ಸ್ತ್ರೀ ಯರಿಗೆ ವೇದಕಲಿಯಲು ನಿಷೇಧ ವಿದೆ ಆದರೂ ಕೆಲವರು ಕಲಿಸುತ್ತಿದ್ದಾರೆ ಎಂದರೆ ಬೆಳವಣಿಗೆಯ ಲಕ್ಷಣವೆ?
ನಿಷೇಧದ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ .ಸ್ತ್ರೀ ಭೂಮಿಯ ಮಹಾಶಕ್ತಿ. ಭೂಮಿ ನಡೆದಿರೋದು ಮನುಕುಲದ ಸಂತಾನದಿಂದ ಸಂತಾನದಲ್ಲಿ ಗಂಡುಹೆಣ್ಣಿಗೆ ತನ್ನದೇ ಆದ ವಿಶೇಷ ಶಕ್ತಿಯಿದೆ.. ವೇದಕಾಲದಲ್ಲಿದ್ದ ಸತ್ವ ತತ್ವ ಸತ್ಯಜ್ಞಾನ ಇಂದಿಲ್ಲ. ಪರಮಾತ್ಮನೆಡೆಗೆ ಹೋಗಲು ಆತ್ಮಶುದ್ದಿಚಿತ್ತಶುದ್ದಿ ಮನಸ್ಸಿನ ಶುದ್ದಿ..ಮಂತ್ರಶುದ್ದಿಯಿಂದ ಮಾಡಲಾಗಿದೆ. ಇದನ್ನು ಯಾರೇ ಆಗಲಿ ತಪ್ಪಾಗಿ ಹೇಳಿದರೂ ವಿರುದ್ದ ಪ್ರತಿಫಲ ಅನುಭವಿಸೋದು ಜೀವವೇ.ಜೀವಾತ್ಮರಾಗಿರುವ ಮಾನವರಿಗೆ ಉತ್ತಮವಾದ ಗುರು ಶಿಕ್ಷಣ ಸಿಗುವುದೇ ಅಪರೂಪವಾಗಿರುವ ಇಂದು ವೇದಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ಬೇಧವಿದೆಯೋ ಇಲ್ಲವೋ ಒಟ್ಟಿನಲ್ಲಿ ನಾವುಕಲಿತಿರುವ ಶಿಕ್ಷಣದಲ್ಲೇ ಬೇಧವಿದೆ. ಇದರಿಂದಾಗಿ ಹಿಂದಿನ ಜ್ಞಾನಶಕ್ತಿ ನಮಗಿಲ್ಲ. ಜ್ಞಾನಿಎನಿಸಿಕೊಂಡ ಸ್ತ್ರೀ ಯನ್ನೇ ಶಿಕ್ಷಣದಿಂದ ದೂರವಿಟ್ಟು ಏನೋ ಸಾಧನೆ ಮಾಡಿದಂತೆ ವಾದ ಮಾಡುವುದರಿಂದ ಸಂಸಾರ ನಡೆಯೋದಿಲ್ಲ. ಉಭಯಭಾರತಿ ದೇವಿಯೊಂದಿಗೆ ಶ್ರೀ ಶಂಕರಭಗವದ್ಪಾದರು ವಾದ ಮಾಡಿ ಗೆಲ್ಲಲು ಪರಕಾಯ ಪ್ರವೇಶ ಮಾಡಿದ್ದರಂತೆ.
ಅಂದರೆ ಸ್ತ್ರೀ ಜ್ಞಾನವನ್ನು ಅಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಅಸಾಧ್ಯ. ಅನುಭವದಲ್ಲಿ ಬೇರೆಯೇ ಇರುತ್ತದೆ ಎನ್ನುವ ಕಾರಣಕ್ಕಾಗಿ ಕೆಲವೊಂದು ಸೂಕ್ಷ್ಮ ವಿಚಾರಕ್ಕೆ ನಿಷೇಧಿಸಿ ಸಂಸಾರ ಸುಸೂತ್ರವಾಗಿ ನಡೆಯಲು ಮಾಡಿದ್ದಾರೆನ್ನಬಹುದು. ಈಗ ಬಿಡಿ ಎಲ್ಲಾ ಓದಿದರೂ ನಮ್ಮ ಭೌತವಿಜ್ಞಾನವೇ ಶ್ರೇಷ್ಠ ಎನ್ನುವ ಮಟ್ಟಿಗೆ ಹೊರಗೆ ನಡೆದಿದೆ ಜೀವನ. ವೇದಕಾಲಕ್ಕೂ ವಾಸ್ತವ ಕ್ಕೂ ಅಂತರ ಬೆಳೆದು ಅರ್ಧ ಸತ್ಯವೇ ಅತಂತ್ರಸ್ಥಿತಿಗೆ ತಂದಿಟ್ಟಿದೆ.
ಹಿಂದಿನಂತೆ ಗುರುಮುಖೇನ ಕಲಿಯುವ ಶಿಕ್ಷಣವೂ ದೂರವಾಗುತ್ತಿದೆ. ಆನ್ಲೈನ್ ನಲ್ಲಿ ಏನು ಬೇಕಾದರೂ ಓದಿ ತಿಳಿಯಬಹುದು. ಆದರೆ ತಿಳಿದಮೇಲೆ ಅದಕ್ಕೆ ಪೂರಕವಾದ ಸಹಕಾರವಿಲ್ಲವಾದರೆ ಸ್ತ್ರೀ ಎಲ್ಲಿಗೆ ಹೋಗಬೇಕು?
ಮನೆಯೊಳಗೆ ಇದ್ದಂತೆಹೊರಗೆ ಸುರಕ್ಷೆ ಇದೆಯೆ?ಸಂನ್ಯಾಸಿಯಾದವರೆ ರಾಜಕೀಯ ನಡೆಸಿರುವಾಗ ಸಂಸಾರಿಗಳ ಪಾಡೇನು? ಎಲ್ಲಾ ಸಂನ್ಯಾಸಿ ವೇಷಧರಿಸಿದಾಕ್ಷಣ ಸಂನ್ಯಾಸವಾಗದು.ಹಾಗೆ ಸಂಸಾರಕ್ಕೆ ಬಂದವರೆಲ್ಲರೂ ಅಜ್ಞಾನಿಗಳಾಗರು. ಬಾಲ್ಯ ಯೌವನ ಗೃಹಸ್ಥ ವಾನಪ್ರಸ್ಥ ಸಂನ್ಯಾಸವೆನ್ನುವ ಆಶ್ರಮ ದಾರಿಯಲ್ಲಿ ಕಷ್ಟ ಪಟ್ಟು ನಡೆದ ಎಷ್ಟೋ ವೇದ ಪುರುಷ ಸ್ತ್ರೀ ಯರು ಇಂದಿಗೂ ಅಮರರು. ಆದರೆ ಅವರಂತೆ ವಾದಕ್ಕೆ ನಿಂತರೆ ಸೋಲುವುದು ಶತಸಿದ್ದ ಕಾರಣ ಅವರ ಅನುಭವ ಜ್ಞಾನವಿಲ್ಲದ ಮೊಂಡುವಾದದಿಂದ ಸತ್ಯ ತಿಳಿಯದು ಧರ್ಮ ಉಳಿಯದು.ಪ್ರಚಾರಕ್ಕೆ ಅಡ್ಡಿಯಿಲ್ಲ.ಆಚಾರ ವಿಚಾರಕ್ಕೆ ಅಡೆತಡೆಯಿದೆ.
ಲಿಂಗಕ್ಕೆ ಬೇಧವಿರಲಿಲ್ಲ ಆದರೆ ಅಧಿಕಾರಕ್ಕೆ ಇಂದೂ ಬೇಧವಿದೆ .ಭೂಮಿ ಆಳೋದಕ್ಕೆ ಭೂಮಿಯನ್ನೇ ಅಜ್ಞಾನಕ್ಕೆ ಎಳೆದರಾಯಿತು. ಜನರನ್ನು ಆಳೋದಕ್ಕೆ ಉತ್ತಮ ಶಿಕ್ಷಣ ಕೊಡದೆ ಹೋದರಲ್ಲಹಾಗೆ ಸ್ತ್ರೀ ಗೆ ಸತ್ಯ ತಿಳಿದರೆ ಕಷ್ಟವಿದೆ.
ಈಗ ಗಂಡುಮಕ್ಕಳಿಗೇ ವೇದ ಶಾಸ್ತ್ರ ಪುರಾಣ ಸರಿಯಾಗಿ ತಿಳಿಯದೆ ವ್ಯವಹಾರನಡೆಸಿರುವಾಗ ಮೊದಲು ಅವರಿಗೆ ಸರಿಯಾದ ಶಿಕ್ಷಣದ ಅಗತ್ಯವಿದೆ. ಮನೆಯಜಮಾನನೇ ಅಜ್ಞಾನಿಯಾದರೆ ಯಜಮಾನಿಯ ಜ್ಞಾನ ಅರ್ಥ ವಾಗದು.
ಕಲಿಕೆಗೆ ನಿಷೇಧವಿಲ್ಲ ಆದರೆ ಮೂಲಸಂಸ್ಕಾರ ಗಟ್ಟಿಯಿರಬೇಕು. ಇದೊಂದು ಅಭಿಪ್ರಾಯವಷ್ಟೆ.
No comments:
Post a Comment