿಗಳೂ ಸೇರಿಕೊಂಡಾಗ ಬಿಡುಗಡೆ ಕಷ್ಟವಿದೆ. ಮೂಲದ ಋಣವನ್ನು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ಸೇವೆಯಿಂದ ಮಾತ್ರ ತೀರಿಸಬಹುದೆನ್ನುವುದು ಸನಾತನಧರ್ಮ.
ಸೇವೆ ಈಗ ಎತ್ತ ಸಾಗಿದೆ? ಪ್ರಜಾಸೇವೆ,ರಾಷ್ಟ್ರ ಸೇವೆ,ತಾಯಿ ಸೇವೆ,ಭೂ ಸೇವೆ,ದೇವರ ಸೇವೆ,ಪರಮಾತ್ಮನ ಸೇವೆಗೆ ಹಣವೇ ಮೂಲವಾಗುತ್ತಿದೆ. ಆ ಹಣದ ಮೂಲ ಭ್ರಷ್ಟಾಚಾರ ಆಗಿದ್ದರೆ ಸೇವೆಯ ಫಲವೂ ಭ್ರಷ್ಟರಿಗೇ ಸೇರುತ್ತದೆ.
ಸತ್ಯವಿಲ್ಲದ ಧರ್ಮ ಧರ್ಮ ವಿಲ್ಲದ ಸತ್ಯದಿಂದ ಯಾವ ಋಣ ತೀರೋದಿಲ್ಲ.
ಯಾವಾಗ ಸನಾತನಧರ್ಮ ಬಿಟ್ಟು ಅನ್ಯಧರ್ಮದವರ ಋಣದಲ್ಲಿ ಜೀವನ ನಡೆಯುವುದೋ ಅನ್ಯರ ವಶದಲ್ಲಿ ಜೀವ ಸಿಲುಕುತ್ತದೆ.
ಯಾಕೆ ಹಿಂದೂಗಳ ಸಂಖ್ಯೆ ಅನ್ಯರ ಸಂಖ್ಯೆಗಿಂತ ಕಡಿಮೆಯಾಗುತ್ತಿದೆ ಎಂದರೆ ಹಿಂದೂ ಆಗಿ ಜನಿಸಿ ಅನ್ಯರ ಪಕ್ಷ ವಹಿಸಿ ರಾಜಕೀಯದೆಡೆಗೆ ಹೊರಗೆ ನಡೆದವರೆ ಹೆಚ್ಚು. ಅವರ ಋಣ ತೀರಿಸಲು ಅವರ ಧರ್ಮದೊಳಗೇ ಜನ್ಮ ಪಡೆಯಬೇಕಲ್ಲವೆ?
ಮಕ್ಕಳು ಬೇಡ ಮದುವೆ ಬೇಡ ಸಂಸಾರ ಬೇಡ ರಾಜಕೀಯ ಬೇಕು. ಎಲ್ಲಿದೆ ಧರ್ಮ?
ದೇವರನ್ನು ತೋರಿಸುವುದು ಹೊರಗೆ ದೈವತ್ವ ಬೆಳೆಸುವುದು ಒಳಗೆ. ಒಳಗಿರುವ ದೈವತ್ವ ಬೆಳೆಸದೆ ಹೊರಗೆ ದೇವರನ್ನು ಬೆಳೆಸಿದರೆ ಋಣ ತೀರುವುದೆ?
ಸಾಮಾನ್ಯ ಜ್ಞಾನ ಎಲ್ಲರ ಸಂಪತ್ತು. ಇದಕ್ಕೆ ಆಪತ್ತು ಬಂದಿದೆ ಎಂದರೆ ನಮ್ಮ ಋಣಭಾರ ಹೆಚ್ಚಾಗುತ್ತಾ ಹೊರಗಿನ ವಿಜ್ಞಾನ ಬೆಳೆದಿದೆ ಎಂದರ್ಥ.
ಹೊರಗಿನ ವಿಜ್ಞಾನ ಹಣ ಕೊಡುತ್ತದೆ. ಒಳಗಿನ ವಿಜ್ಞಾನ ಋಣ ತೀರಿಸುವತ್ತ ನಡೆಸುತ್ತದೆ.
ಭೌತವಿಜ್ಞಾನ ಒಂದು ಚೌಕಟ್ಟಿನಲ್ಲಿದ್ದರೆ ಅಧ್ಯಾತ್ಮ ವಿಜ್ಞಾನಕ್ಕೆ ಅಂತ್ಯವಿಲ್ಲ.ಎಲ್ಲೆಡೆಯೂ ಹರಡಿರುವ ಇದನ್ನು ಒಳಗಿನಿಂದ ಸಂಶೋಧನೆ ಮಾಡಿಕೊಳ್ಳುವುದೇ ಅಧ್ಯಾತ್ಮ ಸಾಧನೆ.
ಈಗಿದು ಹೊರಗಿನ ಸಂಶೋಧನೆಗಳತ್ತ ನಡೆಯುತ್ತಾ ಮೂಲ ಬಿಟ್ಟು ರೆಂಬೆ ಕೊಂಬೆಗಳನ್ನು ಬೆಳೆಸಿ ತಾನೇ ಬೇರೆ ನೀನೇ ಬೇರೆ ಅವನೇ ಬೇರೆ ಅವಳೇ ಬೇರೆ ಎಂದರೆಬೇರು ಕಾಣುವುದೆ?
ಕೆಲವು ಸತ್ಯ ಅರ್ಥ ವಾದರೂ ಅನುಭವಕ್ಕೆ ಬರೋದಿಲ್ಲ.ಮನಸ್ಸು ಅನುಭವಿಸದೆ ಒಪ್ಪೋದಿಲ್ಲ.ಅಲ್ಲಿಯವರೆಗೆ ಋಣ ಭಾರ ಏರುತ್ತಲೇ ಇರುತ್ತದೆ. ಹೆಚ್ಚು ಋಣ ಹೆಚ್ಚು ಹಣಸಂಪಾದನೆಗೆ ಪ್ರೇರಣೆ ಆಗುತ್ತದೆ. ಆದರೆ ಸತ್ಯಜ್ಞಾನವಿಲ್ಲದ ಹಣದಿಂದ ಋಣ ಕಳೆಯದು. ಹೀಗಾಗಿ ನಮ್ಮ ಹಿಂದಿನ ಮಹಾರಾಜರುಗಳೂ ಕೊನೆಯಲ್ಲಿ ಎಲ್ಲಾ ಹೊರಗಿನ ಸಂಪತ್ತನ್ನು ಬಿಟ್ಟು ವಾನಪ್ರಸ್ಥಾಶ್ರಮ ಸೇರಿ ಅಧ್ಯಾತ್ಮ ದಿಂದ ಮುಕ್ತಿಮಾರ್ಗ ಹಿಡಿದರು.
ಈಗ ಸಂನ್ಯಾಸಿಗಳಾದರೂ ಅಧ್ಯಾತ್ಮ ಬಿಟ್ಟು ರಾಜಕೀಯ ಕ್ಕೆ ಹೆಚ್ಚಿನ ಸಹಕಾರ ಕೊಡುತ್ತಿರುವುದನ್ನು ನೋಡಿದರೆ ಪರಮಾತ್ಮ ರಾಜಕೀಯದಲ್ಲಿಯೇ ಇರಬಹುದು.
ಇದೊಂದು ಲಯದ ಸಮಯ ಹಾಗಾಗಿ ಅಧರ್ಮಕ್ಕೆ ತಕ್ಕಂತೆ ಫಲವಿದೆ.
ಅದ್ವೈತ ದೊಳಗಿರುವ ದ್ವೈತ ಬೇರೆಯಲ್ಲ. ಎರಡೂ ಒಂದೇ ನಾಣ್ಯದ ಎರಡು ಮುಖವಾಗಿದೆ. ವ್ಯವಹಾರಕ್ಕೆ ಇಳಿದರೆ ಹಣಸಿಗಬಹುದು. ಧರ್ಮದ ಪ್ರಕಾರ ನಡೆದರೆ ಜ್ಞಾನೋದಯವಾಗುತ್ತದೆ. ಒಳಗಿನ ಜ್ಞಾನವೂ ಒಂದು ರೀತಿಯ ಋಣವೇ ಆದಾಗ ಅದನ್ನು ಸದ್ಬಳಕೆ ಮಾಡಿಕೊಂಡರೆ ಋಣ ತೀರಿದಂತೆ. ಹೀಗಾಗಿ ಜ್ಞಾನವನ್ನು ದಾನ ಮಾಡುವ ಶಿಕ್ಷಣ ಕೊಡುವುದರ ಮೂಲಕ ಋಷಿಮುನಿಗಳು ಲೋಕಕಲ್ಯಾಣಕ್ಕಾಗಿ ಪರಮಾತ್ಮನ ಸೇವೆ ಮಾಡಿದ್ದರು. ಯಾವಾಗ ನಮ್ಮೊಳಗೇ ಋಷಿಮುನಿಗಳ ಒಂದು ಸಣ್ಣ ಶಕ್ತಿಯನ್ನು ಅರಿಯದೆ ಮಾನವರು ಮುಂದೆ ನಡೆದರೋ ಆಗಲೇ ಖುಷಿ ಮಾಯವಾಗಿ ಋಣ ಹೆಚ್ಚಾಗಿದೆ.
ಒಟ್ಟಿನಲ್ಲಿ ಯಾರ ಋಣ ಯಾರ ಮೇಲಿದೆಯೋ ಯಾರಿಗೂ ತಿಳಿಯದು.ಕೊನೆಪಕ್ಷ ನಮ್ಮ ಸಂಸಾರದೊಳಗಿರುವ ಸದಸ್ಯರ ಋಣವಂತೂ ಇರುತ್ತದೆ. ಅದರೊಂದಿಗೆ ಸಮಾಜದ ಋಣ, ಗುರುಹಿರಿಯರ ಋಣ, ದೇಶದ ಋಣ, ನೆಲಜಲದ ಋಣ, ಅನ್ನದ ಋಣ.....ಹೀಗೇ ಪಟ್ಟಿ ಬೆಳೆದಂತೆಲ್ಲಾ ಎಷ್ಟು ಸಾಲ ಮಾಡಿದರೂ ಅದೂ ಋಣವೇ ಆದಾಗ ಅದರಿಂದ ಹೊರಬರುವ ಜ್ಞಾನವನ್ನು ಬೆಳೆಸಿಕೊಂಡು ಇದ್ದಲ್ಲಿಯೇ ಋಣ ತೀರಿಸುವ ಸತ್ಕರ್ಮ ಸ್ವಧರ್ಮ ಸತ್ಯ ನ್ಯಾಯದ ಕರ್ಮಕ್ಕೆ ಅಂಟಿಕೊಂಡರೆ ಸಮಾಧಾನ ಶಾಂತಿ ತೃಪ್ತಿ .ಇದೆಷ್ಟು ಜನ್ಮದ ನಂತರ ಅರಿವಿಗೆ ಬರುವುದೋ ? ಒಟ್ಟಿನಲ್ಲಿ ಇಂದಿನ ಬ್ರಾಹ್ಮಣ ಮುಂದಿನ ಶೂದ್ರನಾಗಬಹುದು,ಇಂದಿನ ಶೂದ್ರ ಮುಂದಿನ ಬ್ರಾಹ್ಮಣನಾಗಬಹುದು. ಹಾಗೆ ಬಡವ ಶ್ರೀಮಂತ.
ಋಣದ ಲೆಕ್ಕಾಚಾರ ಹೊರಗಿನಿಂದ ಮಾಡಲಾಗದು.
ಪಾಪ ಕಳೆಯಬೇಕು ಪುಣ್ಯ ಬೆಳೆಸಬೇಕು .ಜ್ಞಾನ ಗುಣಿಸಬೇಕು ಅಜ್ಞಾನ ಭಾಗಿಸಬೇಕು. ಈ ಲೆಕ್ಕಾಚಾರದ ಶಿಕ್ಷಣ ಅಗತ್ಯವಿರಬೇಕು.ಅಂತಹ ಗುರು ಸಿಗಬೇಕು.
ಗುರುದಕ್ಷಿಣೆ ಉತ್ತಮ ಮಾರ್ಗದಲ್ಲಿ ನಡೆದು ಕೊಡಬೇಕು.
ಯಾವಾಗ ಗುರುದಕ್ಷಿಣೆಯೇ ಭ್ರಷ್ಟಾಚಾರ ದ ಹಣವಾಗುವುದೋ ಗುರುವಿನ ಶಾಪ ಹೆಚ್ಚುವುದು.
ದೇವಮುನಿದರೆ ಗುರು ಕಾಪಾಡುವರು.ಗುರು ಮುನಿದರೆ ಯಾರು ಕಾಪಾಡುವರು?
ವಿಶ್ವಗುರು ಭಾರತಕ್ಕೆ ಕೋಪಬಂದರೆ ನಷ್ಟಯಾರಿಗೆ?
ವಿಶ್ವಕೋಶ ಓದಿಕೊಂಡು ಸಾಲ ಮಾಡಿದರೆ ವಿಶ್ವೇಶ್ವರ ಒಲಿಯೋದಿಲ್ಲ.
ಕೋಶ ಓದು ದೇಶ ಸುತ್ತು ಎನ್ನುವುದು ಭೌತವಿಜ್ಞಾನ.
ಅಧ್ಯಾತ್ಮ ವಿಜ್ಞಾನವನ್ನು ಜೀವಕೋಶದೊಳಗಿರುವ ದೇವರನ್ನು ತಿಳಿದೇ ಅರ್ಥ ಮಾಡಿಕೊಂಡು ನಡೆಯಬೇಕು.
ಇದು ಕಷ್ಟ ಕಷ್ಟ. ಅದಕ್ಕೆ ಜೀವದ ನಷ್ಟ ನಷ್ಟ.
ಈ ಸಂಕಷ್ಟಕ್ಕೆ ಕಾರಣವೇ ಹೊರಗಿನ ಅತಿಯಾದ ಜ್ಞಾನ.
ಒಳಗಿದ್ದ ಜ್ಞಾನವನರಿತು ಹೊರಗಿನ ವಿಜ್ಞಾನವನರಿತು ಸಮಾನವಾದ ದೃಷ್ಟಿಯಿಂದ ಜೀವದ ಋಣ ತೀರಿಸಿದರೆ
No comments:
Post a Comment